ಕಲಬುರಗಿ: ರಾಜ್ಯದಲ್ಲಿ ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದಂತೆ ಇದೇ ಏಪ್ರಿಲ್ ಮಾಸಾಂತ್ಯಕ್ಕೆ ಹೊಸ ಗಣಿಗಾರಿಕೆ ನೀತಿ ಜಾರಿಗೆ ತರಲಾಗುತ್ತಿದೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ಅರ್. ನಿರಾಣಿ ಹೇಳಿದರು.
ರವಿವಾರ ಕಲಬುರಗಿ ನಗರದ ಗ್ರ್ಯಾಂಡ್ ಹೋಟೆಲ್‌ನಲ್ಲಿ ಕರೆಯಲಾದ ಸಚಿವರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು ಈ ಸಂಬಂಧ ಕರಡು ಸಿದ್ಧಗೊಂಡಿದೆ ಎಂದರು.
ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪೂರದಲ್ಲಿ ಇತ್ತೀಚೆಗೆ ಕ್ವಾರಿ ಗಣಿಗಾರಿಕೆ ಪ್ರದೇಶದಲ್ಲಿ ಸಿಡಿಮದ್ದಿನಿಂದ ಅವಘಡ ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಗಣಿಗಾರಿಕೆಗೆ ಸಿಡಿಮದ್ದು ಬಳಕೆ, ಸಾಗಾಟ ಹಾಗೂ ಸಂಗ್ರಹಣೆ ಕುರಿತು ಕ್ವಾರಿ ಮಾಲೀಕರಿಗೆ ಮತ್ತು ಕಾರ್ಮಿಕರಿಗೆ ಅರಿವು ಮೂಡಿಸುವ ಕಾರ್ಯಾಗಾರ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಡಿ.ಜಿ.ಎಂ.ಎಸ್. (ಡೈರೆಕ್ಟರ್ ಜನರಲ್ ಆಫ್ ಮೈನಿಂಗ್ ಸೆಕ್ಯೂರಿಟಿ) ಅನುಮತಿ ಇಲ್ಲದೆ ನಡೆಸುತ್ತಿರುವ ೨೫೦೦ ಗಣಿಗಾರಿಕೆಗಳಿದ್ದು, ಇವರೆಲ್ಲರಿಗೂ ಡಿ.ಜಿ.ಎಂ.ಎಸ್ ನಿಂದ ಅನುಮತಿ ಪಡೆದು ಗಣಿಗಾರಿಕೆ ನಡೆಸುವಂತೆ ನೋಟಿಸ್ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ಮುಷ್ಕರ ಕೈಬಿಟ್ಟು ಕೆಲಸಕ್ಕೆ ಬನ್ನಿ: ಸಾರಿಗೆ ನೌಕರರಲ್ಲಿ ಸಚಿವ ಶಿವರಾಮ ಹೆಬ್ಬಾರ್ ಮನವಿ
ಗಣಿಗಾರಿಕೆಯನ್ನು ವೈಜ್ಞಾನಿಕ ರೀತಿಯಲ್ಲಿ ನಡೆಸಲು ಕಾರ್ಮಿಕರಿಗೆ ಸೂಕ್ತ ತರಬೇತಿ ನೀಡಲು ಆಯವ್ಯಯದಲ್ಲಿ ಘೋಷಿಸಿದಂತೆ ಬೆಂಗಳೂರು ಮತ್ತು ಚಿತ್ರದುರ್ಗದಲ್ಲಿ ಸ್ಕೂಲ್ ಆಫ್ ಮೈನಿಂಗ್ ತೆರೆಯಲಾಗುವುದು. ವೈಜ್ಞಾನಿಕವಾಗಿ ಕ್ವಾರಿ ಗಣಿಗಾರಿಕೆ ನಡೆಸಲು ಪ್ರಸ್ತುತ ಇರುವ ಕನಿ? ಮಿತಿ ೧ ಎಕರೆ ಪ್ರದೇಶ ಬದಲಾಗಿ ೫ ಎಕರೆ ಪ್ರದೇಶ ನಿಗದಿಪಡಿಸಲು ಚಿಂತನೆ ನಡೆದಿದೆ ಎಂದು ಸಚಿವರು ಹೇಳಿದರು.
ಗಣಿ ಅದಾಲತ್: ಗಣಿಗಾರಿಕೆ ಉದ್ಯಮಿಗಳ ಮತ್ತು ಕಾರ್ಮಿಕರ ಸಮಸ್ಯೆಯನ್ನು ಅವರ ಬಾಗಿಲಿಗೆ ಹೋಗಿ ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯದ ೫ ಕಡೆ ಗಣಿ ಅದಾಲತ್ ನಡೆಸಲಾಗುತ್ತಿದೆ. ಎಪ್ರಿಲ್ ೩೦ಕ್ಕೆ ಬೆಂಗಳೂರಿನಲಿ, ಮೇ ೧೫ಕ್ಕೆ ಮೈಸೂರಿನಲ್ಲಿ, ಮೇ ೨೯ಕ್ಕೆ ಬೆಳಗಾವಿಯಲ್ಲಿ, ಜೂನ್ ೧೧ಕ್ಕೆ ಕಲಬುರಗಿಯಲ್ಲಿ ಹಾಗೂ ಜೂನ್ ೨೫ಕ್ಕೆ ಮಂಗಳೂರಿನಲ್ಲಿ ಅದಾಲತ್ ನಡೆಯಲಿದೆ. ಇದಕ್ಕೆ ಪೂರಕವಾಗಿ ಕಾರ್ಮಿಕರು ಮತ್ತು ಉದ್ಯಮಿದಾರರು ಮನವಿ ಸಲ್ಲಿಸಿದಲ್ಲಿ ಅದಾಲತ್‌ನಲ್ಲಿ ಇತ್ಯರ್ಥಪಡಿಸಲಾಗುವುದು. ಇನ್ನೂ ಗಣಿಗಾರಿಕೆಗೆ ಅನುಮತಿ ನೀಡಲು ಉದ್ಯಮಿದಾರರಿಗೆ ಅಲೆದಾಟ ತಪ್ಪಿಸಲು ಮುಂದಿನ ತಿಂಗಳಿನಿಂದ ಸಿಂಗಲ್ ವಿಂಡೋ ಸಿಸ್ಟಮ್ ಜಾರಿಗೆ ತರಲಾಗುವುದು ಎಂದು ಸಚಿವ ಮುರುಗೇಶ ಆರ್. ನಿರಾಣಿ ತಿಳಿಸಿದರು.
ಸಚಿವ ಅಶೋಕಗೆ ಕಲಬುರಗಿ ವಲಯದ ಶಾಸಕರಿಂದ ಸನ್ಮಾನ
ಡಿ.ಎಂ.ಎಫ್ ನಿಧಿ ಸದ್ಬಳಕೆಗೆ ಸೂಚನೆ: ರಾಜ್ಯದಲ್ಲಿ ಕಳೆದ ಐದಾರು ವ?ದಲ್ಲಿ ೨೪೦೦ ಕೋಟಿ ರೂ. ಡಿ.ಎಂ.ಎಫ್. ನಿಧಿ ಸಂಗ್ರಹಗೊಂಡಿದ್ದು, ಇದರಲ್ಲಿ ೮೦೦ ಕೋಟಿ ರೂ. ಮಾತ್ರ ಖರ್ಚಾಗಿದೆ. ಉಳಿದ ಹಣವನ್ನು ಮುಂದಿನ ೩ ತಿಂಗಳೊಳಗಾಗಿ ಗಣಿ ಬಾಧಿತ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಬಳಸುವಂತೆ ಡಿ.ಎಂ.ಎಫ್. ಸಮಿತಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಸಚಿವ ಮುರುಗೇಶ ಆರ್. ನಿರಾಣಿ ತಿಳಿಸಿದರು.
ಏಪ್ರಿಲ್ ಅಂತ್ಯಕ್ಕೆ ಹೊಸ ಮರಳು ನೀತಿ ಜಾರಿ: ಮರಳು ಮಾಫಿಯಾಗೆ ಕಡಿವಾಣ ಹಾಕಲು ಹಾಗೂ ಸಾರ್ವಜನಿಕರಿಗೆ ಸಲೀಸಾಗಿ ಮರಳು ದೊರೆಯುವಂತೆ ಏಪ್ರಿಲ್ ಅಂತ್ಯದೊಳಗಾಗಿ ಹೊಸ ಮರಳು ನೀತಿ ರಾಜ್ಯದಲ್ಲಿ ಜಾರಿಗೆ ತರಲಾಗುತ್ತಿದೆ. ೧೦ ಲಕ್ಷ ರೂ. ವರೆಗಿನ ಕಟ್ಟಡದ ಮನೆಗಳಿಗೆ ಪ್ರತಿ ಟನ್‌ಗೆ ಕೇವಲ ೧೦೦ ರೂ. ಪಡೆದು ರಿಯಾಯಿತಿ ದರದಲ್ಲಿ ಮರಳು ನೀಡಲಾಗುವುದು. ೧೦ ಲಕ್ಷ ರೂ. ಮೀರಿದ ಕಟ್ಟಡಗಳಿಗೆ ರಾಯಲ್ಟಿ ಆಧಾರದಲ್ಲಿ ಹಣ ಪಾವತಿಸಿ ಮರಳು ಪಡೆಯಬಹುದಾಗಿದೆ ಎಂದರು.
ರಸಗೊಬ್ಬರ ದರ ಹೆಚ್ಚಳ ಹಿನ್ನೆಲೆ: ಕೇಂದ್ರ ರಾಸಾಯನಿಕ ಸಚಿವರ ನೇತೃತ್ವದಲ್ಲಿ ಸಭೆ: ಬಿ.ಸಿ.ಪಾಟೀಲ
ಪ್ರತಿ ಜಿಲ್ಲೆಯಲ್ಲಿ ಖನಿಜ ಭವನ: ಆಡಳಿತ ಸುಧಾರಣೆ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲಿ ೧-೨ ಕೋಟಿ ರೂ. ವೆಚ್ಚದಲ್ಲಿ ಖನಿಜ ಭವನ ನಿರ್ಮಿಸಲಾಗುತ್ತಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ-ಸಿಬ್ಬಂದಿಗಳಿಗೆ ಪೊಲೀಸ್, ಅರಣ್ಯ ಇಲಾಖೆಯ ಮಾದರಿಯಲ್ಲಿ ಸಮವಸ್ತ್ರ ನೀಡಲಾಗುವುದು. ಮರಳು ಭದ್ರತೆಗಾಗಿ ಮಾಜಿ ಸೈನಿಕರನ್ನು ನಿಯೋಜಿಸಲಾಗುವುದು. ಮರಳು ಮಾರಾಟದಲ್ಲಿ ಪಾರದರ್ಶಕತೆ ತರಲು ವಾಕಿಟಾಕಿ ಬಳಕೆ, ಜಿಪಿಎಸ್ ಅಳವಡಿಕೆಯಂತಹ ಹೊಸ ತಂತ್ರಜ್ಞಾನದ ಮೊರೆ ಹೋಗಲಾಗುತ್ತಿದೆ. ಒಟ್ಟಾರೆಯಾಗಿ ಅಕ್ರಮ ಮರಳು ದಂಧೆಗೆ ಬ್ರೆಕ್ ಹಾಕಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ, ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್, ಮೂಲಸೌಕರ್ಯ, ಹಜ್ ಮತ್ತು ವಕ್ಫ್ ಸಚಿವ ಆನಂದ್ ಸಿಂಗ್ ಹಾಗೂ ಸಹಕಾರ ಸಚಿವ ಎಸ್.ಟಿ.ಸೋಮಶೇಖರ ಇದ್ದರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…