ಶಹಾಬಾದ: ನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿನ ರೋಗಿಗಳಿಗೆ ಹಣ್ಣು-ಹಂಪಲು, ಕುಡಿಯುವ ನೀರು ಹಾಗೂ ಊಟದ ಪೊಟ್ಟಣವನ್ನು ಬಿಜೆಪಿ ಮುಖಂಡ ಗಿರಿರಾಜ ಪವಾರ ಹಾಗೂ ಸಂಗಡಿಗರು ಆಹಾರದ ಪದಾರ್ಥಗಳನ್ನು ವಿತರಿಸಿದರು.
ಇದೇ ಸಂದರ್ಭದಲ್ಲಿ ಗಿರಿರಾಜ ಪವಾರ ಮಾತನಾಡಿದ ಅವರು, ಕರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವುದರಿಂದ ಲಾಕ್‌ಡೌನ್ ಮಾಡಲಾಗಿದೆ.ಕೆಲಸಕ್ಕಾಗಿ ದೂರದಿಂದ ಬಂದ ಜನರಿಗೆ ದುಡಿಯಲು ಕೆಲಸವಿಲ್ಲ. ಕೈಯಲ್ಲಿ ಹಣವಿಲ್ಲ.ಇದರಿಂದ ಬಡವರಿಗೆ ಕಷ್ಟದ ಬದುಕು ನಿರ್ಮಾಣವಾಗಿದೆ. ಅಲ್ಪಸ್ವಲ್ಪ ಇದ್ದ ದುಡ್ಡು ಖಾಲಿಯಾಗಿದೆ.ಇಂತಹ ಅನೇಕ ಕುಟುಂಬಗಳಿಗೆ ಆಹಾರ ತಯ್ಯಾರು ಮಾಡಿ ನೀಡಿದರೇ ಒಂದು ದಿನದ ಮಟ್ಟಿಗೆ ಆಗಬಹುದು.
ಅದರ ಬದಲಿಗೆ ಇದ್ದವರು ಸ್ವಲ್ಪ ಆಹಾರ ಪದಾರ್ಥಗಳನ್ನು ನೀಡಿದರೇ ಅವರೇ ಆಹಾರವನ್ನು ಮಾಡಿಕೊಂಡು ಊಟ ಮಾಡುತ್ತಾರೆ.ಎರಡು ಮೂರು ದಿನಗಳಿಂದ ನಗರದಲ್ಲಿನ ಬಡ ರೋಗಿಗಳಿಗೆ ದಿನಾಲೂ ಊಟದ ವ್ಯವಸ್ಥೆ ಮಾಡುತ್ತಿದ್ದೆವೆ. ಅಲ್ಲದೇ ನಗರದ ವಿವಿಧ ಪ್ರದೇಶಗಳಲ್ಲಿನ ಬಡ ಕುಟುಂಬಕ್ಕೆ ಹಾಗೂ ಬಸ್ ನಿಲ್ದಾಣ, ರೇಲ್ವೆ ನಿಲ್ದಾಣ, ಮಂದಿರದ ಆವರಣದಲ್ಲಿ ಕುಳಿತ ನಿರ್ಗತಿಕರಿಗೂ ಊಟದ ವ್ಯವಸ್ಥೆ ಮಾಡುತ್ತಿದ್ದೆವೆ.
ಈ ಸಂದರ್ಭದಲ್ಲಿ ಬಡ ಜನರಿಗೆ ದಾಸೋಹ ಮಾಡುವ ಕೈಗಳು ಹೆಚ್ಚಾದರೆ, ಭೂಮಿ ತಾಯಿಯ ಋಣ ತೀರಿಸಿದಂತಾಗುತ್ತದೆ.ಆದ್ದರಿಂದ ದಾಸೋಹ ಮಾಡುವ ಜನರು ಹೆಚ್ಚಾಗಲಿ ಎಂದು ಮನವಿ ಮಾಡುತ್ತೆನೆ ಎಂದರು. ಪ್ರೇಮಕುಮಾರ ರಾಠೋಡ,ರಾಡಿನಿ ಎಲಿಜರ್, ಕವಿತಾ ಸಿದ್ದಲಿಂಗ ಡೆಂಗಿ, ಮಹಾದೇವಿ ದೇವಕರ್, ಮಹ್ಮದ್ ಇರ್ಫಾನ್, ವಿಶಾಲಗೌಡ, ಆಕಾಶ ಜಿಂಗಾಡೆ,ಆದಿತ್ಯ ವರ್ಮಾ ಇತರರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…