ಬಿಸಿ ಬಿಸಿ ಸುದ್ದಿ

ಪುಸ್ತಕದಿಂದ ಮನುಕುಲದ ಉಳಿವು: ಡಾ. ರಹಮತ್ ತರೀಕೆರೆ

ಕಲಬುರಗಿ: ರಾಜ-ರಾಣಿಯರ ಚರಿತ್ರೆಯನ್ನು ಬದಿಗಿಟ್ಟು ಕರ್ನಾಟಕದ ಅಜ್ಞಾತ ಚರಿತ್ರೆಯನ್ನು ಹೊರ ತೆಗೆಯಬೇಕು ಎಂದು  ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ರಹಮತ್ ತರಿಕೇರಿ ಸಲಹೆ ನೀಡಿದರು.

ಇಲ್ಲಿನ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಇಂದು ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ, ಸಿದ್ಧಲಿಂಗೇಶ್ವರ ಪ್ರಕಾಶ ಹಾಗೂ ಬಸವ ಪ್ರಕಾಶನದ 44ನೇ ವಾರ್ಷಿಕೋತ್ಸವ ಹಾಗೂ 105 ಪುಸ್ತಕಗಳ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಲೇಖಕರು, ಪ್ರಕಾಶಕರು, ಮುದ್ರಕರು, ಮಾರಾಟಗಾರು, ಓದುಗರು ಈ ಐದು ಜನ ಪುಸ್ತಕ ಸಂಸ್ಕೃತಿಯ ವಾರಸುದಾರರು. ಇವರನ್ನು ಪುಸ್ತಕ ಸಂಸ್ಕೃತಿಯ ಭಾಗವೆಂದು ಪರಿಗಣಿಸಬೇಕು. ಸಾಂಸ್ಕೃತಿಕ ಆರೋಗ್ಯವನ್ನು ಕಾಪಾಡುವ ಕೆಲಸ ಸಿದ್ಧಲಿಂಗೇಶ್ವರ ಪ್ರಕಾಶನ ಸಂಸ್ಥೆ ಮಾಡುತ್ತಿದೆ ಎಂದು ಅವರು ಬಣ್ಣಿಸಿದರು.

ಬಡ ರಾಷ್ಟ್ರವಾದ ಭೂತಾನ್ ದೇಶ ನೆಮ್ಮದಿಯ ಸೂಚ್ಯಾಂಕದಲ್ಲಿ ನಂಬರ್ 1 ಇದೆ.‌ ಅದರಂತೆ ಕಲಬುರಗಿ ಸಾಂಸ್ಕತಿಕ ಆರೋಗ್ಯವನ್ನು ಕಾಪಡುತ್ತಿದೆ. ಇಂದಿನ ಡಿಸಿಟಲ್ ಯುಗದಲ್ಲೂ ಓದುವ ಸಂಸ್ಕೃತಿ, ಅಭಿರುಚಿಯನ್ನು ಹುಟ್ಟು ಹಾಕುವ ಕೆಲಸ ಮಾಡುತ್ತಿರುವ ಸಿದ್ಧಲಿಂಗೇಶ್ವರ ಪ್ರಕಾಶನ ಸಂಸ್ಥೆಯ ಕಾರ್ಯಾ ಶ್ಲಾಘನೀಯ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಅಫಜಲಪುರ ಸಂಸ್ಥಾನ ಹಿರೇಮಠದ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಮಾತನಾಡಿ, ಮಾನವೀಯತೆ ಅರಳಲು ಪುಸ್ರಕ ಸಹಕಾತಿಯಾಗಿವೆ. ಪುಸ್ತಕಗಳು ನಮ್ಮ ಕೈಯಲ್ಲಿದ್ದರೆ ಬದುಕಿನ ಪಥವೇ ಬದಲಾಗುತ್ತದೆ.‌ ನೈತಿಕತೆ, ಮಾನವೀಯತೆ ಪುಸ್ತಕದಿಂದ ಸಾಧ್ಯ ಎಂದು ತಿಳಿಸಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಡಾ.ದಯಾನಂದ ಅಗಸರ ಕಾರ್ಯಕ್ರಮ ಉದ್ಘಾಟಿಸಿದರು. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಭಾರಿ ಕುಲಪತಿ ಪ್ರೊ.ಎಂ.ಎ.ಅಳಗವಾಡಿ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ವಿ.ಟೆಂಗಳಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.

ಪ್ರಕಾಶಕ ಬಸವರಾಜ ಜಿ.ಕೊನೇಕ ಅಧ್ಯಕ್ಷತೆ ವಹಿಸಿದ್ದರು. ಡಾ. ಗವಿಸಿದ್ದಪ್ಪ ಪಾಟೀಲ ವೇದಿಕೆಯಲ್ಲಿದ್ದರು. ಶಿವರಾಜ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಇದೇವೇಳೆಯಲ್ಲಿ ಲೇಖಕರಿಗೆ ಗೌರವಧ ಹಾಗೂ ಪುಸ್ತಕ ನೀಡಿ ಗೌರವಿಸಲಾಯಿತು.

ವಿಶೇಷ ಸನ್ಮಾನ: ಗುವಿವಿ ಕನ್ನಡ ವಿಭಾಗದಿಂದ 11 ಚಿನ್ನದ ಪದಕ ಪಡೆದ ಆಳಂದ ತಾಲ್ಲೂಕಿನ ಮಾಡ್ಯಾಳ್ ಗ್ರಾಮದ ಕು.ಜಯಶ್ರೀ ಶರಣಪ್ಪ ಯಳಸಂಗಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಜಿಲ್ಲೆಗೆ ಪ್ರಥಮ ಮತ್ತು ರಾಜ್ಯಕ್ಕೆ 7ನೇ ಱ್ಯಾಂಕ್ ಪಡೆದ ಕು.ನಿಖಿತಾ ಬಿ.ಪಾಟೀಲ ಅವರಿಗೆ ಸಮಾರಂಭದಲ್ಲಿ ವಿಶೇಷ ಸನ್ಮಾನ ಮಾಡಲಾಗುವುದು. ಕೊರೊನಾ ವಾರಿಯಱ್ಸ್ ಗಳಾದ ಡಾ.ಮಲ್ಹಾರಾವ ಮಲ್ಲೆ, ಸುರೇಖಾ ಬಿ.ದೇಸಾಯಿ, ಸುನಂದಾ ಮಲ್ಲಿಕಾರ್ಜುನ, ಶಾಂತಾಬಾಯಿ ಮಲ್ಲಿನಾಥ ಬುರ್ಲಿ, ರವಿ ಮಾಲ್ದೆ ಮತ್ತು ಮಾಪಣ್ಣ ಶಿವಶರಣಪ್ಪ ಶ್ರೀಸಂದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಾಹಿತ್ಯದ ವಿವಿಧ ಪ್ರಕಾರಗಳ 44 ಪುಸ್ತಕ ಮತ್ತು 8 ಪಠ್ಯಪುಸ್ತಕ ಸೇರಿ 105 ಪುಸ್ತಕಗಳನ್ನು ಅಂದು ಏಕಕಾಲಕ್ಕೆ ಲೋಕಾರ್ಪಣೆ ಮಾಡಲಾಗುತ್ತಿದೆ.ರಾಜ್ಯದ ವಿವಿಧ ಲೇಖಕರು ಸೇರಿದಂತೆ ಕಲ್ಯಾಣ ಕರ್ನಾಟಕದ ಲೇಖಕರ, 10 ಜನ ಮಹಿಳಾ ಲೇಖಕಿಯರ, 10 ಜನ ದಲಿತ ಲೇಖಕರ ಮತ್ತು ಐವರು ಹೊಸ ಲೇಖಕರ ಕೃತಿಗಳು ಇದರಲ್ಲಿವೆ, ಈ ಭಾಗದ 11 ಜನ ಲೇಖಕರ ವಿಮರ್ಶಾ ಕೃತಿಗಳು ಈ ಬಾರಿ ಬಿಡುಗಡೆಯಾಗುತ್ತಿರುವುದು ವಿಶೇಷವಾಗಿದೆ. ಇಲ್ಲಿಯವರೆಗೆ ಸಂಸ್ಥೆಯ ವತಿಯಿಂದ 2,700 ಕೃತಿಗಳನ್ನು ಪ್ರಕಟಿಸಲಾಗಿದೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

16 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago