ರಾಜಧಾನಿ ನ್ಯೂಸ್

ದೊಂಬಿದಾಸ ಸಮುದಾಯಲ್ಲಿ ಕೆಲವರು ಇನ್ನೂ ಮತದಾನವನ್ನೇ ಮಾಡಿಲ್ಲ: ಲಕ್ಷ್ಮಣ ಕೆಂಗೆಟ್ಟಿ

ಬೆಂಗಳೂರು: ಸ್ವತಂತ್ರ್ಯ ಬಂದು ೭೦ ವರ್ಷ ಕಳೆದಿದ್ದರೂ ಸಹ ಇದುವರೆವಿಗೂ ನಮ್ಮ ಸಮುದಾಯದ (ದೊಂಬಿದಾಸ) ಬಗ್ಗೆ ಯಾರೂ ಮಾತನಾಡಿರಲಿಲ್ಲ ಎಂದು ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ದಿ ನಿಗಮದ ರಾಜ್ಯ ನಿರ್ದೆಶಕರಾದ ಕೆ.ಹೆಚ್, ಲಕ್ಷ್ಮಣ ಕೆಂಗೆಟ್ಟಿ ಅಸಹಾಯಕತೆ ವ್ಯಕ್ತಪಡಿಸಿದರು.

ಬೆಂಗಳೂರಿನ ವಸಂತನಗರದ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ದಿ ನಿಗಮದ ಸಭಾಂಗಣದಲ್ಲಿ ದೊಂಬಿದಾಸ ಕ್ಷೇಮಾಭಿವೃದ್ದಿ ಸಂಘ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಾನ್ಯ ಬಿಎಸ್ ಯಡುಯೂರಪ್ಪ ಅವರು ಚುಕ್ಕೆ ಗುರುತಿನ ಪ್ರಶ್ನೆ ವೇಳೆ ಒಮ್ಮೆ ನಮ್ಮ ಸಮುದಾಯದ ಬಗ್ಗೆ ಮಾತನಾಡಿದ್ದರು. ನಂತರ ಹೆಚ್‌ಡಿ ದೇವೇಗೌಡರು ಮಾತ್ರ ನಮ್ಮ ಸಮುದಾಯಕ್ಕೆ ಅವಕಾಶ ನೀಡಬೇಕು ಎಂದು ಮಾತನಾಡಿದ್ದರು ಎಂದು ಹೇಳಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ಮಾತ್ರ ನಮ್ಮ ಸಮುದಾಯದ ಸಣ್ಣ ಹಿಡುವಳಿದಾರರರಿಗೆ ನೀರಾವರಿ ಸೌಲಭ್ಯವಿದೆ. ಆದರೆ ಉಳಿದೆಡೆಗಳಲ್ಲಿ ಇನ್ನೂ ಸಿಕ್ಕಿಲ್ಲ. ಇದರ ಜೊತೆಗೆ ಸಮುದಾಯವನ್ನು ಡೇರೆ ಮುಕ್ತ ಮಾಡುವುದು ನಮಗೆ ಸವಾಲಿನ ಕೆಲಸವಾಗಿದೆ. ಈ ಸಮುದಾಯ ಮುಖ್ಯವಾಹಿನಿಗೆ ಬರುವುದಿರಲಿ, ಇನ್ನೂ ಬಹುತೇಕರು ಮತದಾನವನ್ನೂ ಕೂಡಾ ಮಾಡಿಲ್ಲ ಎಂದು ನೋವು ತೋಡಿಕೊಂಡರು. ಇದುವರೆಗೂ ಯವುದೇ ದೊಂಬಿದಾಸ ಮಹಿಳೆಯರು ಮುನ್ನಕಲೆಗೆ ಬಂದಿರಲಿಲ್ಲ. ಆದರೆ ಈಗ ತಮ್ಮ ನೋವನ್ನು ಹೇಳಿಕೊಂಡು ಬರುವವರ ಸಂಖ್ಯೆಯು ಹೆಚ್ಚಾಗಿದೆ. ಅವರೆಲ್ಲಾ ಸಹಾಯಕ್ಕಾಗಿ ಕಾದಿದ್ದಾರೆ ಎಂದರು.

ಇದಕ್ಕೂ ಮೊದಲು ಮಾತನಾಡಿ ಸಮುದಾಯದ ಪರವಾಗಿ ಕೆಲವು ಬೇಡಿಕೆಗಳನ್ನು ಅಧ್ಯಕ್ಷರ ಮುಂದಿಟ್ಟ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪ್ರಕಾಶ್, ನಮ್ಮ ಸುದಾಯದ ಮೆಡ್ರಿಕ್ ನಂತರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದಲ್ಲಿ ತೊಂದರೆ ಉಂಟಾಗುತ್ತಿದ್ದು ಅದನ್ನು ಸರಳೀಕರಣಗೊಳಿಸಬೇಕು ಎಂದರು.

ಮುಂದುವರೆದು ಉನ್ನತ ಶಿಕ್ಷಣ ಒಡೆಯುವ ಸಮುದಾಯದ ವಿದ್ಯಾರ್ಥೀಗಳಿಗೆ ಆರ್ಥಿಕ ನೆರವು ನೀಡಬೇಕು. ಸಮುದಾಯದ ವಸತಿ ರಹಿತ ಪ್ರತಿಯೊಬ್ಬರಿಗೂ ವಾಸಕ್ಕೆ ಮನೆ ನೀಡಿ ಅವರನ್ನು ಮುಖ್ಯವಾಹಿನಿಗೆ ಕರೆತರಬೇಕು. ಗಂಗಾ ಕಲ್ಯಾಣ ಯೋಜನೆಯಡಿ ಪ್ರತಿ ತಾಲ್ಲೂಕಿನಲ್ಲಿ ಕನಿಷ್ಟ ಐದು ಜನಕ್ಕೆ ಯೋಜನೆ ದೊರೆಯುವಂತೆ ಮಾಡಬೇಕು. ವಾಹನ ಪರವಾನಿಗೆ ಇರುವ ಸಮುದಾಯದ ಯುವಕರಿಗೆ ವಾಣಿಜ್ಯ ವಾಹನಗಳನ್ನು ನೀಡಬೇಕು ಹಾಗೂ ಸಮುದಾಯದ ಜನರು ಹೆಚ್ಚಾಗಿ ವಾಸಿಸುವ ಗ್ರಾಂಗಳಲ್ಲಿ ಸಮಷಾನದ ವ್ಯವಸ್ಥೆ ಮಾಡಬೇಕೆಂದರು.

ಕಾರ್ಯಕ್ರಮದಲ್ಲಿ ಅಲೆಮಾರಿ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಕೆ. ರವೀಂದ್ರಶೆಟ್ಟಿ, ರಾಜ್ಯ ನಿರ್ದೇಶಕರಾದ ಕೆ.ಎಚ್. ಲಕ್ಷ್ಮಣ ಕೆಂಗೆಟ್ಟೆ, ನಾರಾಯಣ ಸ್ವಾಮಿ, ಬಿ.ಕೆ. ರಾಮಚಂದ್ರ, ಹರೀಶ್ ಮೂರ್ತಿ, ವಿ.ಎಂ ರಾಜೇಶ್, ಬಿಜಿ ಶ್ರೀನಿವಾಸ್, ಟಿ ಮಂಜುನಾಥ್, ಶಂಕರಪ್ಪ, ಮಾಗಡಿ ಮಾರಪ್ಪ, ಸಂಪಂಗಿ ರಾಮಯ್ಯ ಮತ್ತಿತರಿದ್ದರು.

ನಿಗಮ ಸ್ಥಾಪನೆಯಾದಗ ೨೫ ಸಾವಿರ ಅನುದಾನ ಮೀಸಲಿಟ್ಟಿದ್ದು ಬಿಟ್ಟರೆ ಈ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿಲ್ಲ. ಈ ಕುರಿತು ಮುಖ್ಯಮಂತ್ರಿಗಳ ಬಳಿಯಲ್ಲಿ ಅಹವಾಲು ಸಲ್ಲಿಸಿದ್ದು, ಏಪ್ರಿಲ್ ತಿಂಗಳ ಬಳಿಕ ಹಣ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಈ ನಿಗಮ ಸ್ಥಾಪನೆಯಾದ ನಂತರ ನನ್ನನ್ನು ಮೊದಲ ಅಧ್ಯಕ್ಷನನ್ನಾಗಿ ನೇಮಕ ಮಾಡಲಾಗಿದೆ, ರಾಜ್ಯಾದ್ಯಂತ ಸುತ್ತಾಡಿ ಜನರ ಸ್ಥಿತಿಗತಿ ಬಗ್ಗೆ ಅಧ್ಯಯನ ಮಾಡುತ್ತಿದ್ದೇನೆ, ನಮ್ಮ ಸಮುದಾಯ ಈಗಲೂ ಶೋಚನೀಯ ಸ್ಥೀತಿಯಲ್ಲಿದೆ.

ಈಗಾಗಲೇ ರಾಜ್ಯದ ಕೋಲಾರ, ಚಿಕ್ಕಬಳ್ಳಾಪುರ, ಬಳ್ಳಾರಿ, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇನೆ. ಗೊಲ್ಲ, ದೊಂಬಿದಾಸ, ಹೆಳವ, ಗೋಂದಳಿ, ಬೆಸ್ತರ್, ಬೈಲ್ ಪತ್ತರ್, ಜೋಗಿ ಸಮುದಾಯಗಳನ್ನು ಮುನ್ನಲೆಗೆ ತರುವ ಯತ್ನವನ್ನು ಪ್ರಮಾಣಿಕವಾಗಿ ಮಾಡುತ್ತಿದ್ದೇನೆ.

-ಕೆ. ರವೀಂದ್ರ ಶೆಟ್ಟಿ, ಅಧ್ಯಕ್ಷರು.

ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ದಿ ನಿಗಮ, ಕರ್ನಾಟಕ ಸರ್ಕಾರ.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

4 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

4 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

4 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

21 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

23 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago