ಸುರಪುರ: ರಾಜ್ಯದಲ್ಲಿ ಕೊರೊನಾ ಮಹಾ ಮಾರಿ ಹೆಚ್ಚಳದಿಂದಾಗಿ ಸರಕಾರ ಅನೇಕ ನಿಯಮಗಳನ್ನು ಜಾರಿಗೊಳಿಸಿದೆ,ಅದರಂತೆ ಸುರಪುರ ನಗರದಲ್ಲಿನ ತರಕಾರಿ ಮಾರಾಟದ ಸ್ಥಳವನ್ನು ಬದಲಾವಣೆ ಮಾಡಲಾಗಿದ್ದು ಇದನ್ನು ವಿರೋಧಿಸಿ ತರಕಾರಿ ಮತ್ತು ಹಣ್ಣು ಮಾರಾಟಗಾರರು ನಗರಸಭೆ ಮುಂದೆ ಪ್ರತಿಭಟನೆ ನಡೆಸಿ ಸ್ಥಳಾಂತರ ಮಾಡದಂತೆ ಒತ್ತಾಯಿಸಿದರು.
ನಗರದಲ್ಲಿನ ನಗರಸಭೆ ಕಚೇರಿ ಮುಂದೆ ಜಮಾಯಿಸಿದ ಅನೇಕ ಜನ ಬೀದಿ ಬದಿಯ ವ್ಯಾಪಾರಿಗಳು ನಗರಸಭೆ ಅಧಿಕಾರಿಗಳ ವಿರುಧ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಅಲ್ಲದೆ ಯಾವುದೇ ಅಧಿಕಾರಿಗಳು ಇವರ ಕೂಗು ಕೇಳಿಸಿಕೊಳ್ಳದಿದ್ದಾಗ ರಸ್ತೆ ತಡೆಯನ್ನು ನಡೆಸಿದರು.
ಪೂಜ್ಯ ಶ್ರೀ ಬಸವರಾಜಪ್ಪ ದೊಡ್ಡಪ್ಪ ಅಪ್ಪ ಅವರ ಶ್ರದ್ಧಾಂಜಲಿ
ಈ ಸಂದರ್ಭದಲ್ಲಿ ಮಾತನಾಡಿದ ಬೀದಿಬದಿ ವ್ಯಾಪಾರಿಯಾದ ಲಕ್ಷ್ಮೀ ಹುಜರತಿ, ಕರೋನಾ ವೈರಸ್ ಎಲ್ಲರನ್ನೂ ಭಯಭೀತಗೊಳಿಸಿರುವುದು ನಿಜ. ಬೀದಿಬದಿಯಲ್ಲಿ ಕುಳಿತು ವ್ಯಾಪಾರ ಮಾಡುವವರಿಂದಲೇ ಕೊರೋನಾ ಹಬ್ಬುತ್ತದೆ ಎನ್ನುವುದು ಎಷ್ಟರಮಟ್ಟಿಗೆ ಸರಿ. ವಿವಾಹ, ಸಭೆ, ಸಮಾರಂಭಗಳಿಂದ ಬರುವುದಿಲ್ಲವೇ ಎಂದು ಪ್ರಶ್ನಿಸಿದ ಅವರು ನಾವು ತರಕಾರಿ ಮಾರುವ ಜಾಗಕ್ಕೆ ಗ್ರಾಹಕರು ಹುಡುಕಿಕೊಂಡು ಬರುತ್ತಾರೆ. ಏಕಾಏಕಿ ಸ್ಥಳ ಬದಲಾವಣೆ ಮಾಡಿದರೆ ಗ್ರಾಹಕರು ಬಾರದಂತಾಗಿ ವ್ಯಾಪಾರಸ್ಥರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸ ನಗರಸಭೆಯಿಂದ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾವು ಮಾರುವ ಪ್ರದೇಶದಿಂದ ಪ್ರಭು ಕಾಲೇಜು ಮೈದಾನದಲ್ಲಿ ತರಕಾರಿ ಇಟ್ಟರೆ ಅಲ್ಲಿಗೆ ಯಾರು ಬರುವುದಿಲ್ಲ. ಅಲ್ಲದೆ ಉಳಿದ ತರಕಾರಿಯನ್ನು ಮನೆಗೆ ತರಲು, ಮತ್ತೆ ಇಲ್ಲಿಂದ ಮೈದಾನಕ್ಕೆ ಹೋಗಲು ಆಟೋಕ್ಕೆ ೧೪೦ ರೂ. ನೀಡಬೇಕಿದೆ. ಇಡೀ ದಿನ ಮಾರಿದರೆ ೨೦೦ ರೂ. ಉಳಿಯಲ್ಲ. ಅಂತಹುದರಲ್ಲಿ ಆಟೋಕ್ಕೆ ದುಡಿಯಬೇಕಿದೆ. ಮೈದಾನದಲ್ಲಿ ಯಾವುದೇ ಸೌಲಭ್ಯವಿಲ್ಲ. ಗ್ರಾಹಕರು ಮೈದಾನಕ್ಕೆ ಬರಲು ಹಿಂದೇಟು ಹಾಕುತ್ತಾರೆ. ನಾವು ಇರುವ ಜಾಗದಲ್ಲಿಯೇ ಕೊವೀಡ್ ನಿಯಮ ಪಾಲಿಸಿ ವ್ಯಾಪಾರ ಮಾಡುತ್ತೇವೆ. ಇದಕ್ಕೆ ನಗರಸಭೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.
ಅಗ್ನಿಶಾಮನ ಕುರಿತು ಕರಪತ್ರ ಹಂಚಿ ಜಾಗೃತಿ ಜಾಗೃತಿ
ಪ್ರತಿಭಟನಾ ನಿರತರೊಂದಿಗೆ ನಗರಸಭೆ ಅಧ್ಯಕ್ಷೆ ಸುಜಾತಾ ಜೇವರ್ಗಿ ಮಾತನಾಡಿ, ೨ ದಿನದವರೆಗೆ ನೀವು ಯಾವ ಜಾಗದಲ್ಲಿ ವ್ಯಾಪಾರ ಮಾಡುತ್ತೀರೋ ಅಲ್ಲಿಯೇ ಮಾಡಿ. ಪೌರಾಯುಕ್ತರು ಬಂದ ನಂತರ ಚರ್ಚಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು ಮತ್ತು ಕಡ್ಡಾಯವಾಗಿ ಎಲ್ಲಾ ವ್ಯಾಪಾರಿಗಳು ಕರೋನಾ ನಿಯಮವಾಳಿಗಳನ್ನು ಪಾಲಿಸಬೇಕು ಹಾಗೂ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ವ್ಯಾಪಾರ ನಡೆಸಬೇಕು. ನಿಯಮ ಮೀರಿದರೆ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಸಿದರು.
ಪಿಐ ಸಾಹೇಬಗೌಡ ಎಂ. ಪಾಟೀಲ್, ಬಿಜೆಪಿ ಮುಖಂಡ ವೇಣುಗೋಪಾಲನಾಯಕ ಜೇವರ್ಗಿ, ನಗರಸಭೆ ವ್ಯವಸ್ಥಾಪಕ ಯಲ್ಲಪ್ಪ ನಾಯಕ, ೧೦೦ಕ್ಕೂ ಹೆಚ್ಚು ಬೀದಿಬದಿ ವ್ಯಾಪಾರಸ್ಥರು ಪಾಲ್ಗೊಂಡಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…