ಸುರಪುರ: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಹಾಗು ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಯಾದಗಿರಿ ಮತ್ತು ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಸುರಪುರ ಇವರುಗಳ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ವೃತ್ತಿ ಸೇವೆ ಅಡಿಯಲ್ಲಿ ಉದ್ಯೋಗ ಮೇಳವನ್ನು ನಡೆಸಲಾಯಿತು.
ಎ ಒನ್ ಆಫೀಸರ್ಸ್ ಅಕಾಡೆಮಿ ಕಾಂಪಿಟೇಟಿವ್ ಎಕ್ಸಾಮ್ ಟ್ರೈನಿಂಗ್ ಸೆಂಟರ್ ಕ್ಯಾಡ್ ಮ್ಯಾಕ್ಸ್ ಸೊಲೋಶನ್ಸ್ ಸ್ವತಂತ್ರ ಮೈಕ್ರೋ ಫೈನಾನ್ಸ್ ಅಭಯ ಸರ್ವಿಸಸ್ ಎ ಒನ್ ಜಾಬ್ಸ್ ಸರ್ವಿಸಸ್ ಚೈತನ್ಯ ಇಂಡಿಯಾ ಫಿನ್ ಕ್ರೇಡಿಟ್ ಜೋಶ್ ಮ್ಯಾನೆಜಮೆಂಟ್ ಸೊಲೋಶನ್ ಎಕ್ಸ್ಟ್ರೀಮ್ ಸಾಫ್ಟ್ ಟೆಕ್ ಹಾಗು ಭಾರತ ಫೈನಾನ್ಸಿಯಲ್ ಇನಕ್ಲೂಶಿಯನ್ ಸೇರಿದಂತೆ ಒಟ್ಟು ೧೦ ಕಂಪನಿಗಳು ಮೇಳದಲ್ಲಿ ಭಾಗವಹಿಸಿದ್ದವು.
ವಿಧಾನಪರಿಷತ್ ಕಲಾಪಕ್ಕೆ ಮಾಧ್ಯಮ ನಿರ್ಬಂಧ ಇಲ್ಲ: ಸಭಾಪತಿ ಬಸವರಾಜ ಹೊರಟ್ಟಿ
ಅಲ್ಲದೆ ಒಟ್ಟು ೩೨೫ ಜನ ಅಭ್ಯಾರ್ಥಿಗಳು ಉದ್ಯೋಗಕ್ಕಾಗಿ ಅರ್ಜಿಯನ್ನು ಸಲ್ಲಿಸಿದ್ದು ಅದರಲ್ಲಿ ಈಗಾಗಲೆ ಮೊದಲ ಹಂತದಲ್ಲಿ ೪೩ ಜನ ಅಭ್ಯಾರ್ಥಿಗಳು ಕೆಲಸಕ್ಕೆ ನೇಮಕಗೊಂಡಿದ್ದು ಇನ್ನೂ ಅನೇಕರು ನೇಮಕಗೊಳ್ಳಲಿದ್ದಾರೆ ಎಂದು ಉದ್ಯೋ ವಿನಿಮಯ ಕಛೇರಿಯ ಅಧಿಕಾರಿಗಳಾದ ಭಾರತಿಯವರು ತಿಳಿಸಿದ್ದಾರೆ.
ಎ ಒನ್ ಕರಿಯರ್ ಅಕಾಡೆಮಿಯ ವ್ಯವಸ್ಥಾಪಕರಾದ ಶಿವಕುಮಾರ ದೇಶಮಾನೆ ವಿವರಣೆ ನೀಡಿ,ನಮ್ಮ ಸಂಸ್ಥೆಗೆ ೩೫ ಅರ್ಜಿಗಳು ಬಂದಿವೆ ಆದರೆ ನಮ್ಮ ಸಂಸ್ಥೆಯಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಭೋದಕ ಹುದ್ದೆಗಳಿಗಾಗಿ ನೇಮಕಾತಿ ಕರೆಯಲಾಗಿತ್ತು ಆದರೆ ಯಾರೂ ಅರ್ಜಿಯನ್ನು ಸಲ್ಲಿಸಿಲ್ಲ,ಆದರೆ ಇನ್ನುಳಿದ ಡಾಟಾ ಎಂಟ್ರಿ ಆಪರೇಟರ್ ಮತ್ತಿತರೆ ಹುದ್ದೆಗಳಿಗೆ ೨೫ ಜನ ಸಂದರ್ಶನಕ್ಕೆ ಬಂದಿದ್ದು ಅದರಲ್ಲಿ ೭ ಜನ ನೇಮಕಗೊಂಡಿದ್ದಾರೆ ಎಂದು ತಿಳಿಸಿದರು.
“ನೌಕರಿ ಕೊಡಿ ಇಲ್ಲ ಅಂದ್ರೆ ನಮ್ಮ ಪದವಿ ಪತ್ರ ವಾಪಸ ತಗೊಳಿ” ಶಾಸಕರಿಂದ ಪೋಸ್ಟರ ಬಿಡುಗಡೆ
ಉದ್ಯೋಗ ಮೇಳದ ಕುರಿತು ಅನೇಕ ವಿದ್ಯಾರ್ಥಿಗಳು ಮಾತನಾಡಿ,ನಾವು ಇದುವರೆಗೆ ಉದ್ಯೋಗ ಮೇಳಗಳಲ್ಲಿ ಭಾಗವಹಿಸಿರಲಿಲ್ಲ.ಆದರೆ ಇಂದು ನಮ್ಮ ಕಾಲೇಜಿನ ಆವರಣದಲ್ಲಿ ಮೇಳ ನಡೆದಿರುವುದರಿಂದ ಯಾವುದೇ ಒಂದು ಉದ್ಯೋಗಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಸಂದರ್ಶನ ಹೇಗಿರಲಿದೆ ಎನ್ನುವುದರ ಕುರಿತು ಉತ್ತಮವಾದ ಮಾಹಿತಿ ಲಭಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…