ಬಿಸಿ ಬಿಸಿ ಸುದ್ದಿ

ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿ ಖರ್ಗೆ ಆಯ್ಕೆ : ಕರ್ನಾಡ ಹರ್ಷ

ಕಲಬುರಗಿ: ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವರಾದ ಹಾಗೂ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜ್ಯಸಭಾ ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿರುವುದಕ್ಕೆ ಅಫಜಲಪೂರ ಕಾಂಗ್ರೆಸ್ ಮುಖಂಡ ವಿಶ್ವನಾಥ ಕರ್ನಾಡ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಸತತ ೧೧ ಚುನಾವಣೆಗಳಲ್ಲಿ ಜಯಭೇರಿ ಬಾರಿಸಿದ್ದ ಖರ್ಗೆಯವರು ಲೋಕಸಭಾ ಚುನಾವಣೆಯಲ್ಲಿ ಅನಿರೀಕ್ಷಿತವಾಗಿ ಸೋಲನ್ನಪ್ಪಿದ್ದರು. ಆದರೂ ಪಕ್ಷದ ಕಾರ್ಯಕರ್ತರು, ಹಾಗೂ ನಾಯಕರು ಅವರ ಮೇಲೆ ಅಗಾಧವಾದ ನಂಬಿಕೆ ಹಾಗೂ ಭರವಸೆ ಇಟ್ಟಿದ್ದರು. ಐದು ದಶಕಗಳ ಕಾಲ ಅವರ ಮೇಲೆ ವಿಶ್ವಾಸವಿಟ್ಟು ಅವರನ್ನು ಇಷ್ಟು ಎತ್ತರಕ್ಕೆ ಬೆಳೆಸಿದ ಜನರ ಧ್ವನಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಹೇಳಿದರು.
ಇಂದು ಕೇವಲ ನಮ್ಮ ರಾಜ್ಯವಲ್ಲದೇ, ಇಡೀ ದೇಶವೇ ಮೋದಿಯವರ ದುರಾಡಳಿತದಿಂದ ಹಾಗೂ ಜನವಿರೋಧಿ ನೀತಿಗಳ ವಿರುದ್ದ ಜನರೇ ಸಿಡಿದೆದ್ದಿದ್ದಾರೆ. ಈ ಎಲ್ಲರ ಧ್ವನಿಯಾಗಿ ಖರ್ಗೆಯವರು ರಾಜ್ಯಸಭೆಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಕಲಬುರ್ಗಿ ಕ್ಷೇತ್ರದಲ್ಲಿ ಪರಾಭವಗೊಂಡರೂ ಸಹ ಕೇಂದ್ರದ ಮಾಜಿ ಸಚಿವ ಡಾ. ಮಲ್ಲಿಕಾರ್ಜುನ್ ಖರ್ಗೆಯವರನ್ನು ಕಾಂಗ್ರೆಸ್ ಪಕ್ಷದ ವರಿಷ್ಠರು ಕೈಬಿಡಲಿಲ್ಲ. ಖರ್ಗೆಯವರನ್ನು ಮೇಲಕ್ಕೆತ್ತುವ ಮೂಲಕ ಕಾಂಗ್ರೆಸ್ ಪಕ್ಷವನ್ನೂ ಸಹ ಮೇಲಕ್ಕೆತ್ತುವಂತಹ ಸರ್ವ ಪ್ರಯತ್ನವನ್ನು ವರಿಷ್ಠರು ಮಾಡುತ್ತಿರುವುದು ಸ್ವಾಗತಾರ್ಹವಾಗಿದೆ ಎಂದು ಹೇಳಿದರು.

ಇನ್ನೇನು ಖರ್ಗೆಯವರು ಸಕ್ರೀಯ ರಾಜಕಾರಣದಲ್ಲಿ, ಅದರಲ್ಲಿಯೂ ಸಂಸತ್ತಿನಲ್ಲಿ ಇರಲಾರರು ಎಂಬ ಚಿಂತೆ ಕೇವಲ ಕಾಂಗ್ರೆಸ್ ಕಾರ್ಯಕರ್ತರಿಗೆ ಅಷ್ಟೇ ಅಲ್ಲ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯನ್ನು ವಿರೋಧಿಸುವವರೆಲ್ಲರೂ ಆತಂಕಕ್ಕೆ ಒಳಗಾಗಿದ್ದರು. ಮಲ್ಲಿಕಾರ್ಜುನ್ ಖರ್ಗೆಯವರು ಕೇವಲ ಒಂದು ಸಮುದಾಯಕ್ಕೆ ಹಾಗೂ ಒಂದು ಪ್ರದೇಶಕ್ಕೆ ಸೀಮಿತರಲ್ಲ. ಅವರು ಸರ್ವ ಸಮುದಾಯಗಳ ಪ್ರಬಲ ನಾಯಕರು. ಅದರಲ್ಲಿಯೂ ರಾಷ್ಟ್ರೀಯ ನಾಯಕರಾಗಿದ್ದಾರೆ ಎಂದರು.

ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಮರ್ಥವಾಗಿ ವಿರೋಧಿಸುವ ಸಾಮರ್ಥ್ಯ ಏನಾದರೂ ಇದ್ದರೆ ಅದು ಕೇವಲ ಖರ್ಗೆಯವರಿಂದಲೇ ಎಂಬ ವಾತಾವರಣ ನಿರ್ಮಾಣಗೊಂಡು ಅರು ವರ್ಷಗಳು ಕಳೆದಿವೆ. ಈ ಹಿಂದೆ ಖರ್ಗೆಯವರಿಗೆ ಕಾಂಗ್ರೆಸ್ ಪಕ್ಷವು ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕನನ್ನಾಗಿ ಆಯ್ಕೆ ಮಾಡುವ ಮೂಲಕ ಪ್ರಧಾನಿ ನಂತರದ ದೊಡ್ಡ ಸ್ಥಾನವನ್ನು ಕೊಡುಗೆಯಾಗಿ ನೀಡಿತು. ಕೊಟ್ಟ ಅಧಿಕಾರವನ್ನು ಸಮರ್ಥವಾಗಿ ನಿಭಾಯಿಸಿ ಪಕ್ಷಕ್ಕೂ, ದೇಶಕ್ಕೂ, ಅದರಲ್ಲಿಯೂ ಪ್ರಜಾಪ್ರಭುತ್ವ ವ್ಯವಸ್ಥೆಗೂ ಹೆಸರು ತಂದಿದ್ದಾರೆ ಎಂದು ಹೇಳಿದರು.

ಅಂತಹ ಮಹಾನ್ ನಾಯಕ ಲೋಕಸಭಾ ಚುನಾವಣೆಯಲ್ಲಿ ಸೋಲನ್ನು ಅನುಭವಿಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪರೋಕ್ಷವಾಗಿ ಹೇಳಿದ್ದರು. ಅದೂ ಇಂದಿರಾಗಾಂಧಿ ಕುಟುಂಬ ರಾಜಕಿಯೇತರ ಕಾಂಗ್ರೆಸ್ ನಾಯಕರ ಉದಾಹರಣೆಗಳನ್ನು ಕೊಟ್ಟು ಖರ್ಗೆಯವರು ಎಲ್ಲಿರುತ್ತಾರೆ ಎಂಬ ಅನುಮಾನವನ್ನು ಸಂಸತ್ತಿನಲ್ಲಿ ಪ್ರಧಾನಿಯವರು ಹೇಳಿಕೆ ನೀಡಿದ್ದರು.

ಪ್ರಧಾನಿಯವರ ಆ ಮಾತು ಲೋಕಸಭಾ ಚುನಾವಣೆಯ ಫಲಿತಾಂಶವು ನಿಜವಾಗಿಸಿತು. ಬಿಜೆಪಿಗರು ಅಂದುಕೊಂಡಂತೆ ಖರ್ಗೆಯವರು ಸೋಲನ್ನು ಅನುಭವಿಸಿದರು. ಆದಾಗ್ಯೂ, ಕಾಂಗ್ರೆಸ್ ಪಕ್ಷವು ಮಾತ್ರ ಅವರ ಸೋಲನ್ನೇ ಸವಾಲನ್ನಾಗಿ ಸ್ವೀಕರಿಸಿತು. ಅದಕ್ಕಾಗಿಯೇ ಅವರಿಗೆ ರಾಜ್ಯಸಭೆಗೆ ಆಯ್ಕೆ ಮಾಡುವ ಮೂಲಕ ಪ್ರಧಾನಿ ಅವರಿಗೆ ತಕ್ಕ ಪ್ರತ್ಯುತ್ತರವನ್ನು ನೀಡಿದ್ದು ಮಾತ್ರ ಅದ್ಭುತವಾಗಿತ್ತು.
ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿದ್ದ ಗುಲಾಂ ನಬಿ ಆಜಾದ್ ಅವರು ಫೆಬ್ರವರಿ ೧೫ರಂದು ನಿವೃತ್ತರಾಗಲಿದ್ದಾರೆ. ಹಾಗಾಗಿ ಅವರಿಂದ ತೆರವಾದ ಸ್ಥಾನಕ್ಕೆ ಡಾ. ಮಲ್ಲಿಕಾರ್ಜುನ್ ಖರ್ಗೆಯವರಿಗೆ ಆಯ್ಕೆ ಮಾಡಿದ್ದು ಅತ್ಯಂತ ಸಕಾಲಿಕ ಹಾಗೂ ಸಮಯೋಚಿತವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಶೋಷಿತರ ಹಾಗೂ ಅಲ್ಪಸಂಖ್ಯಾತರ ಕುರಿತು ಮಾತನಾಡುತ್ತಿಲ್ಲ. ಆ ಕುರಿತು ಖರ್ಗೆಯವರು ಮಾತನಾಡುವ ಮೂಲಕ ದೇಶದ ಸಮಗ್ರತೆಯನ್ನು ಎತ್ತಿ ಹಿಡಿಯುವಂತಹ ಕಾರ್ಯವನ್ನು ರಾಜ್ಯಸಭೆಯಲ್ಲಿ ಮಾಡಲಿದ್ದಾರೆ. ಖರ್ಗೆಯವರು ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗುತ್ತಾರೆ ಎಂಬುದು ಗೊತ್ತಾಗುತ್ತಿದ್ದಂತೆಯೇ ಖರ್ಗೆಯವರಿಗೆ ಜೀವಕ್ಕೆ ಬೆದರಿಕೆ ಹಾಕುವ ಕರೆಗಳನ್ನು ಮಾಡಿದ್ದು ಆತಂಕದ ಸಂಗತಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿ ಅವರು ಈ ಹಿಂದೆ ಖರ್ಗೆಯವರು ಎಲ್ಲಿರುತ್ತಾರೆ ಎಂಬುದಕ್ಕೆ ಕಾಂಗ್ರೆಸ್ ವರಿಷ್ಠರು ತಕ್ಕ ಉತ್ತರ ನೀಡಿದ್ದು, ಈ ಹಿಂದೆ ಖರ್ಗೆಯವರು ಲೋಕಸಭೆಯಲ್ಲಿ ಇದ್ದರು. ಈಗ ರಾಜ್ಯಸಭೆಯಲ್ಲಿ ಇರುತ್ತಾರೆ. ಅದು ವಿರೋಧ ಪಕ್ಷದ ನಾಯಕರಾಗಿ ಎಂಬ ಅಧಿಕೃತ ಸಂದೇಶವನ್ನು ನೀಡುವ ಮೂಲಕ ಸಮರ್ಥ ವಿರೋಧ ಪಕ್ಷದ ಎದಿರೇಟನ್ನು ಪ್ರಧಾನಿಯವರಿಗೆ ನೀಡಿದ್ದು, ಖರ್ಗೆಯವರು ರಾಜ್ಯಸಭಾ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದು, ಅವರಿಗೆ ಇಡೀ ರಾಷ್ಟ್ರದ ಜನತೆಯ ಪರವಾಗಿ ಅಭಿನಂದನೆಗಳು ಸಲ್ಲಿಸಿದರು.

ದೇಶದಲ್ಲಿನ ಅರಾಜಕತೆ, ಅಸಮಾನತೆ, ತಾರತಮ್ಯತೆಯನ್ನು ಹಾಗೂ ಸರ್ವಾಧಿಕಾರವನ್ನು ತಡೆಯುವಂತಹ ಶಕ್ತಿ, ಸಾಮರ್ಥ್ಯ ಖರ್ಗೆಯವರಿಗೆ ಇದೆ. ಹಾಗಾಗಿ ಅವರು ತಮ್ಮ ಹುದ್ದೆಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸುತ್ತಾರೆ ಎಂಬ ವಿಶ್ವಾಸವು ಎಲ್ಲರಲ್ಲಿಯೂ ಇದೆ ಎಂದು ಹೇಳಿದರು.

emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

34 mins ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

11 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

11 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

14 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

14 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

14 hours ago