ಬಿಸಿ ಬಿಸಿ ಸುದ್ದಿ

ಸಂಸತ್ತು ಪ್ರವೇಶಿಸಿದ ಗೋಡ್ಸೆ ವಾದ : ಮೂಲೆಗುಂಪಾದ ಗಾಂಧೀಜಿ !?

ಸ್ವಾತಂತ್ರ್ಯ ದೊರಕಿ 72 ವರ್ಷಗಳಲ್ಲಿಯೇ ಮಹಾತ್ಮ ಗಾಂಧೀಜಿ ಕಟು ಟೀಕೆಗೆ ಗುರಿಯಾಗುತ್ತಿದ್ದಾರೆ. ಮಹಾತ್ಮ ಬದುಕಿದಾಗಲೂ ಟೀಕೆ ಟಿಪ್ಪಣಿಗಳು ಇದ್ದವು. ಅವರು ಹೋದ ಮೇಲೆಯೂ ಅವು ನಿಂತ್ತಿಲ್ಲ. ಮಳೆ ನಿಂತರೂ ಮಳೆ ಹನಿ ನಿಂತಿಲ್ಲ ಎಂಬಂತೆ ಅವರ ವ್ಯಕ್ತಿತ್ವದ ಕುರಿತು ಚಿಂತನೆಗಳು ನಡೆದೆ ಇರುತ್ತವೆ. ಆದರೆ ಮಹಾತ್ಮಗಾಂಧೀಜಿಯನ್ನು ಒಬ್ಬ ದೇಶದ್ರೋಹಿಯಂತೆ ಚಿತ್ರಿಸುತ್ತಿರುವುದು ತೀರಾ ಆತಂಕಕ್ಕೆ ಇಡುಮಾಡಿದೆ.

ನಮ್ಮ ದೇಶವನ್ನು ನಮಗೆ ಬಿಟ್ಟು ಕೊಡುವಾಗ ಚರ್ಚಿಲ್ ಒಂದು ಕಡೆ ಹೇಳಿದ ಮಾತು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಮಹಾತ್ಮಗಾಂಧೀಜಿ ನಮ್ಮ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಹೋರಾಟ ಮಾಡಿದರೂ ನಾವು ಅವರನ್ನು ಉಳಿಸಿಕೊಂಡು ಬಂದೆವು. ಆದರೆ ನೀವು ಈ ಮಹಾತ್ಮನನ್ನು ಉಳಿಸುವಿರಾ ? ಎಂಬ ಪ್ರಶ್ನೆಯನ್ನು ಹಾಕುತ್ತಾರೆ. ಚರ್ಚಿಲ್ ಅನುಮಾನ ಪಟ್ಟಂತೆಯೆ ಸ್ವಾತಂತ್ರ್ಯ ದೊರಕಿದ ನಂತರ ಮಹಾತ್ಮ ಗಾಂಧೀಜಿಯನ್ನು ಗುಂಡಿಟ್ಟು ಕೊಲೆ ಮಾಡಲಾಯಿತು.

ಮಹಾತ್ಮ ಗಾಂಧೀಜಿಯನ್ನು ಗುಂಡಿಟ್ಟುಕೊಂಡ ನಥುರಾಮಗೋಡ್ಸೆ ಇಂದು ರಾಷ್ಟ್ರಭಕ್ತನಾಗಿ ಮಿಂಚುತ್ತಿದ್ದಾನೆ. ಪರಕೀಯರ ಹಿಡಿತದಲ್ಲಿದ್ದ ಭಾರತೀಯರ ಬಿಡುಗಡೆಗಾಗಿ ಎಂದೂ ಹೋರಾಟ ಮಾಡದ ಗುಂಪೊಂದು ಇಂದು ಭಾರತವನ್ನು ತನ್ನ ಕೈಯಲ್ಲಿ ಹಿಡಕೊಂಡು ದೇಶಾಭಿಮಾನವನ್ನು ಹೇಳುತ್ತಿದೆ. ಗಾಂಧೀಜಿಯವರನ್ನು ಗುಂಡಿಟ್ಟ ವ್ಯಕ್ತಿಯ ಜಯಂತಿಯನ್ನು ಆಚರಿಸುವ ಮೂಲಕ ತಾನು ಯಾವುದರ ಪ್ರತಿನಿಧಿ ಎಂದು ತೋರ್ಪಡಿಸಿಕೊಳ್ಳುತ್ತಿದೆ. ಒಂದು ಕಡೆ ಗಾಂಧೀಜಿಯನ್ನು ಗೌರವಿಸುವಂತೆ ನಟಿಸುತ್ತ, ಇನ್ನೊಂದು ಕಡೆ ಗೋಡ್ಸೆಯನ್ನೂ ಪೂಜಿಸುತ್ತಿರುವುದು ಇವರ ಇಬ್ಬಂದಿತನಕ್ಕೆ ಸಾಕ್ಷಿಯಾಗಿದೆ.

ಈ ಗುಂಪು ಹಿಂದಿನಿಂದಲೂ ಮಹಾತ್ಮಗಾಂಧೀಜಿಯವರ ವಿರೋಧಿಯಾಗಿದೆ. ಅದು ಅವಕಾಶಕ್ಕಾಗಿ ಕಾಯುತ್ತಿತ್ತು. ನಮ್ಮ ರಾಷ್ಟ್ರದ ದಲಿತ ಸಂಘಟನೆಗಳು ಮಹಾತ್ಮಗಾಂಧೀಜಿಯವರನ್ನು ಪೂನಾ ಒಪ್ಪಂದದ ಪ್ರಸಂಗವನ್ನು ಬಹಿರಂಗವಾಗಿ ವಿರೋಧಿಸಿದಾಗ ಸಹಜವಾಗಿ ಅದಕ್ಕೆ ರೆಕ್ಕೆ ಪುಕ್ಕಗಳು ಬಲಿತವು. ಅಂಬೇಡ್ಕರವಾದ ಹಾಗೂ ಗಾಂಧಿವಾದ ಎರಡೂ ಭಿನ್ನ ಭಿನ್ನ ನಿಲುವು ತಳೆದಿರಬಹುದು. ಆದರೆ ಅವುಗಳು ಪರಸ್ಪರ ಹತ್ಯಾರೂಪಗಳಲ್ಲ. ಒಂದನ್ನು ಕೊಂದು ಮತ್ತೊಂದು ಪ್ರಭುತ್ವ ಮಾಡಬೇಕು ಎಂಬ ಆಶಯ ಅವಕ್ಕೆ ಇಲ್ಲವೆ ಇಲ್ಲ. ಡಾ.ಅಂಬೇಡ್ಕರ್ ಅವರು ಗಾಂಧೀಜಿಯವರ ಕೆಲವು ನಿಲುವುಗಳನ್ನು ಒಪ್ಪಲಾರರು. ಆದರೆ ಅವರ ಹತ್ಯೆಯನ್ನು ಬಯಸುವವರಾಗಿರಲಿಲ್ಲ. ಪೂನಾ ಒಪ್ಪಂದದಂತೆ ತನ್ನ ಜನಾಂಗಕ್ಕೆ ಎರಡು ಮತದಾನದ ಹಕ್ಕು ನೀಡಲೇಬೇಕೆಂದು ಅಂಬೇಡ್ಕರ್ ಹಠ ಹಿಡಿದಾಗ ಆಮರಣ ಉಪವಾಸ ಆರಂಭಿಸಿದವರು ಮಹಾತ್ಮ ಗಾಂಧೀಜಿ. ಆಗ ಕಸ್ತೂರಿ ಬಾ ತನ್ನ ಪತಿಗಾಗಿ ಡಾ. ಅಂಬೇಡ್ಕರ್ ಅವರ ಮೊರೆ ಹೋಗುತ್ತಾಳೆ. ಆಗ ಡಾ. ಬಿ.ಆರ್. ಅಂಬೇಡ್ಕರ್ ತನ್ನ ಹಠ ಸಡಿಲಿಸುತ್ತಾರೆ. ಆಗ ಮಹಾತ್ಮ ಗಾಂಧೀಜಿ ಉಪವಾಸ ನಿಲ್ಲಿಸುತ್ತಾರೆ. ಗಾಂಧೀಜಿಯ ಸಾವಿನ ಮೇಲೆ ತನ್ನ ವಿಚಾರಗಳು ಗೆಲ್ಲಬೇಕೆಂದು ಡಾ. ಬಿ.ಆರ್.ಅಂಬೇಡ್ಕರ್ ಬಯಸಿರಲಿಲ್ಲ. ಈ ಸೂಕ್ಷ್ಮಗಳನ್ನು ಅರಿಯದ ಬಹಳಷ್ಟು ಜನ ಮಹಾತ್ಮನನ್ನು ಜರಿಯುತ್ತಿದ್ದಾರೆ.

ಹಲವು ವರ್ಷಗಳ ಹಿಂದೆ ವಿದೇಶಿಯನೊಬ್ಬ ಮಹಾತ್ಮನ ಕುರಿತು ಗಾಂಧೀ ಎಂಬ ಚಿತ್ರ ಮಾಡಿದಾಗ ಅದನ್ನು ದೇಶದ ಜನತೆ ನೋಡಬಾರದೆಂದು ಪಿತೂರಿ ಹೂಡಿದರು. ಏಕೆಂದರೆ ಆ ಚಿತ್ರದಲ್ಲಿ ಸ್ಪಷ್ಟವಾಗಿ ಗೋಡ್ಸೆ ಗಾಂಧೀಜಿಯವರನ್ನು ಕೊಂದಿರುವ ಘಟನೆ ಇದೆ. ಜೊತೆಗೆ ಈ ಹಿಂದೆ ಗೋಡ್ಸೆ ಎಲ್ಲಿದ್ದ ? ಏನು ಮಾಡುತ್ತಿದ್ದ ? ಆತನ ವಿಚಾರದ ಹಿನ್ನೆಲೆ ಏನು ? ಎಂದು ಮುಂತಾಗಿ ಅದರಲ್ಲಿ ಸ್ಪಷ್ಟವಾಗಿ ತೋರಿಸಲಾಗಿದೆ. ಈ ಎಲ್ಲಾ ಸತ್ಯ ಸಂಗತಿ ಜನ ಸಾಮಾನ್ಯನಿಗೆ ತಿಳಿಯಬಾರದೆಂಬ ಒಂದೇ ಒಂದು ಉದ್ದೇಶ ಆರಾಷ್ಟ್ರೀಯವಾದಿಗಳಿಗೆ ಇದೆ.

ಆದ್ದರಿಂದ ಅವರು ತಾವು ಮುನ್ನೆಲೆಗೆ ಬರದೆ ಗಾಂಧೀಜಿಯವರನ್ನು ವಿರೋಧಿಸುವ ಗುಂಪು ಹೇಗೂ ನಮ್ಮ ರಾಷ್ಟ್ರದಲ್ಲಿಯೇ ಇದೆ. ಅವರಿಗೆ ಛೂ ಬಿಟ್ಟರಾಯಿತೆಂದು ಗಾಂಧೀಜಿಯ ಸಿನೇಮಾದಲ್ಲಿ ಡಾ. ಬಿ.ಆರ್. ಅಂಬೇಡ್ಕರರು ಇಲ್ಲ ಎಂದು ಸುದ್ದಿ ಹಬ್ಬಿಸಿತು. ಈ ಸುದ್ದಿಯ ಎಳೆಯನ್ನು ಹಿಡಿದುಕೊಂಡು ದಲಿತ ಸಂಘಟನೆಗಳು ವ್ಯಾಪಕವಾಗಿ  ಗಾಂಧಿ ಚಿತ್ರವನ್ನು ವಿರೋಧಿಸಿದವು.

ಗಾಂಧಿ ಸಿನೇಮಾ ಮೂಲೆ ಗುಂಪಾಯಿತು. ಇತಿಹಾಸದ ಸತ್ಯ ಪೆಟ್ಟಿಗೆಯಲ್ಲಿ ಉಳಿಯಿತು. ಹೀಗಾಗಿ ಇಂದು ಗಾಂಧೀಜಿ ಇಂದು ಎಲ್ಲರ ಲೇವಡಿಯ ವಸ್ತು. ಗಾಂಧೀಜಿಯನ್ನು ವಿರೋಧಿಸಿದ ವ್ಯಕ್ತಿ ಇಂದು ನಮ್ಮ ದೇಶದ ಸಂಸತ್ತನ್ನು ಪ್ರವೇಶಿಸಿ ಆಗಿದೆ. ಮುಂದೆ ಇನ್ನೇನು ಕಾದಿದೆಯೋ ? ರಾಮ ರಾಮ ?!

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

10 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

12 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

19 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

19 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

19 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago