ಕಲಬುರಗಿ: ಇಲ್ಲಿನ ಗುಲ್ಬರ್ಗ ವೈದ್ಯಕೀಯ ವಿe್ಞÁನ ಸಂಸ್ಥೆ ‘ಜಿಮ್ಸ್’ನಲ್ಲಿ ಕೊರೋನಾ ಸೋಂಕಿತರ ಜೀವ ಉಳಿಸಲು ಆದಷ್ಟು ಬೇಗ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಆರಂಭವಾಗಬೇಕು, ಇಂತಹ ಅತ್ಯಾಧುನಿಕ ಚಿಕಿತ್ಸೆಗಳೊಂದಿಗೆ ಸೋಂಕಿತರ ಜೀವ ಉಳಿಸುವ ಕೆಲಸಕ್ಕೆ ಜಿಮ್ಸ್ ವೈದ್ಯರು ಬರುವ ದಿನಗಳಲ್ಲಿ ಸನ್ನದ್ಧವಾಗಿರಬೇಕೆಂದು ವಿಧಾನಸಭೆ ವಿರೋಧ ಪಕ್ಷದ ನಾಯಕರು ಹಾಗೂ ಜೇವರ್ಗಿ ಶಾಸಕರು ಆಗಿರುವ ಡಾ. ಅಜಯ್ ಸಿಂಗ್ ಆಗ್ರಹಿಸಿದ್ದಾರೆ.
ಇಲ್ಲಿನ ಜಿಮ್ಸ್ ಕೋವಿಡ್ ಕೇರ್ ಸೆಂಟರ್‍ಗೆ ಶನಿವಾರ ಭೇಟಿ ನೀಡಿ ಸೋಂಕಿಗೆ ತುತ್ತಾಗಿ ಚಿಕಿತ್ಸೆಗೆ ದಾಖಲಾಗಿರುವ ರೋಗಿಗಳ ಉಭಯ ಕುಶಲೋಪರಿ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಅಜಯ್ ಸಿಂಗ್ ಪ್ಲಾಸ್ಮಾ ಥೆರಪಿ ಆರಂಭಿಸುವ ಉz್ದÉೀಶಕ್ಕೆಂದೇ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯವರು 40 ಲಕ್ಷ ರು ಜಿಮ್ಸ್‍ಗೆ ಕಳೆದ ವರ್ಷವೇ ಬಿಡುಗಡೆ ಮಾಡಿದ್ದಾರೆ. ಆದರೆ ಈ ಅನುದಾನದ ಸದ್ಬಳಕೆ ಇನ್ನೂ ಆಗಿಲ್ಲ. ಈ ಹಣ ಬಳಕೆ ಮಾಡುವಲ್ಲಿ ಯಾಕೆ ವಿಳಂಬ? ಪ್ಲಾಸ್ಮಾ ಥೆರಪಿ ಆರಂಭಕ್ಕೆ ಅಗತ್ಯ ತಯ್ಯಾರಿ ಮಾಡಿಕೊಂಡು ಜಿಮ್ಸ್ ಕ್ರಿಯಾಶೀಲವಾಗಲಿ, ಸೋಂಕಿತರ ಜೀವ ಉಳಿಸುವ ಕೆಲಸಕ್ಕೆ ಆದ್ಯತೆ ನೀಡಲಿ ಎಂದು ಒತ್ತಾಯಿಸಿದರು.
ಜಿಮ್ಸ್ ನಿರ್ದೇಶಕಿ ಡಾ. ಕವಿತಾ ಪಾಟೀಲರೊಂದಿಗೂ ಚರ್ಚಿಸಿರುವೆ, ಅವರು ಪ್ಲಾಸ್ಮಾ ಥೆರಪಿ ಆರಂಭಕ್ಕೆ ಸೂಕ್ತ ಮಾರ್ಗಸೂಚಿ ಇನ್ನೂ ಹೊಂದಿಲ್ಲವೆಂದು ಹೇಲಿದ್ದಾರೆ. ಅದಕ್ಕೆ ಏನೆಲ್ಲಾ ಸಿದ್ಧತೆಗಳು ಬೇಕೋ ಮಾಡಿಕೊಂಡು ಆ ಚಿಕಿತ್ಸಾ ವಿಧಾನ ಇಲ್ಲಿ ಬೇಗ ಆರಂಭಿಸಲಿ. ಇದರಿಂದ ನೂರಾರು ಸೋಂಕಿತರಿಗೆ ಚಿಕಿತ್ಸೆ ನೀಡುವ ಕೆಲಸ ಬೇಗ ಆರಂಭವಾಗಲಿ ಎಂದರು.
ಕೋವಿಡ್ ಕೇರ್ ಸೆಂಟರ್‍ನಲ್ಲಿರುವ ಕರ್ತವ್ಯ ನಿರತ ವೈದ್ಯರ ತಂಡದೊಂದಿಗೆ ಮಾತುಕತೆ ನಡೆಸಿ ಅಲ್ಲಿ ನೀಡಲ್ಪಡುತ್ತಿರುವÀ ಚಿಕಿತ್ಸೆ, ಲಭ್ಯ ಔಷಧಿಗಳು, ಆಕ್ಸೀಜನ್ ಪೂರೈಕೆ ಇತ್ಯಾದಿ ವಿಷಯಗಳ ಮಾಹಿತಿ ಪಡೆದುಕೊಂಡಿರುವೆ. ಸಾಕಷ್ಟು ಕೆಲಸ ಇಲ್ಲಿ ಡೆದಿದೆ. ಇನ್ನೂ ಹೆಚ್ಚಿನ ಸಿಬ್ಬಂದಿ ಇಲ್ಲಿ ನೇಮಕೊಗಂಡಲ್ಲಿ ಸೋಂಕಿತರಿಗೆ ಇನ್ನೂ ಅನುಕೂಲವಾಗುತಂಹ ಚಿಕಿತ್ಸೆ ನೀಡಬಹುದಾಗಿದೆ ಎಂದರು.
404 ಬೆಡ್‍ಗಳ ಕೋವಿಡ್ ಕೇರ್ ಸೆಂಟರ್‍ನಲ್ಲಿ 40 ವೆಂಟಿಲೇಟರ್‍ಗಳಿವೆ. ಆದರೆ ಇಲ್ಲಿ ಸ್ಟಾಫ್ ನರ್ಸ್, ಡಿ ಗಂಪಿನ ಸಿಬ್ಬಂದಿಗಳ ಕೊರತೆ ಕಾಡುತ್ತಿರುವುದು ಭೇಟಿಯ ಸಂದರ್ಭದಲ್ಲಿ ತಮ್ಮ ಗಮನಕ್ಕೆ ಬಂದಿತು. ಆರೋಗ್ಯ ಸಿಬ್ಬಂದಿಗಳ ಕೊರತೆಯಿಂದಾಗಿ ಅಗತ್ಯ ಚಿಕಿತ್ಸೆ ನೀಡುವಲ್ಲಿ ಕೆಲವೊಮ್ಮೆ ತೊಂದರೆಗಳು ಎದುರಾಗುತ್ತಿವೆ. ತಕ್ಷಣ ಸರ್ಕಾರ ಇಲ್ಲಿನ ಸಿಬ್ಬಂದಿ ಕೊರತೆ ನೀಗಿಸಲು ಕ್ರಮಕ್ಕೆ ಮುಂದಾಗಬೇಕೆಂದು ಡಾ. ಸಿಂಗ್ ಆಗ್ರಹಿಸಿದರು.
90 ಮಂದಿ ಡಿ ಗುಂಪಿನ ಸಿಬ್ಬಂದಿ ನೇಮಕವಾಗಿದೆ, ಇನ್ನೂ ಕೆಲಸಕ್ಕೆ ಬಂದಿಲ್ಲವೆಂಬ ಮಾಹಿತಿ ದೊರಕಿದೆ, ನೇಮಕಗೊಂಡವರುಬೇಗ ಕೆಲಸಕ್ಕೆ ಬರಲಿ. ಇದಲ್ಲದೆ ಹೆಚ್ಚಿನ ಸಿಬ್ಬಂದಿ ನೇಮಕದ ಕೆಲಸವೂ ಆಗಬೇಕು. ಹೀಗಾದಲ್ಲಿ ಆಸ್ಪತ್ರೆ ಕಾರ್ಯ, ಕೋವಿಡ್ ವಾಡ್ರ್À ನಿರ್ವಹಣೆ ಸುಗಮವಾಗಲಿದೆ ಎಂದರು.
ಕಲಬುರಗಿಯಲ್ಲಿ ಪಾಸಿಟಿವಿಟಿ ಈ ವಾರ ಶೇ. 22. 68 ತಲುಪಿದರೆ ಮರಣ ದರ ಶೇ. 0. 98 ತಲುಪಿದೆ. ಇದು ಆತಂಕದ ಸಂಗತಿ. ಸಕ್ರೀಯ 15, 836 ಪ್ರಕರಣಗಳು ಜಿಲ್ಲೆ.ಯಲ್ಲಿವೆ. ಹೀಗಾಗಿ ಕಲಬುರಗಿಯಲ್ಲಿ ಯಾವುದೇ ಸಂದರ್ಭದಲ್ಲಿ ಸೋಂಕಿನ ಸ್ಫೋಟವಾಗಬಹುದು. ಅದನ್ನು ಸಮರ್ಥವಾಗಿ ನಿಭಾಯಿಸುವ ಕೆಲಸಕ್ಕೆ ಜಿಮ್ಸ್ ಇನ್ನೂ ಹೆಚ್ಚಿನ ಸಿಬ್ಬಂದಿ, ಹೊಸ ಹೊಸ ಚಿಕಿತ್ಸಾ ವಿಧಾನಗಳೊಂದಿಗೆ ಅಣಿಗೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ. ಸರಕಾರವೂ ಈ ಕಕೇಂದ್ರಕ್ಕೆ ಬಲ ತುಂಬುವ ಕೆಲಸ ಮಾಡಲಿ ಎಂದು ಡಾ. ಅಜಯ್ ಸಿಂಗ್ ಆಗ್ರಹಿಸಿದ್ದಾರೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…