ಕಲಬುರಗಿ: ನಗರದ ಕನ್ನಡ ಭವನದಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಜನವಾದಿ – 40 ವರ್ಷಾಚರಣೆಯಲ್ಲಿ ಕಲಬುರಗಿ ಜನವಾದಿಯ ಸಂಸ್ಥಾಪನಾ ಸದಸ್ಯರಾದ ಹಿರಿಯ ಸಂಗಾತಿ ಡಾ.ಕೆ ಷರೀಫ ಇವರು ‘ಹಿಂದಣ ಹೆಜ್ಜೆಯ ಅರಿವಿನ ವಿಸ್ತರಣೆ’ ಯ ಭಾಗವಾಗಿ ಮಾತನಾಡುತ್ತ, ‘ದೇಶದಲ್ಲಿಯೇ ಒಂದು ಕೋಟಿಗೂ ಹೆಚ್ಚು ಸದಸ್ಯತ್ವ ಇರುವ ಜನವಾದಿ ಮಹಿಳಾ ಸಂಘಟನೆಗೆ ಈಗ ನಲವತ್ತರ ಸಂಭ್ರಮ ಕಾರ್ಯಕ್ರಮ ಜರುಗಿತು.
ಶಾಸನ ಸಂಸತ್ತಿನಲ್ಲಿ ಮಹಿಳಾ ಮೀಸಲಾತಿಗಾಗಿ, ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಾಗಿ ಕಾನೂನು ರಚನೆಗಾಗಿ, ಹೆಣ್ಣು ಭ್ರೂಣ ಹತ್ಯೆ ತಡೆಗಾಗಿ, ಜಾತಿ ಹೆಸರಿನ ದೌರ್ಜನ್ಯ ತಡೆಗಾಗಿ, ಕೋಮು ಸೌಹಾರ್ದತೆಗಾಗಿ ಜನವಾದಿ ನಿರಂತರ ಶ್ರಮಿಸುತ ಬಂದಿದೆ. ಈಗಿನ ಪ್ರಭುತ್ವವು ನ್ಯಾಯಕ್ಕಾಗಿ ಹೋರಾಟ ಮಾಡಿದರೆ ದೇಶದ್ರೋಹದ ಪಟ್ಟ ಕಟ್ಟುತಿದೆ. ಆದರೆ ಮಹಿಳೆಯರು ಪ್ರಜಾಪ್ರಭುತ್ವ ಉಳಿವಿಗಾಗಿ ನಿರ್ಭಯದ ಹಾದಿ ಸವೆಸಿದ್ದಾಳೆ. ನಲವತ್ತು ವರ್ಷಗಳ ಹಿಂದಿನಿಂದಲೇ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ನನಗೆ ಜನವಾದಿಯು ಹೋರಾಡುವ ಧೈರ್ಯ, ಘನತೆಯ ಬದುಕಿಗಾಗಿ ಜಾಗೃತ ಹೆಜ್ಜೆ ಹಾಕಲು ಕಲಿಸಿದೆ. ದೇಶದ ಸಮಸ್ತ ಮಹಿಳೆಯರ ಸಂಕಟಗಳ ಪರಿಹಾರಕ್ಕಾಗಿ ಸಂಘಟನೆ ಕೆಲಸ ಮಾಡುತಿದೆ. ಈ ದಿನಮಾನಗಳು ಬಹಳ ಆತಂಕ ತಲ್ಲಣದ ದಿನಗಳಾಗಿವೆ. ಆದ್ದರಿಂದಲೇ ಮಹಿಳೆ ಹೆಚ್ಚ್ಹೆಚ್ಚು ಸಂಘಟಿತಳಾಗಬೇಕು’ ಎಂದು ಕರೆ ಕೊಟ್ಟರು.
84 ವರ್ಷ ವಯಸ್ಸಿನ ಹಿರಿಯ ಸಂಗಾತಿ ಮೆಹೆಮುದಾ ಬೇಗಂ ತಮ್ಮ ಕಾಲದ ಹಿಂದಿನ ಹೋರಾಟದ ನೆನಪುಗಳನ್ನು ಹಂಚಿಕೊಂಡರು. ಜನತೆಯ ಕಡೆಗೆ ಧೈರ್ಯದಿಂದ ಮುನ್ನುಗ್ಗಿ. ಧನದ ಕಡೆಗೆ ಬೇಡ. ದುಡಿಯುವ ಜನರ ನಿರ್ಭಯದ ಹೋರಾಟ ಮತ್ತು ಐಕ್ಯತೆಯಲ್ಲಿಯೇ ನ್ಯಾಯದ ಬೀಜಗಳಿವೆ ಎಂದು ಹೇಳಿದರು.
