ಬಿಸಿ ಬಿಸಿ ಸುದ್ದಿ

ಏಮ್ಸ್ ಹುಬ್ಬಳ್ಳಿಗೆ, ಸಿಓಇ ಬೆಂಗಳೂರಿಗೆ, ಕಲ್ಯಾಣದವರ ಕೈಗೆ ಚೊಂಬು: ಜಗದೇವ ಗುತ್ತೇದಾರ್

ಕಲಬುರಗಿ: ಕಲಬುರಗಿಗೆ ಬರಬೇಕಾಗಿದ್ದ ಏಮ್ಸ್  ಹುಬ್ಬಳ್ಳಿಗೆ ಹೋಯ್ತು, ಕಲಬುರಗಿಯಲ್ಲಿರೋ ಕೇಂದ್ರೀಯ ವಿವಿಯಲ್ಲೇ ಆರಂಭವಾಗಬೇಕಿದ್ದ ಸೆಂಟರ್ ಆಫ್ ಎಕ್ಸಲನ್ಸ್ (ಸಿಓಇ) ಬೆಂಗಳೂರು ಪಾಲಾಯ್ತು, ಮಂಜೂರಾಗಿ 8 ವರ್ಷವಾದರೂ ಕಲಬುರಗಿಗೆ ರೇಲ್ವೆ ಡಿವಿಜನ್ ಕಚೇರಿ ಬರಲಿಲ್ಲ, ಕಾಂದ್ರ- ರಾಜ್ಯದಲ್ಲಿ ಬಿಜೆಪಿ ಸರ್ಕಾರ, ಕಲ್ಯಾಣದವರ ಕೈಗೆ ಮಾತ್ರ ದೊಡ್ಡದಾದ ಚೊಂಬು ಸಿಗುತ್ತಿದೆ ಎಂದು ಈಚೆಗೆ ಕಲಬುರಗಿ, ಕಲ್ಯಾಣದ ಕೈಜಾರಿರುವ ಹಲವು ಮಹತ್ವದ ಯೋಜನೆಗಳ ವಿಚಾರದಲ್ಲಿ ಕೇಂದ್ರ- ರಾಜ್ಯದಲ್ಲಿರುವ ಬಿಜೆಪಿ ಸರ್ಕಾರದ ಹೊಣೆಗೇಡಿತನವೇ ಕಾರಣ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ್ ಆಕ್ರೋಶ ಹೊರಹಾಕಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ಕಾಂಗ್ರೆಸ್ ಸರ್ಕಾರದಲ್ಲಿ ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ, ಡಾ. ಶರಣಪ್ರಕಾಶ ಕಲಬುರಗಿ ಜಿಲ್ಲಾ ಸಚಿವರಾಗಿದ್ದಾಗ ಇಎಸ್‍ಐಸಿಯನ್ನೇ ಏಮ್ಸ್ ದರ್ಜೆಗೆ ಮೇಲೇರಿಸುವಂತೆಹ ಪ್ರಸ್ತಾವನೆ ಕೇಂದ್ರಕ್ಕೆ ರವಾನೆಯಾಗಿತ್ತು. ಈಗ ನೋಡಿದರೆ ಸದರಿ ಪ್ರಸ್ತಾವನೆ ಮೂಲೆಗುಂಪು ಮಾಡಲಾಗಿದ್ದು ಯೋಜನೆಯನ್ನೇ ಹುಬ್ಬಳ್ಳಿ- ದಾರವಾಡಕ್ಕೆ ಎತ್ತಂಹಗಡಿ ಮಾಡಲಾಗಿದೆ. ಇದರ ಹಿಂದೆ ಬಿಜೆಪಿಯಲ್ಲಿರುವ ಕಲ್ಯಾಣ ನಾಡಿನ ವಿರೋಧಿಗಳ ಸಂಚು ಅಡಗಿದೆ ಎಂದು ಗುತ್ತೇದಾರ್ ದೂರಿದ್ದಾರೆ.

