ಮಂಗಳೂರು: ಸಂವಿಧಾನದ ಮೇಲಾಗುತ್ತಿರುವ ಪ್ರಭುತ್ವದ ಆಕ್ರಮಣವನ್ನು ಪ್ರಭಲವಾಗಿ ನಾವು ವಿರೋಧಿಸಬೇಕಿದೆ. ಇದರ ಒಂದು ಜವಾಬ್ದಾರಿ ಯುವಜನರು ಹೊರಬೇಕಿದೆ. ಅದಕ್ಕಾಗಿ ಯುವಜನರು ತಮ್ಮ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬೇಕಿದೆ ಎಂದು ಕುವೆಂಪು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಪಕರು ರಾಜೇಂದ್ರ ಚೆನ್ನಿ ಹೇಳಿದರು.
ಇಂದು ಮಂಗಳೂರಿನಲ್ಲಿ ಉದ್ಯೋಗ ಸೃಷ್ಟಿಸಿ, ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಿ, ಉದ್ಯೋಗದ ಹಕ್ಕಿಗಾಗಿ ನಡೆಯುತ್ತಿರುವ ಡಿವೈಎಫ್‌ಐನ ರಾಜ್ಯ ಅಧ್ಯಯನ ಶಿಬಿರದ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.
ಯಾರನ್ನೂ ಹೇಳದೇ ಕೇಳದೇ ನಮ್ಮ ಮೇಲೆ ಲಾಕ್‌ಡೌನ್‌ನ್ನು ಹೇರಲಾಯಿತು. ಲಕ್ಷಗಟ್ಟಲೆ ಜನ ತಮ್ಮ ಹೊಲ, ಮನೆ ಬಿಟ್ಟು , ಸಂಬಂಧ ಬದುಕು ಬಿಟ್ಟು ನಗರಗಳಿಗೆ ಬರುತ್ತಾರೆ. ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಕಟ್ಟುತತಿರುವ ಕಾರ್ಮಿಕರು ಹಂದಿಗಳೂ ವಾಸಿಸುವ ಸ್ಥಳಗಳಲ್ಲಿ ವಾಸುತ್ತಿದ್ದಾರೆ. ಅವುಗಳನ್ನ ನಾವು ಯಾಕೆ ಇಲ್ಲಿವರೆಗೆ ಯಾಕೆ ಪ್ರಶ್ನೆ ಮಾಡಿಲ್ಲ. ಪ್ರತೀ ವರ್ಷ ನಮ್ಮ ದೇಶದಲ್ಲಿ ಮನುಷ್ಯ ತನ್ನ ಶ್ರಮದಿಂದ ಮನುಷ್ಯ ನಾಗರೀಕತೆಯನ್ನು ಕಟ್ಟಿದ್ದಾನೆ.
ಮಾಯಾಮಂತ್ರದಿಂದ ಕಟ್ಟಿಲ್ಲ ಶಾಸ್ತ್ರಗಳಿಂದ ಕಟ್ಟಿಲ್ಲ. ಅಂತಹ ಶ್ರಮವನ್ನು ದೇಶಕ್ಕಾಗಿ ಕೊಡೋವರನ್ನು ಕಟ್ಟಡ ಕಾರ್ಮಿಕರನ್ನ ನಿರಾಶ್ರಿತರಾದರು. ಉದ್ಯೋಗ ಕೊಡಿ ಎಂದು ಕೇಳುವ ಪರಿಸ್ಥಿತಿ ಬಂದಿರುವುದು ವಿಷಾಧನೀಯ. ಸ್ವತಂತ್ರ ದೇಶ, ಪ್ರಜಾಪ್ರಭುತ್ವ ರಾಷ್ಟ್ರ ಎಂದೇಳಿ ಕರಿಯುತ್ತಿದ್ದೇವೆ ಯಾಕೆ ಎಂದು ಪ್ರಶ್ನಿಸಿದರು.
