ಯಾದಗಿರಿ: ಜವಹಾರ ಐಟಿಐ ಕಾಲೇಜಿನ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿರುವ ಜಯಶೀಲ್ ಎಸ್ ಅವರಿಗೆ ಕಾಲೇಜಿನ ಉಪನ್ಯಾಸಕರಿಂದ ಬೀಳ್ಕೊಡುಗೆ ನಡೆಯಿತು.
ಕಾಲೇಜಿನ ಉಪನ್ಯಾಸಕರಾದ ಶರಣಪ್ಪ ಮಾತನಾಡಿ, 1984ರಲ್ಲಿ ಸೇವೆಗೆ ಪಾದಾರ್ಪಣೆಗೊಂಡ ಜಯಶೀಲ್ ಎಸ್ ಅವರು ಐಟಿಐ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ತಮ್ಮ ನಿಸ್ವಾರ್ಥ ಸೇವೆ ಹಾಗೂ ಸರಳ ಸ್ವಭಾವದಿಂದ ಎಲ್ಲರ ಮೆಚ್ಚುಗೆ ಪಡೆದ ಇವರ ಮುಂದಿನ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.
ಕಾಲೇಜಿನ ಉಪನ್ಯಾಸಕ ಗಜೇಂದ್ರ ದೇಸಾಯಿ ಮಾತನಾಡಿ, ನಮ್ಮ ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಆಧುನಿಕ ತಂತ್ರಜ್ಞಾನ ಶಸ್ತ್ರಾಸ್ತ್ರ ಮತ್ತು ಮದ್ದು ಗುಂಡುಗಳಿದ್ದರೂ, ಸೈನಿಕರ ಬದ್ಧತೆಯ ಸೇವಾ ಮನೋಭಾವನೆ ಬಹಳ ಮುಖ್ಯವಾಗುತ್ತಿದೆ. ಅದೇ ರೀತಿ ಎಲ್ಲರ ಜೊತೆಯಲ್ಲಿ ಬೆರೆಯುವ ವ್ಯಕ್ತಿತ್ವವುಳ್ಳ ಜಯಶೀಲ್ ಎಸ್ ಅವರು ವಿಧೇಯತೆ, ವಿನಮ್ರತೆ, ಸರಳ ಮನೋಭಾವನೆ ಮತ್ತು ಶ್ರಮದ ದುಡಿಮೆಯಿಂದ ಕಾಲೇಜಿನ ಬೆಳವಣಿಗೆಗೆ ಶ್ರಮಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಅಬ್ದುಲ್ ಹಮೀದ್, ಮೊಹ್ಮದ್ ಅಯೂಬ್, ಎಸ್.ಎ.ಗಫುರ್, ಮೊಹ್ಮದ್ ಫಾರೂಖ್, ವಿಜಯಕುಮಾರ್, ಮೊಹ್ಮದ್ ಹುಸೇನ್, ಎಸ್.ಎ.ಮತೀನ್, ಹೀಸಾಮೂದ್ದೀನ್ ಸೇರಿದಂತೆ ಇತರರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…