ಉ- ಕ ಹೆಸರಲ್ಲಿ ಎಲ್ಲವನ್ನು ಹುಬ್ಬಳ್ಳಿ- ಧಾರವಾಡಕ್ಕೆ ಹೊತ್ತೊಯ್ಯಲಾಗುತ್ತಿದ್ದರೂ ಇಲ್ಲಿರುವ ಕಲ್ಯಾಣ ನಾಡಿನ 5 ಬಿಜೆಪಿ ಎಂಪಿಗಳು 30 ಕ್ಕೂ ಹೆಚ್ಚು ಬಿಜೆಪಿ ಶಾಸಕುರ ಏನು ಮಾಡುತ್ತಿದ್ದಾರೆ? ಬಾಯಿ ಮುಚ್ಚಿಕೊಂಡು ಕುಲಿತಿರೋದು ಬಿಟ್ಟರೆ ಏನೂ ಮಾಡುತ್ತಿಲ್ಲ. ಇವರ ಮೌನವೇ ಕಲಬುರಗಿ ಸೇರಿದಂತೆ ಕಲ್ಯಾಣ ನಾಡು ಮಹತ್ವದ ಯೋಜನೆಗಳಿಂದ ವಂಚಿತವಾಗುವಂತಾಗಿದೆ ಎಂದೂ ಜಗದೇವ ಗುತ್ತೇದಾರ್ ಟೀಕಿಸಿದ್ದಾರೆ.

ಕಲಬುರಗಿಯಲ್ಲಿ ಕೇಂದ್ರೀಯ ವಿವಿ ಮುಖ್ಯ ಕ್ಯಾಂಪಸ್ ಇದ್ದರೂ ಸೆಂಟರ್ ಆಪ್ ಎಕ್ಸಲನ್ಸ್ ಬೆಂಗಳೂರಲ್ಲಿ ಮಾಡಲು ಹೊರಟಿದ್ದಾರೆ. ಇದು ನ್ಯಾಯ,ಮ್ಮತವೆ? ಬಿಡೆಪಿ ಸರಕಾರಕ್ಕೆ ಇದು ಹೇಗೆ ತಿಲಿಯಲಿಲ್ಲವೋ? ಕಲ್ಯಾಣದ ಯೋಜನೆಗಳನ್ನು ಹೀಗೆ ಯಾಮಾರಿಸಿ ಬೆಂಗಲೂರಿಗೆ, ಹುಬ್ಬಳ್ಳಿಗೆ ಕೊಂಡೊಯ್ಯುವುದೇ ಇವರ ಕೆಲಸವಾಗಿದೆ. ಕಾಂಗ್ರೆಸ್ ಪ7ದ ಸರಕಾರವಿದ್ದಾU ಹಲವು ಯೋಜನೆಗಳು ಮಂಜೂರಾದರೂ ಇದೀಗ ಅವು ಒಂದೊಂದಾಗಿ ಎತ್ತಂಗಡಿಯಾಗುತ್ತಿವೆ. ಇದಕ್ಕೆ ಬಿಡಜೆಪಿಯವರು ಮೌನವಾಗಿದ್ದು ಸಮ್ಮತಿಸುತ್ತಿದ್ದಾರೆಂದು ಗುತ್ತೇದಾರ್ ಕುಟುಕಿದ್ದಾರೆ.

ಕೇಂದ್ರಲ್ಲಿ ಡಾ. ಮಲ್ಲಿಕಾರ್ಜುನ ಖರ್ಗೆಯವರು ಸಚಿವರಾಗಿದ್ದಾಗ ಕೇಂದ್ರೀಯ ವಿವಿ ಬಂತು, ಡಾ. ಶರಮಪ್ರಕಾಶ ಪಾಟೀಲರು ಜಿಲ್ಲಾ ಸಚಿವರಾಗಿದ್ದಾಗ ಏಮ್ಸ್ ಪಸ್ತಾವನೆ ಕೇಂದ್ರಕ್ಕೆ ಹೋಯ್ತು. ಅನೇಕ ಆರೋಗ್ಯ ಯೋಜನೆಗಳು ಕಲಬುರಗಿಗೆ ಬಂದವು. ಇದೀಗ ಅವೆಲ್ಲವೂ ಕೈ ಬಿಟ್ಟು ಹೋಗುತ್ತಿವೆ ಹೀಗಿದ್ದರೂ ಬಿಜೆಪಿಯ ಸಂಸದರು, ಶಾಸಕರು ನೆಪ ಹೇಳುಉತ್ತ ಸುಮ್ಮನಾಗುತ್ತಿದ್ದಾರೆ. ತಮ್ಮದೇ ಸರ್ಕಾರವಿದ್ದಾಗ ಕಲಬುರಗಿಯಲ್ಲಿರುವ ವಿಶ್ವ ವಿದ್ಯಾಲಯದಲ್ಲಿನ ಭೂಮಿ ಪಡೆದು ಏಮ್ಸ್ ಸಂಸ್ಥೆ ತರಬಹುದಿತ್ತು.

ಅದನ್ನು ಮಾಡದೆ ಕೈಲಾಗದವರು ಮೈ ಪರಚಿಕೊಂಡರು ಎಂಬಂತೆ ನಮ್ಮ ಸಂಸದರು, ಶಾಸಕರು ಹೇಳಿಕೆ ಕೊಟ್ಟು ಕೈತೊಳೆದುಕೊಳ್ಳುತ್ತಿದ್ದಾರೆ. ಹೀಗೇ ಮುಂದುವರಿದರೆ ಕಲಬುರಗಿ, ಕಲ್ಯಾಣ ನಾಡು ತನ್ನೆಲ್ಲ ಮಹತ್ವದ ಯೋಜನೆಗಳನ್ನು ಕಳೆದುಕೊಂಡು ಬಯಲಾಗುವ ಅಪಾಯಗಳೇ ಅಧಿಕವಾಗಿವೆ. ಜಿಲ್ಲೆಯ ಜನ ಅಭಿವೃದ್ಧಿ ಪರವಾಗಿರುವಂತಹ ಮುತ್ಸದ್ದಿ ರಾಜಕಾರಣಿ ಡಾ. ಮಲ್ಲಿಕಾರ್ಜುನ ಖರ್ಗೆಯವರನ್ನು ಸೋಲಿಸಿ ಪಶ್ಚಾತ್ತಾಪಪಡುವಂತಾಗಿದೆ. ಅನೇಕರು ಈ ಸಂಗತಿ ಆಡಿಕೊಳ್ಳುತ್ತಿದ್ದಾರೆ. ಈಗಲಾದರೂ ಜನ ಹುಶಾರಾಗಬೇಕು, ಯಾರು ಪ್ರಗತಿಪರರು, ಯಾರು ರಾಜಕೀಯ ಮಾಡುವವರು ಎಂಬುದನ್ನು ಅರಿಯಬೇಕು ಎಂದೂ ಜಗದೇವ ಗುತತ್ತೇದಾರ್ ಜಿಲ್ಲೆಯ ಜನರಲ್ಲಿ ಮನವಿ ಮಾಡಿದ್ದಾರೆ.

ಕಲಬುರಗಿಯನ್ನು ಪಾರ್ಲಿಮೆಂಟ್‍ನಲ್ಲಿ ಪ್ರತಿನಿಧಿಸುತ್ತಿರುವ ಡಾ. ಉಮೇಶ ಜಾಧವ್ ತಾವು ಗೆದ್ದುಬಂದಾಗಿನಿಂದ ಕೇಂದ್ರ, ರಾಜ್ಯಗಳ ಸಚಿವವರು, ಅಧಿಕಾರಿಗಳ ಬಳಿ ಹೋಗಿ ಮನವಿ ಕೊಡೋದು, ಹೇಳಿಕೆ ಕೊಡೋದನ್ನೇ ಮಾಡುತ್ತಿದ್ದಾರೆ. ರಾಜಕೀಯ ಇಚ್ಚಾಶಕ್ತಿ ತೋರಿಸುತ್ತ ಮಂಜೂರಾದ ಯೋಜನೆ ಕೈಗೂಡುವಮಂತೆ, ಹೊಸ ಯೋಜನೆ ಮಂಜೂರಿ ಮಾಡಿ ತರುವ ಯತ್ನ ಮಾಡುತ್ತಿಲ್ಲ. ಹೀಗಾಗಿ ಇವರನ್ನು ‘ಮೆಂಬರ್ ಆಫ್ ಪಾರ್ಲಿಮೆಂಟ್’ ಅನ್ನೋದಕ್ಕಿಂತ ‘ಮನವಿ ಪತ್ರ’ದ ಎಂಪಿ ಎಂದರೇನೆ ಲೇಸೆಂದು ಜಗದೇವ ಗುತ್ತೇದಾರ್ ಲೇವಡಿ ಮಾಡಿದ್ದಾರೆ.

emedialine

Recent Posts

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

8 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

8 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

11 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

11 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

11 hours ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

11 hours ago