ಕಲಬುರಗಿ: ಕೈಯಿಂದ ಎಸೆದ ಕಲ್ಲು ನೂರಡಿ ಹೋಗಿ ಬೀಳುತ್ತದೆ, ಬಂದೂಕಿನಿಂದ ಹೊಡೆದ ಗುಂಡು ಸಾವಿರ ಅಡಿ ಹೋಗಿ ಬೀಳುತ್ತದೆ ಆದರೆ ಹಸಿದ ಹೊಟ್ಟೆಗೆ ಕೊಟ್ಟ ಊಟ ಸ್ವರ್ಗದ ಬಾಗಿಲಿಗೆ ಹೋಗಿ ಮುಟ್ಟುತ್ತದೆ ಎಂದು ಗ್ರಾಮೀಣ ಪೊಲೀಸ್ ಠಾಣಾಧಿಕಾರಿ ಭಾಷು ಚವ್ಹಾಣ ಹೇಳಿದರು.
ಇಂದು ಹುಮ್ನಾಬಾದ ರಸ್ತೆಯ ಬೇಲೂರ ಕ್ರಾಸ ನಲ್ಲಿ 9 ಸ್ಟಾರ್ ಮಿತ್ರ ಮಂಡಳಿ ವತಿಯಿಂದ ಬಡವರಿಗೆ ಉಚಿತವಾಗಿ ಊಟ ವಿತರಣೆ ಮಾಡಿ ಮಾತನಾಡುತ್ತ ಲಾಕ್ ಡೌನ್ ಸಂದರ್ಭದಲ್ಲಿ ಬಡವರಿಗೆ, ನಿರ್ಗತಿಕರಿಗೆ, ಕಾರ್ಮಿಕರಿಗೆ ಇಂತಹ ಸಂದಿಗ್ಧ ಪರಸ್ಥಿತಿಯಲ್ಲಿ ಉಚಿತವಾಗಿ ಅನ್ನದಾಸೋಹ ಮಾಡುವುದರೊಂದಿಗೆ ಸರಕಾರ ಮಾಡುವ ಕೆಲಸ ಮಿತ್ರಮಂಡಳಿ ಮಾಡುತ್ತಿರುವುದು ಹೆಮ್ಮೆಯ ವಿಷಯ. ಇಂತಹ ಸಂದರ್ಭದಲ್ಲಿ ಎಲ್ಲಾ ಕಾರ್ಯ ಸರ್ಕಾರದಿಂದಲೇ ಆಗಬೇಕೆಂದು ಜನರು ನಿರೀಕ್ಷೆ ಮಾಡದೆ ಸಾರ್ವಜನಿಕರು, ಸಂಘ- ಸಂಸ್ಥೆಗಳು ಇಂಥ ಕಾರ್ಯಕ್ಕೆ ಮುಂದೆ ಬರಬೇಕೆಂದು ವಿನಂತಿಸಿಕೊಂಡರು.
ಕೊರೊನಾ ಸೋಂಕು ಹರಡದಂತೆ ಸಾರ್ವಜನಿಕರು ಕಟ್ಟುನಿಟ್ಟಾಗಿ ಮಾಸ್ಕ್ ಧರಿಸುವುದು, ಸ್ಯಾನಿಟೈಜರ್ ಬಳಸುವುದು ಹಾಗೂ ದೈಹಿಕ ಅಂತರ ಕಾಪಾಡುವುದು ನಿಮ್ಮೆಲ್ಲರ ಕರ್ತವ್ಯವಾಗಿದೆ. ಸೋಂಕು ಹರಡದಂತೆ ಮುಂಜಾಗ್ರತೆ ವಹಿಸಿ ಸರ್ಕಾರದ ನಿಯಮ ಪಾಲಿಸುವುದರೊಂದಿಗೆ ನಮಗೆ ಸಹಕಾರ ನೀಡಬೇಕೆಂದು ಸಲಹೆ ನೀಡಿದರು.
9ಸ್ಟಾರ್ ಮಿತ್ರ ಮಂಡಳಿ ಮುಖ್ಯಸ್ಥರಾದ ಬಸವರಾಜ ಮಚೆಟ್ಟಿ, ಚಂದ್ರಕಾಂತ ಬಿರಾದಾರ, ಮನೋಹರ ಗುತ್ತೇದಾರ, ಲಕ್ಷ್ಮೀಪುತ್ರ ಬಿರಾದಾರ, ಶರಣಬಸಪ್ಪ ಪಾಟೀಲ ಉದನೂರ, ಉಮೇಶ ದೇಗಾಂವ, ವಿಜಯಕುಮಾರ ಕಾಳೆ, ಚಂದ್ರಕಾಂತ ಮುತ್ತಗಿ, ರವಿ ಮೂಲಗೆ ಇತರರು ಭಾಗವಹಿಸಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…