ಬಿಸಿ ಬಿಸಿ ಸುದ್ದಿ

ಅಹೋರಾತ್ರಿ ಅನಿರ್ದಿಷ್ಟಾವಧಿ ಸತ್ಯಾಗ್ರಹ ಸ್ಥಳಕ್ಕೆ ಬಾರದ ಅಧಿಕಾರಿಗಳು: ಆಕ್ರೋಶ

ಆಳಂದ: ಸುಂಟನೂರ ಗ್ರಾಪಂನಲ್ಲಿ ನಡೆದ ಸುಮಾರು ೪೦ ಲಕ್ಷ ರೂ. ಅವ್ಯವಹಾರ ತನಿಖೆಗೆ ಹಾಗೂ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಕಳೆದ ನಾಲ್ಕು ದಿನಗಳಿಂದಲೂ ಜಯ ಕರ್ನಾಟಕ ಸಂಘಟನೆಯ ಗ್ರಾಮ ಶಾಖೆಯ ಕಾರ್ಯಕರ್ತರು ಗ್ರಾಪಂ ಕಚೇರಿಯ ಮುಂದೆ ಕೈಗೊಂಡ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಶುಕ್ರವಾರ ೪ನೇ ದಿನಕ್ಕೆ ಕಾಲಿಟ್ಟಿದೆ. ಅಲ್ಲದೆ, ಏಳು ಮಂದಿ ಉಪವಾಸ ಕೈಗೊಂಡಿದ್ದಾರೆ.

ಸತ್ಯಾಗ್ರಹ ಸ್ಥಳಕ್ಕೆ ಮೇಲಾಧಿಕಾರಿಗಳು ಭೇಟಿ ನೀಡದ ಹಿನ್ನೆಲೆಯಲ್ಲಿ ಗುರುವಾರ ಉಪವಾಸ ಸತ್ಯಾಗ್ರ ಕೈಗೊಳ್ಳುವ ಮೂಲಕ ಸಂಘಟನೆಯ ತಾಲೂಕು ಅಧ್ಯಕ್ಷ ಬಸವರಾಜ ಎಸ್. ಕೋರಳ್ಳಿ ಅವರ ನೇತೃತ್ವದಲ್ಲಿ ಕಾರ್ಯಕರ್ತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹಗಲು ರಾತ್ರಿ ಸೇರಿ ಆರಂಭಿಸಿದ ಸತ್ಯಾಗ್ರಹದಲ್ಲಿ ಗ್ರಾಮಸ್ಥರು ಒಳಗೊಂಡು ಸಂಘಟನೆಯ ಕಾರ್ಯಕರ್ತರು ಪಾಲ್ಗೊಂಡು ಬೇಡಿಕೆಗೆ ಸ್ಪಂದಿಸದೆ ಇರುವ ಅಧಿಕಾರಿಗಳು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ ಅವರು, ಸ್ಥಳಕ್ಕೆ ಬಂದು ವಾರದಲ್ಲಿ ಬೇಡಿಕೆಗೆ ಸ್ಪಂದಿಸದೆ ಹೋದರೆ ಉಗ್ರ ಸ್ವರೂಪದ ಹೋರಾಟ ಕೈಗೊಳ್ಳಲಾಗುವುದು ಎಂದು ಬಸವರಾಜ ಕೋರಳ್ಳಿ ಅವರು ಎಚ್ಚರಿಸಿದರು. ಹಿಂದೆ ಮೌಖಿಕ, ಲಿಖಿತ ಹಾಗೂ ಸತ್ಯಾಗ್ರಹ ಮೂಲಕ ಬೇಡಿಕೆಗೆ ಆಗ್ರಹಿಸಿದಾಗ ಕ್ರಮ ಕೈಗೊಳ್ಳಲಾಗುವುದು ಎಂದು ತಾಪಂ ಇಒ ಅವರು ಭರವಸೆಯಂತೆ ನಡೆದುಕೊಳ್ಳದ ಹಿನ್ನೆಲೆಯಲ್ಲಿ ಹೋರಾಟ ಕೈಗೊಳ್ಳಲಾಗಿದೆ ಎಂದರು.

ರಾಬರ್ಟ್ ಚಿತ್ರ ಬಿಡುಗಡೆಗೆ ಸುರಪುರದಲ್ಲಿ ದರ್ಶನ್ ಅಭಿಮಾನಿಗಳ ಸಂಭ್ರಮಾಚರಣೆ

ಗ್ರಾಮ ಶಾಖೆಯ ಗೌರವ ಅಧ್ಯಕ್ಷ ಜನಾರ್ಧನ ಎಂ. ದೇಶಪಾಂಡೆ ಮಾತನಾಡಿ, ಗ್ರಾಪಂಗೆ ವಿವಿಧ ಮೂಲಗಳಿಂದ ಬಂದ ಅನುದಾನದ ದುರ್ಬಳಕೆ ನಡೆದ ಬಗ್ಗೆ ಹಲವು ಬಾರಿ ಮೇಲಾಧಿಕಾರಿಗಳಿಗೆ ದೂರಿದರು ಸಹ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಆಡಳಿತ ವಿರುದ್ಧ ನಾಚಿಕೆ ಪಡುವಂತಾಗಿದೆ. ಗ್ರಾಮದಿಂದ ದರ್ಗಾದವರೆಗೆ ಕೈಗೊಂಡ ರಸ್ತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದಲ್ಲಿ ರಸ್ತೆ ಉತ್ತಮವಾಗಿ ಕೈಗೊಳ್ಳಲಾಗಿದೆ. ಆದರೆ ಲೋಕೋಪಯೋಗಿ ಇಲಾಖೆಯಿಂದ ೧.೯ಕಿ.ಮೀ ರಸ್ತೆ ೧.೯೦ ಲಕ್ಷ ರೂ ವೆಚ್ಚದ ಕಾಮಗಾರಿ ಮಾತ್ರ ಕ್ರಿಯಾ ಯೋಜನೆಯಂತೆ ಕೈಗೊಳ್ಳುತ್ತಿಲ್ಲ. ದೂರಿದರು ಮೇಲಾಧಿಕಾರಿಗಳು ಈ ಕುರಿತು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಖಾಸೀಂ ಮುಲ್ಲಾ ಅವರು ಮಾತನಾಡಿ, ಗ್ರಾಪಂನವರು ನೀರು ಸರಬರಾಜು ಪಂಪಸೆಟ್, ಪೈಪ್ ಮಾರಿಕೊಂಡಿದ್ದಾರೆ. ಶೇ ೩೦ರಷ್ಟು ಕೈಗೊಂಡ ಸಿಮೆಂಟ್ ರಸ್ತೆಯ ಮಧ್ಯೆಯೇ ಅವೈಜ್ಞಾನಿಕ ಚರಂಡಿ ನಿರ್ಮಿಸಿದ್ದಾರೆ. ಇನ್ನೂ ಶೇ ೭೦ರಷ್ಟು ಕಾಮಗಾರಿ ಬಾಕಿಯಿಟ್ಟಿದ್ದಾರೆ ಎಂದು ಆಕ್ಷೇಪಿಸಿದರು.

ಗುರುವಾರ ಸಂಘಟನೆಯ ತಾಲೂಕು ಬಸವರಾಜ ಕೋರಳ್ಳಿ, ಗ್ರಾಮ ಶಾಖೆಯ ಗೌರವ ಅಧ್ಯಕ್ಷ ಜನಾರ್ಧನ ಎಂ. ದೇಶಪಾಂಡೆ, ವಿಠ್ಠಲ ಗುಂಡದ, ನೀಲಕಂಠ ಶೇರಿಕಾರ, ಅರುಣಕುಮಾರ ನ್ಯಾಮನ್, ಅಮರೇಶ ಕುಂಬಾರ, ಶರಣು ಪಾಟೀಲ ಕೋಡಲಹಂಗರಗಾ ಅವರು ಉಪವಾಸ ಕೈಗೊಂಡು ಆಡಳಿತಕ್ಕೆ ಬಿಸಿಮುಟ್ಟಿಸಿದರು.

ಹಡಪದ ಕ್ಷೌರಿಕ ಸಮಾಜಕ್ಕೆ ರಾಜ್ಯ ಬಜೆಟ್ ನಲ್ಲಿ ಅನ್ಯಾಯ: ಸುಗೂರ

ಗ್ರಾಪಂನಿಂದಾದ ಅವ್ಯವಹಾರದ ಸಮಗ್ರ ತನಿಖೆ ಆಗಬೇಕು. ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಿ ಲೂಟಿಯಾದ ಹಣವನ್ನು ವಸೂಲಿ ಆಗಬೇಕು. ಸ್ಥಳಕ್ಕೆ ಜಿಪಂ ಸಿಇಒ ಭೇಟಿ ನೀಡಿ ಸೂಕ್ತ ಭರವಸೆ ನೀಡಿದರೆ ಮಾತ್ರ ಸತ್ಯಾಗ್ರಹ ಹಿಂದಕ್ಕೆ ಪಡೆಯಲಾಗುವುದು ಎಂದರು.
ಮುಖಂಡರಾದ ಅಮರೇಶ ಎಸ್. ಕುಂಬಾರ, ಬಾಬುರಾವ್ ಎಸ್. ಚಿಂಚೋಳಿ, ಶರಣಬಸಪ್ಪ ಎಲ್. ದಣ್ಣೂರ, ಶಮೀರಪಾಶಾ ಬಿ. ಆಳಂದ, ಈರಣ್ಣಾ ಬಿ. ಸುತಾರ, ಶ್ರೀಮಂತ ಎಸ್. ನಾಯಿಕೊಡಿ, ಶರಣಪ್ಪ ಎ. ನ್ಯಾಮನ್, ಖಾಸೀಂ ಎಂ. ಮುಲ್ಲಾ, ಗುರಪ್ಪ ವಗ್ಗನ್, ಕುಪೇಂದ್ರ ಎನ್. ಮೇಲಿನಕೇರಿ, ನೀಲಕಂಠ ಎ. ಶೇರಿಕಾರ, ಅಪ್ಪರಾಯ ನಾಯಿಕೋಡಿ, ಶರಣಬಸಪ್ಪ ಪಾಣೆಗಾಂವ, ವಿಠ್ಠಲ ಬಿ. ಮರಾಠೆಶ, ಶಶಿಕಾಂತ ಡಿ. ಖಾನಾಪೂರ, ಶಿರಾಜ ಜಮಾದಾರ, ಶಿರಾವರಾಜ ಹಡಪದ, ಬಾಬುರಾವ್ ಪಾಣೆಗಾಂವ, ರಾಜೇಂದ್ರ ಮೇಲಿನಕೇರಿ ಸೇರಿ ಮತ್ತಿತರು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.

emedialine

Recent Posts

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

3 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

3 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

5 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

5 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

5 hours ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

5 hours ago