ವಾಡಿ: ಭಾರತದ ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿ ನೇತಾಜಿ ಸುಭಾಷಚಂದ್ರ ಬೋಸ್ ಅವರು ನೆತ್ತರ ಕ್ರಾಂತಿ ಬಯಸಿರಲಿಲ್ಲ ಎಂದು ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘಟನೆ (ಎಐಡಿವೈಒ) ಜಿಲ್ಲಾ ಸಮಿತಿ ಸದಸ್ಯ ಮಲ್ಲಿನಾಥ ಹುಂಡೇಕಲ್ ಹೇಳಿದರು.
ರಾವೂರ ಗ್ರಾಮದಲ್ಲಿ ಎಐಡಿವೈಒ, ಎಐಡಿಎಸ್‌ಒ ಹಾಗೂ ರೈತ ಕೃಷಿ ಕಾರ್ಮಿಕ ಸಂಘಟನೆ ವತಿಯಿಂದ ಏರ್ಪಡಿಸಲಾಗಿದ್ದ ನೇತಾಜಿ ಸುಭಾಷಚಂದ್ರ ಬೋಸ್ ಅವರ ೧೨೫ನೇ ಜನ್ಮದಿನ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಶೋಷಣೆ, ಅಸಮಾನತೆ ಹಾಗೂ ಅನ್ಯಾಯದ ತಳಹದಿಯ ಮೇಲೆ ನಿರ್ಮಾಣಗೊಂಡಿರುವ ಒಂದು ಜನವಿರೋಧಿ ವ್ಯವಸ್ಥೆಯನ್ನು ಮೂಲಭೂತವಾಗಿ ಬದಲಾಯಿಸಿ, ಮಾನವನಿಂದ ಮಾನವನ ಶೋಷಣೆ ರಹಿತ ಸರ್ವಸಮಾನತೆಯ ಸಮಾಜವಾದಿ ವ್ಯವಸ್ಥೆ ಜಾರಿಗೆ ಬರಬೇಕು ಎಂಬುದು ನೇತಾಜಿಯವರ ಪ್ರಬಲವಾದ ಕನಸ್ಸಾಗಿತ್ತು.
ಈ ಗುರಿಯನ್ನು ಬೆನ್ನಟ್ಟಿ ಕ್ರಾಂತಿಕಾರಕ ಹೋರಾಟದಲ್ಲಿ ತೊಡಗಿದ್ದರು. ಕ್ರಾಂತಿ ಎಂಬುದು ರಕ್ತಪಾತ-ಜೀವ ಹಾನಿಯಿಂದಲೇ ಘಟಿಸಬೇಕು ಎಂಬುದು ನೇತಾಜಿಯವರ ವಾದವಾಗಿರಲಿಲ್ಲ. ನ್ಯಾಯಸಮ್ಮತವಾದ ಜನತೆಯ ಪ್ರಜಾತಾಂತ್ರಿಕ ಹೋರಾಟದ ಮೇಲೆ ಎದುರಾಳಿ ಶತ್ರು ದಾಳಿ ನಡೆಸಿದರೆ ಕೈಕಟ್ಟಿ ಕೂಡಲಾಗದು. ಆ ಸಂದರ್ಭದಲ್ಲಿ ಪ್ರತಿದಾಳಿ ಅನಿವಾರ್ಯ. ಇದನ್ನೇ ರಕ್ತ ಕ್ರಾಂತಿ ಎಂದು ಕರೆಯುವುದಾದರೆ ಈ ವಾದಕ್ಕೆ ಅರ್ಥವಿಲ್ಲ. ಕ್ರಾಂತಿಕಾರಿಗಳಾದ ಶಹೀದ್ ಭಗತ್‌ಸಿಂಗ್, ಚಂದ್ರಶೇಖರ ಆಜಾದ್, ಖುದಿರಾಮಬೋಸ್, ಅಷ್ಪಾಖುಲ್ಲಾ ಖಾನ್ ಮತ್ತಿತರರ ಹೋರಾಟದ ಗುರಿ ಅರ್ಥ ಮಾಡಿಕೊಳ್ಳಲು ಜನತೆ ಮುಂದಾಗಬೇಕು ಎಂದರು.
ಗ್ರಾಮದ ಯುವ ಮುಖಂಡ ಮಹೆಬೂಬ ಖಾನ್ ನೇತಾಜಿ ಭಾವಚಿತ್ರಕ್ಕೆ ಪುಷ್ಪಮಾಲೆ ಅರ್ಪಿಸಿದರು. ಎಐಡಿವೈಒ ಅಧ್ಯಕ್ಷ ಗೌತಮ ಪರತೂರಕರ, ಮುಖಂಡರಾದ ಶರಣು ಹೇರೂರ, ಅಮೀರ ಪಟೇಲ, ಸಾಹೆಬ ಪಟೇಲ, ಆನಂದ, ಚಂದ್ರು ಪಾಲ್ಗೊಂಡಿದ್ದರು. ಗೋವಿಂದ ಯಳವಾರ ನಿರೂಪಿಸಿ, ವಂದಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…