ಬಿಸಿ ಬಿಸಿ ಸುದ್ದಿ

ರಂಗಭೂಮಿ ದಿನಾಚರಣೆ’ ನಿಮಿತ್ತ ರಂಗಕಲಾವಿದರಿಗೆ ಸನ್ಮಾನ

ಕಲಬುರಗಿ: ರಂಗಭೂಮಿಯು ಚಲಿಸುವ ವಿಶ್ವವಿದ್ಯಾಲಯ ಈ ಕ್ಷೇತ್ರವೂ ಎಲ್ಲಾ ಕಲಾವಿದರನ್ನು ಹುಟ್ಟು ಹಾಕುತ್ತದೆ. ಹಲವಾರು ನಾಟಕಗಳು ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಪ್ರೇರಣೆ ನೀಡುವುದರೊಂದಿಗೆ ಮುಖ್ಯ ಪಾತ್ರ ವಹಿಸಿರುವುದು ಮರೆಯುವಂತಿಲ್ಲ ಎಂದು ಶರಣಬಸವೇಶ್ವರ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಪತಿಗಳಾದ ಡಾ. ಲಿಂಗರಾಜ ಶಾಸ್ತ್ರೀ ಹೇಳಿದರು.

ಇಂದು ಕಲಬುರಗಿ ನಗರದ ಖಾದ್ರಿ ಚೌಕ್‍ನಲ್ಲಿರುವ ಸಕ್ಸಸ್ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಸ್ನೇಹ ಸಂಗಮ ವಿವಿಧೋದ್ದೇಶ ಸೇವಾ ಸಂಘದ ವತಿಯಿಂದ `ರಂಗಭೂಮಿ ದಿನಾಚರಣೆ’ ನಿಮಿತ್ಯ ರಂಗಕಲಾವಿದರಿಗೆ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ವ್ಯಕ್ತಿ ಪರಿಸ್ಥಿತಿ ಕೈಗೊಂಬೆಯಾದಾಗ ಅವನಾಗಲಿ ಅವನ ನಿಜವಾದ ವ್ಯಕ್ತಿತ್ವ ಮಾತನಾಡವುದಿಲ್ಲ. ಅವನು ಎದುರಿಸುತ್ತಿರುವ ಪರಿಸ್ಥಿತಿ-ಸಮಯ-ಸಂದರ್ಭಗಳು ಮಾತನಾಡುತ್ತವೆ ಹಾಗೆ ರಂಗಭೂಮಿ ಕಲಾವಿದರು ಸಂದಿಗ್ಧ ಪರಿಸ್ಥಿತಿಯಲ್ಲಿ ಬದುಕು ನಡೆಸುತ್ತಿದ್ದಾರೆ. ಅವರಿಗೆ ನ್ಯಾಯ ಕೊಡಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಸೇಡಂ ತಾಲೂಕಿನ ಗ್ರೇಡ್ 2 ತಹಸೀಲ್ದಾರರಾದ ಭೀಮಣ್ಣ ಕುದರಿ ಮಾತನಾಡುತ್ತಾ ಇಂದು ರಂಗಭೂಮಿಯು ಅಳಿವಿನ ಪರಿಸ್ಥಿತಿಯಲ್ಲಿಯೂ ಉಳಿಸುವ ಪ್ರಯತ್ನ ಮಾಡುತ್ತಿರುವ ಕಲಾವಿದರಿಗೆ ಸನ್ಮಾನಿಸುತ್ತಿರುವುದು ಸಂಘದ ಕಾರ್ಯ ಶ್ಲಾಘನೀಯ ರಂಗಭೂಮಿ ಕಲಾವಿದರ ಸೇವೆ ಅನನ್ಯ ಅವರಿಗೆ ಸರ್ಕಾರದಿಂದ ಸಹಕಾರ ಕೊಡುವುದರೊಂದಿಗೆ ಉತ್ತಮ ಜೀವನ ನಡೆಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ರಾಜಕೀಯ ಮುಖಂಡರಾದ ನೀಲಕಂಠರಾವ ಮೂಲಗೆ, ಭೂ ನ್ಯಾಯಮಂಡಳಿ ಸದಸ್ಯರಾದ ನ್ಯಾಯವಾದಿ ಅಂಬಾರಾಯ ಪಟ್ಟಣಕರ್, ತಾಜಸುಲ್ತಾನಪೂರ ಗ್ರಾಮಪಂಚಾಯತ ಸದಸ್ಯರಾದ ರವಿಕುಮಾರ ಶಹಾಪೂರಕರ್, ಸಕ್ಸಸ್ ಕಂಪ್ಯೂಟರ್ ತರಬೇತಿ ಕೇಂದ್ರದ ಮುಖ್ಯಸ್ಥರಾದ ಅಸ್ಲಾಂ ಶೇಖ, ವಿಶೇಷ ಉಪನ್ಯಾಸಕರು ಹಾಗೂ ಶಿಕ್ಷಕರಾದ ಸಿದ್ದಣ್ಣ ಸಜ್ಜನ, ಸಂಗಮೇಶ ಸರಡಗಿ, ಸಂಘದ ಅಧ್ಯಕ್ಷರಾದ ನ್ಯಾಯವಾದಿ ಹಣಮಂತರಾಯ ಎಸ್. ಅಟ್ಟೂರ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ರಂಗಕಲಾವಿದರಾದ ರಮೇಶ ಕೋರಿಶೆಟ್ಟಿ, ಸಂಗಣ್ಣ ಅಲ್ದಿ ಮಲಕೂಡ, ರಾಜಕುಮಾರ ರೋಜಾ ಬಸವಪಟ್ಟಣ, ಪದ್ಮಾವತಿ ಎನ್. ಮಾಲಿಪಾಟೀಲ, ಸಿದ್ದಾರೂಢ ಕನಕಟಕರ್, ತಾಜಸುಲ್ತಾನಪೂರ ಇವರಿಗೆ ವಿಶೇಷವಾಗಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮಲಕಾರಿ ಪೂಜಾರಿ, ರಘುನಂದನ ಕುಲಕರ್ಣಿ, ಮಹೇಶ ತೆಲಕುಣಿ, ಜನಪದ ಕಲಾವಿದ ರಾಜು ಹೆಬ್ಬಾಳ, ಮಲ್ಲಿನಾಥ ರಾಸೂರಕರ್, ಸುನೀಲ ಜೆ. ಹೊದಲೂರ, ಕಿರಣ ಹರಳಯ್ಯ, ಪ್ರಭು ಬಿರಾದಾರ ಶ್ರೀಚಂದ, ಮಂಜುಳಾ ಅಕ್ಕಿ, ಭಾಗ್ಯಲಕ್ಷ್ಮೀ ಬುನಾ, ಶರಣಮ್ಮಾ, ನೀಲಮ್ಮಾ, ಸಂತೋಷ, ಮಲ್ಲಿಕಾರ್ಜುನ, ಸಿದ್ದಲಿಂಗ ಇತರರು ಭಾಗವಹಿಸಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

7 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

17 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

17 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

17 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago