ಅಫಜಲಪುರ: ಸಮಾಜದಲ್ಲಿ ಬೇರೂರಿರುವ ಅಸ್ಪ್ರಶ್ಯತೆ ತೊಡೆದು ಹಾಕಬೇಕೆಂದರೆ ಅದು ಶಿಕ್ಷಣ ಎಂಬ ಅಸ್ತ್ರದಿಂದ ಸಾದ್ಯವೆಂದು ಡಾ.ಬೀರಣ್ಣಾ ಕಲ್ಲೂರ್ ಹೇಳಿದರು.
ಜಿಲ್ಲಾ ಪಂಚಾಯತ ಕಲಬುರಗಿ, ಸಮಾಜ ಕಲ್ಯಾಣ ಇಲಾಖೆ ಅಫಜಲಪೂರ್ ಹಾಗೂ ಸ್ಪೂರ್ತಿ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಸೇವಾ ಸಂಸ್ಥೆ ಕಡಗಂಚಿ ವತಿಯಿಂದ ಮಣ್ಣೂರ ಗ್ರಾಮದಲ್ಲಿ ಅಸ್ಪ್ರಶ್ಯತೆ ನಿರ್ಮೂಲನೆ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಬಿಜೆಪಿ ಯುವ ಮುಖಂಡ ಡಾ.ಬೀರಣ್ಣ ಕಲ್ಲುರ ಬಸವಣ್ಣಾ ಹಾಗು ಅಂಬೇಡ್ಕರ್ ಒಂದೇ ನಾಣ್ಯದ ಎರಡು ಮುಖಗಳಿದಂತೆ ಅವರು ಸಮಾಜದಲ್ಲಿ ಬೇರೂರಿರುವ ಅನಿ? ಪದ್ಧತಿಗಳ ವಿರುದ್ಧ ಹೋರಾಟ ಮಾಡಿದವರು, ಸ್ತ್ರೀಯರ ಸಮಾನತೆಗಾರರಾಗಿದರು, ಪ್ರಸ್ತುತ ಕಾಲಘಟದಲ್ಲಿ ನೋಡಿದರೆ ಮೀಸಲಾತಿಯು ಕೇಲವೇ ಕೆಲವು ಸಮುದಾಯಗಳು ಸದುಪಯೋಗ ಪಡಿಸಿಕೊಳ್ಳುತಿದಾರೆ ಎಂದು ಕಳವಳ ವ್ಯಕ್ತಪಡಿಸಿದರು.
೬ನೇ ಶತಮಾನದ ಕಾಲದಿಂದಲೂ ಅಸ್ಪ್ರಶ್ಯತೆ ಆಚರಣೆಯಲಿತು, ಲಿಂಗ ಸಮಾನತೆ, ಜಾತಿ ತಾರತಮ್ಯವನ್ನು ಬಾಬಾ ಸಾಹೇಬ ಅಂಬೇಡ್ಕರ್ ರವರು ಬಲವಾಗಿ ಖಂಡಿಸಿದರು, ಮೀಸಲಾತಿಯನ್ನು ಪ್ರತಿಯೊಂದು ಸಮುದಾಯದಕ್ಕು ದೋರಕುವಂತೆ ನೀಡಿದಾರೆ, ಶಿಕ್ಷಣದಲ್ಲಿ ರಾಜಕೀಯದಲ್ಲು ಸರಿ ಸಮಾನತೆಯಿಂದ ಸಂವಿಧಾನದ ಮೂಲಕ ದೊರಕುವಂತೆ ಮಾಡಿದಾರೆ.
ಬಾಬಾಸಾಹೇಬ ಅಂಬೇಡ್ಕರ್ ರವರು ೧೯೫೫ನೇ ಕಾಯ್ದೆಯಲ್ಲಿ ಅಸ್ಪ್ರಶ್ಯತೆ ನಿವಾರಣೆ ಕಾಯ್ದೆಯನ್ನು ಜಾರಿಗೆ ತಂದಿದ್ದಾರೆ, ಒಂದು ಜಾತಿಯನ್ನು ಹಿನಾಯವಾಗಿ ಮಾತನಾಡಿದರೆ ಕಠಿಣ ಶಿಕ್ಷೆಗೆ ಗುರಿಯಾಗುತ್ತಾರೆ ಎಂದು ಉಪನ್ಯಾಸಕರಾಗಿ ಆಗಮಿಸಿದ ಶಾಂತಕುಮಾರ ಹೆಬಳಿ ತಿಳಿಸಿದರು.
ಮಾನವ ಹಕ್ಕುಗಳು, ಮಹಿಳಾ ಹಕ್ಕುಗಳನ್ನು ಸಂವಿಧಾನದಲ್ಲಿ ಅಳವಡಿಸುವ ಮೂಲಕ ಪ್ರತಿಯೊಬ್ಬರೀಗು ಸ್ವಾಭಿಮಾನದ ಬದಕನ್ನು ರೂಪಿಸಿಕೊಳ್ಳುವಂತ ಸಮಾನತೆ ಹಕ್ಕನ್ನು ನೀಡಿದಾರೆ, ಮೋಸದ ಮುದ್ದೆಯಾಗಿ ಬರುವ ಮನು? ಬೆಳೆದಂತೆ ಮೇಲು ಕೀಳು ಎಂಬ ತಾರತಮ್ಯ ಮಾಡುವುದು ಎ? ಸರಿ ಎಂದು ಪ್ರಶ್ನಿಸಿದರು, ಕರುಣೆ ಇಲ್ಲದ ಹೋರಾಟ, ಶೀಲ ಇಲ್ಲದ ಶಿಕ್ಷಣ ಬೇಡ ಎಂದು ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಹಾದೇವ ಕರುಟಿ ನಡೆಸಿಕೊಟ್ಟರು, ಮುಖ್ಯ ಅತಿಥಿಗಳಾಗಿ ಸಮಾಜ ಕಲ್ಯಾಣ ಇಲಾಖೆಯ ಭೀಮಶ್ಯಾ ಸಾಗನೂರ, ನಿಜಗುಣ ಚಕ್ರವರ್ತಿ, ಬಸವರಾಜ ಜನ್ನಾ, ಶಿವಕುಮಾರ ಡೋಣಿ, ಶಿವಕರಣ ಕರಕಂಚಿ, ಗ್ರಾಮದ ಯುವ ಮುಖಂಡರಾದ ರವೀಂದ್ರ, ಆಕಾಶ, ಗೋಪಾಲ ಇನ್ನಿತರರು ಇದರು.
ಅಸ್ಪ್ರಶ್ಯತಾ ನಿರ್ಮೂಲನೆ ಕ್ರಾಂತಿ ಗೀತೆಗಳನ್ನು ಭೀಮಾಶಂಕರ ಖಜೂರಿ ಹಾಗು ಗೋಪಾಲ ತಂಡದವರು ನಡೆಸಿಕೊಟ್ಟರು.
ಪ್ರಾಸ್ತಾವಿಕವಾಗಿ ಶಿವಪ್ಪಾ ಭೂಸನೂರ ಮಾತನಾಡಿದರು, ಸ್ವಾಗತ ಗೀತೆಯನ್ನು ಗೋಪಾಲ ಜಾನಾ ನಿರೂಪಣೆ ಗುಂಡೇರಾವ ಡೋಣಿ, ವಂದನಾರ್ಪಣೆಯನ್ನು ಸಂಸ್ಥೆಯ ಅಧ್ಯಕ್ಷ ಅಂದಪ್ಪಾ ವಾಯ್.ಡೋಣಿ ನಡೆಸಿಕೊಟ್ಟರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…