ಬಿಸಿ ಬಿಸಿ ಸುದ್ದಿ

ಅನ್ನದಾತರಿಂದ ಇಂದು ದೇಶವ್ಯಾಪಿ “ಚಕ್ಕಾ ಜಾಮ್”ಗೆ ಕರೆ

ಕಲಬುರಗಿ: ನಗರದಲ್ಲಿ ಫೆ 06 : ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ದೇಶಾದ್ಯಂತ ಇಂದು (ಶನಿ​ವಾರ) ನಡೆ​ಯ​ಲಿ​ರುವ ಹೋರಾಟದ ಭಾಗವಾಗಿ ಕಲಬುರಗಿ ನಗರದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲು ರೈತರು ನಿರ್ಧರಿಸಿದ್ದಾರೆ. ಮಧ್ಯಾಹ್ನ 12ರಿಂದ 3 ಗಂಟೆವರೆಗೆ ರಾಷ್ಟ್ರೀಯ, ರಾಜ್ಯ ಹೆದ್ದಾರಿ ತಡೆದು ಧರಣಿ ನಡೆಸಲು ಕರೆ ನೀಡಲಾಗಿದೆ.

ರೈತರ ರಸ್ತೆತಡೆ ಪ್ರತಿಭಟನೆಗೆ ಕಾರ್ಮಿಕರು, ಕೂಲಿಕಾರ, ದಲಿತ, ವಿದ್ಯಾರ್ಥಿ,ಯುವಜನ, ಮಹಿಳಾ ಸಂಘಟನೆಗಳು ಸೇರಿದಂತೆ ಅನೇಕ ಜನಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.  ಕಲಬುರಗಿ ನಗರದಲ್ಲಿ ರಾಮಂದಿರ ಬಳಿ ರಸ್ತಾ ರೊಕ ಚಳವಳಿ ಕೇಂದ್ರಗಳಲ್ಲಿ   ರಸ್ತೆ ತಡೆ ನಡೆಯಲಿದೆ ಎಂದು ಸಂಯುಕ್ತ ಕಿಸಾನ್ ಮೊರ್ಚಾ ಹಾಗೂ KPRS ಜಿಲ್ಲಾ ಅಧ್ಯಕ್ಷ. ಶರಣಬಸಪ್ಪಾ ಮಮಶೆಟ್ಟಿ ತಿಳಿಸಿದ್ದಾರೆ.

ದೆಹಲಿ ವರದಿ :ಹೊಸದಿಲ್ಲಿ: ರೈತರ ಹೋರಾಟಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಬೆಂಬಲ, ಸೆಲೆಬ್ರಿಟಿಗಳ ಟ್ವೀಟ್‌ ಸಮರ ಮುಂದುವರಿದಿರುವ ನಡುವೆ ತಮ್ಮ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ಮುಂದಾಗಿರುವ ರೈತ ಸಂಘಟನೆಗಳು ಇಂದು (ಶನಿವಾರ) ದೇಶಾದ್ಯಂತ ರಸ್ತೆ ಹಾಗೂ ಹೆದ್ದಾರಿ ತಡೆ (ಚಕ್ಕಾ ಜಾಮ್‌) ನಡೆಸಲು ನಿರ್ಧರಿಸಿವೆ.

ಮೂರು ವಿವಾದಿತ ಕೃಷಿ ಕಾಯಿದೆಗಳನ್ನು ಹಿಂಪಡೆಯುವಂತೆ ಕೇಂದ್ರದ ಮೇಲೆ ಒತ್ತಡ ಹೇರಲು ಶನಿವಾರ ಮಧ್ಯಾಹ್ನ 12ರಿಂದ 3 ಗಂಟೆಯವರಗೆ ದೇಶಾದ್ಯಂತ ‘ಚಕ್ಕಾ ಜಾಮ್‌’ ನಡೆಸಲು ರೈತರು ನಿರ್ಧರಿಸಿದ್ದಾರೆ.

ರೈತರ ಪ್ರತಿಭಟನೆ ವಿಷಯದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಸಹ ಇದೇ ಮೊದಲ ಬಾರಿ ರಂಗಪ್ರವೇಶ ಮಾಡಿದ್ದು, ರೈತರ ಹೆದ್ದಾರಿ ತಡೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೊಂದಿಗೆ ಶುಕ್ರವಾರ ಸುದೀರ್ಘ ಸಮಾಲೋಚನೆ ನಡೆಸಿದರು. ನಂತರ ದಿಲ್ಲಿ ಪೊಲೀಸ್‌ ಆಯುಕ್ತ ಎಸ್‌.ಎನ್‌. ಶ್ರೀವಾತ್ಸವ್‌ ಅವರ ಜತೆ ತುರ್ತು ಸಭೆ ನಡೆಸಿದರು. ಸಾಕಷ್ಟು ಭದ್ರತೆ ನೀಡುವ ಕುರಿತು ಚರ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.

ರಸ್ತೆ ತಡೆಯಿಂದ ಟ್ರಾಫಿಕ್‌ನಲ್ಲಿ ಸಿಲುಕಿಕೊಳ್ಳುವ ಜನರಿಗೆ ರೈತರೇ ಆಹಾರ ಮತ್ತು ನೀರು ಪೂರೈಸುತ್ತಾರೆ. ಆ ಮೂಲಕ ಸರಕಾರ ನಮ್ಮೊಂದಿಗೆ ಹೇಗೆ ವರ್ತಿಸುತ್ತಿದೆ ಎಂಬುದನ್ನು ಜನತೆಗೆ ಮನದಟ್ಟು ಮಾಡಿಕೊಡುತ್ತೇವೆ ಎಂದು ಬಿಕೆಯು ಮುಖಂಡ ರಾಕೇಶ್‌ ಟಿಕಾಯತ್‌ ಹೇಳಿದ್ದಾರೆ.

3 ಗಂಟೆಯಾಗುತ್ತಿದ್ದಂತೆ 1 ನಿಮಿಷ ಟ್ರಾಕ್ಟರ್ ಹಾರ್ನ್ ಹಾಕೋ ಮೂಲಕ ಚಕ್ಕಾ ಜಾಮ್ ಪ್ರತಿಭಟನೆ ಅಂತ್ಯಗೊಳ್ಳಲಿದೆ. ಚಕ್ಕಾ ಜಾಮ್ ಶಾಂತಿಯುತವಾಗಿ ನಡೆಸಲು ನಿರ್ಧರಿಸಲಾಗಿದೆ. ಭದ್ರತೆ ಹೆಸರಲ್ಲಿ ಪೊಲೀಸ್ ಬಲವನ್ನು ಸರಕಾರ ಬಳೆಸುತ್ತಿದೆ. ಅನಗತ್ಯ ಗೊಂದಲ ಸೃಷ್ಟಿಸಲು ಸರಕಾರ ಯೋಜನೆ ರೂಪಿಸುತ್ತಿದೆ. ನಾವು ಸಾಕಷ್ಟು ಜಾಗೃತೆಯಿಂದ ಸಿದ್ದತೆ ಮಾಡಿಕೊಂಡಿದ್ದು, ಚಕ್ಕಾ ಜಾಮ್ ಶಾಂತಿಯುತವಾಗಿ ನಡೆಯಲಿದೆ ಎಂದು AIKS ನ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಹನನ್ ಮುಲ್ಲಾ ತಿಳಿಸಿದ್ದಾರೆ.

emedialine

Recent Posts

371 (ಜೆ) ವಿಧಿಯ ನಿಬಂಧನೆಗಳ ಪರಿಣಾಮಕಾರಿ ಅನುμÁ್ಠನಕ್ಕೆ ಒತ್ತಾಯ

ಕಲಬುರಗಿ: ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯು, ಬೆಂಗಳೂರಿನಲ್ಲಿ ಕಲ್ಯಾಣ ಕರ್ನಾಟಕ ಭಾಗದ ಚುನಾಯಿತ ಪ್ರತಿನಿಧಿಗಳು ಮತ್ತು ಸಚಿವರ ಸಭೆ ನಡೆಸಿ,…

