ಬಿಸಿ ಬಿಸಿ ಸುದ್ದಿ

ಶಿಕ್ಷಣ ರಂಗದಲ್ಲಿ ಅಕ್ಷರ ಅವಿಷ್ಕಾರ- ಶಿಕ್ಷಣ ಕ್ಷೇತ್ರದಲ್ಲಿ ಶೈಕ್ಷಣಿಕ ಕ್ರಾಂತಿಗೆ ಸಂಕಲ್ಪ

ಕಲಬುರಗಿ: ಈಗಾಗಲೇ ಕಲೆದೊಂದು ದಶಕದಿಂದ ನಿರಂತರವಾಗಿ ಜನಾರೋಗ್ಯ ರಂಗದಲ್ಲಿ ಅನೇಕ ಯೋಜನೆಗಳನ್ನು ನೀಡುತ್ತ ಜೇವರ್ಗಿ ಜನಮನಕ್ಕೆ ಹತ್ತಿರವಾಗಿರುವ ಧರಂಸಿಂಗ್ ಫೌಂಡೇಷನ್ ಇದೀಗ ಇಲ್ಲಿನ ಶಿಕ್ಷಣ ರಂಗದಲ್ಲಿ ಹೊಸತನ ಮೂಡಿಸುವ ಅಕ್ಷರ ಅವಿಷ್ಕಾರ ಮಿಷನ್- 100 ಯೋಜನೆ ಮೂಲಕ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಮಹತ್ವದ ಹೆಜ್ಜೆ ಇಟ್ಟಿದೆ.

ಈ ವಿನೂತನ ಕಾರ್ಯಕ್ರಮಕ್ಕೆ ಗುರುವಾರ ಜೇವರ್ಗಿಯಲ್ಲಿ ಶಾಸಕರು ಹಾಗೂ ವಿದಾನಸಬೆ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ. ಅಜಯ್ ಸಿಂಗ್ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ಗ್ರಾಮೀಣ ಪ್ರದೇಶದ ಮಕ್ಕಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದ್ದು, ಆ ನಿಟ್ಟಿನಲ್ಲಿ ಶಿಕ್ಷಕರು ಕ್ಷೇತ್ರದಲ್ಲಿ ಶೈಕ್ಷಣಿಕ ಕ್ರಾಂತಿ ನಡೆಸಬೇಕಾಗಿದೆ. ಉತ್ತಮ ತರಬೇತಿ ಶಿಕ್ಷಕರಿಗೆ ನೀಡುತ್ತೇವೆ. ಅದನ್ನವರು ಮಕ್ಕಳಿಗೆ ನೀಡುತ್ತ ಫಲಿತಾಂಶ ವೃದ್ದಿಗೆ ಹೆಚ್ಚಿನ ಶ್ರಮ ತೋರಲಿ ಎಂದು ಈ ಸಂದರ್ಭದಲ್ಲಿ ಶಾಸಕ ಡಾ.ಅಜಯಸಿಂಗ್ ಹೇಳಿದರು.

ದೇಶದ ಭವಿಷ್ಯ ಹಳ್ಳಿಯ ಶಾಲೆಯ ಕೋಣೆಯಲ್ಲಿ ಅಡಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ತಮ್ಮದೇ ಆದ ಪ್ರತಿಭೆ ಹುದುಗಿದೆ. ಅಂತಹ ಪ್ರತಿಭೆಗಳನ್ನು ಗುರುತಿಸಿ ಮೇಲೆತ್ತರಕ್ಕೆ ತರಲು ಶಿಕ್ಷಕರು ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದರು.

ತಾವು ಒಬ್ಬ ವೈಧ್ಯರಾಗಿ ಜೇವರ್ಗಿ ಕ್ಷೇತ್ರದಲ್ಲಿ ಅನೇಕ ಬಾರಿ ಆರೋಗ್ಯ ಮೇಳಗಳನ್ನು ಆಯೋಜಿಸುವ ಮೂಲಕ ಗ್ರಾಮೀಣ ಪ್ರದೇಶದ ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗಿದೆ. ಅದೇ ಮಾದರಿಯಲ್ಲಿ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಫೌಂಡೇಶನ್ ವತಿಯಿಂದ ತಾವು ಶೈಕ್ಷಣಿಕವಾಗಿಯೂ ಜಿಲ್ಲೆಯಲ್ಲಿಯೇ ಜೇವರ್ಗಿ ಮಾದರಿಯಾಗಬೇಕೆಂಬ ಮಹದಾಸೆ ತಮ್ಮದಾಗಿದೆ ಎಂದರು.

