ಬಿಸಿ ಬಿಸಿ ಸುದ್ದಿ

ಹಡಪದ ಕ್ಷೌರಿಕ ಸಮಾಜಕ್ಕೆ ರಾಜ್ಯ ಬಜೆಟ್ ನಲ್ಲಿ ಅನ್ಯಾಯ: ಸುಗೂರ

ಕಲಬುರಗಿ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಡಪದ ಕ್ಷೌರಿಕ ಸಮಾಜದ ಪ್ರತ್ಯೇಕ ಅಭಿವೃದ್ಧಿ ನಿಗಮ ಮಂಡಳಿ ಜಾರಿಗೆ ತೆರುವೆ ಎಂದು ಬಜೆಟ್ ಮಂಡಿಸಿದ ಮುಂಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನವರು ಹಡಪದ ಕ್ಷೌರಿಕ ಸಮಾಜವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ, ಎಂದು ಹಡಪದ ಸಮಾಜದ ಕಲಬುರಗಿ ಜಿಲ್ಲಾ ಯೂತ್ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್. ಆರೋಪಿಸಿದರು.

ಹನ್ನೆರಡನೆಯ ಶತಮಾನದ ಬಸವಣ್ಣನವರ ಒಳನಾಡಿ ಸಮಾಜದ ಕೂಗಿಗೆ ಧ್ವನಿಗೂಡಿಸಿ ಬಸವಣ್ಣನವರ ಆಪ್ತಕಾರ್ಯದರ್ಶಿಯಾಗಿದ್ದ ಶ್ರೀ ನಿಜಸುಖಿ ಹಡಪದ ಅಪ್ಪಣ್ಣನವರ ಸಮಾಜಕ್ಕೆ ೨೦೨೧-೨೦೨೨ ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಯಾವುದೇ ಘೋಷಣೆ ಮಾಡದಿರುವುದು ನೋವು ತಂದಿದೆ,.ಹಲವು ಭಾರಿ ಸಿ.ಎಮ್ ಯಡಿಯೂರಪ್ಪ ನವರಿಗೆ ಹಾಗೂ ಕ್ಯಾಬಿನೆಟ್ ಸಚಿವರಿಗೋ, ಹಡಪದ ಕ್ಷೌರಿಕ ಸಮಾಜದ ಬೇಡಿಕೆಗಳನ್ನು ಇಡೇರಿಸುವಂತೆ ಮನವಿ ಪತ್ರ ಸಲ್ಲಿಸಿದರು.

ಸಹ ಯಾವುದೇ ಪ್ರಯೋಜನೆ ಇಲ್ಲ . *ಹಡಪದ ಸಮಾಜದ ಪ್ರತ್ಯೇಕ ಅಭಿವೃದ್ಧಿ ನಿಗಮ ಮಂಡಳಿ ರಚನೆ ಸ್ಥಾಪಿಸುವಂತೆ ಮನವಿ ಮಾಡಿದ್ದರು ಮತ್ತು ಕಲಬುರಗಿ ಜಿಲ್ಲೆಯಲ್ಲಿ ಹಡಪದ ಸಮಾಜದ ಜಿಲ್ಲಾ ಬೃಹತ್ ಸಮಾವೇಶದಲ್ಲಿ ಆಗ ವಿರೋಧ ಪಕ್ಷದ ನಾಯಕರಾಗಿ. ಇದ್ದಾಗ. ಈರಣ್ಣಾ ಸಿ ಹಡಪದ ಸಣ್ಣೂರ ಅವರ ಸಮ್ಮುಖದಲ್ಲಿ. ಯಡಿಯೂರಪ್ಪ ಜಿ ಅವರು ಕಲಬುರಗಿ ಜಿಲ್ಲೆಯ ವೀರಶೈವ ಕಲ್ಯಾಣ ಮಂಟಪ ದಲ್ಲಿ ನನ್ನ ಸರ್ಕಾರ ಅಧಿಕಾರಕ್ಕೆ ಬಂದ ೨೪ ಗಂಟೆಗಳಲ್ಲಿ ಹಡಪದ ಸಮಾಜಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ .ಮತ್ತು ಹಡಪದ ಸಮಾಜವನ್ನು ಎಸ್ಟಿಗೇ ಸೇರ್ಪಡೆ. ಹಾಗೂ ಹಡಪದ ಸಮಾಜವನ್ನು ಪ್ರ ವರ್ಗ ೧-ಕ್ಕೆ ಸೇರಿಸುವೆ. ಹಾಗೊ ನಿಮ್ಮ ಸಮಾಜದ ಈರಣ್ಣಾ ಸಿ.ಹಡಪದ ಸಣ್ಣೂರ ಅವರನ್ನು ನಿಗಮ ಮಂಡಳಿಗೆ ನಾಮನೀರ್ಧೇಶನ ಮಾಡುವೆ. ಎಂದು ಹೇಳಿದ್ದರು.

ಈಗ ಅಧಿಕಾರಕ್ಕೆ ಬಂದರು ಸಹ ಈ ೨೦೨೧ -೨೦೨೨ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಹಡಪದ ಸಮಾಜವನ್ನು ನಿರ್ಲಕ್ಷಿಸಿರುವುದು ,ನಮ್ಮ ಕ್ಷೌರಿಕ ವೃತ್ತಿಯನ್ನು ಮಾಡುವ ಸಮಾಜದ ಜನತೆಗೆ ಅನ್ಯಾಯ ವಾಗಿದೆ*. *ಮೂಲತಃ ಕನ್ನಡಿಗರಿಗೆ ಮನ್ನಣೆ ನೀಡದಿರುವುದು ಈ ಬಜೆಟ್ ನಮಗೆ ನಿರಾಸೆ .ಉಂಟುಮಾಡಿದೆ. ಸಿ.ಎಮ್ ಯಡಿಯೂರಪ್ಪ ನವರು ನುಡಿದಂತೆ ನಡೆಯಲಿಲ್ಲ ಎಂದು ಆರೋಪಿಸಿದರು.

ಈರಣ್ಣಾ ಸಿ. ಹಡಪದ ಸಣ್ಣೂರ ಅವರ ಸಮ್ಮುಖದಲ್ಲಿ ತಮ್ಮ ಸರ್ಕಾರಕ್ಕೆ ಎಚ್ಚರಿಸುವ ಮೂಲಕ ಕಲಬುರಗಿ ಯಲ್ಲಿ ಧೀರ್ಘದಂಡ ನಮಸ್ಕಾರ ಹಾಗೊ ಹತ್ತು ಹಲವು ವಿಭಿನ್ನ. ರೀತಿಯ ಹೋರಾಟ ಮಾಡಿದ್ದರು ತಮ್ಮ ಗಮನಕ್ಕೆ. ಬರಲಿಲ್ವೆ.???* ಹಾಗೊ *ಅಧಿವೇಶನದ ಬಜೆಟ್ ಚರ್ಚೆಯಲ್ಲಿ ಅನೇಕ ಶಾಸಕರು ಸಹ ನಮ್ಮ ಹಡಪದ ಸಮಾಜದ ಹೆಸರು ಪ್ರಸ್ತಾಪ ಮಾಡದ್ದೆ. ಇರುವುದು ಮತ್ತಷ್ಟು ನೋವು ತಂದಿದೆ. ಇವರಿಗೆ ಬರಿ ಎಲೆಕ್ಷನ್ ಬಂದಾಗ ಮಾತ್ರ ಮತಗಳು ಪಡೆಯಲು(ಸೆಳೆಯಲು) ಅಷ್ಟೆ ಹಡಪದ ಕ್ಷೌರಿಕ ಸಮಾಜ ನೆನಪಿಗೆ ಬರುತ್ತೆ. ?? ಈಗ ಈ ಜನ ಪ್ರತಿನಿಧಿಗಳಿಗೆ ಈಗ ಹಡಪದ ಸಮಾಜ ನೆನಪಿಲ್ವೆ?? ಕರ್ನಾಟಕ ರಾಜ್ಯದಲ್ಲಿ ೧೮ ರಿಂದ ೨೦ ಲಕ್ಷ ಜನ ಸಂಖ್ಯೆ ಹಡಪದ ಕ್ಷೌರಿಕ ಸಮಾಜ ಜನರು ಇದ್ದೇವೆ . ಮುಂಬರುವ ಬಸವಕಲ್ಯಾಣ,. ಮಸ್ಕಿ,. ಸಿಂದಗಿ., ಬೆಳಗಾವಿ ಉಪ ಚುನಾವಣೆಯಲ್ಲಿ ಈ ಬಿಜೆಪಿ ಸರ್ಕಾರಕ್ಕೆ .ತಕ್ಕ ಪಾಠ ಕಲ್ಲಿಸುತ್ತೇವೆ. ಎಂದು ಇಡೀ ಹಡಪದ ಸಮುದಾಯದ ಪರವಾಗಿ. ಪತ್ರಿಕೆಯ ಮುಖಾಂತರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಧರ್ಭದಲ್ಲಿ ಹಡಪದ ಸಮಾಜದ ಭಾಂದವರಾದ ಈರಣ್ಣಾ ಸಿ ಹಡಪದ ಸಣ್ಣೂರ, ಬಸವರಾಜ ಹಡಪದ ಸುಗೂರ ಎನ್., ಮಲ್ಲಿಕಾರ್ಜುನ ಹಡಪದ ಸಾವಳಗಿ, ಭಗವಂತ ಸರ ಹೊನ್ನಕಿರಣಗಿ, ರಮೇಶ್ ಹಡಪದ ನೀಲ್ಲೂರ, ಮಹಾತೇಶ ಹಡಪದ ಇಸ್ಲಾಂಪುರೆ, ಶರಣು ರಾಜಾಪುರ, ಸಂತೋಷ ಬಗದುರಿ, ಆನಂದ ಖೇಳಗಿ, ಸುನೀಲ್ ಕುಮಾರ್ ಭಾಗಹಿಪ್ಪರಗಾ, ರುದ್ರಮಣಿ ಬಟಗೇರಾ, ಚಂದ್ರಶೇಖರ ತೊನಸನಹಳ್ಳಿ, ಮಂಜುನಾಥ ಅವರಾಧ (ಬಿ), ಶಿವಶಂಕರ್ ಹಡಪದ ಹುಮನಾಬಾದ, ಬಸವರಾಜ ಹಳ್ಳಿ ಶಹಾಭಾಧ, ತಿಪ್ಪಣ್ಣಾ ಹಡಪದ ಜೇವರ್ಗಿ, ಮಹಾತೇಶ ಹವಳಗಾ ಅಫಜಲಪೂರ, ಶ್ರೀಮಂತ ಹಡಪದ ಮಳಗಿ ಕಾಳಗಿ, ಶಂಕರ ಹಡಪದ ಆಳಂದ, ರಮೇಶ ಹಡಪದ, ಚಿತ್ತಾಪೂರ, ವಿಶ್ವನಾಥ ಹಡಪದ ಊಡಗಿ ಸೇಡಂ, ಮಲ್ಲಿಕಾರ್ಜುನ ಹಡಪದ ಕಮಲಾಪೂರ, ಸಾಬ್ಬಣ್ಣಾ ಹಡಪದ ಯಡ್ರಾಮಿ, ರಮೇಶ ಕೊರವಿ ಚಿಂಚ್ಚೊಳ್ಳಿ, ಕಲಬುರಗಿ ಜಿಲ್ಲಾ ಎಲ್ಲಾ ತಾಲೂಕಿನ ಅಧ್ಯಕ್ಷರು, ತೀವ್ರವಾಗಿ ರಾಜ್ಯ ಬಿಜೆಪಿ ಸರ್ಕಾರ ಮಂಡನೆ ಮಾಡಿದ ಬಜೆಟ್ ಬಗ್ಗೆ ಬೇಸರ ವ್ಯಕ್ತಪಡಿಸಿದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

22 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago