ಮೈಸೂರು: ಮೈಸೂರು ತಾಲ್ಲೂಕಿನ ಸುತ್ತೂರು ಸಂಸ್ಥಾನ ಮಠದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಕಾರ್ಯಕಾರಿ ಮಂಡಳಿ ಸಭೆಯನ್ನು ಕಲಬುರಗಿ ಜಿಲ್ಲೆಯವರಾದ ಶ್ರೀ ಅಪ್ಪಾರಾವ ಅಕ್ಕೋಣಿ ರವರ ಅಧ್ಯಕ್ಷತೆಯಲ್ಲಿ ಪ್ರಥಮ ಸಭೆ ಜರುಗಿತು ಎಂದು ಕಲಬುರಗಿ ಜಿಲ್ಲೆಯ ಯುವ ಘಟಕದ ಅಧ್ಯಕ್ಷ ಶಿವರಾಜ ಅಂಡಗಿ ತಿಳಿಸಿದ್ದಾರೆ.
ಗೌರವಾಧ್ಯಕ್ಷರಾದ ಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಮತ್ತು ಗದುಗಿನ ಪೂಜ್ಯ ಶ್ರೀ ಸಿದ್ದರಾಮ ಮಹಾಸ್ವಾಮಿಗಳು ಸಾನಿಧ್ಯದಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಲಂಡನಿನ ಕನ್ನಡ ಸಂಘಗಳು ಮತ್ತು ಬಸವ ಅಂತರಾಷ್ಟ್ರೀಯ ಪ್ರತಿಷ್ಠಾನ ಸಹಯೋಗದೊಂದಿಗೆ ವಚನ ಸಾಹಿತ್ಯ ಕುರಿತು ವಿಚಾರ ಸಂಕೀರ್ಣವನ್ನು ಏರ್ಪಡಿಸಲು ನಿರ್ಧರಿಸಲಾಯಿತು. ಇದಲ್ಲದೇ ಜುಲೈ ತಿಂಗಳಿನಲ್ಲಿ ರಾಜ್ಯದಾದ್ಯಂತ ಸದಸ್ಯತ್ವ ಅಭಿಯಾನ ನಡೆಸಲು ಸಭೆ ಒಪ್ಪಿಗೆ ನೀಡಿತು. ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ೨೦೧೮-೧೯ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯನ್ನು ಇದೇ ಜುಲೈ-೨೧ ರಂದು ಬೆಳಗಾವಿಯಲ್ಲಿ ನಡೆಸಲು ನಿರ್ಧರಿಸಲಾಯಿತು. ಇದರ ಜೊತೆ ಅನೇಕ ಪರಿಷತ್ತಿನ ದತ್ತಿ ಉಪನ್ಯಾಸಗಳ, ವಿಚಾರ ಸಂಕೀರ್ಣಗಳ ಹಾಗೂ ಸಮ್ಮೇಳನ ಕುರಿತು ಚರ್ಚಿಸಲಾಯಿತು.
ವೇದಿಕೆ ಮೇಲೆ ಉಪಾಧ್ಯಕ್ಷರಾದ ಶ್ರೀ ಜಗನಳ್ಳಿ ಶಿವಶಂಕರ, ಗೌರವ ಸಲಹೆಗಾರರಾದ ಶ್ರೀ ಗುರುಚನ್ನಬಸಪ್ಪನವರು ಪರಿಷತ್ತಿನ ಪದಾಧಿಕಾರಿಗಳಾದ ಕಾರ್ಯಕಾರಿ ಸಮಿತಿಯ ಸದಸ್ಯರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಮೈಸೂರು ಜಿಲ್ಲೆ ಸುತ್ತೂರಿನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ಪರಿಷತ್ತಿನ ಇತಿಹಾಸದಲ್ಲಿ ಪ್ರಪ್ರಥಮವಾಗಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಈ ಸಭೆಗೆ ವಿಶೇಷ ಆಮಂತ್ರಿತರಾಗಿ ಆಗಮಿಸಿದ ವಿವಿದ ಜಿಲ್ಲೆಯ ಯುವ ಘಟಕದ ಅಧ್ಯಕ್ಷರಲ್ಲಿ ಮೊದಲಿಗರಾಗಿ ಕಲಬುರಗಿ ಜಿಲ್ಲೆಯ ಯುವ ಘಟಕದ ಅಧ್ಯಕ್ಷ ಶಿವರಾಜ ಅಂಡಗಿರವರು ತಮ್ಮ ಯುವ ಘಟಕದ ಆಶ್ರಯದಲ್ಲಿ ನಡೆದ ನಾಲ್ಕು ವರ್ಷಗಳ ಅಂದರೆ ೨೦೧೫, ೨೦೧೬, ೨೦೧೭, ೨೦೧೮ ರವರೆಗಿನ ನಡೆದ ಸಭೆಗಳು, ಉಪನ್ಯಾಸಗಳು ವರದಿಯೊಂದಿಗೆ ಹಾಗು ನ್ಯಾಯವಾದಿ ಜೆ.ವಿನೋದಕುಮಾರ ಅವರು ಡಾ.ಫ.ಗು.ಹಳಕಟ್ಟಿರವರ ಜನ್ಮದಿನೋತ್ಸವ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಡಿಯಲ್ಲಿ ರಾಜ್ಯಾದ್ಯಂತ ನಡೆಸಬೇಕೆಂಬ ಮನವಿ ಪತ್ರದ ಕಳಕಳಿಯನ್ನು ಮಾನ್ಯ ಅಧ್ಯಕ್ಷರಿಗೆ ಮುರ್ತುವಜಿ ವಹಿಸಿ ರಾಜ್ಯಾದ್ಯಂತ ಆಚರಿಸಲು ಮನವಿ ಪತ್ರದೊಂದಿಗೆ ಸಂಪೂರ್ಣ ವರದಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಅಪ್ಪಾರಾವ ಅಕ್ಕೋಣಿ ರವರಿಗೆ ಸಲ್ಲಿಸಲಾಯಿತು.