ನಮ್ಮ ದೇಶದಲ್ಲಿ ಮಾತ್ರ ಯುವಜನರು ಭಾರೀ ಪ್ರಮಾಣದಲ್ಲಿದ್ದೇವೆಂದು ಹೆಮ್ಮೆಯಿಂದ ಹೇಳಿಕೊಳ್ತೇವೆ. ಆದರೆ ಅವರಿಗೆ ಯಾಕೆ ಉದ್ಯೋಗ ಒದಗಿಸುತ್ತಿಲ್ಲ. ಇಂತಹ ಬೇಜವಾಬ್ದಾರಿ ವ್ಯವಸ್ಥೆ ಯಾಕೆ ನಿರ್ಮಾಣವಾಗಿದೆ ಎಂಬುದನ್ನು ಗಂಭೀರವಾಗಿ ಯೋಚಿಸಬೇಕು.
ಪ್ರಜಾಪ್ರಭುತ್ವದ ಮೌಲ್ಯಗಳನ್ನು ತೆಗೆದು ನಾವು ಅದಕ್ಕೆ ಪ್ರಜಾಪ್ರಭುತ್ವ ಎಂದೇಳುತ್ತಿದ್ದೇವೆ. ಕೃಷಿ ಕಾಯ್ದೆಗಳು ಜಾರಿಯಾದ್ರೆ ಬಹುರಾಷ್ಟೀಯ ಕಂಪನಿಗಳು ರೈತನ ಬೀಜ ಗೊಬ್ಬರದ ಆಯ್ಕೆಗಳನ್ನು ಕಸಿದುಕೊಳ್ಳುತ್ತವೆ. ಬಂಡವಾಳಶಾಹಿ ಎಲ್ಲಾ ಕ್ಷೇತ್ರಗಳಲ್ಲಿ ಇರುವ ಜನತೆಯ ಬದುಕನ್ನು ಕಸಿಯುತ್ತಿವೆ ಎಂದರು.
ನಮಗೆ ಒಂದು ಒತ್ತು ಊಟ ಇಲ್ಲಂದ್ರೂ ನಮಗೆ ಶಿಕ್ಷಣ ಕೊಟ್ರೆ ಒಂದು ಉದ್ಯೋಗವಾದ್ರೂ ಸಿಗುತ್ತೆ. ಬಡರೈತರ ಮಕ್ಕಳು ಸೈನ್ಯಕ್ಕೆ ರ‍್ತಾರೆ. ಆದರೆ ಮೊನ್ನೆ ಉದ್ಯೋಗ ಅರಸಿ ಸಂದರ್ಶನಕ್ಕೆ ಬಂದವರಿಗೆ ಸರಿಯಾದ ವ್ಯವಸ್ಥೆ ಕಲ್ಪಿಸಿ ಸಂದರ್ಶನ ಮಾಡೋ ಬದಲು ಕಾರವಾರದ ಬೀಚ್ ಬದಿಯಲ್ಲಿ ಮಲಗಿದ್ದಾರೆ. ಸೈನ್ಯ ಸೇರಿ ದೇಶಕ್ಕಾಗಿ ಪ್ರಾಣ ಕೋಡೋ ಸೈನಿಕರಿಗೆ ಕೊಡೋ ಗೌರವಾ ಇದೇನಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ೧೫,೦೦೦ ಶಿಕ್ಷಕರು ಈ ಕ್ಷಣಕ್ಕೆ ಬೇಕಿದೆ. ಆದರೆ ಸರ್ಕಾರ ಆ ಖಾಯಂ ನೇಮಕಾತಿ ತೆಗೆದು ಹಾಕಿ ಶಿಕ್ಷಕರನ್ನು ಕಾಂಟ್ರಾö್ಯಕ್ಟ್ ಆಗಿ ತೆಗೆದುಕೊಳ್ಳುತ್ತಿದೆ. ಬಂಡವಾಳಶಾಹಿ ಅರ್ಥಶಾಸ್ತç, ಕಾಯಂ ನೇಮಕಾತಿಯನ್ನು ಸಂಪೂರ್ಣವಾಗಿ ತೆಗೆಯುವುದಾಗಿದೆ. ಪ್ರಧಾನಿ ಮೋದಿಜೀ ಅವರು ಬಡವರ ಮಕ್ಕಳು ಐಎಎಸ್‌ಗೆ ಬರೋದನ್ನು ತಡೆಯೋಕೆ ನೇರನೇಮಕಾತಿ ಮಾಡಿದ್ದಾರೆ.
ಖಾಸಗೀಕರಣವನ್ನು ನಾವು ದಿನನಿತ್ಯ ನೋಡ್ತಾ ಇದ್ದೇವೆ. ಆದರೆ ಅದನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ತಿಲ್ಲ. ಉದ್ಯೋಗ ಇಲ್ಲದಿರುವುದು ಒಂದು ರೋಗವಾಗಿದೆ. ಆ ರೋಗಕ್ಕೆ ಕಾರಣ ಏನು ಅನ್ನೂದು ಈ ಡಿವೈಎಫ್‌ಐನ ರಾಜ್ಯ ಅಧ್ಯಯನ ಶಿಬಿರದಲ್ಲಿ ನಾವು ಗುರುತಿಸಬೇಕಿದೆ ಎಂದು ಶಿಬಿರಾರ್ಥಿಗಳಿಗೆ ಕರೆ ನೀಡಿದರು.
ಯಾವ ಸರ್ಕಾರ ಸಂವಿಧಾನ ಮತ್ತು ಅದರ ಮೌಲ್ಯಗಳನ್ನು ವಿರೋಧಿಸುತ್ತವೋ ಅಂತ ಸರ್ಕಾರಗಳಿಗೆ ದೇಶವನ್ನು ಆಳೋಕೆ ಯಾವ ಯೋಗ್ಯತೆನೂ ಇರೊಲ್ಲ. ಅಂಬೇಡ್ಕರ್ ಅವರ ಬಹುದೊಡ್ಡ ಕಲ್ಪನೆಯಾಗಿದ್ದ ಮೀಸಲಾತಿಯನ್ನು ತೆಗೆಯುವುದೇ ಆಳುತ್ತಿರುವ ಸರ್ಕಾರಗಳ ಉದ್ದೇಶವಾಗಿದೆ. ಶಿಕ್ಷಣವನ್ನೂ ಸಂಪೂರ್ಣವಾಗಿ ಖಾಸಗೀಕರಣ ಮಾಡುತ್ತಿದೆ. ನಾವು ಈ ಶಿಬಿರದಲ್ಲಿ ಈ ಬಗ್ಗೆ ವಸ್ತುನಿಷ್ಠವಾಗಿ ಅಧ್ಯಯನ ಮಾಡಬೇಕು ಎಂದು ಹೇಳಿದರು.
ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್‌ಕಾಟಿಪಳ್ಳ, ಕಾರ್ಯದರ್ಶಿ ಬಸವರಾಜ್ ಪೂಜಾರ್, ಅಖಿಲ ಭಾರತ ವಕೀಲರ ಸಂಘದ ದ.ಕ. ಜಿಲ್ಲಾಧ್ಯಕ್ಷ ಯಶವಂತ ಮರೋಳಿ ಮಾತನಾಡಿದರು.
ಈ ಸಂದರ್ಭದಲ್ಲಿ ಡಿವೈಎಫ್‌ಐ ರಾಜ್ಯ ಸಹ ಕಾರ್ಯದರ್ಶಿ ಪೃತ್ವಿ ಎಂ.ಜಿ., ದ.ಕ.ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಜ್, ಕಾರ್ಯದರ್ಶಿ ಸಂತೋಷ್ ಬಜಾಲ್, ಮುಖಂಡರಾದ ಆಶಾ ಬೋಳಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…
ಕಲಬುರಗಿ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ಪ್ರಯುಕ್ತ ಜೈ ಕನ್ನಡಿಗರ…
ಕಲಬುರಗಿ; ಕಾರಾಗೃಹದ ಬಂದಿಗಳಿಗೆ ಉಚಿತವಾಗಿ ಅದಾನಿ ಸಕ್ಷಮ ಸ್ಕಿಲ್ ಡೆವಲಪ್‍ಮೆಂಟ್, ವಾಡಿ ಹಾಗೂ ಕೇಂದ್ರ ಕಾರಾಗೃಹದ ಸಹಯೋಗದೊಂದಿಗೆ ಬಂದಿಗಳ ಮನಃ…