ಆ ನಿಟ್ಟಿನಲ್ಲಿ ಈ ಕಾರ್ಯಕ್ರಮದ ಸಂಪೂರ್ಣ ಸದುಪಯೋಗಪಡಿಸಿಕೊಳ್ಳುವ ಮೂಲಕ ಎಸ್ಸೆಸ್ಸೆಲ್ಸಿಯಲ್ಲಿ ತಾಲೂಕು ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆಯುವಂತೆ ನೋಡಿಕೊಳ್ಳುವ ಜವಬ್ದಾರಿ ಶಿಕ್ಷಕರ ಮೇಲಿದೆ. ಈಗಾಗಲೇ ತಾವು ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚಿನ ಆಸಕ್ತಿ ವಹಿಸಿದ್ದು, ಪ್ರಥಮ ದರ್ಜೇ ಮಹಾವಿದ್ಯಾಲಯಕ್ಕೆ ಸುಮಾರು 14 ಕೋಟಿ ರೂ. ಬಿಡುಗಡೆಗೊಳಿಸಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗ ಸೇರಿದಂತೆ ಸುಸಜ್ಜಿತ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. ತಾಲೂಕಿನ ಜನರ ಋಣ ನಾನೆಂದು ತೀರಿಸಲಾಗದು.

ಅಪರ ಜಿಲ್ಲಾಧಿಕಾರಿ ಡಾ.ಶಂಕರಗೌಡ ವಣಿಕ್ಯಾಳ ಮಾತನಾಡಿ, ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ. ಸಾಧಿಸುವ ಛಲ ಮನುಷ್ಯನಿಗೆ ಬೇಕು. ವಿದ್ಯಾರ್ಥಿಗಳ ಉನ್ನತೀಕರಣಕ್ಕಾಗಿ ಈ ಸಿದ್ದತೆ ನಡೆಸಲಾಗುತ್ತಿದೆ. ಶಿಕ್ಷಕರು ಮನಸ್ಸು ಮಾಡಿದರೇ ನೂರಕ್ಕೆ ನೂರರ ಫಲಿತಾಂಶ ಲಭಿಸುವಲ್ಲಿ ಯಾವುದೇ ಸಂದೇಹವಿಲ್ಲ. ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಕರ ಸಾರ್ಥಕ ಸೇವೆ ಯಾರೂ ಎಂದೂ ಮರೆಯಲ್ಲ. ಬುನಾದಿ ಭದ್ರವಾಗಿದ್ದರೇ ಕಟ್ಟಡ ಸುಭದ್ರವಾಗಿರಲು ಸಾಧ್ಯ. ಪ್ರತಿಯೊಬ್ಬ ಶಿಕ್ಷಕರು ಬುನಾದಿ ಹಂತದಲ್ಲಿಯೇ ಮಕ್ಕಳನ್ನು ಪ್ರೇರೇಪಿಸಬೇಕಾಗಿದೆ ಎಂದು ಹೇಳಿದರು.

ಸಮಾರಂಭದಲ್ಲಿ ತಾಪಂ ಅಧ್ಯಕ್ಷೆ ಚಂದಮ್ಮ ಸಂಗಣ್ಣ ಇಟಗಾ, ತಹಸೀಲ್ದಾರ ಸಿದರಾಯ ಬೋಸಗಿ, ಯಡ್ರಾಮಿ ತಹಸೀಲ್ದಾರ ಶಾಂತಗೌಡ ಪಾಟೀಲ್, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಯ್ಯ ಇನಾಂದಾರ, ವಿಶ್ರಾಂತ ಪ್ರಾಧ್ಯಾಪಕ ಪೆÇ್ರೀ.ಆರ್.ನಾಗರಾಜಯ್ಯ, ಜಿಪಂ ಸದಸ್ಯೆ ದೇವಕ್ಕಿ ಚನ್ನಮಲ್ಲಯ್ಯ ಹಿರೇಮಠ, ಯಡ್ರಾಮಿ ತಾಪಂ ಅಧ್ಯಕ್ಷೆ ಲಕ್ಷ್ಮೀ ಜೋತೆಪ್ಪಗೋಳ, ಜೇವರ್ಗಿ ತಾಪಂ ಇಓ ವಿಲಾಸರಾಜ, ಯಡ್ರಾಮಿ ತಾಪಂ ಇಓ ಧನಕರ್ ಬೇರಾಳೆ, ಮುಖಂಡರಾದ ಶಿವಶರಣಪ್ಪ ಕೋಬಾಳ, ರುಕುಂ ಪಟೇಲ ಇಜೇರಿ, ಕಾಶಿಂ ಪಟೇಲ ಮುದಬಾಳ, ಚಂದ್ರಶೇಖರ ಹರನಾಳ, ರಾಜಶೇಖರ ಸೀರಿ, ಸಂಗನಗೌಡ ಗುಳ್ಯಾಳ, ವಿಜಯಕುಮಾರ ಪಾಟೀಲ ಕಲ್ಲಹಂಗರಗಾ, ವಿಜಯಕುಮಾರ ಬಿರಾದಾರ, ಸಾಹೇಬಗೌಡ ಕಲ್ಲಾ, ಚನ್ನಮಲ್ಲಯ್ಯ ಹಿರೇಮಠ, ಸಿದ್ದು ಯಂಕಂಚಿ, ಸುನೀಲ ಹಳ್ಳಿ, ಶಿವುಕುಮಾರ ಕಲ್ಲಾ, ರವಿ ಕೋಳಕೂರ, ರಿಯಾಜ್ ಪಟೇಲ, ಸೊನ್ನ ಗ್ರಾಪಂ ಉಪಾಧ್ಯಕ್ಷ ಸಿದ್ದು ಹಡಪದ, ಮರೆಪ್ಪ ಸರಡಗಿ ಸೇರಿದಂತೆ ಇತರರು ಇದ್ದರು.

ಅಕ್ಷರ ಅವಿಷ್ಕಾರ ಯೋಜನೆ 5 ವರ್ಷದ್ದಾಗಿದೆ. ಜೇವರ್ಗಿ ಶೈಕ್ಷಣಿಕವಾಗಿ ಮಾದರಿಯಾಗಲಿ ಎಂಬುದೇ ಈ ಯೋಜನೆ ರೂಪಿಸಿರುವುದರ ಹಿಂದಿನ ಉz್ದÉೀಶವಾಗಿದೆ ಎಂದು ಡಾ. ಅಜಯ್ ಸಿಂಗ್ ಹೇಲಿದ್ದಾರೆ. ಕಲಬುರಗಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿರುವ ಅವರು ಜೇವರ್ಗಿಯ 76 ಹೈಸ್ಕೂಲ್‍ಗಳನ್ನು ಎಬಿಸಿ ಎಂದು ವರ್ಗ ಮಾಡಿ ಯೋಜನೆ ಜಾರಿಗೆ ತರಲಾಗುತ್ತಿದೆ. ಈಗಾಗಲೇ 300 ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಅನೇಕ ಸಭೆಗಳನ್ನು ಶಿಕ್ಷಣ ತಜ್ಞ ಪೆÇ್ರ. ನಾಗರಾಜಯ್ಯ ಅವರು ನಡೆಸಿದ್ದಾರೆ. ಇವರ ತಂಡವೇ ಇಲ್ಲಿ ಉಸ್ತುವಾರಿ ನೋಡಿಕೊಳ್ಳ್ತುತದೆ. ಸಾರ್ವ ಜನಿಕ ಶಿಕ್ಷಣ ಇಲಾಖೆ ಸಹಯೋಗ ಈ ಯೋಜನೆಗಿದೆ ಎಂದು ಡಾ. ಅಜಯ್ ಸಿಂಗ್ ಹೇಳಿದ್ದಾರೆ.

ನಾಗರಾಜಯ್ಯ ಮಾತನಾಡುತ್ತ ಚಿಕ್ಕಬಳ್ಳಾಪುರದಲ್ಲಿ ಯೋಜನೆ ಯಶ ಕಂಡಿದೆ. ಅದೇ ರೀತಿ ಕಲಬುರಗಿಯಲ್ಲಿಯೂ ಯಶ ಕಾಣುವ ವಿಶ್ವಾಸವಿದೆ ಎಂದರಲ್ಲದೆ ಡಾ. ಅಜಯ್ ಸಿಂಗ್ ಅವರು ಈ ದಿಶೆಯಲ್ಲಿೂೀರುತ್ತಿರುವ ಉತ್ಸಾಹ ತಮಗೆ ಖುಷಿ ತಂದಿದೆ. ಶಿಕ್ಷಕರು ಇಲ್ಲಿ ಉತ್ಸಾಹದಿಂದ ಇದ್ದಾರೆ, ಇದರಿಂದಲೂ ಯೋಜನೆ ಬೇಗ ಫಲಿತಾಂಶ ನೀಡುವ ವಿಶ್ವಾಸವಿದೆ. ಇದೇ ವರ್ಷ ನೂರಕ್ಕೆ ನೂರು ಫಲಿತಾಂಶ ತರುವ ಸಂಕಲ್ಪ ತಮ್ಮದಾಗಿದೆ ಎಂದು ನಾಗರಾಜ ಹೇಳಿದ್ದಾರೆ.

sajidpress

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

14 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

24 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

24 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

24 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago