ರಾಯಚೂರು ವಿವಿ ಲಾಂಛನದಲ್ಲಿ ಯಾದಗಿರಿ ಜಿಲ್ಲೆಯನ್ನು ಪರಿಗಣಿಸಲು ಕಸಾಪ ಆಗ್ರಹ

1
30

ಸುರಪುರ: ರಾಯಚೂರು ವಿಶ್ವವಿದ್ಯಾಲಯದ ಲಾಂಛನದಲ್ಲಿ ಯಾದಗಿರಿ ಜಿಲ್ಲೆಯನ್ನು ಪರಿಗಣಿಸುವಂತೆ ಸುರಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಮುಖಂಡರು ಆಗ್ರಹಿಸಿದ್ದಾರೆ.

ಈ ಕುರಿತು ಕಸಾಪ ವತಿಯಿಂದ ಶಾಸಕರು ಹಾಗು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರಾದ ನರಸಿಂಹ ನಾಯಕ (ರಾಜುಗೌಡ) ಅವರಿಗೆ ಮನವಿ ಮಾಡಿರುವ ಮುಖಂಡರು,ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ರಾಯಚೂರು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಈಗ ನಮ್ಮ ಯಾದಗಿರಿ ಜಿಲ್ಲೆಯನ್ನು ಸೇರ್ಪಡೆಗೊಳಿಸಲಾಗಿದೆ.

Contact Your\'s Advertisement; 9902492681

ಸುರಪುರ:ಮೊಜಂಪುರ ಮೊಹಲ್ಲಾದಲ್ಲಿ ಆರೋಗ್ಯ ತಪಾಸಣಾ ಶಿಬಿರ

ಈ ಹಿಂದೆ ಗುಲಬರ್ಗಾ ವಿಶ್ವವಿದ್ಯಾಲಯದ ವ್ಯಾಪ್ತಿಯಿಂದ ರಾಯಚೂರು ವಿವಿಗೆ ಸೇರ್ಪಡೆಗೊಂಡಿರುವ ಯಾದಗಿರಿ ಜಿಲ್ಲೆಯು ಅನೇಕ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ.ಅದರಲ್ಲಿ ಸುರಪುರದ ಗರುಡಾದ್ರಿ ಕಲೆ ಕೊಡೇಕಲ್ ಕಾಲಜ್ಞಾನಿ ಬಸವಣ್ಣನವರು ತಿಂಥಣಿಯ ಮೌನೇಶ್ವರರು ದೇವಾಪುರದ ಮಹಾಕವಿ ಲಕ್ಷ್ಮೀಶ ಹಾಗು ಬಸವಸಾಗರ ಜಲಾಶಯ ಹೀಗೆ ಅನೇಕ ಮಹನಿಯರುಗಳನ್ನು ಹೊಂದಿರುವ ನಮ್ಮ ಸುರಪುರ ತಾಲೂಕಿನಲ್ಲಿ ದೇವರದಾಸಿಮಯ್ಯ ಹಾವಿನಾಳದ ಕಲ್ಲಯ್ಯ ಕೆಂಭಾವಿಯ ಬೋಗಣ್ಣನಂತಹ ಶರಣರು ಬಾಳಿ ಹೋಗಿದ್ದಾರೆ.

ಆದ್ದರಿಂದ ಇಂತಹ ಇತಿಹಾಸದ ಜೀವಂತಿಕೆಗಾಗಿ ರಾಯಚೂರು ವಿಶ್ವವಿದ್ಯಾಲಯದ ಲಾಂಛನದಲ್ಲಿ ಇಲ್ಲಿ ಹೆಸರಿಸಿದ ಮಹನಿಯರು ಮತ್ತು ಸ್ಥಳಗಳನ್ನು ಅಳವಡಿಸುವ ಮೂಲಕ ಲಾಂಛನಕ್ಕೆ ಅರ್ಥ ಬರುವಂತೆ ಮಾಡಬೇಕೆಂದು,ಇದನ್ನು ಸರಕಾರದ ಗಮನಕ್ಕೆ ತರುವಂತೆ ಕನ್ನಡ ಸಾಹಿತ್ಯ ಪರಿಷತ್‌ನ ಮುಖಂಡರಾದ ಅಧ್ಯಕ್ಷ ಶ್ರೀನಿವಾಸ ಜಾಲವಾದಿ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ ಶಾಂತಪ್ಪ ಬೂದಿಹಾಳ ಜೆ.ಅಗಸ್ಟಿನ್ ಸಿ.ಎನ್.ಭಂಡಾರಿ ನಬಿಲಾಲ ಮಕಾಂದಾರ ಭೀರಣ್ಣ ಬಿ.ಕೆಗೋಪಣ್ಣ ಯಾದವ್ ಬಸಲಭೀಮ ದೇಸಾಯಿ ಕನಕಪ್ಪ ವಾಗಣಗೇರಾ ಜಯಲಲಿತ ಪಾಟೀಲ್ ಕುತಬುದ್ದೀನ್ ಅಮ್ಮಾಪುರ ರಾಜು ಕುಂಬಾರ ಹೆಚ್.ರಾಠೋಡ ರಾಘವೇಂದ್ರ ಭಕ್ರಿ ವೆಂಕಟೇಶಗೌಡ ಪಾಟೀಲ್ ಶರಣಬಸಪ್ಪ ಯಳವಾರ ಸೇರಿದಂತೆ ಅನೇಕರು ಒತ್ತಾಯಿಸಿದ್ದಾರೆ.

ಯಾದವ ಸಮಾಜದ ಸಂಘಕ್ಕೆ ಪದಾಧಿಕಾರಿಗಳ ನೇಮಕ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here