ಕಲಬುರಗಿ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ ಮತ್ತು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸಂಸ್ಥೆ, ಬೆಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ ಇವರುಗಳ ಸಂಯುಕ್ತಾಶ್ರಯದಲ್ಲಿ ಅರೆಕಾಲಿಕ ಕಾನೂನು ಸ್ವಯಂ ಸೇವಕರು ಹಾಗೂ ಪ್ಯಾನಲ್ ವಕೀಲರಿಗೆ ಹೆಚ್.ಐ.ವಿ. ಬಗ್ಗೆ ಮೂಲ ಮಾಹಿತಿ, ತಡೆ ಹಾಗೂ ಹೆಚ್.ಐ.ವಿ. ಕಾಯ್ದೆ ಕುರಿತು ಒಂದು ದಿನದ ತರಬೇತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು.
ಗೌರವಾನ್ವಿತ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಹಾಗೂ ಅಧ್ಯಕ್ಷರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಯ ಆರ್. ಜೆ. ಸತೀಶ್ ಸಿಂಗ್ ಅವರು ಸಸಿಗೆ ನೀರನ್ನು ಎರಚುವ ಮೂಲಕ ಕಾರ್ಯಗಾರ ಉದ್ಘಾಟಿಸಿದರು. ಕಾರ್ಯಗಾರದ ಅಧ್ಯಕ್ಷತೆಯನ್ನು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ವಿವೇಕಾನಂದ ರೆಡ್ಡಿ, ವಹಿಸಿಕೊಂಡಿದ್ದರು.
ಲಾಕ್‍ಡೌನ್‍ನಲ್ಲಿ ಮಹಿಳೆಯರ ದೂರು ಹೆಚ್ಚಳ: ಪ್ರಮೀಳಾ ನಾಯ್ಡು
ಗೌರವಾನ್ವಿತ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ಅಧ್ಯಕ್ಷರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಆರ್. ಜೆ. ಸತೀಶ್ ಸಿಂಗ್, ಕಾರ್ಯಗಾರವನ್ನು ಉದ್ದೇಶಿಸಿ ಹೆಚ್.ಐ.ವಿ. / ಏಡ್ಸ್ ಎಂದರೇನು?, ಸಮಾಜದಲ್ಲಿ ಹೆಚ್.ಐ.ವಿ. ವ್ಯಕ್ತಿಯನ್ನು ಕಳಂಕ & ತಾರತಮ್ಯದಿಂದ ನೋಡುವ ದೃಷ್ಟಿಕೋನ ಬದಲಾಗಬೇಕು. ಸೋಂಕಿತ ವ್ಯಕ್ತಿಯನ್ನು ತುಚ್ಚದಿಂದ ಕಾಣದೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಒದಗಿಸುವಂತೆ ಹಾಗೂ ಆ ವ್ಯಕ್ತಿಯು ಚಿಕಿತ್ಸೆಯನ್ನು ಪಡೆದು ಹೆಚ್ಚಿನ ಅವಧಿಯವರೆಗೆ ಬದುಕಬಹುದು ಹಾಗೂ ವ್ಯಕ್ತಿಯ ರೋಗ ನಿರೂಧಕ ಶಕ್ತಿಯನ್ನು ಕುಂದಿಸುವಂಥ ವೈರಾಣುವಿನ ವಿರುದ್ದ ನಾವುಗಳು, ಆರೋಗ್ಯ ಇಲಾಖೆಯವರು & ಎಲ್ಲಾ ಕಾರ್ಯಕರ್ತರು ಕೈಜೋಡಿಸಿ ಹೆಚ್.ಐ.ವಿ.ಯನ್ನು ಸಮಾಜದಿಂದ ಹೋಗಲಾಡಿಸಬೇಕೆಂದು ತಿಳಿಸಿದರು.
ಮುಖ್ಯ ಅಥಿತಿಯಾಗಿ ಆಗಮಿಸಿದಂತಹ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಇವರು ಜಿ.ಆರ್.ಶೆಟ್ಟರ್, ಈ ಕಾರ್ಯಗಾರವನ್ನು ಉದ್ದೇಶಿಸಿ ಅರೆಕಾಲಿಕ ಕಾಣೂನು ಸೇವಕರಿಗೆ ಕಾರ್ಯಗಾರವನ್ನು ಹಮ್ಮಿಕೊಂಡಿರುವುದು ತುಂಬಾ ಸಂತಸವಾಗಿದೆ ಹಾಗೂ ಈ ತರದಹ ಕಾರ್ಯಗಾರವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಹಮ್ಮಿಕೊಂಳ್ಳಬೇಕು & ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದು ಮಾತನಾಡಿದರು.
ಮಹಿಳಾ ಸ್ವ-ಸಹಾಯ ಗುಂಪುಗಳ ಬಲವರ್ಧನೆಗೆ ಯೋಜನೆಗಳು ಜಾರಿ: ಶಶಿಕಲಾ ಜೊಲ್ಲೆ
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳು ಇವರು ಡಾ. ವಿವೇಕಾನಂದ ರೆಡ್ಡಿ, ಕ್ಷಯರೋಗ, ಹೆಚ್.ಐ.ವಿ, ಎಂದರೇನು? ರೋಗದ ಲಕ್ಷಣಗಳು, ಕ್ಷಯರೋಗ & ಹೆಚ್.ಐ.ವಿ, ರೋಗಕ್ಕೆ ಆರೋಗ್ಯ ಇಲಾಖೆಯಿಂದ ಸಿಗುವಂತಹ ಚಿಕಿತ್ಸಾ ವಿಧಾನಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಜಿಲ್ಲಾ ಮೇಲ್ವಿಚಾರಕರು, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ ಸೋಮಶೇಖರ್ ಮಾಲಿಪಾಟೀಲ್, ಇವರುಗಳು ಕಾರ್ಯಗಾರವನ್ನು ಉದ್ದೇಶಿಸಿ ಹೆಚ್.ಐ.ವಿ. ಸೋಂಕಿತ ವ್ಯಕ್ತಿಗೆ ಸಿಗುವಂತಹ ವಿವಿಧ ಇಲಾಖೆಯಿಂದ ಸಿಗುವಂತಹ ಸಾಮಾಜಿಕ ಸೌಲಭ್ಯಗಳ ಕುರಿತು ಸವಿಸ್ತಾರವಾಗಿ ಮಾತನಾಡಿದರು.
