ಬಿಸಿ ಬಿಸಿ ಸುದ್ದಿ

ದುರ್ಬಲ ಮನಸ್ಸುಗಳನ್ನು ಪುರೋಹಿತರು ಶೋಷಿಸುತ್ತಿದ್ದಾರೆ

ಶಹಾಪುರ: ಭಕ್ತಿ ಮನುಷ್ಯನ ಮೂಲ ಗುಣ. ಭಕ್ತಿಯ ಜೊತೆಗೆ ಭಯವೂ ಬೆರೆತು ದೇವರಿಗಾಗಿ ಮೊರೆಯಿಡಲೆಬೇಕಾದ ಸಂದರ್ಭವನ್ನು ಮನುಷ್ಯ ಸೃಷ್ಟಿಸಿಕೊಂಡಿದ್ದಾನೆ. ಯಾವುದೆ ಆಸರೆ ಇಲ್ಲದೆ ಮನುಷ್ಯನ ಮನಸ್ಸು ಬದುಕಲಾರದು. ಇದನ್ನು ಸರಿಯಾಗಿ ಗುರುತಿಸಿಕೊಂಡಿರುವ ಭಾರತೀಯ ಪುರೋಹಿತರು ದೇವರು ಧರ್ಮದ ಹೆಸರಿನ ಮೇಲೆ ಶೋಷಣೆ ಮಾಡುತ್ತಿದ್ದಾರೆ ಎಂದು ನಿವೃತ್ತ ಜಿಲ್ಲಾ ಆರೋಗ್ಯ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿ ಡಾ. ಮಲ್ಲಿಕಾರ್ಜುನ ಮುಕ್ಕಾ ನುಡಿದರು.

ಸ್ಥಳಿಯ ಬಸವಮಾರ್ಗ ಪ್ರತಿಷ್ಠಾನ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ಜಂಟಿಯಾಗಿ ಏರ್ಪಡಿಸಿದ್ದ ಲಿಂ.ಗುರಪ್ಪ ಯಜಮಾನ, ಶಿವಮ್ಮ ತಾಯಿ ಹಾಗೂ ಲಿಂಗಣ್ಣ ಸತ್ಯಂಪೇಟೆಯವರ ಸ್ಮರಣೆಯಲ್ಲಿ ನಡೆದ ತಿಂಗಳ ಬಸವ ಬೆಳಕು -88 ರ ಸಭೆಯಲ್ಲಿ ಬುದ್ಧ ಬಸವ ಅಂಬೇಡ್ಕರ ಮತ್ತು ಪೆರಿಯಾರರ ಮಾರ್ಗ ಎಂಬ ವಿಷಯ ಕುರಿತು ಮಾತನಾಡಿದರು.

ಮುಂದುವರೆದು ಮಾತನಾಡಿದ ಅವರು ಮನುಷ್ಯರಾದ ನಾವುಗಳು ಮನಸ್ಸಿನ ಗುಲಾಮಿಕೆಯಲ್ಲಿದ್ದೇವೆ. ಮನಸ್ಸು ಹೇಳಿದಂತೆ ಕೇಳುವ ಮನಸ್ಥಿತಿಗೆ ನಾವು ಒಗ್ಗಿಕೊಂಡಿದ್ದೇವೆ. ಮನಸ್ಸಿಗೆ ನಾವು ಏನನ್ನು ನಿರ್ದೇಶಿಸುತ್ತೇವೋ ಅದು ನಾವು ಆಗುತ್ತೇವೆ. ಬಹುತೇಕರ ಮನಸ್ಸು ಕಳ್ಳತನದೆಡೆಗೆ ತುಡಿಯುತ್ತದೆ. ಅವಕಾಶ ಸಿಕ್ಕರೆ ನಾವೆಲ್ಲ ಕಳ್ಳತನಕ್ಕೆ ಇಳಿಯುವವರೆ ಆಗಿದ್ದೇವೆ. ಬುದ್ದ ಬಸವ ಅಂಬೇಡ್ಕರ್ ಮತ್ತು ಪೆರಿಯಾರರು ನಡೆದು ಹೋದ ಮಾರ್ಗದಲ್ಲಿ ನಡೆದರೆ ನಮ್ಮ ಬದುಕಿಗೆ ನಾವೇ ಹೊಣೆಗಾರರಾಗುತ್ತೇವೆ.

ಯಾವುದೇ ಅಗೋಚರ ಶಕ್ತಿ ನಮ್ಮನ್ನು ಮುನ್ನಡೆಸುತ್ತಿದೆ ಎಂದು ಭಾವಿಸಿ ದೇವರ ಗುಡಿಗಳಿಗೆ ಎಡತಾಕುತ್ತಿದ್ದೇವೆ. ದೇವರ ಬಗೆಗೆ ಹೆಚ್ಚು ಚಿಂತನೆ ಮಾಡುವ ಅಗತ್ಯವಿಲ್ಲ. ಇದು ನಮಗೆ ಅನಿವಾರ್ಯವೂ ಅಲ್ಲ. ದೇವರ ಇರುವಿಕೆಯ ಚರ್ಚೆಯೆ ಅಸಂಬದ್ಧ. ಇದರಿಂದ ಯಾವ ಪ್ರಯೋಜನವೂ ಇಲ್ಲ. ಬದಲಾಗಿ ನಮ್ಮ ಕಣ್ಣ ಮುಂದೆ ಸುಂದರವಾದ ಬದುಕು ಇದೆ. ನಾವು ನೀವೆಲ್ಲ ಇಲ್ಲಿ ಜೀವಂತವಾಗಿ ಬದುಕಬೇಕಿದೆ. ಸತ್ತ ಮೇಲೆ ಏನಿದೆಯೋ , ಯಾರಿಗೂ ಗೊತ್ತಿಲ್ಲ. ಹೀಗಾಗಿ ವಾಸ್ತವವಾಗಿ ನಾವು ಬದುಕೋಣ. ನಮ್ಮ ಬದುಕಿಗೆ ನಾವೇ ಮಾರ್ಗದರ್ಶಕರಾಗೋಣ, ಪುರೋಹಿತರ ಕೈಗೊಂಬೆಯಾಗಿ ಅವರ ಶೋಷಣೆಗೆ ಗುರಿಯಾಗದಿರೋಣ ಎಂದು ಮಾರ್ಮಿಕವಾಗಿ ಹೇಳಿದರು.

ಮನಸ್ಸಿನಲ್ಲಿಯ ಏನೆಲ್ಲ ವ್ಯಾಪಾರಕ್ಕೂ ಕಾರಣ ಮನಸ್ಸು. ಈ ಮನಸ್ಸನ್ನು ಕಟ್ಟಿ ಹಾಕುವ ತಾಕತ್ತು ನಮಗೆ ಇದೆ. ಸುಖ ದುಃಖಗಳು, ಒಳ್ಳೆಯ ಕೆಟ್ಟವ ಎಂಬ ಅಭಿದಾನ ನೀಡುವುದು ಮನಸ್ಸು. ಆತ್ಮಾವಲೋಕ ಮಾಡಿಕೊಳ್ಳುವುದರಿಂದ ಸುಳ್ಳ ದೇವರುಗಳು ಹಾಗೂ ಪೂಜಾರಿಗಳು ಹೇಳ ಹೆಸರಿಲ್ಲದೆ ಹೋಗುತ್ತಾರೆ ಎಂದು ಕಟು ಮಾತುಗಳಿಂದ ಎಚ್ಚರಿಸಿದರು.

ಸಭೆಯನ್ನು ಉದ್ಘಾಟಿಸಿದ ಯಾದಗಿರಿ ಸಹಾಯಕ ಕೃಷಿ ಅಧಿಕಾರಿ ಡಾ. ಎಂ.ಭೀಮರಾಯ ಮಾತನಾಡಿ ಸತ್ಯ ಮತ್ತು ಧರ್ಮ ಒಂದು ನಾಣ್ಯದ ಎರಡು ಮುಖಗಳು. ಬಸವಣ್ಣನವರೆಂದರೆ ಸತ್ಯ ಮತ್ತು ಧರ್ಮದ ಪ್ರತಿಪಾದಕರು. ಶರಣರ ವಿಚಾರದ ಎಳೆಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಹೊರಟರೆ ಶೋಷಣೆ, ಅಸ್ಪøಶ್ಯತೆ ಹೊರಟು ಹೋಗುತ್ತದೆ. ಬಸವಾದಿ ಶರಣರ ವಿಚಾರಗಳಿಗೆ ನಮ್ಮನ್ನು ನಾವು ಒಡ್ಡಿಕೊಂಡು ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಶಹಾಪುರ ತಹಶೀಲ್ದಾರ ಸಂಗಮೇಶ ಜಿಡಗೆ ಮಾತನಾಡಿ ಸಣ್ಣ ವಯಸ್ಸಿನಲ್ಲಿಯೆ ನಾವು ಮಕ್ಕಳಿಗೆ ವಚನಗಳ ಕುರಿತು ಚಿಂತನೆಗಳನ್ನು ಹೇಳಬೇಕು. ಆ ಮಕ್ಕಳು ಮುಂದೆ ದೊಡ್ಡವರಾದಾಗ ನಮ್ಮ ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡಬಹುದು. ಬುದ್ಧ ಬಸವ ಅಂಬೇಡ್ಕರ್ ಪೆರಿಯಾರರ ಮಾತುಗಳನ್ನು ಬರೀ ಕೇಳಿದರೆ ಸಾಲದು ಅವನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಒತ್ತಿ ಹೇಳಿದರು.

ಬಸವಮಾರ್ಗ ಪ್ರತಿಷ್ಠಾನ ಪ್ರತಿ ತಿಂಗಳು ಬಸವ ಬೆಳಕು ಏರ್ಪಡಿಸಿ ನಮ್ಮ ಮನಸ್ಸಿಗೆ ಅಂಟಿದ ಕೊಳೆಯನ್ನು ತೊಳೆಯುವ ಕೆಲಸ ಮಾಡುತ್ತಿದೆ ಎಂದು ಪ್ರತಿಷ್ಠಾನದ ಕಾರ್ಯವನ್ನು ಶ್ಲಾಘಿಸಿದರು. ಸಭೆಯ ಗೌರವ ಅಧ್ಯಕ್ಷತೆಯನ್ನು ಗುರುಮಿಠಕಲ್ ಖಾಸಾ ಮಠದ ಪೂಜ್ಯ ಶ್ರೀ ಶಾಂತವೀರ ಮುರುಘರಾಜೇಂದ್ರ ಸ್ವಾಮಿಗಳು ವಹಿಸಿದ್ದರು.

ಪ್ರಾಸ್ತಾವಿಕವಾಗಿ ಸಂಸ್ಥೆಯ ವಿಶ್ವಾರಾಧ್ಯ ಸತ್ಯಂಪೇಟೆ ಮಾತನಾಡಿ ಗುರಪ್ಪ ಯಜಮಾನ, ಶಿವಮ್ಮ ಆಯಿ ಹಾಗೂ ಲಿಂಗಣ್ಣ ಸತ್ಯಂಪೇಟೆಯವರು ಸಮಾಜಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡು ಬೆಳಕಾದವರು. ಇವರ ಸ್ಮರಣೆ ಮಾಡುವುದೆಂದರೆ ನಮ್ಮನ್ನು ನಾವು ತಿದ್ದಿಕೊಳ್ಳುವುದು. ನ್ಯಾಯ ನಿಷ್ಠುರವಾಗಿ ಬದುಕುವುದು ಎಂದು ತಿಳಿಸಿದರು.
ಶಿವಕುಮಾರ ಕರದಳ್ಳಿ ಸ್ವಾಗತಿಸಿದರು. ಮಹಾದೇವಪ್ಪ ಗಾಳೆನೋರ ಸ್ವಾಗತ ವಚನ ಹಾಡಿದರು. ಶಿವಣ್ಣ ಇಜೇರಿ ಕಾರ್ಯಕ್ರಮ ನಿರೂಪಿಸಿದರು.

ಕೊನೆಯಲ್ಲಿ ಚೆನ್ನಮಲ್ಲಿಕಾರ್ಜುನ ಗುಂಡಾನೋರ ವಂದನೆ ಹೇಳಿದರು. ಸಭೆಯಲ್ಲಿ ಯಂಕಪ್ಪ ಅಲೆಮನಿ, ಡಾ. ಭೀಮರಾಯ ಲಿಂಗೇರಿ, ವಿಶ್ವನಾಥ ಗೊಂದಡಗಿ, ರವೀಂದ್ರನಾಥ ಪತ್ತಾರ, ಗುಂಡಣ್ಣ ಕಲಬುರ್ಗಿ, ಜಗದೀಶ ಮೂಲಿಮನಿ, ಸಿದ್ಧರಾಮ ಹೊನ್ಕಲ್, ಶಿವರುದ್ರ ಉಳ್ಳಿ, ದೇವಿಂದ್ರಪ್ಪ ಬಡಿಗೇರ, ಷಣ್ಮುಖ ಅಣಬಿ, ಭೀಮಣ್ಣ ಪಾಡಮುಖಿ, ಡಾ. ಬಸವರಾಜ ಹಾದಿಮನಿ, ಡಾ.ಮರಿಲಿಂಗಪ್ಪ ಮೊದಲಾದವರು ಹಾಜರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

4 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

14 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

14 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

14 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago