ಶಹಾಬಾದ:ನಡೆ ನುಡಿ ಒಂದಾದಾಗ ಮಾತ್ರ ಒಬ್ಬ ವ್ಯಕ್ತಿ ಬಹಳ ಎತ್ತರಕ್ಕೆ ಬೆಳೆಯುತ್ತಾನೆ ಎಂಬುದಕ್ಕೆ ಶಿಕ್ಷಕ ಹೆಚ್.ವಾಯ್.ರಡ್ಡೇರ್ ಅವರೇ ಸಾಕ್ಷಿ ಎಂದು ರಾವೂರ ಸಿದ್ಧಲಿಂಗೇಶ್ವರ ಸಂಸ್ಥಾನ ಮಠದ ಸಿದ್ಧಲಿಂಗ ಸ್ವಾಮಿಗಳು ಹೇಳಿದರು.
ಅವರು ರವಿವಾರ ಭಂಕೂರ ಗ್ರಾಮದ ದೇವಿ ಕಲ್ಯಾಣ ಮಂಟಪದಲ್ಲಿ ಹೊನಗುಂಟಾ ಸರಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ಹೆಚ್.ವಾಯ್.ರಡ್ಡೇರ್ ಅವರು ವಯೋನಿವೃತ್ತಿ ಹೊಂದಿದ ನಿಮಿತ್ತ ಆಯೋಜಿಸಲಾದ ಬೀಳ್ಕೊಡುಗೆ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.
ವಯೋ ನಿವೃತ್ತಿ ಸಮಾರಂಭ ಎಂಬುದು ತಾವು ಮಾಡಿದ ಕಾರ್ಯದ ಮೌಲ್ಯಮಾಪನ ನಡೆಯುವ ಕೊನೆಯ ಘಳಿಗೆ ಅದು. ರಡ್ಡೇರ್ ಅವರು ಅಪಾರ ಜನಮನ್ನಣೆ ಪಡೆದಿರುವದು ಅವರ ಆಚಾರ ವಿಚಾರದಿಂದ ಎಂಬುದಕ್ಕೆ ಈ ಸಮಾರಂಭದಲ್ಲಿ ಸೇರಿರುವ ಶಿಕ್ಷಕರು, ಹಳೆ ವಿದ್ಯಾರ್ಥಿಗಳು, ಗೆಳೆಯರೇ ಸಾಕ್ಷಿ. ಒಬ್ಬ ಶಿಕ್ಷಕ ತನ್ನ ವೃತ್ತಿ ಜೀವನದಲ್ಲಿ ಶಾಲೆಗೆ ಸಮಯಕ್ಕೆ ಮುಂಚಿತವಾಗಿ ಹೋಗುವುದು, ಶಾಲೆ ಬಿಟ್ಟ ನಂತರ ಬರುವುದು ನೋಡಿದರೇ, ರಡ್ಡೇರ್ ಅವರನ್ನು ನೋಡಿ ಗಡಿಯಾರವೂ ತನ್ನ ಸಮಯ ಪಾಲನೆ ಮಾಡುತ್ತಿರಬಹುದೇನೋ ಎಂಬAತೆ ಅನಿಸುತ್ತದೆ.ಅಷ್ಟೊಂದು ಸಮಯ ಪಾಲನೆ, ಶಿಸ್ತು ಹಾಗೂ ಕರ್ತವ್ಯ ಬದ್ಧತೆ ಅಳವಡಿಕೊಂಡಿರುವ ವ್ಯಕ್ತಿಗೆ ಜನರು ತಲೆ ಬಾಗುತ್ತಾರೆ ಎಂದು ಹೇಳಿದರು.
ಚಿತ್ತಾಪೂರ ಕ್ಷೇತ್ರ ಸಮನ್ವಯ ಅಧಿಕಾರಿ ಮಲ್ಲಿಕಾರ್ಜುನ ಸೇಡಂ ಮಾತನಾಡಿ,ಪರಿಸರದ ವ್ಯವಸ್ಥೆಯಲ್ಲಿ ಒಂದು ಆಗಮನವಾದರೆ ಮತ್ತೆ ನಿರ್ಗಮನ ಆಗುವುದು ಖಚಿತ.ಅದರಂತೆ ಸೇವೆಗೆ ಸೇರಿದ ದಿನ ನೇಮಕಾತಿಯಾದರೆ, ಅರವತ್ತು ವರ್ಷ ನಂತರ ವಯೋನಿವೃತ್ತಿಯಾಗುವುದು ಸಹಜ ಪ್ರಕ್ರಿಯೆ.ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ಸಿಕ್ಕರೇ ಅದು ದೊಡ್ಡ ಭಾಗ್ಯ ಎಂದು ನಾನು ನಂಬಿರುವೆ. ಪ್ರತಿ ವೃತ್ತಿ ನಿರತ ವ್ಯಕ್ತಿಯ ಜೀವನದಲ್ಲಿ ಸೇವಾ ನಿವೃತ್ತಿ ಎಂಬುದು ಬಹು ಮುಖ್ಯ ಭಾಗ. ರಡ್ಡೇರ್ ಅವರು ಎಲ್ಲರಿಗೂ ಸಹಾಯ ಮನೋಭವನೆವುಳ್ಳವರಾಗಿದ್ದರಲ್ಲದೇ, ತಮ್ಮ ಕಾರ್ಯವನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡಿದ್ದಾರೆ. ವಸಂತ ಮಾಸದಲ್ಲಿ ಹಳೆ ಎಲೆಗಳು ಉದುರಿ, ಹೊಸ ಚಿಗುರು ಬೆಳೆಯುವಂತೆ, ಆಗಮನ ಹಾಗೂ ನಿರ್ಗಮನ ಪ್ರಕೃತಿಯ ನಿಯಮ.ಅದರಂತೆ ಇವರು ನಿರ್ಗಮನ ಹೊಂದುತ್ತಿದ್ದಾರೆ. ಅವರ ನಿವೃತ್ತಿ ನಂತರದ ಜೀವನ ಸುಖಕರವಾಗಿರಲಿ ಎಂದು ಹೇಳಿದರು.
ತಾಲೂಕಾ ದೈಹಿಕ ಶಿಕ್ಷಣ ಪರಿವೀಕ್ಷಕ ದೇವೆಂದ್ರ ರೆಡ್ಡಿ,ಇಲಕಲ್‌ನ ನಿವೃತ್ತ ಡಯಟ್ ಉಪನ್ಯಾಸಕಿಜಯಶ್ರೀ ರಂಗರೇಜ,ಕಲಬುರಗಿ ಎಮ್‌ಆರ್‌ಎಮ್‌ಸಿ ಕಾಲೇಜಿನ ಉಪನ್ಯಾಸಕ ಶ್ರೀಶೈಲ ಘೂಳಿ,ಕ.ರಾ.ಸ. ಗ್ರೇಡ-೧ ದೈ.ಶಿ.ಶಿ.ಸಂಘದ ಅಧ್ಯಕ್ಷ ರಾಜು ದೊಡ್ಡಮನಿ, ಭೀಮಾಶಂಕರ ಖೇಣಿ ಮಾತನಾಡಿದರು.
ಗಣ್ಯರಾದ ಚನ್ನವೀರಪ್ಪ ಪಾಟೀಲ, ವಿಶ್ವನಾಥ ಮಲಕೂಡ, ಶರಣಗೌಡ ಗೋಳಾ(ಕೆ), ದೇವೆಂದ್ರ ಕಾರೊಳ್ಳಿ, ಶಶಿಕಾಂತ ಪಾಟೀಲ,ಮಹಾದೇವ ದೇವನ್,ವಿವೇಕಾನಂದ ಹಿರೇಮಠ,ದೊಡ್ಡಯ್ಯಸ್ವಾಮಿ ನಡಿಗೇರಿ ಸೇರಿದಂತೆ ಅನೇಕರು ಇದ್ದರು. ದತ್ತಾತ್ರೇಯ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು.
ಬಸವರಾಜ ಮುಗುಳಖೋಡ ನಿರೂಪಿಸಿದರು, ಕುಮಾರಿ ಕಾವ್ಯ ಪ್ರಾರ್ಥಿಸಿದರು, ಮಲ್ಲಿನಾಥ ಪಾಟೀಲ ಸ್ವಾಗತಿಸಿದರು, ದತ್ತಪ್ಪ ಕೋಟನೂರ ವಂದಿಸಿದರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…