ಕಲಬುರಗಿ: ಜಿಲ್ಲಾ ಕಸಾಪಚುನಾವಣೆಗೆ ಸ್ಪರ್ಧಿಸುತ್ತಿರುವವರಲ್ಲಿ ಬಿ.ಎಚ್. ನಿರಗುಡಿ ಸಮರ್ಥರಿದ್ದು, ಈ ಬಾರಿಯ ಚುನಾವಣೆಯಲ್ಲಿ ಅವರಿಗೆ ಬೆಂಬಲಿಸುವುದಾಗಿ ಸಮುದಾಯ ಟೀಂ ನ ಪ್ರಮುಖರಾದ ಡಾ. ಮೀನಾಕ್ಷಿ ಬಾಳಿ ತಿಳಿಸಿದರು.
ಈಗಾಗಲೇ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿರುವ ಅನುಭವ ಇರುವ ನಿರಗುಡಿಯವರು, ಖಾಸಗಿ ಕಾಲೇಜೊಂದರ ಪ್ರಾಚಾರ್ಯರಾಗಿ, ಸಾಹಿತಿಯಾಗಿ, ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದು, ಕಸಾಪಕ್ಕೆ ಇಂತಹ ಜ್ರಿಯಾಶೀಲರನ್ನು ಬಯಸುತ್ತದೆ ಎಂದು ಇಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಈಗಾಗಲೇ ಸಾಹಿತ್ಯಕ ವಾತಾವರಣದಿಂದ ದೂರ ಸರಿದಿರುವ ಪರಿಷತ್ ನಲ್ಲಿ ಮತ್ತೆ ಸಾಹಿತ್ಯಕ ಸಾಂಸ್ಕೃತಿಕ ವಾತಾವರಣ ತರುವುದಕ್ಕಾಗಿ ನಿರಗುಡಿ ಅವರನ್ನು ಆಯ್ಕೆ ಮಾಡುವುದು ಅತ್ಯಂತ ಅವಶ್ಯಕವಾಗಿದೆ ಎಂದರು.
ನುಡಿಯಲ್ಲಿ ಸಜ್ಜನಿಕೆ, ನಡೆಯಲ್ಲಿ ಸರಳತೆ ಮೈಗೂಡಿಸಿಕೊಂಡಿರುವ ನಿರಗುಡಿಯವರ ವ್ಯಕ್ತಿತ್ವ ಪರಿಷತ್ತಿನ ಘನತೆಗೆ ತಕ್ಕುದಾಗಿದೆ ಎಂದು ವಿವರಿಸಿದರು.
ಸರ್ವಾಧಿಕಾರಿ ಧೋರಣೆ ಇಲ್ಲದ ಎಲ್ಲರೊಂದಿಗೆ ಒಂದಾಗಿ, ಚೆಂದಾಗಿ ಬೆರೆಯುವ ನಿರಗುಡಿಯವರನ್ನು ಆಯ್ಕೆ ಮಾಡುವುದು ಪ್ರತಿಯೊಬ್ಬ ಪ್ರಜ್ಞಾವಂತ ಮತದಾರರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಡಾ. ಶ್ರೀಶೈಲ ಘೂಳಿ, ಡಾ. ಪ್ರಭು ಖಾನಾಪುರೆ, ನಾಗೇಂದ್ರಪ್ಪ ಅವರಾದಿ, ದತ್ತಾತ್ರೇಯ ಇಕ್ಕಳಕಿ, ಶರಣಗೌಡ ಪಾಟೀಲ, ಗಣಪತಿ ಕೊಡ್ಲೆ, ಪ್ರೇಮಾನಂದ ಚಿಂಚೋಳಿಕರ, ಭೀಮಾಶಂಕರ ಉಡಗಿ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…