ಅತಿಥಿಯಾಗಿ ಆಗಮಿಸಿದ ಡಾ.ಶಾಂತಾ ಅಷ್ಟಗಿಯವರು ಮಾತನಾಡುತ್ತ, ‘ಮಹಿಳಾ ಸಮಾನತೆ ಎಂಬುದೇ ನೈಜ ಅಭಿವೃದ್ದಿಯ ಮಾನದಂಡವಾಗಿದೆ. ಸಬಲೀಕರಣ ಎಂಬುದೇ ಮಹಿಳಾ ವಿರೋಧಿ ಶಬ್ದವಾಗಿದೆ. ಪುರುಷನಿಗಿಂತಲೂ ಮೂರು ಪಟ್ಟು ಶ್ರಮ ಮಾಡುವ ದುಡಿಮೆಗೈಯುವ ಮಹಿಳೆ ಅಬಲೆ ಹೇಗಾಗುವಳು? ಗರ್ಭಾಷಯ, ಹಾಲೂಡಿಸುವಿಕೆ ನಿಸರ್ಗ ಕೊಟ್ಟ ಕೊಡುಗೆಯಾಗಿದೆ. ಅದು ಸ್ತ್ರೀಯ ಶಕ್ತಿ. ಅವಳನ್ನು ದುರ್ಬಲಳೆಂದು ಬಿಂಬಿಸುವ ಪುರುಷ ರಾಜಕಾರಣದ ಹಿಂದೆ ಆರ್ಥಿಕ ಕೇಂದ್ರಿಕರಣ ಸಂಚು ಅಡಗಿದೆ’ ಎಂದು ಹೇಳಿತ ‘ಜನವಾದಿಯು ಕಲಬುರಗಿಯಲ್ಲಿ ವಿವಿಧ ಪರಿಣಾಮಕಾರಿ ಅಭಿಯಾನ ಆಂದೋಲನ ಬೀದಿ ನಾಟಕ, ಬಸ್ಸುಗಳಲ್ಲಿ ಮಹಿಳಾ ಸದಥಾನದ ಮೀಸಲಾತಿಗಾಗಿ ಮುಂತಾದ ವೈವಿಧ್ಯಮಯ ಚಟುವಟಿಕೆ ನಡೆಸಿದೆ. ನಾವೆಲ್ಲ ಜನವಾದಿಯಲ್ಲಿ ನಿರಂತರ ತೊಡಗಿಸಿಕೊಂಡಿರುವುದರಿಂದಲೇ ಬದುಕಿನ ಸಂಕಟಗಳನ್ನು ಎದುರಿಸಿ ತಲೆಯೆತ್ತಿ ಬದುಕಲು ಸಾಧ್ಯವಾಗಿದೆ. ನಮಗೆ ಹೆಮ್ಮೆ ಇದೆ ಜನವಾದಿಯಲ್ಲಿರುವುದಕ್ಕೆ ಎಂದು ಹೇಳಿದರು
ವೇದಿಕೆಯ ಮೇಲಿಂದಲೇ ಸಾಮೂಹಿಕ ಸದಸ್ಯತ್ವ ಪಡೆದು ಸದಸ್ಯತ್ವದ ಆಂದೋಲನಕ್ಕೆ ಚಾಲನೆ ಮಾಡಿದರು.
ರೈತರ ಆಂದೋಲನವು ಜನತೆಯ ಆಂದೋಲನವಾಗಿದೆ. ರೈತ ಮಹಿಳೆಯು ಕೃಷಿಯ 75% ದಿಂದ 84% ದಷ್ಟು ಕೆಲಸ ಮಾಡಿಯೂ ಅವಳನ್ನು ರೈತಮಹಿಳೆ ಎಂದು ಪರಿಗಣಿಸುತ್ತಿಲ್ಲ. ಜನವಾದಿ ಮಹಿಳಾ ಸಂಘಟನೆಯು ರೈತರ ಆಂದೋಲನದಲ್ಲಿ ಸಂಪೂರ್ಣ ತೊಡಗಿಕೊಂಡಿದೆ. ಇದು ಎರಡನೆ ಸ್ವತಂತ್ರ್ಯ ಚಳುವಳಿಯಾಗಿದೆ. ಕೇಂದ್ರ ಸರಕಾರವು ಸಂವಿಧಾನವನ್ನು ನಾಶ ಮಾಡಿ ಮನುಸ್ಮೃತಿ ಹೇರಲು ಹೊರಟಿದೆ. ಮತ್ತು ದೇಶದ ಸಂಪತ್ತನ್ನು ಕಾರ್ಪೋರೇಟ್ ಗಳ ಕೈವಶ ಮಾಡಲು ಹೊರಟಿದೆ. ಇದರ ನೇರ ದುಷ್ಪರಿಣಾಮಕ್ಕೆ ಮಹಿಳೆ ಬಲಿಯಾಗುವಳು. ಆದ್ದರಿಂದ ಮಹಿಳಾ ಲೋಕವು ಇಂದು ಸಂವಿಧಾನ ಸಂರಕ್ಷಣೆಗಾಗಿಯೂ ಆಂದೋಲನದಲ್ಲಿ ಧುಮುಕಬೇಕಿದೆ. ನಿರುದ್ಯೋಗ ಸೃಷ್ಟಿಸುತ್ತಿದೆ ಪ್ರಭುತ್ವ. ಉದ್ಯೋಗದ ಮೂಲಭೂತ ಹಕ್ಕಿಗಾಗಿ ಹೋರಾಡಬೇಕಿದೆ. ಉದ್ಯೋಗದ ಖಾತ್ರಿಯನ್ನು ನಗರಕ್ಕೂ ವಿಸ್ತರಿಸಬೇಕು ಎಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯದ ಉಪಾಧ್ಯಕ್ಷೆ ಮತ್ತು ಜನವಾದಿ 40 ವರ್ಷಾಚರಣೆ – ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕೆ ನೀಲಾ ಹೇಳಿದರು.
ಕಾರ್ಯಕ್ರಮದಲ್ಲಿ ರೈತರ ಆಂದೋಲನಕ್ಕೆ ಬೆಂಬಲಿಸಿ ಕಾವ್ಯದ ಅಭಿವ್ಯಕ್ತಿ ಪ್ರಕಟಿಸಿದ ‘ಹೊನ್ನಾರು ಒಕ್ಕಲು’ ಕವನ ಸಂಕಲನ (ಕೆ ಷರೀಫ ಮತ್ತು ಯಮುನಾ ಗಾಂವ್ಕರ್ ಸಂಪಾದನೆ) ಹಾಗೂ ನವೀನಕುಮಾರ ದೆಹಲಿಯಲ್ಲಿ ರೈತ ಹೋರಾಟದಲ್ಲಿ ಭಾಗವಹಿಸಿ ಬರೆದ ಅನಿಭವ ಬರಹ ಪುಸ್ತಿಕೆ ‘ಕದನ ಕಣ’ ಬಿಡುಗಡೆ ಮಾಡಲಾಯಿತು.
ಲವಿತ್ರ ಮತ್ತು ಮಹಾಲಕ್ಷ್ಮಿ ಕ್ರಾಂತಿ ಗೀತೆ ಹಾಡಿದರ.
ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಡಾ ಮೀನಾಕ್ಷಿ’ ಬಾಳಿ ಇವರು ‘ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ ಮಹಿಳೆಯರು ಮತ್ತು ಶ್ರಮಿಕ ವರ್ಗದಲ್ಲಿ ನಿರಂತರ ದುಡಿಮೆಗೈದ ಮಹಿಳೆಯರು ಮಹಿಳಾ ಅಸ್ಮಿತೆಯ ಪ್ರಶ್ನೆಗಳಿಗಾಗಿ ಸರ್ವ ಸಮಾನತೆಗಾಗಿ ಜನವಾದಿ ಮಹಿಳಾ ಸಂಘಟನೆ ಕಟ್ಟಿದರು. ಸ್ವತಂತ್ರ ಪೂರ್ವದಲ್ಲಿಯೂ ನಂತರವೂ ಮಹಿಳೆಯರು ಸಂಘಟಿತರಾಗಿ ಶೋಷಣೆ ಮುಕ್ತ ನಾಡಿಗಾಗಿ ತೊಡಗಿಸಿಕೊಂಡಿದ್ದಾರೆ. ಸೌಹಾರ್ದ ತೆಗಾಗಿ ಭಾವೈಕ್ಯ ತೆಗಾಗಿ ಮಹಿಳಾ ಚಳುವಳಿ ಶ್ರಮಿಸಿದ. ಆಳುವ ವರ್ಗದ ದೌರ್ಜನ್ಯಕ್ಕೆ ಎದುರಾಗಿ ನಡೆದುಬಂದ ಭಾರತದ ಜನವಾದಿ ಮಹಿಳಾ ಚಳುವಳಿಗೆ ನಲವತ್ತರ ವಯಸ್ಸು. ನಡೆಯಬೇಕಾದ ದಾರಿ ಇದ್ದೇ ಇದೆ. ಐಕ್ಯತೆಯಿಂದ ಸರ್ವಾಧಿಕಾರವನ್ನು ಹಿಮ್ಮೆಟ್ಟಿಸಲು ಹೋರಾಡಲೇಬೇಕಿದೆ. ಎಂದು ಹೇಳಿದರು.
ನಂದಾದೇವಿ ಮಂಗೊಂಡಿ ಕಾರ್ಯಕ್ರಮ ನಿರೂಪಿಸಿದರು. ಚಂದಮ್ಮ ಗೋಳಾ ಸ್ವಾಗತಿಸಿದರು. ಜಗದೇವಿ ನೂಲಕರ್ ವಂದನಾರ್ಪಣೆ ಮಾಡಿದರು. ಮಹಾದೇವಿ ಸಜ್ಜನ್, ಪದ್ಮಿನಿ ಕಿರಣಗಿ, ಗೋದಾವರಿ ಹುಡಗಿ ಮಾತನಾಡಿದರು.
ಕಲಬುರಗಿಯ ಸಂಸ್ಥಾಪನಾ ಸದಸ್ಯರಾದ ಡಾ.ಕೆ ಷರೀಫ, ಮೆಹಮುದಾ ಬೇಗಂ, ಪದ್ಮಿನಿ ಕಿರಣಗಿ, ಮಹಾದೇವಿ ಸಜ್ಜನ್, ರುಕ್ಮಿಣಿ, ಭಾರತಿ ಕಾಂಬಳೆ ಇವರನ್ನು ಗೌರವಿಸಿ ಸನ್ಮಾನ ಮಾಡಲಾಯಿತು. ಕೃಷಿ ಕೂಲಿಕಾರ್ಮಿಕ ಸಂಘಟನೆ ರಾಜ್ಯ ಮುಖಂಡರಾದ ಮಲ್ಲಮ್ಮ ಕೋಡ್ಲಾ, ಗ್ರಾಮ ಪಂಚಾಯತಿ ಸದಸ್ಯರಾಗಿ ಆಯ್ಕೆಯಾಗಿರುವ ಆಳಂದ ತಾಲ್ಲೂಕಿನ ಜನವಾದಿಯ ಕಾರ್ಯದರ್ಶಿ ಮಹಾನಂದಾ ತುಕ್ಕಾಣಿ ಇವರನ್ನು ಸನ್ಮಾನಿಸಲಾಯಿತು. ಹಾಗೆಯೇ ಮಹಿಳಾ ಚಳುವಳಿಯ ನಾಯಕಿಯಾಗಿದ್ದ ಕಾ.ಗಂಗಮ್ಮ ಬಿರಾದಾರ ಅವರ ಮಕ್ಕಳಾದ ರೇಣುಕ, ವನಿತ ಹಾಗೂ ಸೊಸೆಯನ್ನು ಚಳುವಳಿಯ ಪುಸ್ತಿಕೆಯೊಂದಿಗೆ ಗೌರವಿಸಲಾಯಿತು.
ಹಿರಿಯ ಮಹಿಳಾ ಸಂಗಾತಿಗಳನ್ನು ವೇದಿಕೆಗೆ ಆವ್ಹಾನಿಸಿ ಹೋರಾಟದ ಪರಂಪರೆಯ ಕೊಂಡಿ ಬೆಸೆಯಲಾಯಿತು.
ಕಾರ್ಯಕ್ರಮದ ವೇದಿಕೆಗೆ ಕಾ.ಗಂಗಮ್ಮ ಬಿರಾದಾರ ವೇದಿಕೆ ಹೆಸರಿಡಲಾಯಿತು. ‘ಗೆಲುವು ನಮ್ಮದು’ಹಾಡಿನೊಂದಿಗೆ ಕಾರ್ಯಕ್ರಮ ಮುಕ್ತಾಯ ಮಾಡಲಾಯಿತು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…