ಕಲಬುರಗಿ: ಕರ್ನಾಟಕ ಸರಕಾರ ಕೇಂದ್ರ ಸರಕಾರದ ನಿರ್ದೇಶನದಂತೆ ಕಾರ್ಪೋರೇಟ್ ಕಂಪನಿಗಳ ಲೂಟಿಗೆ ದೊಡ್ಡ ಪ್ರಮಾಣದಲ್ಲಿ ನೆರವಾಗುವ ದುರುದ್ದೇಶದಿಂದಲೇ ರಾಜ್ಯದ ಬಿಪಿಎಲ್ ಕಾರ್ಡ್ ದಾರರಿಗೆ ಪಡಿತರ ವ್ಯವಸ್ಥೆಯ ಆಥವಾ ನ್ಯಾಯ ಬೆಲೆ ಅಂಗಡಿಯ ಮೂಲಕ ನೀಡಲಾಗುತ್ತಿದ್ದ ಪಡಿತರವನ್ನು ಫಲಾನುಭವಿಗೆ 10 ಕೇಜಿಯಿಂದ ಈ ಹಿಂದೆ 05 ಕೇಜಿಗೆ ಮತ್ತು ಈಗ ಅದನ್ನು 02 ಕೇಜಿಗೆ ಇಳಿಸಿ ರಾಜ್ಯದ ಬಡವರಿಗೆ ವಂಚನೆ ಎಸಗಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದಿ) ಜಿಲ್ಲಾ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.
ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ-2020, ಆಹಾರ ಧಾನ್ಯಗಳನ್ನು/ಪದಾರ್ಥಗಳನ್ನು ಎಥೇಚ್ಛವಾಗಿ ದಾಸ್ತಾನು ಮಾಡಿ ಕಾರ್ಪೊರೇಟ್ ಲೂಟಿಗೆ ಎಲ್ಲ ಗ್ರಾಹಕರನ್ನು ತೆರೆದಿರುವುದಕ್ಕೆ ಪೂರಕವಾಗಿದ್ದು ಕಂಪನಿಗಳ ಲೂಟಿಯನ್ನು ವ್ಯಾಪಕಗೊಳಿಸಲಿದೆ ಎಂದು ಪಕ್ಷ ಪತ್ರಿಕಾ ಪ್ರಕಟಣೆಯಲ್ಲಿ ಅಸಮಧಾನ ವ್ಯಕ್ತಪಡಿಸಿದೆ.
ಬೈಕ್ ಕ್ರೂಸರ್ ಡಿಕ್ಕಿ ಸ್ಥಳದಲ್ಲೆ ಸಾವು
ರಾಜ್ಯ ಹಾಗೂ ದೇಶದಲ್ಲಿ ಶೇ. 85 ನಾಗರೀಕರ ತಲಾ ಆದಾಯ ದಿನವೊಂದಕ್ಕೆ 20 ರೂ. ಗಿಂತ ಕಡಿಮೆ ಇರುವಾಗ, 104 ದೇಶಗಳ ಅಪೌಷ್ಟಿಕತೆಯಲ್ಲಿ ನಮ್ಮ ದೇಶದ ಸ್ಥಾನವು ನಾಚಿಕೆ ಗೇಡಿನ 94 ಆಗಿರುವಾಗ, ಅಪೌಷ್ಠಿಕತೆಯನ್ನು ನಿವಾರಿಸಲು ದೇಶದ ಗೋಡೌನ್ ಗಳಲ್ಲಿ ಕೊಳೆಯುತ್ತಿರುವ 42 ಲಕ್ಷ ಟನ್ ಪಡಿತರವನ್ನು ಕಾಪಾಡಿ ವ್ಯಾಪಕವಾಗಿ ಹಂಚಬೇಕಾದ ಕರ್ತವ್ಯವನ್ನು ದುರುದ್ದೇಶದಿಂದಲೇ ಕೈಬಿಟ್ಟು ಬಡಜನತೆಯನ್ನು ಅಪೌಷ್ಠಿಕತೆಯ ಸಾವಿನ ದವಡೆಗೆ ವೇಗವಾಗಿ ತಳ್ಳುವ ನರಹತ್ಯೆಯ ನೀಚ ಕೆಲಸದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ತೊಡಗಿವೆ ಎಂದು CPIM ಜಿಲ್ಲಾ ಕಾರ್ಯದರ್ಶಿ ಶರಣಬಸಪ್ಪಾ ಮಮಶೆಟ್ಟಿ ಆರೋಪಿಸಿದ್ದಾರೆ.
ಸಿಎಂ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ರಾಜ್ಯ ಸರಕಾರ ಕೇಂದ್ರ ಸರಕಾರ ಹೇರುವ ಎಲ್ಲಾ ಧಾಳಿಗಳನ್ನು ಬಾಯಿ ಮುಚ್ಚಿಕೊಂಡು ಜಾರಿ ಮಾಡುವ ಕಾರ್ಪೊರೇಟ್ ಕಂಪನಿಗಳ ಗುಲಾಮಿ ಸರಕಾರವಾಗಿರುವುದನ್ನು ಇದು ಮತ್ತೊಮ್ಮೆ ಸಾಬೀತು ಪಡಿಸಿದೆ. 2021 ರ ಕೇಂದ್ರ ಸರಕಾರದ ಬಜೆಟ್ ನಲ್ಲಿಯೇ ಆಹಾರದ ಸಹಾಯಧನವನ್ನು 2020 ರ ಬಜೆಟ್ ಗೆ ಹೋಲಿಸಿದರೇ ಶೇ. 41 ರಷ್ಠು ಕಡಿತ ಮಾಡಿದಾಗಲೇ ಯಡಿಯೂರಪ್ಪರವರು ಬಾಯಿ ಮುಚ್ಚಿಕೊಂಡಿದ್ದರು. ಈ ರಾಜ್ಯ ಸರಕಾರಕ್ಕೆ ರಾಜ್ಯದ ಬಡವರು, ದಲಿತರು,ಮಹಿಳೆಯರ ಕುರಿತ ಕಿಂಚಿತ್ತೂ ಕಾಳಜಿ ಇಲ್ಲವೆಂಬುದು ಇದರಿಂದ ಮತ್ತೊಮ್ಮೆ ಸಾಬೀತಾಯಿತು.
ರಾಜ್ಯದಾದ್ಯಂತ ಕಫ್ರ್ಯೂ ಹಿನ್ನೆಲೆ: ಇಲಾಖಾ ಪರೀಕ್ಷೆ ಮುಂದೂಡಿಕೆ
ರಾಜ್ಯದ ಜನತೆ ಆರ್ಥಿಕ ಬಿಕ್ಕಟ್ಟು ಹಾಗೂ ಕಳೆದ ಮೂರು-ನಾಲ್ಕು ವರ್ಷಗಳಿಂದ ಬರಗಾಲ, ಅತೀವೃಷ್ಟಿ, ಪ್ರವಾಹ, ಕೋವಿಡ್- 19 ಹಾಗೂ ಲಾಕ್ ಡೌನ್ ಗಳಿಂದ ಬಾಧಿತರಾಗಿದೆ. ಈ ಬಾಧಿತರ ಮೇಲೆ, ಪೆಟ್ರೋಲ್, ಡೀಸೆಲ್, ಗ್ಯಾಸ್, ರಸಾಯನಿಕ ಗೊಬ್ಬರಗಳ ಬೆಲೆ ಏರಿಕೆ ಮತ್ತು ಆಸ್ತಿ ಮತ್ತಿತರೇ ತೆರಿಗೆ ಭಾರಗಳನ್ನು ಈಗಾಗಲೇ ಹೇರಿ ಗಾಯದ ಮೇಲೆ ಬರೆ ಎಳೆಯಲಾಗಿದೆ. ಇದೀಗ ರಾಜ್ಯ ಸರಕಾರ ಪಡಿತರ ಕಡಿತ ಮಾಡಿ ಬರೆ ಎಳೆದ ಗಾಯಕ್ಕೆ ಖಾರ ತುಂಬುವಂತೆ ಮಾಡಿದೆ ಎಂದಿದ್ದಾರೆ.
ಯಾದಗಿರಿ: ಭೀಕರ ರಸ್ತೆ ಅಪಘಾತ ಸ್ಥಳದಲ್ಲೇ ಐವರು ಸಾವು
ಈ ಕೂಡಲೇ ಪಡಿತರ ಕಡಿತವನ್ನು ಹಿಂಪಡೆಯುವಂತೆ ಮತ್ತು ತಲಾ ವ್ಯಕ್ತಿಗೆ ಕನಿಷ್ಠ 10 ಕೇಜಿ ಸಮಗ್ರ ಪಡಿತರ ಒದಗಿಸುವಂತೆ ಸಮಿತಿ ಮುಖ್ಯ ಮಂತ್ರಿಗಳಿಗೆ ಒತ್ತಾಯಿಸಿದೆ. ಅದೇ ರೀತಿ, ರಾಜ್ಯದ ನಾಗರೀಕರು ಬಡವರು, ಸಂಘ ಸಂಸ್ಥೆಗಳು, ಪಕ್ಷದ ಘಟಕಗಳು ಸರಕಾರಗಳ ಈ ದೌರ್ಜನ್ಯವನ್ನು ಬಲವಾಗಿ ಪ್ರತಿರೋಧಿಸುವಂತೆ CPIM ಕರೆ ನೀಡಿದೆ.
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…
ಕಲಬುರಗಿ; ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ತಂಬಾಕು ನಿಯಂತ್ರಣ…
ಸೇಡಂ (ಕಲಬುರಗಿ); ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ `ಅಮ್ಮ ಪ್ರಶಸ್ತಿ’ 24ನೇ ವರ್ಷದ ಸಮಾರಂಭವು…