ಸುರಪುರ: ಸಮಾಜದಲ್ಲಿ ನಾವು ಜೇನುನೊಣದಂತೆ ಬದುಕಬೇಕು ಜೇನುನೊಣವು ಹೂವಿಗೆ ಯಾವುದೇ ರೀತಿಯ ಧಕ್ಕೆಯಾಗದಂತೆ, ಹಾಳಾಗದಂತೆ ಕೇವಲ ಮಕರಂದವನ್ನು ಮಾತ್ರ ಹೀರಿ ನಮ್ಮೆಲ್ಲರಿಗೆ ಉಪಯೋಗವಾಗುವ ಜೇನುತುಪ್ಪ ತಯಾರಿಸುತ್ತದೆ ಅದೇ ರೀತಿಯಾಗಿ ನಾವುಗಳು ಕೂಡಾ ಸಮಾಜದಲ್ಲಿ ಯಾರಿಗೇ ಆಗಲೀ ನೋವನ್ನುಂಟು ಮಾಡದೇ ಪರೋಪಕಾರಿ ಬಾಳಬೇಕು ದಿನನಿತ್ಯ ಬದುಕಿನಲ್ಲಿ ಮಾನವೀಯ ಮೌಲ್ಯಗಳಿಗೆ ಒತ್ತು ನೀಡಬೇಕು ಎಂದು ರುಕ್ಮಾಪುರದ ಹಿರೇಮಠದ ಗುರುಶಾಂತಮೂರ್ತಿ ಸ್ವಾಮಿಗಳು ಹೇಳಿದರು.
ತಾಲೂಕಿನ ರುಕ್ಮಾಪುರ ಗ್ರಾಮದ ಭಂಡಾರೆ ತೋಟದಲ್ಲಿ ಹಮ್ಮಿಕೊಂಡಿದ್ದ ಮಾತೋಶ್ರೀ ಗಂಗಮ್ಮ ಬಣಗಾರ ರುಕ್ಮಾಪುರ ಸೇವಾ ಟ್ರಸ್ಟ ವತಿಯಿಂದ ನಿವೃತ್ತ ಎಸ್.ಪಿ. ಸಿ.ಎನ್.ಭಂಡಾರೆರವರಿಗೆ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿ ಸಮಾಜದಲ್ಲಿ ನಮಗೆ ಎದುರಾಗುವ ಅವಮಾನ,ನಿಂದನೆ,ಬೈಗುಳ ಇವುಗಳನ್ನು ಬದಿಗೊತ್ತಿ ಮೆಟ್ಟಿ ನಿಲ್ಲುವ ಮೂಲಕ ಜೀವನದಲ್ಲಿ ಏನನ್ನಾದರೂ ಸಾಧಿಸಿ ತೋರಿಸಬೇಕು ಎಂದು ಹೇಳಿದ ಅವರು, ತಾಯಿ ಇದ್ದಾಗಲೇ ತಾಯಿಯ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ಶ್ರೇಷ್ಠ ಕಾರ್ಯ ತಾಯಿ ಇರುವಾಗಲೇ ಋಣಭಾವ ಮತ್ತು ಕೃತಜ್ಞತಾ ಭಾವ ತೋರಿಸುವುದು ಬಹಳ ಮುಖ್ಯ ಎಂದರು.
ಮುಖ್ಯ ಅತಿಥಿ ಕ.ಸಾ.ಪ.ತಾಲೂಕು ಅಧ್ಯಕ್ಷ ಶ್ರೀನಿವಾಸ ಜಾಲವಾದಿ ಮಾತನಾಡಿ ಬಣಗಾರ ಸೇವಾ ಟ್ರಸ್ಟನ ವತಿಯಿಂದ ಸಾಮಾಜಿಕ ಸೇವೆ ಸಲ್ಲಿಸುವ ವ್ಯಕ್ತಿಗಳನ್ನು ಗುರುತಿಸಿ ತಾಯಿಯ ಹೆಸರಿನಲ್ಲಿ ಅವ್ವಾ ಪ್ರಶಸ್ತಿ ನೀಡುತ್ತಿರುವುದು ಶ್ರೇಷ್ಠವಾದದ್ದು, ನಿವೃತ್ತ ಎಸ್.ಪಿ. ಸಿ.ಎನ್.ಭಂಡಾರೆರವರು ತಮ್ಮ ವೃತ್ತಿ ಜೀವನದಲ್ಲಿ ಸರಕಾರಿ ಕರ್ತವ್ಯವನ್ನು ಅತ್ಯಂತ ನಿಷ್ಠೆಯಿಂದ ನಿರ್ವಹಿಸುವದರ ಜೊತೆಗೆ ತಮ್ಮ ಸ್ವಗ್ರಾಮವಾದ ರುಕ್ಮಾಪುರನಲ್ಲಿ ಹಲವಾರು ಸಾಮಾಜಿಕ ಕಾರ್ಯಗಳಿಗೆ ನೆರವಾಗಿದ್ದು ಹಾಗೂ ತಾವು ಕರ್ತವ್ಯ ನಿರ್ವಹಿಸಿರುವ ಬೆಂಗಳೂರು,ದಾವಣಗೆರೆ ಮುಂತಾದ ಕಡೆಗಳಲ್ಲಿ ಹಲವಾರು ಜನಪರ ಕೆಲಸಗಳನ್ನು ಕೈಗೊಳ್ಳುವ ಮೂಲಕ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಅವರ ಬಳಿ ಸಾಧನೆ ಹಾಗೂ ಪ್ರಶಸ್ತಿಗಳ ಭಂಡಾರವೇ ಇದೆ ಎಂದರು.
ಪ್ರಶಸ್ತಿ ಸ್ವೀಕರಿಸಿದ ನಿವೃತ್ತ ಎಸ್.ಪಿ. ಸಿ.ಎನ್.ಭಂಡಾರೆರವರು ಮಾತನಾಡಿ ತಮ್ಮ ಕರ್ತವ್ಯದ ಅವಧಿಯಲ್ಲಿ ಜನರಿಗೆ ನನ್ನ ಕಡೆಯಿಂದ ತೊಂದರೆಯಲ್ಲಿದ್ದ ಜನರಿಗೆ ನನ್ನ ಸ್ನೇಹಿತ ಅಧಿಕಾರಿಗಳು ಹಾಗೂ ಗೆಳೆಯರ ನೆರವು ಪಡೆದುಕೊಂಡು ಕೈಲಾದಷ್ಟು ಸಹಾಯ ಮಾಡಲು ಪ್ರಯತ್ನಿಸಿದ್ದೇನೆ ಎಂದು ಹೇಳಿದರು, ಮುಂಬರುವ ದಿನಗಳಲ್ಲಿ ಸಂಸದರಾದ ಬಸವರಾಜ ಪಾಟೀಲ ಸೇಡಂರವರ ನೆರವಿನಿಂದ ಬೆಂಗಳೂರಿಗೆ ಆಗಮಿಸುವ ಈ ಭಾಗದ ನಿರುದ್ಯೋಗಿ ವಿದ್ಯಾರ್ಥಿಗಳು ಹಾಗೂ ಜನರಿಗೆ ಅನುಕೂಲವಾಗಲು ಬೆಂಗಳೂರನಲ್ಲಿ ಕಲ್ಯಾಣ ಕರ್ನಾಟಕ ಭವನ ನಿರ್ಮಿಸಲು ಪ್ರಯತ್ನ ನಡೆದಿದೆ ಎಂದು ಹೇಳಿದರು.
ಖ್ಯಾತ ನಾಟಕಕಾರ ಹಾಗೂ ಗುಬ್ಬಿ ವೀರಣ್ಣ ಪ್ರಶಸ್ತಿ ವಿಜೇತರಾದ ಎಲ್.ಬಿ.ಕೆ.ಆಲ್ದಾಳ,ಜಾನಪದ ಅಕಾಡೆಮಿ ಸದಸ್ಯ ಅಮರಯ್ಯಸ್ವಾಮಿ ಜಾಲಿಬೆಂಚಿ,ಸಗರನಾಡು ಸೇವಾ ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶ ಅಂಗಡಿ ಹಾಗೂ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟನ ಅಧ್ಯಕ್ಷ ಅಶೋಕ ಬಣಗಾರ ಮಾತನಾಡಿದರು, ಖ್ಯಾತ ಸಂಶೋಧಕ ಡಿ.ಎನ್.ಅಕ್ಕಿ ಕಾರ್ಯಕ್ರಮ ಉದ್ಘಾಟಿಸಿದರು,ತಾ ಪಂ ಸದಸ್ಯ ಸುರೇಂದ್ರ ನಾಯಕ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಟ್ರಸ್ಟನ ವತಿಯಿಂದ ನಿವೃತ್ತ ಎಸ್.ಪಿ. ಚಂದ್ರಕಾಂತ ಭಂಡಾರೆರವನ್ನು ಸೇವಾ ಪ್ರಶಸ್ತಿ ಹಾಗೂ ಸ್ಮರಣ ಫಲಕವನ್ನು ನೀಡಿ ಗೌರವಿಸಲಾಯಿತು, ಉಪನ್ಯಾಸಕರಾದ ಮಂಜುನಾಥ ಚೆಟ್ಟಿ ನಿರೂಪಿಸಿದರು ಟ್ರಸ್ಟನ ಸಂಸ್ಥಾಪಕ ಸಂಚಾಲಕ ಸುಭಾಸ ಬಣಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು ವಿಜಯಕುಮಾರ ಬಣಗಾರ ಸ್ವಾಗತಿಸಿದರು ಶ್ರೀಹರಿರಾವ ಆದೋನಿ ನಾಡಗೀತೆ ಹಾಗೂ ಈರಣ್ಣ ಸಿಂಪಿ ಶಿಕ್ಷಕರು ಪ್ರಾರ್ಥನೆಗೀತೆ ಹಾಡಿದರು ಮತ್ತು ಬಸವರಾಜ ಬಣಗಾರ ವಂದಿಸಿದರು, ಈ ಸಂದರ್ಭದಲ್ಲಿ ಪ್ರಮುಖರಾದ ಬಸವರಾಜ ಜಮದ್ರಖಾನಿ,ಶಾಂತಪ್ಪ ಬೂದಿಹಾಳ,ಕಾಶೀನಾಥ ಬಣಗಾರ,ಮಲ್ಲಯ್ಯ ಭಂಡಾರಿ,ಚುಟಕು ಸಾಹಿತ್ಯ ಪರಿಷತ್ತಿನ ಬೀರಣ್ಣ ಬಿ.ಕೆ,ನಬಿಲಾಲ್ ಮಕಾನದಾರ,ರಾಮಣ್ಣ ಚಾರು,ಸೋಮಶೇಖರ ಶಾಬಾದಿ,ಶರಣಬಸವ ಯಾಳವಾರ,ಹೆಚ್.ರಾಠೋಡ ಹಾಗೂ ಊರಿನ ಪ್ರಮುಖರು ಇತರರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…