ಬಿಸಿ ಬಿಸಿ ಸುದ್ದಿ

ವೃದ್ಯಾಪ್ಯದಲ್ಲಿ ಆರೋಗ್ಯ ರಕ್ಷಣೆ ಅತಿ ಮುಖ್ಯ: ಉಪಳಾಂವಕರ್

ಕಲಬುರಗಿ: ವೃದ್ಯಾಪ್ಯದಲ್ಲಿ ಆರೋಗ್ಯ ರಕ್ಷಣೆ ಮಾಡಿಕೊಳ್ಳುವುದು ಅತಿ ಮುಖ್ಯ. ಅದಕ್ಕಾಗಿ ಹಿತ ಮಿತವಾದ ಆಹಾರ, ಬಿಸಿನೀರು ಸೇವನೆ, ಹಗುರವಾದ ನಡಿಗೆಯ ರೂಢಿ ಮಾಡಿಕೊಳ್ಳಬೇಕು ಎಂದು ನಿವೃತ್ತ ಉಪನ್ಯಾಸಕ ಅಂಬಾರಾಯ ಉಪಳಾಂವಕರ್ ಹೇಳಿದರು.

ನೃಪತುಂಗ ಸಹಕಾರ ಗೃಹ ನಿರ್ಮಾಣ ಸಂಘ ಹಾಗೂ ಸನ್ ಶೈನ್ ವೆಲ್‌ನೆಸ್ ಕೇಂದ್ರದ ಆಶ್ರಯದಲ್ಲಿ ನಗರದ ಹೊರ ವಲಯದಲ್ಲಿರುವ ನೃಪತುಂಗ ಕಾಲನಿಯಲ್ಲಿ ಈಚೆಗೆ ಜರುಗಿದ ಫೂಟ್ ಥೆರಪಿ ಆರೋಗ್ಯ ಶಿಬಿರದ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಅವರು, ಇಳಿ ವಯಸ್ಸಿನಲ್ಲಿ ಮಾನಸಿಕ ಖಿನ್ನತೆಯಿಂದ ಹೊರ ಬರಬೇಕಾದರೆ ನೆರೆಹೊರೆಯವರೊಂದಿಗೆ ಬೆರೆತು ಲವಲವಿಕೆಯಿಂದ ಇರುವುದು ಅಗತ್ಯ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ರಾಜ್ಯಸಭೆಯ ಮಾಜಿ ಸದಸ್ಯ, ಮಾಜಿ ಶಾಸಕ ಹಾಗೂ ನೃಪತುಂಗ ಸೊಸೈಟಿಯ ಅಧ್ಯಕ್ಷ ಕೆ.ಬಿ. ಶಾಣಪ್ಪ ಮಾತನಾಡಿ, ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕಾದರೆ ನೈಸರ್ಗಿಕ ಬದುಕು ಸಾಗಿಸಬೇಕು. ಅದಕ್ಕೆ ಸೊಸೈಟಿ ವತಿಯಿಂದ ಒದಗಿಸಲಾಗುವ ಅನುಕೂಲಗಳನ್ನು ಕಾಲನಿ ನಿವಾಸಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ: 20 ರಂದು ಡಿಸಿ ಗ್ರಾಮ ವಾಸ್ತವ್ಯ

ಸನ್‌ಶೈನ್ ಸಂಸ್ಥೆಯ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಲತಾ ಮಾತನಾಡಿ, ೬೦ ವರ್ಷ ದಾಟಿದ ನಂತರ ಮೊಳಕಾಲು, ಸೊಂಟ ಹಾಗೂ ಬೆನ್ನು ನೋವಿನಿಂದ ಬಳಲುವುದನ್ನು ತಪ್ಪಿಸಬೇಕಾದರೆ ಫೂಟ್ ಥೆರಪಿ ಅತ್ಯಂತ ಸಹಕಾರಿಯಾಗಿದೆ ಎಂದು ವಿವರಿಸಿದರು. ಶಿಬಿರಾರ್ಥಿಗಳಾದ ವೀಣಾ ಡಿ. ಸಂಗಮ, ವಿಜಯಲಕ್ಮೀ ಮಲ್ಲಾರರಾವ್, ಪಂಡರಪೂರಕರ, ಜ್ಯೋತಿ, ಯಶೋಧಾ ಕುಲಕರ್ಣಿ, ಮಲ್ಲಿಕಾರ್ಜುನ ಹಿರೇನೂರ ಮುಂತಾದವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಇಂಧನ ಉಳಿತಾಯ: ಚಾಲಕರಿಗೆ ಸಚಿವರಿಂದ 10 ಗ್ರಾಂ. ಚಿನ್ನದ ಪದಕ

ಎಚ್.ಬಿ. ತೀರ್ಥೆ ನಿರೂಪಿಸಿದರು. ಪ್ರಮಥ ಮತ್ತು ಪ್ರಣವ ಸತ್ಯಂಪೇಟೆ ಪ್ರಾರ್ಥನೆಗೀತೆ ಹಾಡಿದರು. ಮಲ್ಲಿನಾಥ ಪಾಟೀಲ ಸ್ವಾಗತಿಸಿದರು. ಸಂಸ್ಥೆಯ ನಿರ್ದೇಶಕಿ ಸ್ಮಿತಾ ಹಂಚಾಟೆ ವಂದಿಸಿದರು. ರೇಣುಕಾ ಇಂಗಳಗಿ, ಪ್ರಿಯಾ ಸಿಂಗೆ, ಪೀಟರ್ ಮಾರ್ಗದರ್ಶನ ಮಾಡಿದರು. ವಿಜಯಲಕ್ಷ್ಮೀ ನಾಗೇಶ, ಸಾಕ್ಷಿ ಸತ್ಯಂಪೇಟೆ, ಲಕ್ಷ್ಮೀನಾರಾಯಣ, ದತ್ತಾತ್ರೇಯ, ರೇವಪ್ಪ ಬಂಗಾರಶೆಟ್ಟಿ, ಕಮಲಾಕರ ಕುಲಕರ್ಣಿ ಇತರರು ಭಾಗವಹಿಸಿದ್ದರು.

sajidpress

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

11 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

21 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

21 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

21 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago