ಕಲಬುರಗಿ: ಸಹಕಾರತ್ವದ ಮೇಲೆ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿರುವ ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘವು ತನ್ನ ೧೪ನೆಯ ವರ್ಷದಲ್ಲಿ ಕಾಲಿರಿಸಿದೆ. ಕನ್ನಡ ನಾಡು ಪ್ರಕಾಶದ ೨೦೨೦ರ ಅವಧಿಯ ಆರು ಕೃತಿಗಳ ಲೋಕಾರ್ಪಣೆ ಹಾಗೂ ೨೦೧೯ರ ಪುಸ್ತಕಗಳ ಪ್ರಶಸ್ತಿ ಮತ್ತು ಜೀವಮಾನದ ಸಾಧನೆಗಾಗಿ ನೀಡುವ ಕನ್ನಡ ನಾಡು ಸಾಹಿತ್ಯ ಶ್ರೀ ಈ ಪ್ರಶಸ್ತಿ ಪ್ರದಾನ ಸಮಾರಂಭವು ಮಾರ್ಚ ೧೪, ರವಿವಾರ ಮುಂಜಾನೆ ೧೦ ಗಂಟೆಗೆ ಐವಾನ ಶಾಹಿರಸ್ತೆಯಲ್ಲಿರುವಶ್ರೀಮತಿ ವ್ಹಿ.ಜಿ. ಮಹಿಳಾ ಕಾಲೇಜಿನಲ್ಲಿಏರ್ಪಡಿಸಲಾಗಿದೆ.
ಕಾರ್ಯಕ್ರಮದ ಉದ್ಘಾಟನೆ ಶಾಸಕರು ಮತ್ತು ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿ ಅಧ್ಯಕ್ಷರಾಗಿರುವ ದತ್ತಾತ್ರೇಯ ಪಾಟೀಲ ರೇವೂರ ಅವರು ಉದ್ಘಾಟಿಸಲಿದ್ದು ,ಮುಖ್ಯ ಅತಿಥಿಗಳಾಗಿ ಕಲಬುರಗಿ ವಿಶ್ವ ವಿದ್ಯಾಲಯದ ಕುಲಪತಿಗಳಾದ ಡಾ. ದಯಾನಂದ ಅಗಸರ ಅವರು ಆಗಮಿಸುವರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವ್ಹಿ.ವಸಂತರಾವ ಮತ್ತು ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರಾಗಿರುವ ಡಾ. ಸತೀಶ ಕುಮಾರ ಹೊಸಮನಿಯವರು ಕನ್ನಡ ನಾಡು ಪ್ರಕಾಶನದ ಆರು ಗ್ರಂಥಗಳು ಲೋಕಾರ್ಪಣೆ ಮಾಡುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಪ್ಪಾರಾವ್ ಅಕ್ಕೋಣೆವಹಿಸುವರು. ಉಪಾಧ್ಯಕ್ಷರಾದ ಡಾ. ಸ್ವಾಮೀರಾವ್ ಕುಲಕರ್ಣಿ ಅವರು ಉಪಸ್ಥಿತರಿರುವರು.
ಲೋಕಾರ್ಪಣೆಯಾಗಲಿರುವ ಪುಸ್ತಕ: ಸಿದ್ದು ಯಾಪಲಪರವಿ ಅವರಡೋಂಟ್ ಬಿ ಹ್ಯಾಪಿ, ಶ್ರೀನಿವಾಸ ಜಾಲವಾದಿಯವರ, ಮಿಸ್ಸಳ ಭಾಜಿ ಹಾಗೂ ಇತರ ಲಲಿತ ಪ್ರಬಂಧಗಳು, ಡಾ. ಸೋಮನಾಥಯಾಳವಾರ ಅವರ ಜನಪದರುಕಂಡ ಶರಣರು, ಡಾ. ಗುರುಲಿಂಗಪ್ಪಾಧಭಾಲೆಯವರ ಚಿಂತನ -ಸಿಂಚನ, ಡಾ.ಸುರೇಶ ಜಾಧವ ಅವರ ಹರಿದಾಸ ಸಿರಿದೀಪ್ತಿ: ಸಿ.ಎಸ್.ಆನಂದರ ಸಂಪ್ರೀತಿ.
ಆರೋಗ್ಯವಾಗಿರಲು ರೋಗನಿರೋಧಕ ಶಕ್ತಿ ಅಗತ್ಯ: ಡಾ. ಮಹ್ಮದ್ ಮತೀನ್
ಇದೇ ಸಂದರ್ಭದಲ್ಲಿ ೨೦೧೯ನೆಯ ಅವಧಿಯಲ್ಲಿ ಪ್ರಕಟಣೆಗೊಂಡ ಕಲ್ಯಾಣ ಕರ್ನಾಟಕ ಪ್ರದೇಶದ ಲೇಖಕರ ಉತ್ತಮ ಗ್ರಂಥ ಪ್ರಶಸ್ತಿ ಪ್ರದಾನದಲ್ಲಿ ಮಹಿಳಾ ಸಾಹಿತ್ಯ ಪುಸ್ತಕ ಪ್ರಶಸ್ತಿಗೆ-ಡಾ. ಶಕುಂತ ಲಾದುರ್ಗಿಯವರ ಮಹಿಳಾ ಸಾಹಿತ್ಯ ಮತ್ತು ಸಂವೇದನೆ,ಕಾವ್ಯಕೃತಿ – ಭೀಮರಾಯ ಹೇಮನೂರರ ಮುಳ್ಳುಚೆಲ್ಲಿದ ಹಾದಿ,ಡಾ.ಎಚ್.ಟಿ. ಪೋತೆಯವರ ಮಾದನಕರೆಂಟಕತಂತ್ರ ಕಥಾ ಸಂಕಲನ ವಿಭಾಗದಲ್ಲಿ, ಶರಣಗೌಡ ಪಾಟೀಲ ತಿಳಗೂಳರ ಕಾಳು ಕಟ್ಟದ ಕಣ್ಣಿರು ಕಾದಂಬರಿ ಕ್ಷೇತ್ರದಲ್ಲಿ ,ಮತ್ತು ಮುನಿಯಪ್ಪ ನಾಗೋಲಿ ದೇವದುರ್ಗ ಅವರ ಸಾಹಿತ್ಯದೊಳಗಣ ಚಿಗುರು ಸಂಕೀರ್ಣ ವಿಭಾಗದಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿವೆ ನಗದು ೫೦೦೦ ರೂ ಗಳೊಂದಿಗೆ ಪ್ರಶಸ್ತಿ ಪತ್ರ ಹಾಗೂ ಸನ್ಮಾನ ಸಂಸ್ಥೆಯು ಕಲ್ಯಾಣ ಕರ್ನಾಟಕದವರಿಗೆ ನೀಡುವಜೀವಮಾನದ ಸಾಧನೆಯ ಕನ್ನಡ ನಾಡು ಸಾಹಿತ್ಯ ಶ್ರೀ ಪ್ರಶಸ್ತಿಯನ್ನು ಸುರಪುರದ ಹಿರಿಯ ಸಂಶೋಧಕರಾಗಿರುವ ಸೀತಾರಾಮ ಜಾಗಿರದಾರ ಅವರು ಆಯ್ಕೆಯಾಗಿದ್ದು ಇವರಿಗೆ ೧೦ ಸಾವಿರ ರೂ.ಗಳು ನಗದು ಪ್ರಶಸ್ತಿ ಪತ್ರ ಸನ್ಮಾನಗೌರವ ನೀಡಲಾಗುವುದು.
ಈ ೧೩ ವರ್ಷಗಳಲ್ಲಿ ಕನ್ನಡನಾಡು ಸಂಘವು ೧೨೬ ಪುಸ್ತಕಗಳನ್ನು ಪ್ರಕಟಿಸಿದರೆ, ಕಲ್ಯಾಣಕ ರ್ನಾಟಕಪ್ರ್ರ ದೇಶದ ೪೦ ಲೇಖಕರಿಗೆ ಉತ್ತಮ ಗ್ರಂಥ ಪ್ರಶಸ್ತಿಯನ್ನು ಹಾಗೂ ಎಂಟು ಹಿರಿಯ ಲೇಖಕರಿಗೆ ಜೀವಮಾನ ಸಾಧನೆಯ ಸಾಹಿತ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಮಕ್ಕಳು, ಯುವಜನಾಂಗದಲ್ಲಿ ಓದುವ ಅಭಿರುಚಿಗಾಗಿ ಓದೋಣ ಪುಸ್ತಕ ಬೆಳೆಸೋಣ ಮಸ್ತಕ ಮತ್ತು ಪುಸ್ತಕ ವಿಮರ್ಶೆಯ ಆಸಕ್ತಿಗಾಗಿ ಮಾಸಿಕ ಪುಸ್ತಕ ಪರಿಚಯ ಯೋಜನೆಗಳು ಅತ್ಯಂತ ಜನಪ್ರಿಯ ಮತ್ತು ಫಲಪ್ರದವಾಗಿವೆ.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…