ಬಿಸಿ ಬಿಸಿ ಸುದ್ದಿ

ಸರ್ಕಾರದ ಕೆಲಸ ದೇವರ ಕೆಲಸ, ಅಂದ ಹಾಗೆ ಸರ್ಕಾರದ ಆದೇಶ ದೇವರ ಆದೇಶ, ತಪ್ಪದೇ ಪಾಲಿಸಿ: ಪ್ಯಾಟಿ

ಕಲಬುರಗಿ: ಮಹಾಮಾರಿ ಕೊರೋನಾಕ್ಕೆ ಇಡೀ ಜಗವೇ ತಲ್ಲಣಿಸುತ್ತಿರುವಾಗ ನಾವು ಭಾರತೀಯರು. ಪ್ರಾಚೀನ ಕಾಲದಿಂದಲೂ ನಾವು ಬೇರೆಯವರಿಗೆ ಧೈರ್ಯ ತುಂಬಿ ಮಾರ್ಗದರ್ಶನ ಮಾಡಿದವರು. ಆದ್ದರಿಂದ ನಂಬಿಗಸ್ಥರಾದ ನಾವು ಸರ್ಕಾರದ ಆದೇಶ ತಪ್ಪದೇ ಪಾಲಿಸಿ ಕೋವಿಡ್-೧೯ನ್ನು ಹತೋಟಿಗೆ ತರೋಣ. ಜನರಲ್ಲಿ ಧೈರ್ಯ ತುಂಬಿಸೋಣ ಎಂದು ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿಯ ಹಿರಿಯ ಮುಖಂಡ ಶಾಮರಾವ್ ಪ್ಯಾಟಿ ಅವರು ಮನವಿ ಮಾಡಿದರು.

ಸಾವು ಸ್ವಾಭಾವಿಕ ಅಂಜುವುದು ಬೇಡ. ಈ ಸಂದಿಗ್ದ ಪರಿಸ್ಥಿತಿಯನ್ನು ಅರಿತುಕೊಂಡು ಕೊರೋನಾ ಓಡಿಸೋಣ. ಸ್ವಚ್ಛತೆಯಿಂದ ಬದುಕೋಣ. ಸರ್ಕಾರದ ಆದೇಶ ಪಾಲಿಸೋಣ. ಅಲ್ಲಮಪ್ರಭುದೇವರು ಹೇಳಿದಂತೆ ಕಂಡು ಕಂಡುದೆಲ್ಲವನ್ನೂ ಕೊಂಡು ಅಟ್ಟಹಾಸದಿ ಮೆರೆವ ಜನಕ್ಕೆ ಕಾಣದ ಜೀವಿಯು ಬಂದು ಜಗವ ತಲ್ಲಣಿಸಿತು ನೋಡಾ ಗುಹೇಶ್ವರಾ ಎಂಬು ವಚನವನ್ನು ಅವರು ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

ಮೃತ ತಾಯಿಯ ಮುಖ ನೋಡಲು ಬಹುಮಹಡಿ ಕಟ್ಟಡ ಏರಿದ ಮಗ

ಜಾಗೃತಿಯಿಂದ ಜೀವನ ಸಾಗಿಸಿದರೆ ಎಲ್ಲವೂ ಸರಿ ಹೊಂದುವುದು. ಇಲ್ಲದೇ ಇದ್ದರೆ ಆಪತ್ತು ಸಂಭವಿಸುವುದು. ಎಲ್ಲವನ್ನೂ ತಿಳಿದೂ ನಾವು ಮೂರ್ಖರಂತೆ ವರ್ತಿಸುವುದು ಬಿಟ್ಟು ಸ್ವಚ್ಛತೆಯೊಂದಿಗೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಹಾಗೂ ಸೈನಿಟೈಜರ್ ಬಳಸುವುದು ಮುಂತಾದ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಜೀವಕ್ಕೆ ಒಂದು ಬೆಲೆ ಬರುತ್ತದೆ ಎಂದು ಅವರು ಸಲಹೆ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ರಾಜ್ಯಕ್ಕೆ ರೆಮ್‌ಡಿಸಿವರ್ ಇಂಜೆಕ್ಷನ್ ಹೆಚ್ಚಿಗೆ ಪೂರೈಕೆ ಮಾಡಿರುವುದು ಸ್ವಾಗತಾರ್ಹ. ನಿರ್ಲಕ್ಷ್ಯ ಮಾಡಿದರೆ ಜೀವಕ್ಕೆ ವಿಪತ್ತು. ಜಾಗೃತಿ ವಹಿಸಿದರೆ ಕೊರೋನಾಕ್ಕೆ ಆಪತ್ತು ಎಂದು ಅವರು ಎಚ್ಚರಿಸಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೋವಿಡ್ ನಿಯಂತ್ರಣಕ್ಕಾಗಿ ಹಲವಾರು ಮಾರ್ಗದರ್ಶಿ ಸೂತ್ರಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ನಾವೆಲ್ಲರೂ ಪಾಲಿಸೋಣ ಎಂದು ಅವರು ತಿಳಿಸಿದ್ದಾರೆ.

emedialine

Recent Posts

ನ್ಯಾಯವಾದಿ ವಿನೋದ ಕುಮಾರ ಎಸ್. ಜೇ. ನಾಮಪತ್ರ ಸಲ್ಲಿಕೆ

ಕಲಬುರಗಿ: ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗರುವ ಇಂದು 2024-2029 ಸಾಲಿನ, ಜಿಲ್ಲಾ ಘಟಕಕ್ಕೆ…

4 hours ago

13 ಫಲಾನುಭವಿ ಆಧಾರಿತ ಯೋಜನೆಗಳಡಿ ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ಕಲಬುರಗಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಈ ಕೆಳಕಂಡ 13 ಫಲಾನುಭವಿ ಆಧಾರಿತ…

5 hours ago

ಕಾರ್ಮಿಕರ ಸಚಿವರ ಕಲಬುರಗಿ ಪ್ರವಾಸ ರದ್ದು

ಕಲಬುರಗಿ: ರಾಜ್ಯದ ಕಾರ್ಮಿಕ ಸಚಿವರಾದ ಸಂತೋಷ ಎಸ್. ಲಾಡ್ ಅವರು ಜುಲೈ 5 ರಂದು ಶುಕ್ರವಾರ ಕೈಗೊಳ್ಳಬೇಕಿದ್ದ ಕಲಬುರಗಿ ಜಿಲ್ಲಾ…

5 hours ago

ರಾಜ್ಯ-ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಾಶಿ ಮಾದರಿಯಲ್ಲಿ ದತ್ತನ‌ ಕ್ಷೇತ್ರ ಅಭಿವೃದ್ಧಿ

ಕರ್ನಾಟಕ‌ ವಿಧಾನಸಭೆ ಅರ್ಜಿಗಳ ಸಮಿತಿಯಿಂದ ಗಾಣಗಾಪುರ ದೇವಸ್ಥಾನ ಅಭಿವೃದ್ಧಿ ಕುರಿತು ಚರ್ಚೆ ಕೇಂದ್ರಕ್ಕೆ ಸಮಿತಿ ನಿಯೋಗ ತೆರಳಲು ನಿರ್ಧಾರ ಕಲಬುರಗಿ;…

5 hours ago

ಚಿಂಚೋಳಿ: ಶರಣು ಪಾಟೀಲ್ ಮೋತಕಪಲ್ಲಿ ನಾಮಪತ್ರ ಸಲ್ಲಿಕೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆ ಚಿಂಚೋಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ಇದೆ 21 ರಂದು…

6 hours ago

ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ತಿದ್ದು ಪಡಿಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ಈ ಕೆಳಕಂಡತೆ ತಿದ್ದು ಪಡಿ ಮಾಡಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ,…

6 hours ago