22 mins ago

ಮರಗಮ್ಮ ದೇವಿ ಮೂರ್ತಿ ಗಂಗಾಸ್ನಾನ | ಎಂಟು ಗಂಟೆಗಳ ಕಾಲ ಮೆರವಣಿಗೆ

ಸುರಪುರ: ಇಲ್ಲಿಯ ರಂಗಂಪೇಟೆ-ತಿಮ್ಮಾಪುರದ ಆರಾಧ್ಯ ದೇವತೆ ಮರಗಮ್ಮ ದೇವಿಯ ನೂತನ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ದೇವಿಯ ಬೆಳ್ಳಿಯ ಮೂರ್ತಿ ಗಂಗಾಸ್ನಾನ…

27 mins ago

ಒತ್ತಡ ನಿಭಾಯಿಸಲು ಪರಿಹಾರ ಒದಗಿಸುವುದು ಯುವ ಸ್ಪಂದನೆ ಉದ್ದೇಶ

ಸುರಪುರ: ಯುವ ಸಬಲೀಕರಣ, ಅರೋಗ್ಯ ಜೀವನಶೈಲಿ,ಲೈಂಗಿಕತೆ ಮತ್ತು ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ನಿಭಾಯಿಸುತ್ತಿರುವ ಸವಾಲುಗಳು, ಭಾವನಾತ್ಮಕ ಸಮಸ್ಯೆಗಳು ಭಾವನೆಗಳ ನಿಭಾಯಿಸುವಿಕೆ,ನೆನಪಿನ…

31 mins ago

ಶಹಾಬಾದ: ಸಂಪೂರ್ಣತಾ ಅಭಿಯಾನ ಉತ್ಸವಕ್ಕೆ ಚಾಲನೆ

ಶಹಾಬಾದ: ನೀತಿ ಆಯೋಗವು ಮಾನವ ಅಭಿವೃದ್ಧಿ ಸೂಚಕಗಳಲ್ಲಿ ಹಿಂದುಳಿದ ತಾಲೂಕಗಳಿಗೆ ಆರೋಗ್ಯ, ಪೆÇೀಷಣೆ, ಕೃಷಿ ಮೇಲೆ ಕೇಂದ್ರೀಕರಿಸಿದ ಸಂಪೂರ್ಣತಾ ಅಭಿಯಾನ…

35 mins ago

ಗಿಡ-ಮರಗಳ ಸಂರಕ್ಷಣೆ ಮಾಡದಿದ್ದರೇ ಪ್ರಕೃತಿಗೆ ಗಂಡಾಂತರ ತಪ್ಪಿದ್ದಲ್ಲ

ಶಹಾಬಾದ: ಕೇವಲ ಒಂದು ದಿನ ವನಮಹೋತ್ಸವ ಪರಿಸರ ದಿನಾಚರಣೆಯಂತಹ ಕಾರ್ಯಕ್ರಮ ಮಾಡಿದರೆ ಸಾಲದು, ಬದಲಾಗಿ ಗಿಡ-ಮರಗಳ ಸಂರಕ್ಷಣೆ ಮಾಡುವುದು ಅವಶ್ಯವಾಗಿದೆ.…

38 mins ago

ಬಡವರ ಪರವಾಗಿ ಕೆಲಸ ಮಾಡಿದ ದೀಮಂತ ನಾಯಕ ಬಾಬು ಜಗಜೀವನರಾಮ

ಶಹಾಬಾದ: ತುಳಿತಕ್ಕೆ ಒಳಗಾದವರ ಹಾಗೂ ಬಡವರ ಪರವಾಗಿ ಕೆಲಸ ಮಾಡಿದ ದೀಮಂತ ನಾಯಕ ಬಾಬು ಜಗಜೀವನರಾಮರಾಗಿದ್ದರು ಎಂದು ಕಾರ್ಮಿಕ ಪ್ರಧಾನ…

45 mins ago