ಹಜರತ್ ಸೈಯದ್ ಶಾ ಖಾದರ್ ವಲಿ ಖಾದ್ರಿ ದರ್ಗಾ ಜಾತ್ರೆ
ಮಲ್ಲಿಕಾರ್ಜುನ ಬಿರಾದಾರ್ ಹಿರಿಯ ಆಪ್ತ ಸಮಾಲೋಚಕರು, ಎ.ಆರ್.ಟಿ ಪ್ಲಸ್ ಸೆಂಟರ್, ಜಿಮ್ಸ್ ಇವರು ಹೆಚ್.ಐ.ವಿ / ಏಡ್ಸ್ ನಡುವಿನ ವ್ಯತ್ಯಾಸ, ಎ.ಆರ್.ಟಿ. ಕೇಂದ್ರದಿಂದ ಸಿಗುವಂತಹ ಸೌಲಭ್ಯಗಳ ಬಗ್ಗೆ, ಹೆಚ್.ಐ.ವಿ. ಸೋಂಕಿತ ವ್ಯಕ್ತಿಗೆ ಹಾಗೂ ಅವರ ಕುಟುಂಬದವರಿಗೆ ಪ್ರೀ ಕೌನ್ಸಲಿಂಗ್ & ಪೋಸ್ಟ್ ಕೌನ್ಸಲಿಂಗ್ ನೀಡುವುದರ ಬಗ್ಗೆ, ಹೆಚ್.ಐ.ವಿ. ಸೋಂಕಿತ ವ್ಯಕ್ತಿಗಿರುವ ಕಾಯ್ದೆ-ಕಾನೂನುಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಮಾತನಾಡಿದರು.
ಯೋಜನಾಧಿಕಾರಿಗಳು, ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್, ಮೈಸೂರು ಇವರು ನಾಗಭೂಷಣ ಎಮ್. ಕಾರ್ಯಗಾರವನ್ನು ಉದ್ಧೇಶಿಸಿ, ಹೆಚ್.ಐ.ವಿ. ಸೋಂಕಿತ ತಾಯಿಯಿಂದ ಮಗುವುಗೆ ಹೆಚ್.ಐ.ವಿ. ಸೋಂಕು ಹರಡುವ ರೀತಿ, ಸೋಂಕಿತ ತಾಯಿ & ಆ ತಾಯಿಯಿಂದ ಹಿಟ್ಟಿದ ಮಗುವಿಗೆ ಸಿಗುವ ಸೌಲಬ್ಯಗಳ ಕುರಿತು, ಹೆಚ್.ಐ.ವಿ. ಸೋಂಕಿತ ತಾಯಿಯಿಂದ ಹುಟ್ಟಿದ ಮಗುವಿಗೆ ೦೬ ವಾರದಲ್ಲಿ, ೬ ತಿಂಗಳಲ್ಲಿ, ೧೨ ತಿಂಗಳು & ೧೮ ತಿಂಗಳ ಅವಧಿಯಲ್ಲಿ ಮಗುವಿಗೆ ಹೆಚ್.ಐ.ವಿ. ಪರೀಕ್ಷೆ ಕಡ್ಡಾಯವಾಗಿ ಮಾಡಿಸಬೇಕೆಂದು ತಿಳಿಸಿದರು.
ಬಸ್ಸಿಗಾಗಿ ವಿದ್ಯಾರ್ಥಿಗಳ ಪರದಾಟ: ಸಮಸ್ಯೆಗೆ ಸ್ಪಂದಿಸಲು ಆಗ್ರಹ
ಈ ಕಾರ್ಯಗಾರದಲ್ಲಿ ಅಥಿತಿಯಾಗಿ ಆಗಮಿಸಿದಂತಹ ಅಧ್ಯಕ್ಷರು, ಜಿಲ್ಲಾ ನ್ಯಾಯವಾಧಿಗಳ ಸಂಘ , ಅರುಣ್ ಕುಮಾರ್ ಬಿ. ಕಿಣ್ಣಿ, ಜಂಟಿ ಕಾರ್ಯದರ್ಶಿ, ವಕೀಲರ ಸಂಘ, , ಶಿವಾನಂದ ಬಿ.ಹೆಡೆ. ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಆಗಮಿಸಿದ ಎಲ್ಲಾ ಪ್ಯಾನಲ್ ವಕೀಲರು ಭಾಗವಹಿಸಿದ್ದರು.
ಹಿರಿಯ ಆಪ್ತ ಸಮಾಲೋಚಕರು, ಎ.ಆರ್.ಟಿ ಪ್ಲಸ್ ಸೆಂಟರ್, ಜಿಮ್ಸ್ ಮಲ್ಲಿಕಾರ್ಜುನ ಬಿರಾದಾರ್ ಇವರು ನಿರೂಪಿಸಿದರು, ಸಹಾಯಕರು, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ ದಿನೇಶ್ ಎಮ್. & ಈ . ಇವರು ವಂದಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…