ಕಲಬುರಗಿ: ಶ್ರದ್ಧೆ, ಭಕ್ತಿ, ಕಾಳಜಿಯಿಂದ ಮಾಡಲ್ಪಟ್ಟ ಕಾರ್ಯಗಳು ಸೋಲಿನ ಭೀತಿಯಿಂದ ವಿನಾಯತಿ ಪಡೆಯುವದರೊಂದಿಗೆ ಮನುಷ್ಯ ಸಾಧನೆಯ ಶಿಖರವೇರುತ್ತಾನೆ ಎಂದು ರೈತ ವಿಜ್ಞಾನಿ ಶರಣಬಸಪ್ಪಾ ಪಾಟೀಲ ಸುಲ್ತಾನಪೂರ ಹೇಳಿದರು.
ನಿನ್ನೆ ನಗರದ ಶರಣ ಕಂಪ್ಯೂಟರ ತರಬೇತಿ ಕೇಂದ್ರದಲ್ಲಿ ಸ್ನೇಹ ಸಂಗಮ ವಿವಿದೊದ್ದೇಶ ಸೇವಾ ಸಂಘವು ಇತ್ತಿಚೆಗೆ ರಾಜ್ಯ ಸರಕಾರದಿಂದ ‘ರೈತ ಸಂಶೋಧಕ ರತ್ನ’ ಪ್ರಶಸ್ತಿ ಪಡೆದ ಶರಣಬಸಪ್ಪಾ ಪಾಟೀಲ ಅವರಿಗೆ ಸನ್ಮಾನ ಸಮಾರಂಭ ಹಮ್ಮಿಕೊಂಡಿದ್ದು ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ರೈತ ರಾಷ್ಟ್ರದ ಬೆನ್ನೆಲುಬು ರೈತರು ಆಧುನಿಕ ಸಲಕರಣೆಗಳಿಂದ ಕೃಷಿ ಮಾಡಿದರೆ ಆದಾಯ ಹೆಚ್ಚಾಗುತ್ತದೆ. ಕಡಿಮೆ ಭೂಮಿಯಲ್ಲಿ ಹೆಚ್ಚಿನ ಇಳುವರಿಯನ್ನು ಪಡೆಯಬಹುದು. ಕೃಷಿಯಲ್ಲಿ ಏನು ಇಲ್ಲ ಎನ್ನುವವರು ಭಕ್ತಿ ಶೃದ್ಧೆಯಿಂದ ಕಾಯಕ ಮಾಡಿದರೆ ಭೂತಾಯಿ ಕೈ ಬಿಡುವುದಿಲ್ಲ ಎನ್ನುವುದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ. ವೈಜ್ಞಾನಿಕವಾಗಿ ಕೃಷಿ ಮಾಡಿ ಉತ್ತಮ ರೈತರಾಗಿ ಎಂದು ಯುವಕರಿಗೆ ಕಿವಿಮಾತು ಹೇಳಿದರು.
ಸಂಸದ ಉಮೇಶ ಜಾಧವರಿಂದ ನಿರ್ಲಕ್ಷ್ಯ: ಮಾಜಿ ಶಾಸಕ ಬಿ.ಆರ್. ಪಾಟೀಲ ಪತ್ರ
ಸಂಘದ ಅಧ್ಯಕ್ಷರಾದ ನ್ಯಾಯವಾದಿ ಹಣಮಂತರಾಯ ಅಟ್ಟೂರ ಮಾತನಾಡುತ್ತಾ ಸದ್ದಿಲ್ಲದೆ ಗದ್ದುಗೆ ಏರಿದ ಶರಣಗೌಡರ ಸಾಧನೆ ನಮ್ಮೆಲ್ಲರಿಗೆ ಆದರ್ಶವಾಗಿದೆ. ಇಂದಿನ ಯುವಕರಿಗೆ ಶ್ರೀಯುತರು ಮಾದರಿಯಾಗಿದ್ದಾರೆ. ಇವರು ತಯಾರಿಸಿದ ಕೃಷಿ ಉಪಕರಣಗಳನ್ನು ಹಲವಾರು ಜಿಲ್ಲೆ ಹಾಗೂ ಬೇರೆ ರಾಜ್ಯಗಳ ರೈತರು ಕಡಿಮೆ ಬೆಲೆಯಲ್ಲಿ ಖರಿದೀಸಿ ಹೆಚ್ಚಿನ ಇಳುವರಿ ಪಡೆಯುತ್ತಿದ್ದಾರೆ. ಶ್ರೀಯುತರು ಎಲೆ ಮರೆ ಕಾಯಿಯಂತೆ ಕೃಷಿಯಲ್ಲಿ ಸೇವೆ ಮಾಡಿ ಈ ಭಾಗಕ್ಕೆ ಕೀರ್ತಿ ತಂದಿರುವುದು ಹೆಮ್ಮೆಯ ವಿಷಯ.
ಕಾರ್ಯಕ್ರಮದಲ್ಲಿ ಸಂಘದ ಸಹ ಕಾರ್ಯದರ್ಶಿ ಮಲಕಾರಿ ಪೂಜಾರಿ, ಶರಣಬಸಪ್ಪ ಪಾಟೀಲ ಬೆಳಗುಂಪಿ, ರಘುನಂದನ ಕುಲಕರ್ಣಿ, ಸಂಗೀತ ಕಲಾವಿದರಾದ ಶ್ರವಣಕುಮಾರ ಮಠ, ಸಂಗಮೇಶ ಶಾಸ್ತ್ರೀ ಮಾಶ್ಯಾಳ, ಲಕ್ಷ್ಮಣ ಹೆರೂರ, ಮಹೇಶ ತೇಲಕುಣಿ, ಮಲ್ಲಿನಾಥ ರಾಸೂರಕರ, ಶರಣು ಕಲ್ಮಠ, ನಂದೀಶ ಮಠ, ಜನಪದ ಕಲಾವಿದ ರಾಜು ಹೆಬ್ಬಾಳ, ರವೀಂದ್ರ ಎನ್. ಕಾಗೆ, ಸಾಯಬಣ್ಣ ಕಣ್ಣೂರ ಇದ್ದರು.
ವಾಡಿ (ಕಲಬುರಗಿ): ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತದಲ್ಲಿರುವ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ…
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…