ಬಿಸಿ ಬಿಸಿ ಸುದ್ದಿ

ಅರಣ್ಯ ಇಲಾಖೆಯಲ್ಲಿ ಮುಂಬಡ್ತಿ ಕಲ್ಯಾಣ ಕರ್ನಾಟಕ್ಕೆ ಮಾದರಿಯಾದ ಸಿಸಿಎಫ್

ಆಳಂದ: ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿ ಬರುವ ಕಲಬುರಗಿ ಮತ್ತು ಬಳ್ಳಾರಿ ಅರಣ್ಯ ವೃತ್ತಗಳಲ್ಲಿ ಸುಮಾರು ಹತ್ತು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಹಿರಿಯ ಅರಣ್ಯ ರಕ್ಷಕರಿಗೆ ಉಪವಲಯ ಅರಣ್ಯಾಧಿಕಾರಿ ಹುದ್ದೆಗೆ ಮುಂಬಡ್ತಿ ನೀಡಲು ೨೦೧೮ರಲ್ಲಿಯೇ ಸೇವಾ ವಿವರಗಳನ್ನು ಕರೆಯಲಾಗಿತ್ತು ಆದರೆ ಅರಣ್ಯ ಇಲಾಖೆಯ ವಿವಿಧ ವೃಂದಗಳ ಜೇಷ್ಠತೆ ಪರಿಗಣಿಸುವಲ್ಲಿ ಕೆಲವು ನ್ಯೂನತೆಗಳಾಗಿದ್ದು ಇದನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿ ನ್ಯೂನತೆಗಳನ್ನು ಸರಿಪಡಿಸುವ ಸಲುವಾಗಿ ಸರ್ಕಾರದಿಂದ ಒಂದು ಉಪ ಸಮಿತಿಯನ್ನು ರಚಿಸಿ ಸದರಿ ಉಪ ಸಮಿತಿಯ ವರದಿಯನ್ನಾಧರಿಸಿ ಪುನಃ ಕಲ್ಯಾಣ ಕರ್ನಾಟಕ ಪ್ರದೇಶದ ಅರಣ್ಯ ವೀಕ್ಷಕರ ಮತ್ತು ಅರಣ್ಯ ರಕ್ಷಕರ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲಾಯಿತು.

ಅದರಂತೆ ಕಲ್ಯಾಣಕ ಕರ್ನಾಟಕ ಪ್ರದೇಶ ವ್ಯಾಪ್ತಿಯ ಸುಮಾರು ೨೦ ಜನ ಅರಣ್ಯ ವೀಕ್ಷಕರಿಗೆ ಅರಣ್ಯ ರಕ್ಷಕ ಹುದ್ದೆಯಲ್ಲಿ ಸ್ಥಾನಪನ್ನ ಮುಂಬಡ್ತಿಯನ್ನು ನೀಡಲಾಗಿದೆ. ಅದಲ್ಲದೆ ಕಲಬುರಗಿ ಮತ್ತು ಬಳ್ಳಾರಿ ವೃತ್ತ ವ್ಯಾಪ್ತಿಯ ಒಟ್ಟು ಆರು ಜಿಲ್ಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕರ್ನಾಟಕ ನಾಗರಿಕ ಸೇವಾ ನಿಯಮ ೩೨ರಡಿ ಸ್ವತಂತ್ರ ಪ್ರಭಾರದ ವ್ಯವಸ್ಥೆಯಲ್ಲಿರುವ ಸುಮಾರು ೪೧ ಜನ ಉಪವಲಯ ಅರಣ್ಯಾಧಿಕಾರಿಗಳಿಗೆ ಸ್ಥಾನಪನ್ನ ಮುಂಬಡ್ತಿಯನ್ನು ನೀಡಲಾಗಿದೆ.

ರಾಮ ಮಂದಿರಕ್ಕೆ ಶಾಸಕ ಗುತ್ತೇದಾರರಿಂದ 5 ಲಕ್ಷ ದೇಣಿಗೆ

ಇದರ ಜೊತೆಯಲ್ಲಿ ೨೦೧೦ನೇ ಸಾಲಿನ ಅರಣ್ಯ ರಕ್ಷಕರಿಗೆ ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದದ ಶೇಕಡಾ ೮೦% ರನ್ವಯ ೨೦ ಜನ ಅರಣ್ಯ ರಕ್ಷಕರಿಗೆ ಮತ್ತು ಸ್ಥಳೀಯೇತರ ವೃಂದದ ೨೦% ರನ್ವಯ ೧೧ ಜನ ಅರಣ್ಯ ರಕ್ಷಕರಿಗೆ ಆಡಳಿತಾತ್ಮಕ ಹಿತದೃಷ್ಟಿಯಿಂದ ಕರ್ನಾಟಕ ನಾಗರಿಕ ಸೇವಾ ನಿಯಮ ೩೨ ರಡಿಯಲ್ಲಿ ಉಪವಲಯ ಅರಣ್ಯಾಧಿಕಾರಿ ಹುದ್ದೆಯಲ್ಲಿ ಮುಂಬಡ್ತಿಯನ್ನು ನೀಡಲಾಗಿದೆ.

ಕಲಬುರಗಿ ವೃತ್ತದ ಅರಣ್ಯ ರಕ್ಷಕರ ಹಾಗೂ ವೀಕ್ಷಕರ ಸಂಘವು ಮಾನ್ಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಅನೇಕ ಬಾರಿ ಮನವಿಗಳನ್ನು ಸಲ್ಲಿಸಿದ ಪ್ರಯುಕ್ತ ಕಲಬುರಗಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶದ ಅರಣ್ಯ ಇಲಾಖೆ ಬಡ್ತಿ ಸಮಿತಿಯ ಅಧ್ಯಕ್ಷರಾದ  ಮಾನ್ಯ ಶ್ರೀಮತಿ ವಿ.ಗೀತಾಂಜಲಿ ಅವರು ಕೇವಲ ೨-೩ ವರ್ಷದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸ್ಥಳೀಯ ಮತ್ತು ಸ್ಥಳೀಯೇತರ ಸಿಬ್ಬಂದಿಗಳಲ್ಲಿ ಸುಮಾರು ೨೦ ಜನ ಅರಣ್ಯ ವೀಕ್ಷಕರಿಗೆ ಅರಣ್ಯ ರಕ್ಷಕ ಹುದ್ದೆಯಲ್ಲಿ ಹಾಗೂ ೭೨ ಜನ ಅರಣ್ಯ ರಕ್ಷಕರಿಗೆ ಉಪವಲಯ ಅರಣ್ಯಾಧಿಕಾರಿಗಳ ಹುದ್ದೆಗಳಲ್ಲಿ ಮುಂಬಡ್ತಿಯನ್ನು ನೀಡಿರುತ್ತಾರೆ.

ಜರ್ಮನಿ ಅಂತರಾಷ್ಟ್ರೀಯ ಕಲಾ ಪ್ರದರ್ಶನ: ರೆಹಮಾನ ಪಟೇಲ್ ಕಲಾಕೃತಿ ಆಯ್ಕೆ

ಈ ರೀತಿ ಮುಂಬಡ್ತಿಯನ್ನು ನೀಡಿ ಕಲ್ಯಾಣ ಕರ್ನಾಟಕದ ವಿಶೇಷ ಸ್ಥಾನಮಾನವನ್ನು ಪರಿಪೂರ್ಣವಾಗಿ ಅನುಷ್ಠಾನಗೊಳಿಸಿದಂತಾಗಿದೆ. ಬೇರೆ ಇಲಾಖೆಗಳಲ್ಲಿ ಮುಂಬಡ್ತಿ ವಿಚಾರದಲ್ಲಿ ಸಿಬ್ಬಂದಿಗಳು ಅನೇಕ ತೊಂದರೆಗಳು ಅನುಭವಿಸುತ್ತಿರುವ ಸಮಯದಲ್ಲಿ ಈ ರೀತಿಯಾಗಿ ಸಮಸ್ಯೆಗಳನ್ನು ಬಗೆಹರಿಸಿ ಮುಂಬಡ್ತಿಯನ್ನು ನೀಡಿ ಇತರೆ ಇಲಾಖೆಗೆ ಮಾದರಿಯಾಗಿದೆ.

ಈ ರೀತಿಯಾಗಿ ಅರಣ್ಯ ರಕ್ಷಕರ ಹಾಗೂ ವೀಕ್ಷಕರ ಸಂಘದ ಮನವಿಗಳಿಗೆ ಸ್ಪಂದಿಸಿ ಮುಂಬಡ್ತಿಯನ್ನು ನೀಡಿದ ಸಲುವಾಗಿ ಸಂಘದ ಅಧ್ಯಕ್ಷಕರು ಹಾಗು ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿ ಮಾನ್ಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಹುಗುಚ್ಛ ಕೊಟ್ಟು ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಅಲ್ಲಿ ಸಂಘದ ಅಧ್ಯಕ್ಷರಾದ ಹೆಚ್.ಬಿ.ಬಿರಾದಾರ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ರಾಜಶೇಖರ ಧೂಪದ ಮತ್ತು ಪದಾಧಿಕಾರಿಗಳಾದ ಭೀಮಾಶಂಕರ ಗಣಪೂರ, ಹುಚ್ಚಪ್ಪ. ಸುರೇಶ ಬೆಣ್ಣೂರ, ಸಿದ್ರಾಮೇಶ್ವರ, ಮದರಸಾಬ iತ್ತು ರಮೇಶ ಹಾಳಕೇರಿ ಹಾಜರಿದ್ದರು.

sajidpress

Recent Posts

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

58 mins ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

59 mins ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

1 hour ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

1 hour ago

ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಬೇಡಿ

ಕಲಬುರಗಿ; ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ತಂಬಾಕು ನಿಯಂತ್ರಣ…

1 hour ago

ಸೇಡಂ: `ಅಮ್ಮ ಪ್ರಶಸ್ತಿ’ ಪ್ರದಾನ ಸಮಾರಂಭ ನಾಳೆ

ಸೇಡಂ (ಕಲಬುರಗಿ);  ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ `ಅಮ್ಮ ಪ್ರಶಸ್ತಿ’ 24ನೇ ವರ್ಷದ ಸಮಾರಂಭವು…

2 hours ago