ಶರಣ ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆ ಹೆಚ್ಚಿಸಲು ಪರಿಷತ್ತಿನ ಇತಿಹಾಸದಲ್ಲೇ ಪ್ರಪ್ರಥಮವಾಗಿ ಪ್ರತಿ ಜಿಲ್ಲೆಯಲ್ಲಿ ಮಹಿಳಾ ವೇದಿಕೆ (ಕದಳಿ ವೇದಿಕೆ) ಹಾಗೂ ಯುವ ವೇದಿಕೆ ರಚನೆ ಮಾಡಿ ಆಯಾ ಜಿಲ್ಲೆಯ ವೇದಿಕೆಯ ಅಧ್ಯಕ್ಷರನ್ನು ಕಾರ್ಯಕಾರಿ ಮಂಡಳಿ ಸಭೆಗೆ ವಿಶೇಷ ಆಹ್ವಾನಿತರಾಗಿ ಟಿ.ಎ., ಡಿ.ಎ. ವ್ಯವಸ್ಥೆ ಮಾಡಿ ಆಹ್ವಾನಿಸಿ ಕೇಂದ್ರ ಪರಿಷತ್ತಿನ ಪದಾಧಿಕಾರಿಗಳಿಗೆ ಪರಿಚಯ ಮಾಡಿದ ಕೀರ್ತಿ ಅಕ್ಕೋಣಿಯವರಿಗೆ ಸಲ್ಲುತ್ತದೆಂದು ವಿವಿಧ ಜಿಲ್ಲೆಯಿಂದ ಯುವ ವೇದಿಕೆ ಕದಳಿ ವೇದಿಕೆಯ ಪರವಾಗಿ ಶಿವರಾಜ ಅಂಡಗಿ ಅಭಿನಂದಿಸಿದ್ದಾರೆ.
ಈ ಸಂದರ್ಭದಲ್ಲಿ ಕಲಬುರಗಿ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಕುಪೇಂದ್ರ ಪಾಟೀಲ, ಕದಳಿ ವೇದಿಕೆ ಅಧ್ಯಕ್ಷರಾದ ಆಶಾದೇವಿ ಖೂಬಾ, ಕಾರ್ಯದರ್ಶಿಗಳಾದ ಡಾ.ಶರಣಬಸಪ್ಪಾ ವಡ್ಡನಕೇರಿ, ಶಹಾಬಾದ ತಾಲೂಕಿನ ಯುವ ಘಟಕದ ಅಧ್ಯಕ್ಷರಾದ ರಾಜು ಎಸ್.ಕೋಬಾಳ, ವಿವಿಧ ಜಿಲ್ಲಾಧ್ಯಕ್ಷರು, ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷರು, ಯುವ ಘಟಕದ ಜಿಲ್ಲಾಧ್ಯಕ್ಷರುಗಳು ಭಾಗವಹಿಸಿದರು.
ಉಪಾಧ್ಯಕ್ಷರಾದ ಶ್ರೀ ಜಗನಳ್ಳಿ ಶಿವಶಂಕರ ಸ್ವಾಗತ ಕೋರಿದರು. ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮೃತಂಜಯ ಕೆಂಡದಮಠ ರವರು ವಂದರ್ನಾಪಣೆ ಮಾಡಿದರು.
ಸುತ್ತುರಿನ ಸಂಸ್ಥಾನಮಠದಲ್ಲಿ ನಡೆದ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಕಲಬುರಗಿ ಜಿಲ್ಲೆಯ ಯುವ ಘಟಕದ ಅಧ್ಯಕ್ಷ ಶಿವರಾಜ ಅಂಡಗಿ ರವರು ತಮ್ಮ ಯುವ ಘಟಕದ ಆಶ್ರಯದಲ್ಲಿ ನಡೆದ ನಾಲ್ಕು ವರ್ಷದ ವರದಿ ಅಧ್ಯಕ್ಷರಾದ ಅಪ್ಪಾರಾವ ಅಕ್ಕೋಣಿ ರವರಿಗೆ ಸಲ್ಲಿಸುತ್ತಿರುವ ಚಿತ್ರ. ಕುಪೇಂದ್ರ ಪಾಟೀಲ, ಶಿವರಾಜ ಅಂಡಗಿ, ಆಶಾದೇವಿ ಖೂಬಾ, ರಾಜು ಎಸ್.ಖೂಬಾ ಉಪಸ್ಥಿತರಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…