ಬಿಸಿ ಬಿಸಿ ಸುದ್ದಿ

ಸಚಿವ ಅಶೋಕ್‌ ಗೋಲ್ಡ್‌ ಮಾಲ್‌ ಉದ್ಘಾಟನೆ, ನೂತನ ಯೋಜನೆಗೆ ಚಾಲನೆ

ಬೆಂಗಳೂರು: ಶ್ರೀ ಸ್ಟಾರ್‌ ಗೋಲ್ಡ್‌ ಕಂಪನಿಯ ವತಿಯಿಂದ ದೇಶದಲ್ಲೇ ಮೊದಲ ಬಾರಿಗೆ ಅಡವಿಟ್ಟ ಚಿನ್ನವನ್ನು ಬಿಡಿಸಿ ಮಾಲೀಕರಿಗೆ ಬಾಡಿಗೆಗೆ ನೀಡುವ ವಿನೂತನ ಯೋಜನೆಗೆ ಕಂದಾಯ ಸಚಿವರಾದ ಆರ್‌ ಅಶೋಕ್‌ ಅವರು ಚಾಲನೆ ನೀಡಿದರು.

ದೇಶದಲ್ಲೇ ಮೊದಲ ಬಾರಿಗೆ ಆಭರಣಗಳ ಮೇಲೆ ತಕ್ಷಣ ಹಣ ನೀಡುವ ಪರಿಕಲ್ಪನೆಯನ್ನು ಪ್ರಾರಂಭಿಸಿದ ಶ್ರೀಸ್ಟಾರ್‌ ಗೋಲ್ಡ್‌ ಕಂಪನಿಯ ವತಿಯಿಂದ ಮಲ್ಲೇಶ್ವರಂ ನಲ್ಲಿ ನಿರ್ಮಿಸಿರುವ ಚಿನ್ನಾಭರಣಗಳ ಮಾರಾಟ ಹಾಗೂ ಚಿನ್ನಾಭರಣಗಳಿಗೆ ತಕ್ಷಣ ಹಣ ನೀಡುವ ಶ್ರೀಸ್ಟಾರ್ ಗೋಲ್ಡ್‌ ಮಾಲ್‌ ಗೆ ಇದೇ ವೇಳೆ ಚಾಲನೆ ನೀಡಲಾಯಿತು.

ಪರಿಭಾವಿತ ಪ್ರದೇಶವನ್ನು ಅರಣ್ಯವನ್ನಾಗಿ ಪರಿವರ್ತಿಸಲು ಯೋಜನೆ ರೂಪಿಸಿ: ಸಚಿವ

ನಂತರ ಮಾತನಾಡಿದ ಸಚಿವರು, ಚಿನ್ನಾಭರಣಗಳ ಮಾರಾಟ ಅಂಗಡಿ ಶ್ರೀ ಸ್ಟಾರ್‌ ಗೋಲ್ಡ್‌ ಮಾಲ್‌ ನ್ನು  ಮಲ್ಲೇಶ್ವರಂ ನಲ್ಲಿ ಪ್ರಾರಂಭ ಮಾಡಿದ್ದು ಉತ್ತಮ ಯೋಜನೆಗಳನ್ನು ನೀಡಲಾಗುತ್ತಿದೆ. ಈ ಅಂಗಡಿ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಅಭಿವೃದ್ದಿ ಹೊಂದಲಿ ಎಂದು ಹಾರೈಸಿದರು.

ಶ್ರೀಸ್ಟಾರ್‌ ಗೋಲ್ಡ್‌ ಕಂಪನಿಯ ಮಾಲೀಕರಾದ ಶ್ರೀಕಾಂತ್‌ ಮಾತನಾಡಿ, 1999 ರಲ್ಲಿ ಕೇವಲ ಲೇವಾದೇವಿಗಾರರು ಕಾರ್ಯನಿರ್ವಹಿಸುತ್ತಿದ್ದ ಸಂಧರ್ಭದಲ್ಲಿ ಜನರು ತಮಗೆ ಅಗತ್ಯವಿರದೇ ಇರುವ ಆಭರಣಗಳನ್ನು ಮಾರಾಟ ಮಾಡಲು ಇನ್ನಿಲ್ಲದ ಅಪಮಾನ, ಸಂಕೋಚ ಹಾಗೂ ಪ್ರಶ್ನೆಗಳನ್ನು ಎದುರಿಸಬೇಕಾಗಿತ್ತು. ಇದಕ್ಕೆ ಪರಿಹಾರ ನೀಡುವ ನಿಟ್ಟಿನಲ್ಲಿ ಪ್ರಾರಂಭಿಸಲಾದ ಕ್ರಾಂತಿಕಾರಿ ಪರಿಕಲ್ಪನೆಯಿಂದ ದೇಶದಲ್ಲೇ ಆಭರಣಗಳಿಗೆ ತಕ್ಷಣ ಹಣ ನೀಡುವ ಮೊದಲ ಕಂಪನಿಯಾಗಿ ಶ್ರೀಸ್ಟಾರ್‌ ಹೆಸರು ಪಡೆದಿದೆ.

ಪಹಣಿ ಪ್ರತಿಗೆ ಆಧಾರ ಕಾರ್ಡ ಜೋಡಣೆ ಕಡ್ಡಾಯ

ಗ್ರಾಹಕರು ತಾವು ಅಡವಿಟ್ಟ ಚಿನ್ನವನ್ನು ಪೂರ್ತಿ ಹಣ ನೀಡದೆ ಬಿಡಿಸಿಕೊಳ್ಳಲು ಆಗುವುದಿಲ್ಲ. ಇದರಿಂದಾಗಿ ಅವರು ತಮ್ಮ ಆಭರಣಗಳು ಇದ್ದರೂ ಇಲ್ಲದ ಹಾಗೆ ಜೀವನ ಮಾಡಬೇಕಾಗುತ್ತದೆ. ಇದಕ್ಕೆ ಪರಿಹಾರ ನೀಡುವ ನಿಟ್ಟಿನಲ್ಲಿ ನಾವು ದೇಶದಲ್ಲೇ ಮೊದಲ ಬಾರಿಗೆ ವಿನೂತನ ಯೋಜನೆಯೊಂದನ್ನು ಜಾರಿಗೊಳಿಸಿದ್ದೇವೆ.

ಮಹಿಳಾ ಸ್ವ-ಸಹಾಯ ಗುಂಪುಗಳ ಬಲವರ್ಧನೆಗೆ ಯೋಜನೆಗಳು ಜಾರಿ: ಶಶಿಕಲಾ ಜೊಲ್ಲೆ

ಜನರು ಅಡವಿಟ್ಟ ಚಿನ್ನವನ್ನು ನಾವು ಬಿಡಿಸಿ ಅದನ್ನು ಅದರ ಮಾಲೀಕರುಗಳೀಗೆ ಬಾಡಿಗೆ ರೂಪದಲ್ಲಿ ನೀಡುತ್ತೇವೆ. ಇದಕ್ಕಾಗಿ ನಾವು ಪಡೆಯುವುದು ಬಹಳ ಕಡಿಮೆ ಬಡ್ಡಿದರವನ್ನು. ಇದಲ್ಲದೆ, ಚಿನ್ನಾಭರಣಗಳಿಗೆ ತಕ್ಷಣ ಹಣ ನೀಡುವುದಲ್ಲದೆ, ಕೊಂಡುಕೊಂಡಂತಹ ಚಿನ್ನಾಭರಣಗಳನ್ನು ಕಡಿಮೆ ವೆಸ್ಟೇಜ್‌ ಹಾಗೂ ಮೇಕಿಂಗ್‌ ಚಾರ್ಜ್‌ ನಲ್ಲಿ ಗ್ರಾಹಕರು ಕೊಂಡುಕೊಳ್ಳಲು ಅವಕಾಶ ನೀಡಲು ಗೊಲ್ಡ್‌ ಮಾಲನ್ನು ಪ್ರಾರಂಭಿಸಿದ್ದೇವೆ ಎಂದು ಹೇಳೀದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 hour ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 hour ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 hour ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

18 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

20 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago