ಶಹಾಬಾದ: ವಿದ್ಯಾರ್ಥಿ-ಯುವಜನರೇ ನವ ಸಮಾಜದ ಆಶಾವಾದ.ಆದರೆ ಇಂದು ಸಮಾಜದಲ್ಲಿ ಉನ್ನತ ನೀತಿ, ಉನ್ನತ ಸಂಸ್ಕೃತಿ ಅಧಃಪತನವಾಗುತ್ತಿದೆ ಎಂದು ಸಂಗೀತ ಶಿಕ್ಷಕ ಮೌನೇಶ್ವರ ರಾವ್ ಸೋನಾರ್ ಕಳವಳ ವ್ಯಕ್ತಪಡಿಸಿದರು.
ಅವರು ಮಂಗಳವಾರ ನಗರದ ಎಸ್.ಎಸ್.ಮರಗೊಳ ಮಹಾವಿದ್ಯಾಲಯದಲ್ಲಿ ಐಡಿಎಸ್‌ಓ ಹಮ್ಮಿಕೊಂಡಿದ್ದ ಭಗತ್‌ಸಿಂಗ್ ಅವರ ೯೧ನೇ ಹುತಾತ್ಮ ದಿನದ ಅಂಗವಾಗಿ ಶಹಾಬಾದ ಮತ್ತು ವಾಡಿ ಸ್ಥಳಿಯ ಮಟ್ಟದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಶಿಬಿರದಲ್ಲಿ ಮಾತನಾಡಿದರು.
ಮೌಲ್ಯಗಳಿಲ್ಲದ ಶಿಕ್ಷಣ, ಶಿಕ್ಷಣದ ನಂತರ ಉದ್ಯೋಗವಿಲ್ಲದೆ ವಿದ್ಯಾರ್ಥಿ-ಯುವಜನರು ಕೀಳು ಅಭಿರುಚಿಯ ಸಿನಿಮಾ ಸಾಹಿತ್ಯ, ಮಧ್ಯ ಮಾದಕ ವಸ್ತುಗಳಿಗೆ ಬಲಿಬಿದ್ದು ದಾರಿ ತಪ್ಪುತ್ತಿದ್ದಾರೆ.ಇದರಿಂದ ಯುವ ಜನರು ಹೊರಬರಬೇಕಾದರೆ ದುಡಿಯುವ ಸಂಸ್ಕೃತಿಯನ್ನು ಕಟ್ಟಿಕೊಳ್ಳಬೇಕು ಎಂದು ಹೇಳಿದರು.
ಪೊಲೀಸರ ವರ್ತನೆಗೆ ಕೆಎಸ್‌ಡಿಎಸ್‌ಎಸ್ ಖಂಡನೆ
ಎಐಡಿಎಸ್‌ಓ ಜಿಲ್ಲಾಧ್ಯಕ್ಷ ಹಣಮಂತ.ಎಸ್.ಹೆಚ್ ಮಾತನಾಡಿ, ಕೋವಿಡ್ ೧೯ ಮಹಾಮಾರಿ ಯಿಂದ ದೇಶದ ಜನರು ಬಹಳ ಸಂಕಷ್ಟ ಅನುಭವಿಸಿದ್ದಾರೆ.ಲಾಕ್ ಡೌನ್ ಸಮಯವನ್ನು ದುರುಪಯೋಗ ಪಡಿಸಿಕೊಂಡು ವಿದ್ಯಾರ್ಥಿ ವಿರೋಧಿ, ರೈತ-ಕಾರ್ಮಿಕ ವಿರೋಧಿ ನೀತಿಗಳಾದ ಎನ್.ಇ.ಪಿ, ಭೂ ಸುಧಾರಣೆ ಕಾಯ್ದೆ , ಎಪಿ.ಎಂ.ಸಿ, ಕಾಯ್ದೆ ಹೀಗೆ ಹಲವಾರು ಕಾಯ್ದೆಗಳನ್ನು ಜಾರಿ ಮಾಡಿದ್ದಾರೆ. ಈ ಎಲ್ಲಾ ಕಾಯ್ದೆಗಳನ್ನು ವಿರೋಧಿಸಿ ಪಂಜಾಬ, ಹರಿಯಾಣ, ಉತ್ತರ ಪ್ರದೇಶದ ರೈತರು ದೆಹಲಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳಾದ ನಾವೆಲ್ಲರೂ ರೈತರ ಹೊರಾಟಕ್ಕೆ ಬೆಂಬಲ ನೀಡಬೇಕಾಗಿದೆ. ಸ್ವಾತಂತ್ರ ಬಂದು ೭೦ ದಶಕಗಳಾದರು ದೇಶದಲ್ಲಿನ್ನು ಹಸಿವು, ಬಡತನ, ನಿರುದ್ಯೋಗ, ಭ್ರಷ್ಟಚಾರ ಗಳಂತ ಸಮಸ್ಯೆಗಳು ತಾಂಡವವಾಡುತ್ತಿದೆ. ಈ ಎಲ್ಲಾ ಸಮಸ್ಯೆಗಳನ್ನು ತೊಡೆದುಹಾಕಲು ನಾವೆಲ್ಲರೂ ಒಂದಾಗಿ ಹೋರಾಡಿ ಮಾನವನಿಂದ ಮಾನವ ಶೋಷಣೆ ಮುಕ್ತ ಸಮಾಜವಾದಿ ಸಮಾಜವನ್ನು ನಿರ್ಮಾಣ ಮಾಡಲು ಪಣತೊಡಬೇಕು ಎಂದರು.
ಸಾಧನೆ ಮಾಡಿದ ವ್ಯಕ್ತಿಗಳಿಗೆ ಸನ್ಮಾನಿಸಿ ಪ್ರೋತ್ಸಾಹಿಸಿ: ಕಿರಣ್ ಚವ್ಹಾಣ
ಶಹಾಬಾದ ಎಐಡಿಎಸ್‌ಓ ಉಪಾಧ್ಯಕ್ಷ ರಮೇಶ ದೇವಕರ್ ಅಧ್ಯಕ್ಷತೆ ವಹಿಸಿದ್ದರು.ಎಐಡಿಎಸ್‌ಓ ವಾಡಿ ಅಧ್ಯಕ್ಷ ಗೌತಮ ಪರತೂರಕರ್, ಎಐಡಿಎಸ್‌ಓ ವಾಡಿ ಉಪಾಧ್ಯಕ್ಷ ಅರುಣಕುಮಾರ ಹಿರೆಬಾನರ, ಎಐಡಿಎಸ್‌ಓ ಜಿಲ್ಲಾ ಉಪಾಧ್ಯಕ್ಷೆ ಸ್ನೇಹಾ ಕಟ್ಟಿಮನಿ, ಎಐಡಿಎಸ್‌ಓ ಶಹಬಾದ ಅಧ್ಯಕ್ಷರಾದ ತುಳಜರಾಮ.ಎನ್.ಕೆ ಎಐಡಿಎಸ್‌ಓ ವಾಡಿ ಕಾರ್ಯದರ್ಶಿ ವೆಂಕಟೇಶ ದೇವದುರ್ಗ,ಸದಸ್ಯರಾದ ಗೋವಿಂದ , ದತ್ತು, ಕಿರಣ್ ಜಿ ಮಾನೆ, ಭಾರತಿ, ಸಾಕ್ಷಿ, ಹಾಗೂ ವಾಡಿ, ಶಹಾಬಾದ, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…