ಬಿಸಿ ಬಿಸಿ ಸುದ್ದಿ

ಶಹಾಬಾದ: ವ್ಯಾಕ್ಸಿನ್ ಪಡೆಯಲು ಜನರಲ್ಲಿ ಹೆಚ್ಚಿದ ಆಸಕ್ತಿ

ಶಹಾಬಾದ: ನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಿನಾಲೂ ಲಸಿಕೆ ಪಡೆಯುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.ಗುರುವಾರವೂ ಸಹ ಹೆಚ್ಚಿನ ಜನರು ಲಸಿಕೆ ಪಡೆಯಲು ಬಂದಿದ್ದರಿಂದ ಅಗತ್ಯದಷ್ಟು ಲಸಿಕೆ ದಾಸ್ತಾನು ಇರದ ಪಕ್ಷದಲ್ಲಿ ಸಾರ್ವಜನಿಕರು ಮನೆ ಕಡೆಗೆ ತೆರಳುವಂತೆ ಆಯಿತು.

ನಗರದ ಸಮುದಾಯ ಆರೋಗು ಕೇಂದ್ರದಲ್ಲಿ ದಿನವೊಂದಕ್ಕೆ ೧೬೦ರಿಂದ ೧೮೦ ಮಂದಿಗೆ ವ್ಯಾಕ್ಸಿನ್ ನೀಡಲಾಗುತ್ತಿದೆ.ಆರಂಭದ ದಿನಗಳಲ್ಲಿ ೬೦ರ ವಯೋಮಾನ ದಾಟಿದವರಿಗೆ ಲಸಿಕೆ ನೀಡುತ್ತಿದ್ದಾಗ ಉತ್ತಮ ಸ್ಪಂದನೆ ದೊರೆತು ದಿನವೊಂದಕ್ಕೆ ೨೦೦ ಕ್ಕೂ ಅಧಿಕ ಮಂದಿ ಆಗಮಿಸಿದ್ದೂ ಈಗ ಮತ್ತೆ ಕೆಲ ದಿನಗಳಿಂದ ಲಸಿಕೆ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ೪೫ಕ್ಕಿಂತ ಹೆಚ್ಚಿನ ವಯೋಮಾನ ಜನರು ವ್ಯಾಕ್ಸಿನ್ ತೆಗೆದುಕೊಳ್ಳಲು ಅಸಡ್ಡೆ ತೋರುತ್ತಿದ್ದರು. ಆಗ ವ್ಯಾಕ್ಸಿನ್ ದಾಸ್ತಾನು ಸಾಷ್ಟಿದ್ದರೂ ಜನರು ಮಾತ್ರ ಬರುತ್ತಿರಲಿಲ್ಲ.

ಕೋವಿಡ್ ಸೋಂಕಿತರಿಗೆ ಚಿಕಿತ್ಸೆ: ಮಾನವ ಸಂಪನ್ಮೂಲ ಸಮರ್ಪಕವಾಗಿ ಬಳಸಿಕೊಳ್ಳಿ: ಸಂಸದ

ಅಲ್ಲದೇ ವ್ಯಾಕ್ಸಿನ್ ಹಾಕಿಕೊಂಡರೆ ಅಡ್ಡ ಪರಿಣಾಮ ಬರುತ್ತದೆ ಎಂದು ಉಹಾಪ ಪೋಹ ಸುದ್ದಿಗಳನ್ನು ಕೇಳಿ ಬರುವುದಕ್ಕೆ ಹಿಂಜರಿಯುತ್ತಿದ್ದರು.ಸದ್ಯ ಕೊರೊನಾ ವ್ಯಾಪಕವಾಗಿ ಹರಡಿ ಸಾವು-ನೋವುಗಳ ಸಂಖ್ಯೆ ಹೆಚ್ಚಾಗುವುದನ್ನು ಕಂಡು ವ್ಯಾಕ್ಸಿನ್ ಹಾಕಿಕೊಳ್ಳಲು ಮುಂದಾಗುತ್ತಿದ್ದಾರೆ.ಈಗ ಸದ್ಯಕ್ಕೆ ವ್ಯಾಕ್ಸಿನ್ ದಾಸ್ತಾನು ಕಡಿಮೆ ಬರುತ್ತಿದೆ.ಆದರೂ ಇಲ್ಲಿನ ವೈದ್ಯರು ನಿತ್ಯ ೧೬೦ರಿಂದ ೨೦೦ಜನರಿಗೆ ಲಸಿಕೆ ಹಾಕುತ್ತಿದ್ದಾರೆ.ಅಲ್ಲದೇ ಮನೆ ಮನೆಗೆ ತೆರಳಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ಜನರ ಮನವೊಲಿಸಿ ಲಸಿಕೆ ತೆಗೆದುಕೊಳ್ಳಲು ಪ್ರೇರೇಪಿಸುತ್ತಿದ್ದಾರೆ.

ಲಾರಿ ಬೈಕ್ ನಡುವೆ ಅಪಘಾತ: ಸ್ಥಳದಲ್ಲೇ ಮಹಿಳೆ ಸಾವು

ಪಡೆದ ನಂತರ ಕೆಲವರಿಗೆ ಸ್ವಲ್ಪ ಜ್ವರ ಹಾಗೂ ಕೈ ನೋವು ಬರುತ್ತಿದೆ.ಆದ್ದರಿಂದ ಜನರು ಗಾಬರಿಗೊಳ್ಳುತ್ತಿದ್ದಾರೆ.ಆದರೆ ವೈದ್ಯರು ಯಾವುದೇ ಗಾಬರಿಗೊಳ್ಳುವ ಅವಶ್ಯಕತೆಯಿಲ್ಲ.ಕೆಲವರಿಗೆ ಜ್ವರ ಕೈ ನೋವು ಆಗುವುದು.ಕೆಲವರಿಗೆ ಯಾಔಉದು ಆಗೋದಿಲ್ಲ.ಇದಕ್ಕೆ ಭಯಪಡುವ ಅಗ್ತಯವೂ ಇಲ್ಲ.ಪ್ಯಾರಾಸಿಟೆಮಲ್ ಗುಳಿಗೆ ತೆಗೆದುಕೊಂಡರೆ ಕಡಿಮೆಯಾಗುತ್ತದೆ.ಲಸಿಕೆಯಿಂದ ರೋಗ ನಿರೋಧಕ ಹೆಚ್ಚಾಗಿ ಕರೊನಾ ವೈರಸ್ ವಿರುದ್ಧ ಹೋರಾಡುವ ಶಕ್ತಿ ಹೆಚ್ಚುತ್ತದೆ ಎನ್ನುತ್ತಾರೆ ವೈದ್ಯರು.ದಿನಾಲೂ ೧೫೦ರಿಂದ ೨೦೦ವರೆಗೆ ಲಸಿಕೆಗಳನ್ನು ಕಲಬುರಗಿಯಿಂದ ತರಲಾಗುತ್ತಿದೆ.ಅಲ್ಲದೇ ದಾಸ್ತಾನು ಕಡಿಮೆ ಇದ್ದರೇ ಕಡಿಮೆ ನೀಡಲಾಗುತ್ತಿದೆ.ಆದ್ಷಟು ಜನರು ಸಹನೆಯಿಂದ ಬಂದು ಸಾಮಾಜಿಕ ಅಂತರ ಕಾಪಾಡಿಕೊಂಡು ಹೋಗಬೇಕೆಂದು ವೈದ್ಯರು ಮನವಿ ಮಾಡಿಕೊಂಡಿದ್ದಾರೆ.

ಕೊರೊನಾ ಜಗತ್ತನ್ನೇ ಕಂಗೆಡಿಸಿದೆ. ನಾವು ನಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳದಿದ್ದರೆ ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.ಅಲ್ಲದೇ ಜನರು ಯಾರಿಂದಲೂ ಹೇಳಿಸಿಕೊಂಡು ಲಸಿಕೆ ಹಾಕಿಸಿಕೊಳ್ಳುವುದಕ್ಕಿಂತ, ಸ್ವಯಂ ಪ್ರೇರಿತರಾಗಿ ಲಸಿಕೆ ಹಾಕಿಸಿಕೊಳ್ಳಬೇಕು. – ಡಾ. ಮಹ್ಮದ್ ಅಬ್ದುಲ್ ರಹೀಮ್ ವೈದ್ಯಾಧಿಕಾರಿ ಸಮುದಾಯ ಆರೋಗ್ಯ ಕೇಂದ್ರ ಶಹಾಬಾದ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

6 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

16 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

16 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

16 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago