ದಾವಣಗೆರೆ: ಜಿಲ್ಲೆಯಾದ್ಯಂತ ಖಾಲಿ ಇರುವ ಸ್ವಯಂ ಸೇವಾ ಗೃಹರಕ್ಷಕರನ್ನು ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 19 ರಿಂದ 45 ವರ್ಷ ವಯೋಮಿತಿ ಒಳಗಿನವರಾಗಿರಬೇಕು. 10ನೇ ತರಗತಿ ಪಾಸಾಗಿರಬೇಕು. ಆರೋಗ್ಯವಂತ ಒಳ್ಳೆ ದೇಹದೃಡ ಸಾಮಥ್ರ್ಯ ಹೊಂದಿgಬೇಕು. ರಾಜಕೀಯ ಪಕ್ಷ-ಸಂಘ ಸಂಸ್ಥೆಗಳ ಸದಸ್ಯರು/ಕಾರ್ಯಕರ್ತರಾಗಿರಬಾರದು. ಕಾನೂನು ಮೊಕದ್ದಮೆಗಳಿಲ್ಲದವರು ಹಾಗೂ ಸಂಬಂಧಪಟ್ಟ ಘಟಕಗಳಿಂದ 06 ಕಿ.ಮೀ ವ್ಯಾಪ್ತಿಯೊಳಗಿನ, ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಈ ಹಿಂದೆ ಗೃಹರಕ್ಷಕದಳ ಸಂಸ್ಥೆಯಿಂದ ಸಮಾಲೋಪನೆಗೊಂಡವರು ಹಾಗೂ ವಿಕಲಚೇತನರು ಅರ್ಹರಾಗಿರುವುದಿಲ್ಲ.
ಅರ್ಜಿಯನ್ನು ಜಿ.ಎಸ್ ಗುತ್ಯಪ್ಪ ಮಲೇಬೆನ್ನೂರು ದೂ.ಸಂ: 9880335468, ಷಡಾಕ್ಷರಿ ಜಗಳೂರು ದೂ.ಸಂ: 9019282711, ವಿ.ಬಿ ಅಜ್ಜಯ್ಯ ಬಿಳಿಚೋಡು ದೂ.ಸಂ: 6360439947, ಬಿ.ಅಂಜಿನಪ್ಪ ಉಜ್ಜಪ್ಪರ ಒಡೇಯರಹಳ್ಳಿ, ದೂ.ಸಂ: 9844627174 ಈ ಸ್ಥಳಗಳ ಗೃಹರಕ್ಷಕ ಘಟಕಗಳಲ್ಲಿ ಜ.29 ರಿಂದ ಫೆ.05 ರವರೆಗೆ ಉಚಿತವಾಗಿ ಅರ್ಜಿಯನ್ನು ಪಡೆದು ಫೆ.10 ರೊಳಗೆ ಭರ್ತಿಮಾಡಿದ ಅರ್ಜಿಗಳನ್ನು ಘಟಕ ಕಚೇರಿಗಳಲ್ಲಿ ಸಲ್ಲಿಸಬೇಕು. ದಾವಣಗೆರೆ ನಗರ ಘಟಕದಲ್ಲಿ ಮಹಿಳಾ ಅಭ್ಯರ್ಥಿಗಳೂ ಸಹ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಗೃಹರಕ್ಷಕದಳ ಕಚೇರಿ, ದಾವಣಗೆರೆ ದೂ.ಸಂ: 08192-255784, ದಾವಣಗೆರೆ ನಗರ ಘಟಕಕ್ಕೆ ಅರ್ಜಿ ಸಲ್ಲಿಸುವವರು ಘಟಕಾಧಿಕಾರಿಗಳ ಕಚೇರಿ, ಗೃಹರಕ್ಷಕದಳ, ಕಾವೇರಮ್ಮ ಹಿರಿಯ ಪ್ರಾಥಮಿಕ ಶಾಲೆ, ತ್ರಿಶೂಲ್ ಟಾಕೀಸ್ ರಸ್ತೆ, ದಾವಣಗೆರೆ ದೂ.ಸಂ: 9535664661ನ್ನು ಸಂಪರ್ಕಿಸಬಹುದೆಂದು ಹೋಂ ಗಾಡ್ರ್ಸ್ ಕಮಾಂಡೆಂಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…