ಸುರಪುರ: ಮೌಖಿಕ ಪರಂಪರೆಯ ತಳಮೂಲ ಸಂಸ್ಕೃತಿಕ ಪ್ರತಿಕವಾದ ಜಾನಪದಕ್ಕೆ ಇಂದು ಜಾಗತಿಕರಣದ ಮನ್ನಣೆ ದೊರೆಯಬೇಕಾಗಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ ಹೆಳಿದರು.
ರಂಗಂಪೇಟೆಯ ಖಾದಿ ಕೇಂದ್ರದ ಆವರಣದಲ್ಲಿ ಬಸವಪ್ರಭು ಜಾನಪದ ಮಹಾವಿದ್ಯಾಲಯದ ವತಿಯಿಂದ ಹಮ್ಮಿಕೊಂಡಿದ್ದ ಜಾನಪದ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಾನಪದ ನಮ್ಮ ಮೂಲ ಪರಂಪರೆ ಇಂದಿನ ಆಧುನಿಕರಣದ ಓಟ, ನಗರಿಕರಣ ಪ್ರಭಾವ ಇವುಗಳ ಮಧ್ಯ ಜಾನಪದ ಮರೆಯಾಗುತ್ತಿವೆ. ಬೇರೆ ಪರಂಪರೆ ಹಾಗೂ ಸಂಸ್ಕೃತಿಗಳಿಗೆ ಸಿಗುವ ಮನ್ನಣ್ಣೆ ಜಾನಪದಕ್ಕೆ ಸಿಕ್ಕಾಗ ಇದು ಜಾಗತಿಕವಾದ ಪರಂಪರೆಯಾಗಿ ಭಾಷೆಯಾಗಿ, ಸಂಸ್ಕೃತಿಯಾಗಿ ಬೆಳೆಯಲು ಸಾಧ್ಯವಾಗುತ್ತದೆ.
ಅನಕ್ಷರಸ್ತರಿಂದ ರೂಪಗೊಂಡಿರುವ ಜಾನಪದ ಈ ನಾಡಿನ ಹೆಮ್ಮೆಯ ಮತ್ತು ಅಭಿಮಾನದ ಪ್ರತಿಕವಾಗಿದೆ, ಇಂದಿನ ಯುವ ಪಿಳಿಗೆ ಆ ಸಂಸ್ಕೃತಿ ಹಾಗೂ ಪರಂಪರೆಯ ವಾರಸುದಾರರಾಗಿ ಕಾರ್ಯಾನಿರ್ವಹಿಸಬೇಕಾಗಿದೆ ಎಂದುರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಹ ಉಪನ್ಯಾಸಕ ಮಂಜುನಾಥ ದೊಡ್ಡಮನಿ ಮಾತನಾಡಿ, ಜಾನಪದ ಪರಂಪರೆ ಮತ್ತು ಕಲೆ ಉಳಿಸಿ ಬೆಳೆಸಲು ಜಾನಪದ ವಿಶ್ವವಿದ್ಯಾಲಯವು ಕಾರ್ಯಾನಿರ್ವಹಿಸುತ್ತಿದೆ ಎಂದು ಹೇಳಿದರು.
ಜಾನಪದ ಅಕಾಡೆಮಿ ಸದಸ್ಯ ಪ್ರಕಾಶ ಅಂಗಡಿ ಕನ್ನೆಳ್ಳಿ ಅಧ್ಯಕ್ಷತೆ ವಹಿಸಿದ್ದರು, ಪ್ರಮುಖರಾದ ವಿರೇಶ ಹಳಿಮನಿ, ಶಾಂತು ನಾಯಕ, ಬಲಭೀಮ ಪಾಟೀಲ, ಬಿರೇಶ ಕುಮಾರ ದೇವತ್ಕಲ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು. ರಾಜಶೇಖರ ಹುಲ್ಲೂರು ಪ್ರಾರ್ಥಿಸಿದರು, ಮಲ್ಲಯ್ಯ ಸ್ವಾಮಿ ಇಟಗಿ ನಿರೂಪಿಸಿ ವಂದಿಸಿದರು. ಸ
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…