ಶಹಾಬಾದ: ಸುಳ್ಳು ಆಶ್ವಾಸನೆ ನೀಡುವುದರ ಬದಲು ಖಾಲಿ ಇರುವ ಎಲ್ಲಾ ಹುದ್ದೆಗಳು ಕೂಡಲೇ ಸರಕಾರ ಭರ್ತಿ ಮಾಡಬೇಕೆಂದು ಎ.ಐ.ಡಿ.ವೈ.ಓ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಮಲ್ಲಿನಾಥ ಹುಂಡೇಕಲ್ ಹೇಳಿದರು.
ಅವರು ನಗರದ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂಥ್ ಆರ್ಗನೈಜೇಷನ್ ವತಿಯಿಂದ ಹಮ್ಮಿಕೊಂಡಿದ್ದ ನಿರುದ್ಯೋಗದ ವಿರುದ್ಧ ಸಹಿ ಸಂಗ್ರಹ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
“ನೌಕರಿ ಕೊಡಿ ಇಲ್ಲ ಅಂದ್ರೆ ನಮ್ಮ ಪದವಿ ಪತ್ರ ವಾಪಸ ತಗೊಳಿ” ಶಾಸಕರಿಂದ ಪೋಸ್ಟರ ಬಿಡುಗಡೆ
ದೇಶದಲ್ಲಿ ಕೋಟ್ಯಾಂತರ ಯುವಕರು ತೀವ್ರವಾದ ಉದ್ಯೋಗದ ಸಮಸ್ಯೆ ಎದುರಿಸುತ್ತಿದ್ದಾರೆ. ಇನ್ನೊಂದು ಕಡೆ ಲಕ್ಷಾಂತರ ಹುದ್ದೆಗಳು ಖಾಲಿ ಇದ್ದರೂ ಸರಕಾರ ಭರ್ತಿ ಮಾಡುತ್ತಿಲ್ಲ. ಕೂಡಲೇ ಖಾಲಿ ಇರುವ ಎಲ್ಲಾ ಹುದ್ದೆಗಳು ಭರ್ತಿ ಮಾಡಬೇಕೆಂದು ಆಗ್ರಹಿಸಿದರು. ಸರಕಾರವು ಸಾರ್ವಜನಿಕ ಸೇವೆಗಳಾದ ರೈಲ್ವೆ, ಆರೋಗ್ಯ, ಶಿಕ್ಷಣ, ಬ್ಯಾಂಕಿಂಗ್ ಎಲ್ಲವೂ ವ್ಯಾಪಾರೀಕರಣ ಮಾಡುತ್ತಿದ್ದು ಹಾಗೂ ಕಾರ್ಪೋರೇಟ್‌ಗಳ ಪರವಾಗಿ ನೀತಿಗಳು ತರುತ್ತಿದ್ದಾರೆ.ಇದು ಒಳ್ಳೆಯ ಬೆಳವಣಿಗೆಯೂ ಅಲ್ಲ. ಇದರಿಂದ ನಿರೋದ್ಯೋಗ ಸಮಸ್ಯೆಯೂ ತಾಂಡವವಾಡಲಿದೆ. ಎಲ್ಲರಿಗೂ ಉದ್ಯೋಗ ಖಾತ್ರಿ ಪಡಿಸಲು ಹಾಗೂ ನೇಮಕಾತಿ ಪ್ರಕ್ರಿಯೆ ತ್ವರಿತವಾಗಿ ಪೂರ್ಣಗೊಳಿಸಲು ಯುವಜನರು ಸಿಡಿದೇಳಬೇಕೆಂದು ಹೇಳಿದರು.
ಎ.ಐ.ಡಿ.ವೈ.ಓ ಸ್ಥಳೀಯ ಅಧ್ಯಕ್ಷ ಸಿದ್ಧು ಚೌಧರಿ ಮಾತನಾಡಿ, ಯುವಕರು ಸ್ಕೀಲ್ ಪಡೆದು ಸ್ವಾವಲಂಬಿ ಜೀವನ ನಡೆಸಬೇಕೆಂದು ಹೇಳಿ ಸರಕಾರವು ಎಲ್ಲಾ ಜವಾಬ್ದಾರಿ ಯುವಕರ ಮೇಲೆ ಹಾಕುತ್ತಿರುವುದು ವಿಷಾದದ ಸಂಗತಿ ಎಂದರು. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಉದ್ಯೋಗ ಯುವಕರ ಮೂಲಭೂತ ಹಕ್ಕು. ಎಲ್ಲರಿಗೂ ಉದ್ಯೋಗ ನೀಡುವ ಜವಾಬ್ದಾರಿ ಸರಕಾರದ್ದು. ಬದಲಾಗಿ ಸರಕಾರವು ದೇಶದ ೬೦% ಯುವಕರನ್ನು ಕಡೆಗಣಿಸುತ್ತಿದ್ದು. ಇದರ ವಿರುದ್ದ ಯುವಕರು ಸಂಘಟಿತ ಹೋರಾಟ ಕಟ್ಟಬೇಕೆಂದರು.
ರಾಯಚೂರು ವಿವಿ ಲಾಂಛನದಲ್ಲಿ ಯಾದಗಿರಿ ಜಿಲ್ಲೆಯನ್ನು ಪರಿಗಣಿಸಲು ಕಸಾಪ ಆಗ್ರಹ
ಸ್ಥಳೀಯ ಉಪಾಧ್ಯಾಕ್ಷ ತಿಮ್ಮಯ್ಯ ಮಾನೆ, ಕಾರ್ಯದರ್ಶಿ ಪ್ರವೀಣ ಬಣಮೀಕರ್, ನೀಲಕಂಠ ಹುಲಿ, ರಘು ಪವಾರ, ಶ್ರೀನಿವಾಸ ದಂಡಗುಲಕರ್ ಉಪಸ್ಥಿತರಿದ್ದರು. ನೂರಾರು ಯುವಕರು ವಿದ್ಯಾರ್ಥಿಗಳು, ಸಹಿ ನೀಡುವ ಮೂಲಕ ಹೋರಾಟಕ್ಕೆ ಬೆಂಬಲ ವ್ಯಕ್ತ ಪಡಿಸಿದ್ದರು.
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…
ಕಲಬುರಗಿ; ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ತಂಬಾಕು ನಿಯಂತ್ರಣ…
ಸೇಡಂ (ಕಲಬುರಗಿ); ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ `ಅಮ್ಮ ಪ್ರಶಸ್ತಿ’ 24ನೇ ವರ್ಷದ ಸಮಾರಂಭವು…