ಸುರಪುರ: ಯಾವುದೇ ದೇವರ ದರಶುನಕ್ಕೆ ಪಾದಯಾತ್ರೆ ಮಾಡುವುದರಿಂದ ಮನುಷ್ಯನಿಗೆ ಪುಣ್ಯ ಪ್ರಾಪ್ತಿಯಾಗಲಿದೆ ಎಂದು ಗೂಳಿ ಮೌನಯ್ಯ ತಾತಾ ನುಡಿದರು.
ತಾಲೂಕಿನ ಪೇಠ ಅಮ್ಮಾಪುರದ ಅನೇಕ ಜನರು ಆರಂಭಿಸಿದ ಶ್ರೀಶೈಲ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಶ್ರೀಗಳು ತಾವೆಲ್ಲರು ಪುಣ್ಯವಂತರು ಪಾದಯಾತ್ರೆ ಮಾಡುವುದರಿಂದ ಮನುಷ್ಯನಿಗೆ ಆರೋಗ್ಯ ನೆಮ್ಮದಿ ಮತ್ತು ದೇವರ ಅನುಗ್ರಹ ಲಭಿಸಲಿದೆ,ತಾವೆಲ್ಲರು ಶ್ರೀಶೈಲ ಮಲ್ಲಿಕಾರ್ಜುನನ ದರುಶನಕ್ಕೆ ಹೋಗುವ ಮೂಲಕ ಮಲ್ಲಯ್ಯನ ಕೃಪೆಗೆ ಪಾತ್ರರಾಗಲಿದ್ದೀರಿ,ತಮ್ಮ ಯಾತ್ರೆ ಸುಖಮಯವಾಗಿರಲಿ ಎಂದು ಹಾರೈಸಿದರು.
ನಂತರ ಗ್ರಾಮದಿಂದ ಪಾದಯಾತ್ರೆ ಹೊರಟವರಿಗೆ ಗೌರವ ಸನ್ಮಾನ ನೆರವೇರಿಸಿ ಅವರೊಂದಿಗೆ ಸ್ವಲ್ಪ ದೂರದ ವರೆಗೆ ಹೆಜ್ಜೆ ಹಾಕುವ ಮೂಲಕ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲಿಕಾರ್ಜುನರಡ್ಡಿ ಕೋಳಿಹಾಳ ತಿರುಪತಿ ತನಿಕೆದಾರ ಭೀಮನಗೌಡ ಪೊಲೀಸ್ ಪಾಟೀಲ್ ದೇವಿಂದ್ರಪ್ಪ ಹೊಸ್ಮನಿ ಸೇರಿದಂತೆ ಅನೇಕರಿದ್ದರು,ಒಟ್ಟು ೪೭ ಜನ ಶ್ರೀಶೈಲಕ್ಕೆ ಪಾದಯಾತ್ರೆ ಹೊರಟರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…