ಚಿತ್ತಾಪುರ: ಹಿರಿಯ ಪತ್ರಕರ್ತ,ಸಂಯುಕ್ತ ಕರ್ನಾಟಕ ಕಲಬುರ್ಗಿ ಆವೃತ್ತಿಯ ಸ್ಥಾನಿಕ ಸಂಪಾದಕ ಜಯತೀರ್ಥ ಕಾಗಲಕರ್ ಕರೋನಾ ಸೋಂಕಿಗೆ ಬಲಿಯಾಗಿದ್ದು,ಅವರ ಆತ್ಮಕ್ಕೆ ಶಾಂತಿ ಸಲ್ಲಿಸಲೆಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ನುಡಿ ನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ನಾಗಯ್ಯ ಸ್ವಾಮಿ ಅಲ್ಲುರ್ ಮಾತನಾಡಿ ಜಯತೀರ್ಥ ಕಾಗಲಕರ್ ಅವರನ್ನು ಕಳೆದುಕೊಂಡು ಕಲಬುರ್ಗಿ ಜಿಲ್ಲೆಯ ಪತ್ರಿಕರಂಗಕ್ಕೆ ತುಂಬಲಾರದ ಭಾರಿ ನಷ್ಟವಾಗಿದೆ.ಮೂರು ದಶಕಗಳಿಂದ ಹಲವು ಜನಪರ ವರದಿಗಳ ಮೂಲಕ ಸರ್ಕಾರದ ಗಮನ ಸೆಳೆಯುತ್ತಿದ್ದ ಕಾಗಲಕರ್ ಅವರ ಅಗಲಿಕೆ ಮನಸ್ಸಿಗೆ ತುಂಬಾ ನೋವು ಆಗಿದೆ ಎಂದರು.
ಪತ್ರಕರ್ತ ಪ್ರಶಾಂತ್ ಪಾಟೀಲ್ ತೆಂಗಳಿ ಮಾತನಾಡಿ ನಾನು ಪತ್ರಿಕಾ ಕ್ಷೇತ್ರಕ್ಕೆ ಬರಲು ಪ್ರರಣೆ ನೀಡಿದ್ದ ಕಾಗಲಕರ್ ಅವರು ಬಬ್ಬ ಸರಳ ಜೀವಿ,ಪ್ರಾಮಾಣಿಕ ಪತ್ರಕರ್ತ, ಜನಸ್ನೇಹಿ ವ್ಯಕ್ತಿತ್ವ ಹೊಂದಿದ್ದರು.
ಅನೇಕ ಯುವ ಬರಹಗಾರರಿಗೆ,ಸಂಘಟನಾಕಾರರಿಗೆ ಸಲಹೆ ಸೂಚನೆ,ಮಾರ್ಗದರ್ಶನ ನೀಡುತ್ತಿದ್ದರು.ಅವರ ಅಗಲಿಕೆ ತುಂಬಾ ನೋವು ಉಂಟು ಮಾಡಿದೆ ಅವರ ಕುಟುಂಬಕ್ಕೂ,ಅಭಿಮಾನಿ ವರ್ಗಕ್ಕೂ ದುಃಖ ಭರಿಸುವವಂತ ಶಕ್ತಿ ಭಗವಂತ ನೀಡಲಿ ಎಂದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ವೀರೇಂದ್ರ ಕೊಲ್ಲೂರ್,ಮಲ್ಲಿಕಾರ್ಜುನ ಮುಡಭೂಳಕರ್,ಯುವ ಪತ್ರಕರ್ತರಾದ ಸಂಜಯ ಬುಳಕರ್,ಅನಂತನಾಗ ದೇಶಪಾಂಡೆ, ಜಗದೇವ ದಿಗ್ಗಾಂವಕರ್, ಸಂತೋಷ ಕಟ್ಟಿಮನಿ,ಬಿಜೆಪಿ ವಕ್ತಾರ ಮಹೇಶ ಬಟಗೇರಿ,ಭಿಮು ಕರದಾಳ ಇದ್ದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…