ಬಿಸಿ ಬಿಸಿ ಸುದ್ದಿ

ಪ್ರಜ್ಞಾ ಸಂಸ್ಥೆಯ ಕಾಡಿದ ಕವಿತೆ ಇದೊಂದು ವಿಶೇಷವಾದ ಕಾರ್ಯಕ್ರಮ: ನಾಡೋಜ ಡಾ.ಸಿದ್ದಲಿಂಗಯ್ಯ

ಕಲಬುರಗಿ: ಪ್ರಜ್ಞಾ  ದಿ ಇನ್ಸ್ ಟ್ಯೂಟ್ ಆಫ್ ಇನ್ನೋವೇಟಿವ್ ಲರ್ನಿಂಗ್ ಅರ್ಪಿಸುವ  ಕಾಡಿದ ಕವಿತೆನಿಮಗೆ ಕಾಡಿದ ಕವಿತೆ ಓದಿ, ಬಹುಮಾನ ಗೆಲ್ಲಿ.ಎಂಬ ವಿಶೇಷವಾದ ಸ್ಪರ್ಧೆಯನ್ನು ಆನ್ ಲೈನ್ ಮೂಲಕ ಹಮ್ಮಿಕೊಳ್ಳಾಗಿತ್ತು. ಕಾರ್ಯಕ್ರಮವನ್ನು ನಾಡೋಜ ಡಾ.  ಸಿದ್ದಲಿಂಗಯ್ಯಖ್ಯಾತ ಕವಿಗಳು ಬೆಂಗಳೂರುಉದ್ಘಾಟಿಸಿ ಮಾತನಾಡಿದರು.

ಪ್ರಜ್ಞಾ ಸಂಸ್ಥೆಯ ಮೂಲಕ ಕಾಡಿದ ಕವಿತೆ ಕಾರ್ಯಕ್ರಮ ರಾಜ್ಯದಲ್ಲಿಯೇ ಮೊದಲ ಪ್ರಯತ್ನ ಮತ್ತು ವಿಶೇಷವಾಗಿದೆ. ಸಾಮಾನ್ಯವಾಗಿ ಕವಿಗೋಷ್ಠಿಗಳಲ್ಲಿ ಕವಿಗಳು ಅವರೇ ಬರೆದಿದ್ದನ್ನು ವಾಚನ ಮಾಡುತ್ತಾರೆ ಆದರೆ ಇಲ್ಲಿ ಹಿರಿಯ ಸಾಹಿತಿಗಳ ಕವನ ವಾಚನ ಮಾಡಿದ್ದು ವಿಶೇಷವಾಗಿದೆ. ಇಂದಿನ ಯುವಕರು ಹಿರಿಯ ಸಾಹಿತಿಗಳ ಕಾವ್ಯ ಸಾಹಿತ್ಯವನ್ನು ಅಧ್ಯಯನ ಮಾಡುವುದರಿಂದ ತಾವು ಬರೆಯುವ ಸಾಹಿತ್ಯದಲ್ಲಿ ಘಟ್ಟಿತನ ಕೊಡಲು ಸಾಧ್ಯವಾಗುತ್ತದೆ. ಹಳೆಗನ್ನಡ, ನಡುಗನ್ನಡ, ಹೊಸಗನ್ನಡ, ನವ್ಯ, ದಲಿತ ಬಂಡಾಯ ನವ್ಯೋತ್ತರ ಕಾಲದ ಸಾಹಿತಿಗಳ ಕವಿತೆಗಳನ್ನು ಓದಿಕೊಳ್ಳುವ ಅಧ್ಯಯನ ಮಾಡುವ ಕೆಲಸವನ್ನು ಇಂದಿನ ಕವಿಗಳು ಅಗತ್ಯವಾಗಿ ಮಾಡಬೇಕು. ಕಾವ್ಯ ನಮ್ಮೊಳಗೆ ಕಾಡುವ ವ್ಯಕ್ತಿ, ವಸ್ತು ಘಟನೆಯ ಮೂಲಕ ಹೊರಬರುತ್ತದೆ. ಅತ್ಯಂತ ಗಂಭೀರವಾಗಿ ಸಾಹಿತ್ಯ ಅಧ್ಯಯನ ಮಾಡುವ ಮೂಲಕ ಇಂದಿನ ಯುವಕವಿಗಳು ಕಾಡುವ ಕವಿತೆಗಳನ್ನು ಕಟ್ಟಬೇಕು ಎಂದು ಕರೆ ನೀಡಿದರು. ವಿಶ್ವನಾಥ ಮರತೂರ ಮತ್ತು ಅವರ ತಂಡದಿಂದ ಕಾವ್ಯ ಅಧ್ಯಯನದ ಹೊಸ ದಾರಿಯನ್ನು ಹುಡುಕಿದ್ದು ವಿಶೇಷವೆನಿಸುತ್ತದೆ. ಪ್ರಜ್ಞಾ ಸಂಸ್ಥೆಯ ಮೂಲಕ ಇಂತಹ ಸಾಹಿತ್ಯಿಕ ಕಾರ್ಯಕ್ರಮಗಳು ಇನ್ನು ಹೆಚ್ಚು ಜರುಗಲು ಎಂದು ಹಾರೈಸಿಸಿದರು.

ಪ್ರಸ್ತಾವಿಕವಾಗಿ ಮಾತನಡಿದ ಯುವ ಬರಹಗಾರರು  ಕೆ.ಎಂ.ವಿಶ್ವನಾಥ ಮರತೂರ ನಾನು ಅನೇಕ ವರ್ಷಗಳಿಂದ ಕಾವ್ಯ ಅಧ್ಯಯನ ಮತ್ತು ಸಾಹಿತ್ಯದ ಕೆಲಸಗಳಿಗಾಗಿ ಓಡಾಟ ಮಾಡಿರುವ ಹಿನ್ನಲೆಯಲ್ಲಿ, ನಮ್ಮ ನಡುವಿನ ಯುವಕರಾದ ನಾವುಗಳು ಬರಿ ನಮಗೆ ಅನಿಸಿದ್ದನ್ನು ಬರೆಯುತ್ತಾ ಸಾಗುತ್ತಿದ್ದೇವೆ. ನಾವು ಬರೆದಿದ್ದನ್ನು ಸ್ಥಳವಿದ್ದಲ್ಲಿ ವಿಸ್ತರಿಸುತ್ತಾ ಹೋಗುತ್ತಿದ್ದೇವೆ ಆದರೆ ನಾವು ಬರೆದಿದ್ದು ಓದಗನಿಗೆ ಎಷ್ಟು ಕಾಡುತ್ತಿದೆ ಅಥವಾ ಹೇಗೆ ಬಳಕೆಯಾಗುತ್ತಿದೆ ಎಂಬುವುದು ಗಮನಿಸುತ್ತಿಲ್ಲ. ಈ ಹಿನ್ನಲೆಯಲ್ಲಿ ಯುವ ಕವಿಗಳಲ್ಲಿ ಕಾವ್ಯದ ಅಧ್ಯಯನದ ದೀಪ ಪ್ರಜ್ವಲಿಸಲು ಕಾಡಿದ ಕವಿತೆ ಎನ್ನುವ ವಿಶೇಷವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಕಾವ್ಯ  ಸಾಹಿತ್ಯದ ಅಧ್ಯಯನಕ್ಕೆ ಅಣಿಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಈ ಕಾರ್ಯಕ್ರಮದ ಮೂಲಕ ಕೆಲವು ಕವಿಗಳಾದರೂ ಕಾವ್ಯ ಅಧ್ಯಯನದಲ್ಲಿ ಗಂಭೀರವಾಗಿ ತೊಡಗಿಸಿಕೊಂಡರೆ ಶ್ರಮ ಸಾರ್ಥಕವೆಂದರು. ಪ್ರಸ್ತುತ ಕಾರ್ಯಕ್ರಮದಲ್ಲಿ ರಾಜ್ಯದ ಅನೇಕ ಜಿಲ್ಲೆಗಳಿಂದ ೬೦ ಕ್ಕೂ ಹೆಚ್ಚು ಕವಿಗಳು ತಮಗೆ ಕಾಡಿದ ಕವಿತೆಯನ್ನು ವಾಚನ ಮಾಡುವ ಮೂಲಕ ಕಾವ್ಯ ಅಧ್ಯಯನದಲ್ಲಿ ತೊಡಗಿರುವುದು ಸಂತೋಷದ ವಿಷಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ ೬೦ ಕವಿಗಳು ತಮಗೆ ಕಾಡಿದ ಕವಿತೆಯನ್ನು ವಾಚನ ಮಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಖ್ಯಾತ ಚಲನಚಿತ್ರ ಸಾಹಿತಿ ಮತ್ತು ನಿರ್ದೇಶಕರು ಹೃದಯಶಿವ ಮಾತನಾಡುತ್ತಾ ಕವಿಯು ಸಮಾಜದ ಜವಾಬ್ದಾರಿಯುತವಾದ ವ್ಯಕ್ತಿ. ಕಾವ್ಯ ಅಭಿವ್ಯಕ್ತಿಗಳೆಲ್ಲಿ ಅತ್ಯಂತ ಜಠಿಲವಾದ ಮಾಧ್ಯಮ ಅದಕ್ಕಾಗಿ ಅಧ್ಯಯನ ಅತ್ಯಂತ ಮುಖ್ಯವಾಗಿದೆ ಪ್ರಜ್ಞಾ ಸಂಸ್ಥೆಯ ಮೂಲಕ ಹಿರಿಯ ಕವಿಗಳ ಕಾವ್ಯ ಓದು ಇದೊಂದು ಮಹತ್ವದ ಅವಶ್ಯಕತೆಯ ಕಾರ್ಯಕ್ರಮ ಎನಿಸುತ್ತದೆ. ಎಂದರು.

ಇನ್ನೋರ್ವ ಮುಖ್ಯ ಅಥಿತಿಗಳಾದ ವಾಸುದೇವ ನಾಡಿಗ್  ಖ್ಯಾತ ಕವಿಗಳು, ಮಾತನಾಡುತ್ತಾ ಈ ಕಾರ್ಯಕ್ರಮದ ಟೈಟಲ್ ನೋಡಿಯೇ ಅತ್ಯಂತ ಸಂತೋಷವಾಯಿತು. ಕನ್ನಡ ಸಾಹಿತ್ಯ ಇತಿಹಾಸವನ್ನೊಮ್ಮೆ ಅವಲೋಕಿಸಿದಾಗ ಎಲ್ಲಾರಿಗೂ ವಿಷಯ, ವಸ್ತು, ವ್ಯಕ್ತಿ ಕಾಡಿದಾಗಲೇ ಮಾತ್ರ ಸಾಹಿತ್ಯ ಹುಟ್ಟಿದ್ದು, ಕಾಡಿದ ಕವಿತೆ ಅರ್ಥಪೂರ್ಣ ಕಾರ್ಯಕ್ರಮವಾಗಿದೆ ಎಂದರು. ನಮ್ಮೊಳಗಿನ ಹಾಗೂ ನಮ್ಮ ಹೊರಗಿನ ಪ್ರಪಂಚದ ವಿಷಯಗಳು ಕಾಡಬೇಕು, ಕಾಡದ ಹೊರತು ಕಾವ್ಯ ಅಥವಾ ಸಾಹಿತ್ಯ ಹೊರಬರಲು ಸಾಧ್ಯವಿಲ್ಲ. ನಾವೆಲ್ಲರೂ ಹಿರಿಯರ ಸಾಹಿತ್ಯದ ಅಧ್ಯಯನ ಮಾಡುವುದು ಅತ್ಯಂತ ಮುಖ್ಯವಾಗಿದೆ. ಯಾರು ಹಿರಿಯರ ಸಾಹಿತ್ಯ ಅಧ್ಯಯನ ಮಾಡುತ್ತಾರೆಯೋ ಅವರು ಉತ್ತಮವಾದ ಕಾವ್ಯ ಸಾಹಿತ್ಯ ಕಟ್ಟಿಕೊಡಲು ಸಾಧ್ಯವಾಗುತ್ತದೆ. ನಾವು ಒಂದು ಸಾಲಿನ ಕಾವ್ಯ ಬರೆಯಲು ಇಪ್ಪತೈದು ಕವಿಗಳ ಕವನ ಸಾಹಿತ್ಯ ಓದಬೇಕು ಕಾವ್ಯ ಸಾಹಿತ್ಯದ ಅಧ್ಯಯನ ಅತ್ಯಂತ ಗಂಭೀರವಾಗಿ ಆಗಬೇಕು ಎಂದರು. ಕಾರ್ಯಕ್ರಮದಲ್ಲಿ ಕಾಶಿನಾಥ ಮರತೂರ, ಉಮೇಶ ಗುತ್ತೆದಾರ, ಉಷಾದೇವಿ, ರಘುನಾಥ, ಚೇತನ, ಭಾರತಿ, ಭವಾನಿ ಇತರರು ೫೦ಕ್ಕೂ ಹೆಚ್ಚು ಕವಿಗಳು ಹಾಜರಿದ್ದರು.

ಪ್ರಥಮ : ಶೃತಿ ಚಂದ್ರಕಾಂತ ಕಾಜಗಾರ ವಿಜಯಪೂರ, ದ್ವಿತೀಯ : ದೀಕ್ಷಿತಕುಮಾರ ಕೆ.ಎಂ. ಮಂಡ್ಯ, ಕಿರಿಯರ ವಿಭಾಗದಲ್ಲಿ ಮೆಚ್ಚುಗೆಯ ಬಹುಮಾನ ಪಡೆದ ಕವಿಗಳು , ನಮೃತಾ ತಂದೆ ಗಂಗಾಧರ ಯಾದಗಿರಿ , ಕವಿತಾ ತಂದೆ ಚಂದಪ್ಪ ಯಾದಗಿರಿ , ಹರ್ಷಿತಾ ತಂದೆ ವಿಜಯಕಯಮಾರ ಕಲಬುರಗಿ , ರಶ್ಮಿ ತಂದೆ ಹನುಮಯ್ಯ ಶಿವಮೊಗ್ಗ  ಹಿರಿಯರ ವಿಭಾಗದಲ್ಲಿ ಬಹುಮಾನ ಪಡೆದ ಕವಿಗಳಾಗಿದ್ದಾರೆ.

emedialine

Recent Posts

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

4 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

4 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

6 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

6 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

6 hours ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

6 hours ago