ಬಿಸಿ ಬಿಸಿ ಸುದ್ದಿ

ಭೃಹ್ಮ ದೇವನ ವಿಶ್ವ ಸೃಷ್ಠಿ ದಿನವೆ ಯುಗಾದಿ: ಸಾಹಿತಿ ರಾಜು ಹಿರೇಮಠ

ಕಲಬುರಗಿ: ಭೃಹ್ಮ ದೇವನು ವಿಶ್ವ ಸೃಷ್ಠಿಸಿದ ದಿನವನ್ನು ಯುಗಾದಿಯೆಂದು ಆಚರಿಸುವರು ಎಂದು ಕರ್ನಾಟಕ ವಿಜಯ ಸೇನೆ ಜಿಲ್ಲಾ ಅಧ್ಯಕ್ಷರಾದ ಸಾಹಿತಿ ರಾಜು ಎಮ್ ಹಿರೇಮಠ ಅವರು ಹೇಳಿದರು ಅವರು ಕಲಬುರಗಿ ವಿಜಯನಗರ ಕಾಲೋನಿಯ ಮಾಹಾಲಕ್ಷ್ಮೀ ದೇವಸ್ಥಾನ ಭಕ್ತರು ಹಮ್ಮಿಕೊಂಡಿದ್ದ ಗುದ್ದಲಿ ಪೂಜೆ ನೆರವೆರಿಸಿ ಅವರು ಮಾತನಾಡುತ್ತಿದ್ದರು.

ಯುಗ ಯುಗಗಳು ಕಳೆದರು ಯುಗಾದಿ ಮರಳಿ ಬರುತ್ತಿದ್ದೇ, ಎಂಬ ಮಂತ್ರವನ್ನು ಮಾತ್ರ ಜನರ ಬಾಯಿಯಲ್ಲಿ ಜನಪದ ವಾಗಿ ಉಳಿದಿದೆ,  ಆದರೆ ಮೂಲ ಇತಿಹಾಸವನ್ನು ಇಂದಿನ ಯುವ ಪೀಳಿಗೆಯವರು ಮರೆಯುತ್ತಿದ್ದಾರೆ ಆದರೆ ಇತಿಹಾಸವನ್ನು ನಾವು ನೋಡುವದಾದರೆ ಚೈತ್ರ ಪಾಂಡ್ಯದಂತು ಸೂರ್ಯೋದಯವಾಗುತ್ತಿರುವಾಗ ಪ್ರಕೃತಿಯ ಮೇಲೆ ಜೀವ ಸಂಕುಲಗಳು ಹುಟ್ಟಿದ ಸಂಕೇತವೇ ಈ ನಮ್ಮ ಯುಗಾದಿ ಹಬ್ಬವೇಂದ ತಿಳಿಸಿದ ಅವರು ಪ್ರತಿಯೊಬ್ಬ ಮನುಷ್ಯನಲ್ಲಿ ಕಷ್ಟ-ಸುಖಃ, ಸಿಹಿ-ಕಹಿ ಇದ್ದಂತೆ ಕಷ್ಟ ಬಂದಾಗ ಕುಗ್ಗದಿರು, ಸುಖಃ ಬಂದಾಗ ಹಿಗ್ಗದಿರು, ಕಷ್ಟ-ಸುಖಃವನ್ನು ಸಿಹಿ-ಕಹಿಯಂತೆ ಸ್ವೀಕರಿಸುವ ಮನೋಭಾವವನ್ನು  ಆಧುನಿಕ ಯುವ ಪೀಳಿಗೆಯಲ್ಲಿ ಬರಬೇಕೆಂದು ತಿಳಿಸಿ ಅವರು ಮಾತನಾಡುತ್ತಿದ್ದರು.

