ಅಫಜಲಪುರ: ಪಟ್ಟಣದ ಗುರುಭವನದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕ ಘಟಕ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ಶಿಕ್ಷಕ ಮಿತ್ರ ವೆಬ್ ಪೊರ್ಟಲ್( ಮೋಬೈಲ ಆ್ಯಪ್)ನ್ನು ಬಿ.ಇ.ಒ ಚಿತ್ರಶೇಖರ ದೇಗಲಮಡಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಶಿಕ್ಷಕ ಮಿತ್ರದಿಂದ ಶಿಕ್ಷಕರಿಗೆ ಸಿಗಬೇಕಾದ ಸೌಲಭ್ಯಗಳನ್ನು ಸಕಲಾದಲ್ಲಿ ಸಿಗುವ ಮೂಲ ಉದ್ದೇಶವನ್ನಿಟ್ಟುಕೊಂಡು ಈ ಮೊಬೈಲ್ ಆ್ಯಪ್ ಬಿಡುಗಡೆ ಮಾಡಲಾಗಿದೆ ಇದೊಂದು ವಿನೋತನ ಕಾರ್ಯಕ್ರಮವಾಗಿದೆ ಈ ಆ್ಯಪ್ ಬಿಡುಗಡೆ ಕಾರ್ಯಕ್ರಮ ಕಲ್ಬುರ್ಗಿ ಜಿಲ್ಲೆಯಲ್ಲೆ ಅಫಜಲಪುರ ತಾಲೂಕಿನಲ್ಲಿ ಪ್ರಥಮವಾಗಿದೆ ಎಂದು ಸಂತಸ ವ್ಯಕ್ತ ಪಡಿಸಿದ ಅವರು ಶಿಕ್ಷಕರು ಈ ಮೊಬೈಲ್ ಆ್ಯಪ್‌ನ್ನು ತಮ್ಮ ಮೊಬೈಲನಲ್ಲಿ ಡೌನ್‌ಲೋಡ್ ಮಾಡಿಕೊಂಡು ತಾವೂ ಕುಳಿತಲ್ಲೆ ತಮ್ಮ ಸೇವಾ ವಿಷಯಗಳನ್ನು ನೋಡಬಹುದು ಎಂದರು.
ಸುರಪುರ:ಹೊಟ್ಟೆ ನೋವು ತಾಳದೆ ಯುವತಿ ಆತ್ಮಹತ್ಯೆ
ಅಲ್ಲದೇ ಶಿಕ್ಷಕರಿಗೆ ಕಚೇರಿಗೆ ಅಲೆಯವುದನ್ನು ತಪ್ಪಿಸಿ ಅವರ ಮೊಬೈಲನಲ್ಲಿ ಪಾಠ ಬೋಧನೆ ಜೋತೆಗೆ ಕಚೇರಿಯ ಎಲ್ಲಾ ಮಾಹಿತಿಯನ್ನು ನೋಡಲು ಸಾಧ್ಯವಾಗುತ್ತದೆ ಎಂದ ಅವರು ಇದರ ಲಾಭ ಪ್ರತಿಯೊಬ್ಬರು ಶಿಕ್ಷಕರು ಪಡೆದಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಸುಧಾಕರ ನಾಯಕ, ಶಿಕ್ಷಕರ ಸಂಘದ ಅಧ್ಯಕ್ಷ ಜಿಲ್ಲಾ ಖಜಾಂಚಿ ಹೈದರಸಾಬ್ ಚೌಧರಿ, ತಾಲೂಕಾ ಪ್ರಧಾನ ಕಾರ್ಯದರ್ಶಿ ಸಂಗಪ್ಪ ಮ್ಯಾಳೇಸಿ, ಉಪಾಧ್ಯಕ್ಷ ಸಂಜೀವ ಸಿಂದಗಿ, ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಶೋಭರಾಜ ಮ್ಯಾಳೇಶಿ, ಸದಸ್ಯರಾದ ಗುರುಶಾಂತಯ್ಯಾ ಹಿರೇಮಠ, ಮಲ್ಲೇಶಪ್ಪ ಬಿಂಜಗೇರಿ, ಸಂತೋಷ ಚವಾಣ, ಶಿವಾನಂದ ಪೂಜಾರಿ, ಬಾಳಸಾಹೇಬ ಹಳಿಮನಿ, ನಾಗರತ್ನ ಬಳೂರಗಿ, ಮಹಾದೇವಿ ದೇಸಾಯಿ, ಸುನಂದ ಮಠ, ಸಾತಮ್ಮಾ ಪಾಟೀಲ, ಅನ್ನಪೂರ್ಣ ಡಾಂಗೆ ಸೇರಿದಂತೆ ಅನೇಕರಿದ್ದರು. ಕಾರ್ಯಕ್ರಮದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯರಾದ ಮಹೇಶ ಅಂಜುಟಗಿ ನಿರೂಪಣೆಯನ್ನು ನಡಿಸಿಕೊಟ್ಟರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…