ಮೃತ ತಾಯಿಯ ಮುಖ ನೋಡಲು ಬಹುಮಹಡಿ ಕಟ್ಟಡ ಏರಿದ ಮಗ

0
12

ಕಲಬುರಗಿ : ಕೊರೊನಾ‌ ಸೋಂಕಿನಿಂದ ಮೃತಪಟ್ಟ ತಾಯಿಯ ಮುಖ ನೋಡಲಿಕ್ಕೆ ಅನುಮತಿ ನೀಡಲಿಲ್ಲ ಎಂದು ಯುವಕನೊಬ್ಬ ಆಸ್ಪತ್ರೆಯ ಬಹುಮಹಡಿ ಕಟ್ಟಡ ಏರಲು ಯತ್ನಿಸಿದ ಘಟನೆ ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.

ಕಳೆದ 12 ದಿನಗಳಿಂದ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕನ ತಾಯಿ ಇಂದು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದರಿಂದ ಯುವಕ ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಒಮ್ಮೆ ತಾಯಿ ಮುಖ ನೋಡಲು ಬಿಡಿ ಎಂದು ಸಿಬ್ಬಂದಿಯನ್ನು ಪರಿಪರಿಯಾಗಿ ಕೇಳಿದರೂ ಒಪ್ಪದಿದ್ದಾಗ, ಬಹು ಮಹಡಿ ಕಟ್ಟಡ ಏರಲು ಯತ್ನಿಸಿದ್ದಾನೆ.

Contact Your\'s Advertisement; 9902492681

ಅರ್ಧದಷ್ಟು ಕಟ್ಟಡ ಏರಿದ್ದನ್ನು ಕಂಡು ಸಿಬ್ಬಂದಿ ಆತನ ಮನವೊಲಿಸಲು ಯತ್ನಿಸಿದ್ದಾರೆ‌. ಯುವಕ ಇಳಿಯದಿದ್ದಾಗ ಆತನ ಜೀವಕ್ಕೆ ಕುತ್ತು ಬರಬಹುದೆಂಬ ಕಾರಣಕ್ಕೆ ತಾಯಿಯ ಮುಖ ತೋರಿಸುವುದಾಗಿ ಭರವಸೆ ನೀಡಿದ ನಂತರ ಆಸ್ಪತ್ರೆ ಕಟ್ಟಡದಿಂದ ಯುವಕ ಕೆಳಗಿಳಿದ್ದಾನೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here