ವಾಡಿ: ಬೇಡ ಜನಾಂಗಕ್ಕೆ ಸೇರಿದ ಟ್ರಾನ್ಸ್‌ಪೋರ್ಟ್ ಮಾಲೀಕ ಭೀಮರಾವ ದೊರೆ ಮತ್ತು ಅವರ ಪುತ್ರನ ಮೇಲೆ ಹಲ್ಲೆ ಮಾಡುವ ಮೂಲಕ ಜಾತಿಯಿಂದ ನಿಂದಿಸಿದ ಎಸಿಸಿ ಕಂಪನಿಯ ಮೂವರು ಅಧಿಕಾರಿಗಳನ್ನು ಕೂಡಲೇ ಬಂಧಿಸಬೇಕು ಎಂದು ಮಹರ್ಷಿ ವಾಲ್ಮೀಕಿ ಸಮಾಜದ ತಾಲೂಕು ಗೌರವಾಧ್ಯಕ್ಷ ಮಲ್ಲಿಕಾರ್ಜುನ ಮಾಲಗತ್ತಿ ಹಾಗೂ ಪ್ರಧಾನ ಕಾರ್ಯದರ್ಶಿ ಹುಸನಪ್ಪ ಮಗದಂಪುರ ಒತ್ತಾಯಿಸಿದ್ದಾರೆ.
ಈ ಕುರಿತು ಶುಕ್ರವಾರ ಪಟ್ಟಣದಲ್ಲಿ ಕರೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ವಾಲ್ಮೀಕಿ ಸಮುದಾಯದ ಮುಖಂಡರು, ಕ್ಷುಲ್ಲಕ ಕಾರಣಗಳನ್ನು ಮುಂದಿಟ್ಟು ಮಾನಸಿಕ ಕಿರುಕುಳ ನೀಡುತ್ತಿರುವ ಎಸಿಸಿ ಅಧಿಕಾರಿಗಳ ಧರ್ಪದ ವರ್ತನೆಯಿಂದ ವಾಲ್ಮೀಕಿ ಸಮುದಾಯದ ಹಿರಿಯ ವ್ಯಕ್ತಿಯ ಗೌರವಕ್ಕೆ ಧಕ್ಕೆಯುಂಟಾಗಿದೆ.
ಸಚಿವರಿಗೆ ಭೇಟಿಯಾದ ಕಲಬುರಗಿ ನಿಯೋಗ; ಗಣಿಗಾರಿಕೆ ಸರಳೀಕರಣಕ್ಕೆ ಮನವಿ
ಸಿಮೆಂಟ್ ಟ್ರಾನ್ಸ್‌ಪೋರ್ಟ್ ವ್ಯವಹಾರಕ್ಕೆ ಸಂಬಂದಿಸಿದಂತೆ ವಾರದ ಹಿಂದೆ ಕಂಪನಿ ದ್ವಾರದಲ್ಲಿ ಉಂಟಾದ ವಾಗ್ವಾದದಲ್ಲಿ ಅಶ್ಲೀಲ ಮತ್ತು ಅವಾಚ್ಯ ಪದಬಳಕೆ ಮಾಡಿರುವ ಎಸಿಸಿ ಕಂಪನಿಯ ಲಾಜಸ್ಟಿಕ್ ವಿಭಾಗದ ಡಿಜಿಎಂ ಗೋಕುಲಕೃಷ್ಣ, ಎಚ್‌ಆರ್ ಮುಖ್ಯಸ್ಥ ನಾಗೇಶ್ವರರಾವ ಮತ್ತು ಸೆಕ್ಯೂರಿಟಿ ಹೆಡ್ ಶಮಸೀರಸಿಂಗ್ ಅವರ ವಿರುದ್ಧ ಜಾತಿನಿಂದನೆ ದೂರು ದಾಖಲಿಸಿ ಒಂದು ವಾರ ಕಳೆದಿದೆ. ಪೊಲೀಸರು ಅವರನ್ನು ಬಂಧಿಸುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದ್ದಾರೆ.
ಎಸಿಸಿಯಲ್ಲಿ ಸ್ಥಳೀಯರ ಟ್ರಾನ್ಸ್‌ಪೋರ್ಟ್ ವ್ಯವಹಾರ ನಡೆಯದಂತೆ ಶಢ್ಯಂತ್ರ ನಡೆಸಲಾಗುತ್ತಿದೆ. ವಾಲ್ಮೀಕಿ ಸಮುದಾಯದ ವ್ಯಕ್ತಿಯನ್ನೇ ಗುರಿಯಾಗಿಟ್ಟುಕೊಂಡು ಉದ್ದೇಶಪೂರ್ವಕವಾಗಿ ಕಿರುಕುಳ ನೀಡಲಾಗುತ್ತಿದೆ. ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ತೀರಾ ಹಿಂದುಳಿದಿರುವ ವಾಲ್ಮೀಕಿ ಸಮುದಾಯವನ್ನು ಮತ್ತಷ್ಟು ತುಳಿಯಲು ಎಸಿಸಿ ಕಂಪನಿ ಮುಂದಾಗಿದೆ. ಸಣ್ಣ ಗಲಾಟೆಯನ್ನೇ ಮುಂದಿಟ್ಟುಕೊಂಡು ನಮ್ಮ ಸಮುದಾಯದವರ ಧನಲಕ್ಷ್ಮೀ ಟ್ರಾರ್ನ್ಸ್‌ಪೋರ್ಟ್ ಬ್ಲಾಕ್ ಲಿಸ್ಟ್‌ಗೆ ಹಾಕಲಾಗಿದೆ. ಅಲ್ಲದೆ ವಿನಾಕಾರಣ ಎಸಿಸಿ ನೌಕರ ಭಾಗಣ್ಣ ದೊರೆಯನ್ನು ಸೇವೆಯಿಂದ ವಜಾ ಮಾಡಲಾಗಿದೆ.
ಮಾತೋಶ್ರೀ ಪೂಜ್ಯ ಡಾ. ದಾಕ್ಷಾಯಿಣಿ ಅಪ್ಪಾಗೆ ಸನ್ಮಾನ
ವಾಲ್ಮೀಕಿ ಸಮುದಾಯವನ್ನು ಜಾತಿಯಿಂದ ನಿಂದಿಸಿ ವ್ಯವಹಾರವನ್ನು ಕಪ್ಪು ಪಟ್ಟಿಗೆ ಸೇರಿಸಿರುವ ಎಸಿಸಿಯ ಮೂವರು ಆರೋಪಿ ಅಧಿಕಾರಿಗಳನ್ನು ರಕ್ಷಿಸದೆ ಬಂಧಿಸಿ ಜೈಲಿಗಟ್ಟಬೇಕು ಎಂದು ಆಗ್ರಹಿಸಿದ್ದಾರೆ. ನಿರ್ಲಕ್ಷ್ಯ ವಹಿಸಿದರೆ ಸೋಮವಾರ ಪೊಲೀಸ್ ಠಾಣೆ ಮುಂದೆ ವಾಲ್ಮೀಕಿ ಸಮಾಜದ ನೂರಾರು ಜನರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಮಹರ್ಷಿ ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಭೀಮರಾವ ದೊರೆ, ಉಪಾಧ್ಯಕ್ಷ ಸುಭಾಷ ರದ್ದಡಗಿ, ಸ್ಥಳೀಯ ಅಧ್ಯಕ್ಷ ನಾಗೇಶ ಜಮಾದಾರ ಸುದ್ದಿಗೋಷ್ಠಿಯಲ್ಲಿ ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…