ಕಲಿಯುಗದಲ್ಲಿ ಸದ್ಯ ಸಂಗಮ ಯುಗ  ಯುಗಾದಿ ಎಂಬುವದು ಮೂಡನಂಭಿಕೆ ಎಂದವರಿಗೆಲ್ಲಾ  ಯುಗಾದಿಯೂ ಹೊಸ ಚಿಗುರಿನ ಮೂಲಕ ಉತ್ತರಕೊಟ್ಟ ದಿನವೇ ಹಿಂದುಗಳ ಪವಿತ್ರವಾದ ಹಬ್ಬ ಯುಗಾದಿಯಾಗಿದ್ದು. ಇತಿಹಾಸ ಹೊತ್ತ  ಶ್ರೇಷ್ಠವಾದ ಹಬ್ಬವಾದ ಯುಗಾದಿ ಹೊಸ ಕಾರ್ಯಕ್ಕೆ ಇದು ಶುಭ ಮಹೂರ್ತವಿದ್ದಂತೆ, ಶ್ರೀ ರಾಮ ಚಂದ್ರನಿಗೆ ಪಟ್ಟಾಭಿಷೇಕವನ್ನು ಕೂಡಾ ಇಂದಿನ ದಿನವೇ ಮಾಡಿದ್ದು, ಅದೇರೀತಿ ಚೀದಿ ರಾಜ್ಯದರಸನಿಗೆ ಇಂದ್ರ ವೈಜಯಂತಿ ಮಾಲೆಯನ್ನು ಕೊಟ್ಟ ದಿನವಿಂದು, ಸೂರ್ಯ ಚಂದ್ರರು ಪವಿತ್ರವಾಗಿರವರು ಈ ಸೃಷ್ಠಿಗೆ ಬೆಳಕನ್ನು ನೀಡುತ್ತಿದ್ದಾರೆಂದು ತಿಳಿಸಿ ಪವಿತ್ರವಾದ ಮನಸ್ಸಿನಿಂದ ಅವರು ನಮಸ್ಕರಿಸುವ ಆಚಾರ-ವಿಚಾರವನ್ನು ತಿಳಿಸುವಂತಹ ವೈಭವ ಯುಗಾದಿಗೆ ಸಲ್ಲುತ್ತದೆ ಎಂದು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದಲ್ಲಿ ಹಿರಿಯರಾದ ಅಣ್ಣಪ್ಪ ಎಸ್ ಬಿ ಅಪಚಂದ ಅವರು ಮಾತನಾಡಿ ಮಾಹಾಲಕ್ಷ್ಮಿ ದೇವಸ್ಥಾನದ ಗುದ್ದಲಿ ಪೂಜೇ ಇಂದು ಯುಗಾದಿ ಅಂದೆ ನೆರೆವೇರಿಸುತ್ತಿರುವದು ಇದು ನಮ್ಮ ಪೂಣ್ಯ ಪ್ರತಿಯೊಬ್ಬರು ತನು ಮನ ಧನದಿಂದ ಮಾಹಾತಾಯಿ ಲಕ್ಷ್ಮಿ ದೇವಿ ಸ್ಮರಿಸಿ ಸ್ವಚ್ಚ ಮನಸ್ಸಿನಿಂದ ನಡೆದುಕೊಂಡರೆ ಬೇಡಿದ ವರ ಕೊಡುವ ಶಕ್ತಿ ಆ ಮಾಹಾತಾಯಿ ಲಕ್ಷ್ಮಿ ದೇವಿಗಿದೆ, ಎಂದು ಅವರು ತಿಳಿಸಿದರು.

ಕುಪೆಂದ್ರ ಮರಗುತ್ತಿ ಅವರು ಮಾತನಾಡಿ ತಾಯಿಯ ಗುದ್ದಲಿ ಪೂಜೆ ಇಂದು ಯುಗಾದಿಯಂದೆ ಹಮ್ಮಿಕೊಂಡಿರುವದು ಕಾಲನಿಯ ಜನರಲ್ಲಿ ಸಂತೋಷದ ಸಮಯವಾಗಿ ಉಳಿಯಲಿದೆ, ತಾಯಿಯ ಸೇವೆಗೆ ನಿಶ್ವಾರ್ಥ ಸೇವೆ ನಮ್ಮದು ಬಯಸಿ ಬಂದದ್ದು ಅಂಗಭೋಗ ಬಯಸದೆ ಬಂದದ್ದು ಲಿಂಗಭೋಗ, ಯುಗಾದಿ ಅಂದೆ ಗುದ್ದಲಿ ಪೂಜೆ ನಡೆಯುತ್ತಿರುವದು ಲಿಂಗಭೋಗವೇಂದು ಅವರು ಮಾತನಾಡಿದರು.

ಮೊದಲಿಗೆ ಮಾಹಾತಾಯಿ ಲಕ್ಷ್ಮೀದೇವಿಗೆ ಪೂಜೆ ಸಲ್ಲಿಸಿ ಎಲ್ಲಾ ಭಕ್ತಾಧಿಗಳಿಗೂ ಸಿಹಿ ಪ್ರಸಾದ ವಿತರಿಸಿ ಗುದ್ದಲಿ ಪೂಜೆಗೆ ಚಾಲನೆ ನೀಡಲಾಗಿತ್ತು.

ಗುದ್ದಲಿ ಪೂಜೆಯ ಕಾರ್ಯಕ್ರಮದಲ್ಲಿ ಶ್ರೀಪಥರಾವ ಬೆಳಮಗಿ ಸ್ವಾಗತಿಸಿದರು, ಅಣ್ಣಾರಾವ ಬಿ ಪಾಟೀಲ ಕುಮಸಿ, ಅಂಬಾರಾಯ ವಾಗ್ದರ‍್ಗಿ, ಕುಪೆಂದ್ರ ಮರಗುತ್ತಿ, ರಾಮದಾಸ ಕವಳೆ ಕಾಂತು ಡೋಲೆ ಬೆಳಮಗಿ, ನಾಗಪ್ಪಾ ಬೆಳಮಗಿ, ಉದಯ ದುತ್ತರಗಾಂವ, ಬಸವರಾಜ ಗಂಧಿಗುಡಿ, ವೀರುಪಾಕ್ಷಪ್ಪಾ ತಡಕಲ್ ಸಿದ್ದು ಮಡಕಿ, ವಿಜಯಕುಮಾರ ಮಡಕಿ, ಕಂಟೇಪ್ಪಾ ಬಿರಾದಾರ, ಶಿವರಾಜ, ಶ್ರೀನಿವಾಸ ಗುತ್ತೆದಾರ ಸುಭಾಸಚಂದ್ರ ಅಪಚಂದ ಇನ್ನಿತರರು ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

60 mins ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

12 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

12 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

14 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

14 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

14 hours ago