ಸುರಪುರ: ನಗರದ ಕಬಾಡಗೇರಾದಲ್ಲಿರುವ ಕಡ್ಲಪ್ಪನವರ ನಿಷ್ಠಿ ವಿರಕ್ತಮಠದಲ್ಲಿ ಲಿಂ: ಮಲ್ಲಿಕಾರ್ಜುನ ಮಹಾಸ್ವಾಮಿಗಳ ೪೫ನೇ ವರ್ಷದ ಪುಣ್ಯಸ್ಮರಣೋತ್ಸವದ ಅಂಗವಾಗಿ ನಡೆದ ಒಂಬತ್ತು ದಿನಗಳ ಶರಣ ಚರಿತಾಮೃತ ಪ್ರವಚನ ಕಾರ್ಯಕ್ರಮದ ಸಮಾರೋಪ ಸಮಾರಂಭ ಜರುಗಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಷಡಕ್ಷರಿ ಮಹಾಸ್ವಾಮಿಜಿ ವಿರಕ್ತಮಠ ಚಡಚಣ ಅವರು ಮಾತನಾಡಿ,ನಾಡಿನಲ್ಲಿ ಹೆಸರಾಂತ ಮಠಗಳಲ್ಲಿ ಒಂದಾಗಿರುವ ಸುರಪುರದ ಕಡ್ಲಪ್ಪನವರ ನಿಷ್ಠಿ ವಿರಕ್ತಮಠವು ನೂರೊಂದು ಮಠಗಳ ಸ್ಥಾಪನೆಗೆ ಮೂಲಮಠವಾಗಿದ್ದು ಶ್ರೀ ಮಠದಿಂದ ಜರಗುವ ಕಾರ್ಯಕ್ರಮಗಳು ಇಲ್ಲಿಯ ಜನರಲ್ಲಿ ಧಾರ್ಮಿಕ ಜ್ಞಾನವನ್ನು ಮೂಡಿಸುವಲ್ಲಿ ಮಹತ್ತರ ಪಾತ್ರವಹಿಸಿದೆ.ಅಲ್ಲದೆ ನಾಡಿನಲ್ಲಿ ಜೀವಂತ ಲಿಂಗೈಕ್ಯರಾಗಿರುವ ಯಡಿಯೂರ ಸಿದ್ದಲಿಂಗೇಶ್ವರರು ಹಾಗು ಮಂತ್ರಾಲಯ ರಾಘವೇಂದ್ರ ಯತಿಗಳ ನಂತರದ ಮತ್ತೊಬ್ಬ ಶರಣರೆಂದರೆ ಅದು ಶ್ರೀ ಮಠದ ಪ್ರಭುಲಿಂಗ ಸ್ವಾಮಿಗಳು ಎನ್ನುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ
ಕಾರ್ಯಕ್ರಮದಲ್ಲಿ ಗಜೆಂದ್ರಗಡದ ತಳ್ಳಿಹಾಳ ಮಠದ ಕಾಲಜ್ಞಾನ ಬ್ರಹ್ಮ ಶರಣಬಸವೇಶ್ವರ ಶರಣರು ಮುಂದಿನ ಹಾಗುಹೋಗುಗಳ ಕುರಿತು ಕಾಲಜ್ಞಾನವನ್ನು ತಿಳಿಸಿದರು.ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಶ್ರೀಮಠದ ಪ್ರಭುಲಿಂಗ ಮಹಾಸ್ವಾಮಿಗಳು ಕಾರ್ಯಕ್ರಮದ ಕುರಿತು ವಿವರಣೆಯನ್ನು ನೀಡಿದರು.ಅಲ್ಲದೆ ಸಿದ್ದಲಿಂಗಯ್ಯ ಶಾಸ್ತ್ರಿ ಬಾಚಿಮಟ್ಟಿ ಪ್ರಾಸ್ತಾವಿಕವಾಗಿ ಮಠದ ಹಿನ್ನೆಲೆಯನ್ನು ಕುರಿತು ವಿವರಿಸಿದರು.ಇದೇ ಸಂದರ್ಭದಲ್ಲಿ ಬಸವರಾಜಪ್ಪ ನಿಷ್ಠಿ ದಂಪತಿಗಳನ್ನು ಹಾಗು ಎಪಿಎಂಸಿ ಅಧ್ಯಕ್ಷ ದ್ಯಾವಣ್ಣ ಮಲಗಲದಿನ್ನಿ ನಗರಸಭೆ ಉಪಾಧ್ಯಕ್ಷ ಮಹೇಶ ಪಾಟೀಲ್ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಮಂಜುನಾಥ ಜಾಲಹಳ್ಳಿಯವರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.
ನಂತರ ಗಜದಂಡಯ್ಯ ಶಾಸ್ತ್ರಿಗಳು ಗುತ್ತಿಬಸವಣ್ಣ ಅವರು ಶರಣ ಚರಿತಾಮೃತ ಪ್ರವಚನ ನಡೆಸಿದರು,ಅಲ್ಲದೆ ಶರಣಕುಮಾರ ಯಾಳಗಿ ರಾಜಶೇಖರ ಗೆಜ್ಜಿ ಸಂಗೀತದ ಸಾಥ್ ನೀಡಿದರು.ದೇವು ಹೆಬ್ಬಾಳ ನಿರೂಪಿಸಿದರು,ರಾಜಶೇಖರ ದೇಸಾಯಿ ಸ್ವಾಗತಿಸಿದರು,ಶರಣಬಸವ ಯಾಳವಾರ ವಂದಿಸಿದರು.
ಕಾರ್ಯಕ್ರಮದಲ್ಲಿ ಬಸವರಾಜ ಜಮದ್ರಖಾನಿ ಶಿವರಾಜಪ್ಪ ಗೋಲಗೇರಿ ಶಾಂತರಾಜ ಬಾರಿ ವೀರೇಶ ನಿಷ್ಠಿ ದೇಶಮುಖ ಕಸಾಪ ಅಧ್ಯಕ್ಷ ಶ್ರೀನಿವಾಸ ಜಾಲವಾದಿ ಸಿದ್ದಲಿಂಗಯ್ಯಸ್ವಾಮಿ ರಾಘವೇಂದ್ರ ಭಕ್ರಿ ಸೂಗುರೇಶ ಮಡ್ಡಿ ಸೇರಿದಂತೆ ನೂರಾರು ಜನರಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…