ಬಿಸಿ ಬಿಸಿ ಸುದ್ದಿ

ನೂತನ ತಳಿ ಕಡಲೆ ಬೆಳೆಯ ಕ್ಷೇತ್ರೋತ್ಸವ

ಕಲಬುರಗಿ: ತಾಲೂಕಿನ ಮೇಳಕುಂದಾ (ಬಿ) ನಾಗಣ್ಣ ಕೊಳ್ಳೂರರವರ ಹೊಲದಲ್ಲಿ ಹೊಸ ತಳಿ ಕಡಲೆ ಬಿಜಿಡಿ-೧೦೩ ತಳಿ ಕ್ಷೇತ್ರೋತ್ಸವವನ್ನು ಕೆವಿಕೆ ಕಲಬುರಗಿ ವತಿಯಿಂದ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೆಂಗಳೂರಿನ ಅಟಾರಿ ಪ್ರಧಾನ ವಿಜ್ಞಾನಿ ಹಾಗೂ ನಿಕ್ರಾ ಯೋಜನೆ ಅನುಷ್ಠಾನ ನೋಡಲ್ ವಿಜ್ಞಾನಿಗಳಾದ ಡಾ.ಡಿ.ವಿ.ಶ್ರೀನಿವಾಸ್ ರೆಡ್ಡಿ, ಮಾತನಾಡಿ ಬದಲಾಗುತ್ತಿರುವ ಹವಾಮಾನಕ್ಕೆ ಸೂಕ್ತವಾಗುವಂತೆ ಕಳೆದ ಐದು ವರ್ಷಗಳಿಂದ ಮೇಳಕುಂದಾ (ಬಿ) ಹಳ್ಳಿಯಲ್ಲಿ ಅಧ್ಯಯನ ನಡೆಸಲಾಗಿದೆ. ಮಣ್ಣು ಪರೀಕ್ಷೆ ಆಧಾರ ಭೂಮಿಗೆ ಪೋಷಕಾಂಶ, ದ್ವಿದಳ ಧಾನ್ಯ ಇಳುವರಿ ಬಲಪಡಿಸಲು ಪಲ್ಸ ಹಾಗೂ ಚಿಕ್ ಪಿ ಮ್ಯಾಜಿಕ ಬಳಕೆ ನೂತನ ಬರನಿರೋಧಕ ತಳಿ, ಸೂಕ್ತ ಕೃಷಿ ಯಂತ್ರೋಪಕರಣ ಬಳಕೆ ಮಾಡಿ ರೈತರು ಕೃಷಿ ಚಟುವಟಿಕೆಗಳನ್ನು ಯಶಸ್ವಿಯಾಗಿ ಕೈಗೊಳ್ಳುವಂತೆ ಸಲಹೆ ನೀಡಿದರು.

ಪ್ರಬಲ ಜಾತಿಗಳನ್ನು 2(ಎ) ಸಮುದಾಯಕ್ಕೆ ಸೇರ್ಪಡೆಗೊಳಿಸಬಾರದೆಂದು ಸಿಎಂ ಬಳಿ ನಿಯೋಗ

ಭೂಮಿಗೆ ಹೊಸ ಮಣ್ಣು ಕೆರೆಗೊಡ್ಡು ಮಣ್ಣು ಹಾಕಲಾಗಿ ಪ್ರಮಾಣದ ಮಣ್ಣು ಅಗತ್ಯ ಹಾಗೂ ಮಣ್ಣಿನ ಗುಣಧರ್ಮ ಪರೀಕ್ಷಿಸಿ ಕೆರೆಗೊಡ್ಡು ಮಣ್ಣು ಜಮೀನುಗಳಿಗೆ ಹಾಕಬೇಕು, ಹಳ್ಳಿಯ ಕೆರೆಗಳು ಅಭಿವೃದ್ಧಿ ಪಡಿಸಲು ಗ್ರಾಮ ಪಂಚಾಯತ, ಉದ್ಯೋಗ ಖಾತರಿ ಯೋಜನೆಯಡಿ ಕೈಗೊಂಡ ಕಾರ್ಯಕ್ರಮಗಳನ್ನು ಶ್ಲಾಘಿಸಿದರು.

ಕೆವಿಕೆ ಮುಖ್ಯಸ್ಥರಾದ ಡಾ.ರಾಜು ತೆಗ್ಗೆಳ್ಳಿ, ನಿಕ್ರಾ ಹವಾಮಾನ ಬದಲಾವಣೆಗೆ ಸೂಕ್ತ ತಾಂತ್ರಿಕತೆಗಳನ್ನು ವಿಶ್ಲೇಷಿಸಿದರು. ಪ್ರಾಣಿಶಾಸ್ತ್ರ ವಿಭಾಗದ ವಿಜ್ಞಾನಿ ಡಾ.ಮಂಜುನಾಥ ಪಾಟೀಲ್, ಬಿಸಿಲಿಗೆ ಹೊಂದುಕೊಳ್ಳುವ ಜಾನುವಾರುಗಳು ಹಾಗೂ ಸೂಕ್ತ ಮೇವಿನ ತಳಿಗಳ ಮಾಹಿತಿ ನೀಡಿದರು. ರೈತರಾದ ಶ್ರೀ. ಮಲ್ಲಿನಾಥ ಕೊಳ್ಳೂರು, ಗುರು ಪಾಟೀಲ್, ಮಲ್ಲಣ್ಣ ಗುಡೇದಮಣಿ, ಲಕ್ಷ್ಮಣ, ಎಂ. ಸಂಕೂರ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಪ್ರಬಲ ಜಾತಿಗಳನ್ನು 2(ಎ) ಸಮುದಾಯಕ್ಕೆ ಸೇರ್ಪಡೆಗೊಳಿಸಬಾರದೆಂದು ಸಿಎಂ ಬಳಿ ನಿಯೋಗ

ಗ್ರಾಮದ ಸದಸ್ಯರಾದ ಸಿದ್ದು, ಮಲ್ಲೇಶ ಗೌಡ, ರಮೇಶ ಕೊಲ್ಲೂರ, ರಾಚಯ್ಯ ಸ್ವಾಮಿ, ಬಸವಂತರಾಯ ಉಪಸ್ಥಿತರಿದ್ದರು. ವಿಜ್ಞಾನಿಗಳಾದ ಡಾ.ಜಹೀರ್ ಅಹಮ್ಮದ್ ರವರು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನು ಸ್ವಾಗತ ಕೋರಿದರು, ನಿಕ್ರಾ ಸಹ ಸಂಶೋಧಕರಾದ ಡಾ.ರಾಹುಲ್ ಪಾಟೀಲ್ ಕಾರ್ಯಕ್ರಮದ ನಿರೂಪಣೆ ಮಾಡಿದರು.

ಒಟ್ಟು ೫೮ ಜನ ರೈತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆಗಮಿಸಿದಂತಹ ಅತಿಥಿಗಳಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದ ವಂದನಾರ್ಪಣೆಯನ್ನು ಶ್ರೀ. ನಿರಂಜನ ಧನ್ನಿಯವರಿಂದ ನರವೇರಲ್ಪಟ್ಟಿತ್ತು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

7 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

7 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

7 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

23 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago