ಬಸವೇಶ್ವರ ಪ್ರತಿಮೆ ಸ್ಥಾಪನೆಗೆ ವಿಳಂಬ : ಬಸವ ಅನುಯಾಯಿಗಳಿಗೆ ಅಸಮಾಧಾನ

ಶಹಾಬಾದ:ಸಾಮಾಜಿಕ ಕ್ರಾಂತಿಯ ಮೂಲಕ ಸಮಾಜದಲ್ಲಿ ಸಮಾನತೆಗಾಗಿ ಹೋರಾಡಿ ತಮ್ಮ ತತ್ವಾದರ್ಶಗಳ ಮೂಲಕ ಮನೆಮಾತಾದವರು ಅಣ್ಣ ಬಸವಣ್ಣ. ೧೨ನೇ ಶತಮಾನದಲ್ಲಿ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮುಖೇನ ಕಾಯಕವೇ ಕೈಲಾಸ ಎಂದು ಸಾರಿದ ಬಸವೇಶ್ವರ ಪ್ರತಿಮೆ ಸ್ಥಾಪನೆ ಮಾಡುವ ಕೆಲಸ ಮುಖಂಡರ ಇಚ್ಚಾಶಕ್ತಿಯ ಕೊರತೆಯಿಂದ ಸುಮಾರು ೬ ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ.ಅಲ್ಲದೇ ವಿಳಂಬವಾಗುತ್ತಿರುವುದರಿಂದ  ಬಸವ ಅನುಯಾಯಿಗಳಿಗೆ ಎಲ್ಲಿಲ್ಲದ ಅಸಮಾಧಾನ ಉಂಟಾಗಿದೆ.

೨೦೧೫-೧೬ ಎಸ್‌ಎಫ್‌ಸಿ  ೧೫ ಲಕ್ಷ ರೂ. ಅನುದಾನದಲ್ಲಿ ಬಸವೇಶ್ವರ ಅಶ್ವಾರೂಢ ಪ್ರತಿಮೆ ಬಸವೇಶ್ವರ ವೃತ್ತದ ಸಮೀಪ ನಿರ್ಮಾಣ ಮಾಡಲು ನಗರಸಭೆಯ ಸಾಮನ್ಯ ಸಭೆಯಲ್ಲಿ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದ್ದರು.ಅದರಂತೆ ಬಸವೇಶ್ವರ ಮೂರ್ತಿಯ ಅಡಿಗಲ್ಲು ನಿರ್ಮಾಣಕ್ಕೆ ಸುಮಾರು ೫ ಲಕ್ಷ ರೂ.ಅನುದಾನದಲ್ಲಿ ಕಾಮಗಾರಿ ಪ್ರಾರಂಭ ಮಾಡಲಾಗಿತ್ತು.ಆಗ ಲೋಕೋಪಯೋಗಿ ಇಲಾಖೆಯವರು ತಮ್ಮ ಸ್ಥಳದಲ್ಲಿ ಬರುತ್ತದೆ ಎಂದು ಹೇಳಿದಾಗ, ಕಾಮಗಾರಿಯನ್ನು ನಿಲ್ಲಿಸಲಾಯಿತು.ಅಲ್ಲಿಂದ ಸುಮಾರು ೬ ವರ್ಷಗಳಾಯಿತು ಜನಪ್ರತಿನಿಧಿಗಳು, ಮುಖಂಡರು ಕೇವಲ ದೊಡ್ಡ ಆಶ್ವಾಸನೆ ನೀಡುತ್ತಲೇ ಬರುತ್ತಿದ್ದಾರೆ ಹೊರತು ಕಾಮಗಾರಿ ಮಾತ್ರ ಪ್ರಾರಂಭವಾಗಿಲ್ಲ. ಅಲ್ಲದೇ ಯಾವಾಗ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆಯಾಗುತ್ತದೆ ಎಂದು ಬಕ ಪಕ್ಷಿಯಂತೆ ಜನರು ಕಾಯುತ್ತ ಕುಳಿತಿದ್ದಾರೆ.

ನಗರಸಭೆಯ ಅಂದಿನ ಅಧ್ಯಕ್ಷರಾಗಿದ್ದ ಗಿರೀಶ ಕಂಬಾನೂರ ಅವರ ಅವಧಿಯಲ್ಲಿ ಅನುದಾನ ಕಾಯ್ದಿರಿಸಲಾಗಿತ್ತು. ಈಗ ಮತ್ತೆ ಅವರ ಧರ್ಮ ಪತ್ನಿ ನಗರಸಭೆಯ ಅಧ್ಯಕ್ಷರಾಗಿದ್ದಾರೆ.ಅಂದು ಅವರ ಅವಧಿಯಲ್ಲಿ ಅವರಿಂದಾಗದ ಕೆಲಸವನ್ನು ಅವರ ಪತ್ನಿ ಅಂಜಲಿ ಕಂಬಾನೂರ ಅವಧಿಯಲ್ಲಾದರೂ ಮಾಡಬೇಕೆಂದು ಜನರ ಆಗ್ರಹವಾಗಿದೆ.ಅಲ್ಲದೇ ಅಂದು ಕಾಯ್ದಿರಿಸಿದ ಅನುದಾನದಲ್ಲಿ ಈಗ ಪ್ರತಿಮೆ ಮಾಡಲು ಸಾಧ್ಯವಿಲ್ಲದ ಕಾರಣ ಕಾಮಗಾರಿ ವಿಳಂಬವಾಗಿತ್ತು. ಅದಕ್ಕಾಗಿ ಸುಮಾರು ೩೫ ಲಕ್ಷ ರೂ.  ಕ್ರೀಯಾಯೋಜನೆ ಮಾಡಲಾಯಿತು. ೧೪ ಅಡಿ ಎತ್ತರದ ಪಂಚಲೋಹದ ಅಶ್ವಾರೂಢ ಪ್ರತಿಮೆಗೆ ನಿರ್ಮಾಣ ಮಾಡಲು ಈಗಾಗಲೇ ನಗರಸಭೆಯ ಸಾಮನ್ಯ ಸಭೆಯಲ್ಲಿ ಶಾಸಕ ಬಸವರಾಜ ಮತ್ತಿಮಡು ಸಮ್ಮುಖದಲ್ಲಯೇ ನಗರಸಭೆಯ ಅನುದಾನದಲ್ಲಿ ಹೆಚ್ಚುವರಿಯಾಗಿ ಸುಮಾರು ೨೦ ಲಕ್ಷ ರೂ. ಅನುದಾನ ಕಾಯ್ದಿರಿಸಲಾಗಿದೆ.ಆದರೂ ಈ ಕೆಲಸ ಯಾವಾಗ ಪ್ರಾರಂಭವಾಗುತ್ತದೆ ಎಂಬುದು ಸಾರ್ವಜನಿಕರ ಯಕ್ಷ ಪ್ರಶ್ನೆಯಾಗಿದೆ. ನಗರದಲ್ಲಿ ದೊಡ್ಡ ಸಮಾಜದವಾದ ಎನಿಸಿಕೊಳ್ಳುವ ವೀರಶೈವ ಲಿಂಗಾಯತ ಸಮಾಜದ ಮುಖಂಡರು ಏನು ಮಾಡುತ್ತಿದ್ದಾರೆ.ಸಮಾನತೆಗಾಗಿ ಹೋರಾಡಿದ ಅಣ್ಣ ಬಸವಣ್ಣನ ಮೂರ್ತಿಗಾಗಿ ಇಷ್ಟೊಂದು ವಿಳಂಬ ನೀತಿ ಅನುಸರಿಸಿದರೇ ಹೇಗೆ ಎಂಬ ಮಿಲಿಯನ್ ಡಾಲರ್ ಪ್ರಶ್ನೆ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

ಇದಕ್ಕೆ ಅಧಿಕಾರಿಗಳು, ಸಮಾಜದ ಮುಖಂಡರು ಹಾಗೂ ಶಾಸಕರೇ ಉತ್ತರ ನೀಡಬೇಕಾಗಿದೆ ಮತ್ತು ಯಾವಾಗ ಮೂರ್ತಿ ಪ್ರತಿಷ್ಠಾಪನೆಯಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.ಅಲ್ಲದೇ ಮುಂಬರುವ ಬಸವೇಶ್ವರ ಜಯಂತಿಯೊಳಗಾಗಿ ಮೂರ್ತಿ ಸ್ಥಾಪನೆಯದರೇ ಮಹದುಪಕಾರವಾಗುತ್ತದೆ ಎಂಬುದು ಬಸವ ಅನುಯಾಯಿಗಳ ಅಂಬೋಣವಾಗಿದೆ.

ಬಸವೇಶ್ವರ ಮೂರ್ತಿ ಪ್ರತಿಷ್ಠಾನೆಗೆ ಅನುದಾನದ ಕೊರತೆಯಿದೆ ಎಂದು ಗಮನಕ್ಕೆ ತಂದಾಗ, ನಗರಸಭೆಯ ಸಾಮನ್ಯ ಸಭೆಯಲ್ಲಿ ಚರ್ಚೆ ಮಾಡಿ, ನಗರಸಭೆಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಎಲ್ಲಾ ಸದಸ್ಯರ ಒಪ್ಪಿಗೆ ಮೇರೆಗೆ ನಗರಸಭೆಯ ಅನುದಾನದಲ್ಲಿ  ಸುಮಾರು ೨೦ ಲಕ್ಷ ರೂ. ಅನುದಾನ ಕಾಯ್ದಿರಿಸಲಾಗಿದೆ. ಅಧಿಕಾರಿಗಳಿಗೆ ಬೇಟಿ ಮಾಡಿ, ಕೆಲಸ ಪ್ರಾರಂಭಿಸಲು ಸಮಾಜದ ಮುಖಂಡರು ಮುಂದಾದಬೇಕಿದೆ- ಬಸವರಾಜ ಮತ್ತಿಮಡು ಶಾಸಕರು ಕಲಬುರಗಿ ಗ್ರಾಮೀಣ ಮತಕ್ಷೇತ್ರ.


ಈಗಾಗಲೇ ನಗರಸಭೆಯ ಅನುದಾನದಲ್ಲಿ ಹೆಚ್ಚುವಾರಿಯಾಗಿ ೨೦ ಲಕ್ಷ ರೂ. ಅನುದಾನ ಕಾಯ್ದಿರಿಸಲಾಗಿದೆ. ಒಂದು ವಾರದಲ್ಲಿ ಸಮಾಜದ ಮುಖಂಡರ ನಿಯೋಗದೊಂದಿಗೆ ಮೂರ್ತಿ ವಿಕ್ಷಿಸಲು ಪೂನಾಗೆ ತೆರಳಲಿದ್ದೆವೆ.ಕಾಮಗಾರಿ ಆದಷ್ಟು ಶೀಘ್ರವೇ ಪ್ರಾರಂಭಿಸಲಾಗುವುದು-ಡಾ.ಕೆ.ಗುರಲಿಂಗಪ್ಪ ಪೌರಾಯುಕ್ತರು ನಗರಸಭೆ ಶಹಾಬಾದ.

 

emedia line

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

4 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

6 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

6 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

6 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

6 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

6 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420